ಸ್ಲಿಮ್ ಆಗಿ, ತಳುಕು ಬಳುಕಾಗಿ ಕಾಣಿಸಲು ಎಲ್ಲರೂ ಡಯಟ್ ಮೊರೆ ಹೋಗುತ್ತಾರೆ. ಡಯಟ್ ನೆಪದಲ್ಲಿ ಊಟ, ತಿಂಡಿ ಬಿಡುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲಿ. ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆ.  ಬದಲಾಗಿ ಈ ಸಿಂಪಲ್ ಟಿಪ್ಸ್'ಗಳನ್ನು ಫಾಲೋ ಮಾಡಿ, ಆರೋಗ್ಯಯುತರಾಗಿರಿ.

ಬೆಂಗಳೂರು (ಜ.05): ಸ್ಲಿಮ್ ಆಗಿ, ತಳುಕು ಬಳುಕಾಗಿ ಕಾಣಿಸಲು ಎಲ್ಲರೂ ಡಯಟ್ ಮೊರೆ ಹೋಗುತ್ತಾರೆ. ಡಯಟ್ ನೆಪದಲ್ಲಿ ಊಟ, ತಿಂಡಿ ಬಿಡುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲಿ. ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆ. ಬದಲಾಗಿ ಈ ಸಿಂಪಲ್ ಟಿಪ್ಸ್'ಗಳನ್ನು ಫಾಲೋ ಮಾಡಿ, ಆರೋಗ್ಯಯುತರಾಗಿರಿ.

ಊಟಕ್ಕೆ ಮುಂಚೆ ನೀರು ಕುಡಿಯಿರಿ

ಹೆಚ್ಚು ಹೆಚ್ಚು ನೀರು ಕುಡಿದಷ್ಟು ದೇಹದಲ್ಲಿರುವ ಕ್ಯಾಲರಿಯನ್ನು ಕಡಿಮೆ ಮಾಡುತ್ತದೆ. ಊಟಕ್ಕೆ ಅರ್ಧಗಂಟೆ ಮುಂಚೆ ಅರ್ಧ ಲೀ. ನೀರು ಕುಡಿಯಬೇಕು

ಬೆಳಗಿನ ತಿಂಡಿಗೆ ಮೊಟ್ಟೆ

ಬೆಳಗಿನ ತಿಂಡಿಗೆ ಮೊಟ್ಟೆ ತಿನ್ನುವುದರಿಂದ ತೂಕ ಕಳೆದುಕೊಳ್ಳಬಹುದು.

ನಿಯಮಿತವಾಗಿ ಕಾಫಿ ಕುಡಿಯಿರಿ

ನಿಯಮಿತವಾಗಿ ಕಾಫಿ ಕುಡಿಯಬೇಕು. ಇದರಲ್ಲಿರುವ ಕೆಫಿನ್ ಅಂಶ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ.

ಸಕ್ಕರೆ ಕಡಿಮೆ ಸೇವನೆ

ಸಕ್ಕರೆಯನ್ನು ಕಡಿಮೆ ಸೇವಿಸಿ. ಮೇಲು ಸಕ್ಕರೆಯನ್ನು ಹಾಕಿಕೊಳ್ಳಬೇಡಿ.

ತರಕಾರಿ, ಹಣ್ಣು ಜಾಸ್ತಿ ಸೇವಿಸಿ

ತರಕಾರಿ, ಹಣ್ಣುಗಳನ್ನು ಹೆಚ್ಚು ಸೇವಿಸಿ. ಇದರಲ್ಲಿ ಕ್ಯಾಲರಿ ಅಂಶ ಕಡಿಮೆ ಇದ್ದು ಫೈಬರ್ ಅಂಶ ಜಾಸ್ತಿ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

ಚೆನ್ನಾಗಿ ನಿದ್ದೆ ಮಾಡಿ

ನಿದ್ದೆ ಚೆನ್ನಾಗಿ ಮಾಡಿದ್ರೆ ಆರೋಗ್ಯವಾಗಿರುತ್ತೀರಿ. ಕಡಿಮೆ ನಿದ್ದೆ ಒಬೆಸಿಟಿಯನ್ನು ಹೆಚ್ಚು ಮಾಡುತ್ತದೆ.

ಏರೋಬಿಕ್ ಎಕ್ಸರ್'ಸೈಸ್ ಮಾಡಿ

ಪ್ರತಿನಿತ್ಯ ಏರೋಬಿಕ್ ಎಕ್ಸರ್'ಸೈಸ್ ಮಾಡಿ. ದೇಹ ಸಕ್ರಿಯವಾಗಿರುತ್ತದೆ. ನೀವು ಸ್ಲಿಮ್ ಆಗಿ ಕಾಣಿಸುತ್ತೀರಿ.

ಡಯಟ್ ಬೇಡ

ಡಯಟ್ ನೆಪದಲ್ಲಿ ಊಟ, ತಿಂಡಿ ಬಿಡಬೇಡಿ. ಬದಲಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ.