ಇತರರಿಗಿಂತ ನಮಗೆ ನಾವು ಪ್ರಾಶಸ್ತ್ಯ ನೀಡಿಕೊಳ್ಳುವುದು ಸ್ವಾರ್ಥ ಎನಿಸಬಹುದು. ಆದರೆ, ನಮ್ಮ ಆರೋಗ್ಯ, ಸಂತೋಷ, ತೃಪ್ತಿಗಾಗಿ ಇದು ಅಗತ್ಯ. ಒಮ್ಮೆ ನಿಮ್ಮನ್ನು ನೀವು ಪ್ರೀತಿಸಿಕೊಳ್ಳಬಲ್ಲಿರಾದರೆ, ಇತರರನ್ನು ಪ್ರೀತಿಸುವುದು, ಆಕರ್ಷಿಸುವುದು ಕಷ್ಟವೇನಲ್ಲ. ನಿಮ್ಮ ಆತ್ಮವಿಶ್ವಾಸವೇ ಇತರರನ್ನು ಸೆಳೆಯುತ್ತದೆ. ಹಾಗಾಗಿ ನಿಮ್ಮೊಳಗನ್ನು ಬೆಳೆಸಿಕೊಂಡು, ಬೆಳಗಿಸಿಕೊಳ್ಳಿ. ಕೇವಲ ಬಾಹ್ಯ ಸೌಂದರ್ಯವಲ್ಲ, ಭಾವನಾತ್ಮಕವಾಗಿ, ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಆಕರ್ಷಕವೆನಿಸುವುದು ಮುಖ್ಯ. ನೀವು ಈ 10 ದೈನಂದಿನ ಹವ್ಯಾಸಗಳನ್ನು ರೂಢಿಸಿಕೊಂಡರೆ ಅದು ನಿಮ್ಮನ್ನು ಬೆಳೆಸುತ್ತದೆ. 

ಸುಖ ದಾಂಪತ್ಯಕ್ಕೆ ಕಬೀರನ ಸೂತ್ರ

1. ಜನರೊಂದಿಗೆ ಸಂಪರ್ಕ ಸಾಧಿಸಿ
ನಮ್ಮಂತೆಯೇ ಇರುವವರಿಗೆ ನಾವು ಆಕರ್ಷಿತರಾಗುತ್ತೇವೆ. ಅಷ್ಟೇ ಅಲ್ಲ, ನಮಗಿಷ್ಟವಾಗುವವರು ಆಕರ್ಷಕವೆನಿಸುತ್ತಾರೆ. ಇನ್ನೊಬ್ಬರಿಗೆ ಇಷ್ಟವಾಗುವುದು ಅಷ್ಟೇನು ಕಷ್ಟವಲ್ಲ. ಇದಕ್ಕಾಗಿ ಮೊದಲು ನಿಮ್ಮ ಬಗ್ಗೆ ನೀವು ಹೇಳಿಕೊಳ್ಳುವುದನ್ನು ನಿಲ್ಲಿಸಿ, ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳಲು ಆಸಕ್ತಿ ತೋರಿಸಿ. ಸಂಭಾಷಣೆಯಲ್ಲಿ ತೊಡಗಿದ್ದಾಗ ಇನ್ನೊಬ್ಬರು ಹೇಳುತ್ತಿರುವ ವಿಷಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಕೆಲವು ಪ್ರಶ್ನೆಗಳನ್ನು ಕೇಳಿ. ಅವರ ಆಸಕ್ತಿಯ ವಿಷಯಗಳ ಬಗ್ಗೆ ಮಾತನಾಡಿ. ಇನ್ನೊಬ್ಬರು ಹೇಳುವುದನ್ನು ಚೆನ್ನಾಗಿ ಕೇಳಿಸಿಕೊಳ್ಳುವುದರಿಂದ ಅವರಿಗೆ ಪ್ರಾಶಸ್ತ್ಯ ನೀಡಿದಂತಾಗುತ್ತದೆ. ತಮಗೆ ಪ್ರಾಮುಖ್ಯತೆ ನೀಡುವುದು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ?

ಪೆಟ್ ಪೇರೆಂಟಿಂಗ್‌ಗೆ ಬೇಕು ತಯಾರಿ

2. ಗೆಳೆತನಕ್ಕೆ ಮೊದಲ ಪಾಶಸ್ತ್ಯ ನೀಡಿ
ನಿಜವಾದ ಗೆಳೆತನಕ್ಕೆ ಎಂದಿಗೂ ಸಾವಿಲ್ಲ. ಈಗಿನ ಕಾಲದಲ್ಲಿ ಸಂಬಂಧಿಕರಿಗಿಂತ ಸ್ನೇಹಿತರೇ ಹೆಚ್ಚು ಕಷ್ಟಕ್ಕಾಗುವವರು. ನೀವು ಕೂಡಾ ಗೆಳೆಯರ ಕಷ್ಟಕ್ಕೆ ಆಗಿ. ಏನೇ ಕೆಲಸವಿದದ್ದರೂ ಗೆಳೆಯರನ್ನು ಭೇಟಿ ಮಾಡುವ, ಅವರೊಂದಿಗೆ ಹರಟುವ ಅವಕಾಶಗನ್ನು ಮಿಸ್ ಮಾಡಿಕೊಳ್ಳಬೇಡಿ. ಗೆಳೆತನವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೌಶಲ, ನಿಮ್ಮ ಸಂಗಾತಿಯೊಂದಿಗಿನ ಜೀವನವನ್ನೂ ಸಲೀಸಾಗಿಸುತ್ತದೆ. ಜೊತೆಗೆ. ಎಲ್ಲವೂ ಸರಿಯಿದ್ದಾಗ ನೀವು ಹೆಚ್ಚು ನಗಬಲ್ಲಿರಿ. ನಗುವುದಕ್ಕಿಂತಾ ಆಕರ್ಷಕ ಸಂಗತಿ ಇನ್ನೊಂದಿಲ್ಲ.

3. ವರ್ತಮಾನದಲ್ಲಿ ಜೀವಿಸಿ
ವರ್ತಮಾನದಲ್ಲಿ ಜೀವಿಸುವಂಥ, ಹಿಂದುಮುಂದಿನದೆಲ್ಲ ಚಿಂತೆ ಬಿಟ್ಟು ಈಗಿನದನ್ನು ಅನುಭವಿಸುವಂಥ ವ್ಯಕ್ತಿತ್ವ ಎಲ್ಲರಿಗೂ ಹೆಚ್ಚು ಆಕರ್ಷಕವೆನಿಸುತ್ತದೆ ಎಂಬುದನ್ನು ಅಧ್ಯಯನಗಳೂ ದೃಢಪಡಿಸಿವೆ. ವಾಸ್ತವವಾದಿಗಳು ಭಾವನಾತ್ಮಕವಾಗಿ ಹೆಚ್ಚು ಸಮತೋಲನ ಕಾಪಾಡಿಕೊಂಡಿರುತ್ತಾರೆ. ಅವರು ಏನೇ ಆತಂಕ, ಖಿನ್ನತೆ ಇದ್ದರೂ ಅವನ್ನೆಲ್ಲ ಬಿಟ್ಟು ಆಯಾ ಸಂದರ್ಭದಲ್ಲಿ ಏನು ಮಾಡಬೇಕೆಂಬುದರತ್ತ ಚಿತ್ತ ಹರಿಸುತ್ತಾರೆ.

ಪತಿ ನೆನಪು ಹಸಿರಾಗಿಡಲು 73 ಸಾವಿರ ಸಸಿ ನೆಟ್ಟ ಪತ್ನಿ

4. ದೇಹ ದಂಡಿಸಿ
ನಿಯಮಿತವಾಗಿ ಎಕ್ಸರ್ಸೈಸ್ ಮಾಡಿ ದೇಹವನ್ನು ಉತ್ತಮ ಆಕಾರದಲ್ಲಿಟ್ಟುಕೊಂಡರೆ ಖಂಡಿತಾ ಅದು ಎಲ್ಲರನ್ನೂ ಸೆಳೆಯುತ್ತದೆ. ನಿಮ್ಮ ಆ್ಯಕ್ಟಿವ್ ಜೀವನಶೈಲಿಯ ಬಗ್ಗೆ ದೇಹವೇ ಮಾತನಾಡುತ್ತದೆ. ಆ್ಯಕ್ಟಿವ್ ಆಗಿರುವವರೆಂದರೆ ಎಲ್ಲರಿಗೂ ಇಷ್ಟವೇ.

5. ಆಹಾರದಿಂದ ಆಕಾರ ಪಡೆಯಿರಿ
ಸುಮ್ಮನೆ ಕಂಡಿದ್ದನ್ನೆಲ್ಲ ತಿನ್ನುವುದು ಹವ್ಯಾಸವಲ್ಲ, ಅದು ಚಟ. ದೇಹಕ್ಕೆ ಯಾವುದು ಉತ್ತಮವೋ ಅದನ್ನು ಎಷ್ಟು ಬೇಕೋ ಅಷ್ಟೇ ಸೇವಿಸುವುದು ಕೂಡಾ ಒಂದು ಕಲೆ. ಸರಿಯಾದ ಆಹಾರದಿಂದ ನಿಮ್ಮೊಳಗನ್ನು ಸ್ವಚ್ಛವಾಗಿಟ್ಟುಕೊಂಡರೆ, ಅದು ತ್ವಚೆಗೆ ಕಾಂತಿ ನೀಡುವ ಮೂಲಕ ಹೊರಗೆ ವ್ಯಕ್ತವಾಗುತ್ತದೆ. ಅಂದ ಆರಂಭವಾಗುವುದೇ ಒಳಗಿನಿಂದ. ಉತ್ತಮ ಆಹಾರ ಬೊಜ್ಜನ್ನು ಕೂಡಾ ನಿಮ್ಮ ಬಳಿ ಸುಳಿಯಗೊಡುವುದಿಲ್ಲ. ಮನೆಯಲ್ಲೇ ತಯಾರಿಸಿದ ಆರೋಗ್ಯಯುತ ಆಹಾರ ಸೇವಿಸಿ. 

 

ಸಂಬಂಧ ಸುಧಾರಿಸುವ ಸೈಕಿಕ್ ಟ್ರಿಕ್ಸ್

6. ಆತ್ಮವಿಶ್ವಾಸ ಬೆಳೆಸಿಕೊಳ್ಳಿ
ಆತ್ಮವಿಸ್ವಾಸವೆನ್ನುವುದು ಸೆಕ್ಸೀ ಕೂಡಾ. ಆತ್ಮವಿಶ್ವಾಸ ಬೆಳೆಸಿಕೊಳ್ಳಲು ನಿಮ್ಮನ್ನು ನೀವು ಪ್ರೀತಿಸಿಕೊಳ್ಳುವುದು ಮುಖ್ಯ. ನಿಮ್ಮ ಬುದ್ಧಿವಂತಿಕೆ, ನಡತೆ ಬಗ್ಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ತಲೆ ಎತ್ತಿ ಓಡಾಡಿ, ಕಣ್ಣಲ್ಲಿ ಕಣ್ಣಿರಿಸಿ ಮಾತನಾಡಿ, ಅಹಂಕಾರ ಹತ್ತಿರ ಸುಳಿಯದಂತೆ ಎಚ್ಚರಿಕೆ ವಹಿಸಿ. 

7. ಚೆನ್ನಾಗಿ ನಿದ್ರಿಸಿ
ನಿದ್ರೆ ಕೂಡಾ ಧ್ಯಾನದಂತೆ. ನೀವದನ್ನು ಪ್ರೀತಿಸಿ, ಪೋಷಿಸಿದರೆ, ಬೇಕೆಂದಾಗ ಬೇಕೆಂದಷ್ಟು ಸಮಯ ಗಟ್ಟಿಯಾದ ನಿದ್ರೆ ಪಡೆಯಬಹುದು. ಚೆನ್ನಾಗಿ ನಿದ್ರಿಸುವುದರಿಂದ ನಿಮ್ಮ ಸೌಂದರ್ಯದ ಜೊತೆ ಮುಖದ ಕಳೆ ಹೆಚ್ಚುತ್ತದೆ. ಜೊತೆಗೆ ದಿನದ ಚಟುವಟಿಕೆಗಳಲ್ಲಿ ಹೆಚ್ಚು ಆ್ಯಕ್ಟಿವ್ ಆಗಿ ಭಾಗವಹಿಸಬಲ್ಲಿರಿ. ನಿದ್ರೆಗಿಂತ ಚೆನ್ನಾಗಿ ನಿಮ್ಮನ್ನು ನೀವು ಪ್ರೀತಿಸಿಕೊಳ್ಳುವುದನ್ನು ವ್ಯಕ್ತಪಡಿಸುವ ಮಾರ್ಗವಿಲ್ಲ. 

8. ಕ್ಷಮಿಸುವುದನ್ನು ಕಲಿಯಿರಿ
ಆದ ತಪ್ಪುಗಳಿಂದ ಕಲಿಯುವುದು ಹಾಗೂ ಇನ್ನೊಬ್ಬರ ತಪ್ಪನ್ನು ಕ್ಷಮಿಸುವುದು ನಿಮಗೂ ನೆಮ್ಮದಿ ನೀಡುತ್ತದೆಯಲ್ಲದೆ, ಇತರರ ದೃಷ್ಟಿಯಲ್ಲೂ ಮೇಲಕ್ಕೇರುವಿರಿ.