Asianet Suvarna News Asianet Suvarna News

Viral Video : 6 ತಿಂಗಳ ಮಗುವಿಗೆ ಪುಷ್ ಅಪ್ ಹೇಳ್ಕೊಟ್ಟ ತಂದೆ

ಮಕ್ಕಳಿಗೆ ಹೊಸದನ್ನು ಕಲಿಸಬೇಕೆಂಬ ಉತ್ಸಾಹ ಪಾಲಕರಿಗೆ ಇದ್ದೇ ಇರುತ್ತೆ. ಚಿಕ್ಕ ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ತರಬೇತಿ ಶುರುವಾಗುತ್ತದೆ. ಆದ್ರೆ ಸರಿಯಾಗಿ ಹಾಲು ಕುಡಿಯಲು ಬರದ ಮಗನಿಗೆ ತಂದೆಯೊಬ್ಬ ಏನ್ ಹೇಳಿಕೊಡ್ತಿದ್ದಾನೆ ಗೊತ್ತಾ?
 

Watch Father Successfully Teaches His 6 Month Old Son Push Ups Internet Goes
Author
First Published Sep 6, 2022, 5:32 PM IST

ಮನೆಯ ಮೊದಲ ಪಾಠ ಶಾಲೆ. ತಂದೆ – ತಾಯಿಯೇ ಮೊದಲ ಶಿಕ್ಷಕರು. ಪಾಲಕರು ಮಕ್ಕಳಿಗೆ ಪುಟಾಣಿ ಹೆಜ್ಜೆ ಇಡೋದ್ರಿಂದ ಹಿಡಿದು ಆಹಾರ ಸೇವನೆಯವರೆಗೆ ಪ್ರತಿಯೊಂದು ಸಣ್ಣಪುಟ್ಟ ವಿಷ್ಯಗಳನ್ನು ಕಲಿಸ್ತಾರೆ. ನವಜಾತ ಶಿಶು ಈ ಪ್ರಪಂಚಕ್ಕೆ ಬರ್ತಿದ್ದಂತೆ ಅದ್ರ ಕಲಿಕೆ ಶುರುವಾಗುತ್ತದೆ. ಮಕ್ಕಳಿಗೆ ಹಾಲು ಕುಡಿಯುವುದನ್ನು ಕಲಿಸುವುದ್ರಿಂದ ಪಾಲಕರ ಶಾಲೆ ಶುರುವಾಗುತ್ತದೆ. ಪಾಲಕರು, ಪ್ರತಿಯೊಂದು ಹಂತದಲ್ಲೂ ಮಕ್ಕಳಿಗೆ ಮಾರ್ಗದರ್ಶಕರಾಗಿರ್ತಾರೆ. ಇತ್ತೀಚಿನ ದಿನಗಳಲ್ಲಿ ಪಾಲಕರು, ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಹೊಸ ಹೊಸ ವಿಷ್ಯಗಳನ್ನು ಕಲಿಸ್ತಿದ್ದಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಮಕ್ಕಳು ಮುಂದಿರಬೇಕು ಎಂಬುದು ಅವರ ಬಯಕೆ. ಆದ್ರೆ ಇಲ್ಲೊಬ್ಬ ತಂದೆ ಎಲ್ಲ ಲಿಮಿಟ್ ಮೀರಿದ್ದಾನೆ. ಆರು ತಿಂಗಳ ಮಗುವಿಗೆ ಸಾಮಾನ್ಯವಾಗಿ ಪಾಲಕರು ಹೊಟ್ಟೆಯಲ್ಲಿ ಮುಂದೆ ಹೋಗೋದು ಹೇಗೆ ಎಂಬುದನ್ನು ಕಲಿಸ್ತಾರೆ. ಆದ್ರೆ ಈ ತಂದೆ ವಿಚಿತ್ರ ಪ್ರಯತ್ನಕ್ಕೆ ಕೈ ಹಾಕಿದ್ದಾನೆ. ತಂದೆ, ತನ್ನ ಆರು ತಿಂಗಳ ಮಗುವಿಗೆ ಪುಷ್ ಅಪ್ ಕಲಿಸುವ ಪ್ರಯತ್ನ ಮಾಡಿದ್ದಾನೆ.

ತಂದೆ (Father) ಯಿಂದ ಪುಷ್ ಅಪ್ (Push Up) ಟ್ರೈನಿಂಗ್ : ತಂದೆ ಹಾಗೂ ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟ್ರಾಗ್ರಾಮ್ (Instagram) ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.  ಅಪ್‌ಲೋಡ್ ಮಾಡಿದ ಕ್ಲಿಪ್‌ (Clip)ನಲ್ಲಿ  ತಂದೆ ಮತ್ತು ಪುಟಾಣಿ ಪಾಪು ಹಾಸಿಗೆಯಲ್ಲಿ ಮಲಗಿರುವುದನ್ನು ಕಾಣ್ಬಬಹುದು. ಉತ್ಸಾಹದಲ್ಲಿರುವ ತಂದೆ ಪುಷ್ ಅಪ್ ಟ್ರೈನಿಂಗ್ ನಲ್ಲಿ ತೊಡಗಿಕೊಳ್ತಾನೆ.  ಈ ವಿಡಿಯೋಕ್ಕೆ “My spud is a stud,” ಎಂದು ಶೀರ್ಷಿಕೆ ನೀಡಲಾಗಿದೆ.

ವಿಡಿಯೋ (Video) ದಲ್ಲಿ ತೋರಿಸಿರುವ ಪ್ರಕಾರ, ತಂದೆ ಪುಷ್ ಅಪ್ ಸ್ಥಿತಿಗೆ ಬರ್ತಾನೆ. ನಂತ್ರ ಮೂರ್ನಾಲ್ಕು ಬಾರಿ ಪುಷ್ ಅಪ್ ಮಾಡ್ತಾನೆ. ತಂದೆ ಬಹು ಬೇಗ ಮಗನ ಗಮನ ಸೆಳೆಯುತ್ತಾನೆ. ಮಗ ತಂದೆಯನ್ನು ಗಮನಿಸುವುದಲ್ಲದೆ ಆತ ಹೇಳೋದನ್ನು ಆಲಿಸ್ತಾನೆ. ಈ ವೇಳೆ ತಂದೆ ಆತನ ಕೈಗಳು ಯಾವ ಸ್ಥಿತಿಯಲ್ಲಿ ಇರ್ಬೇಕು ಎಂಬುದನ್ನು ಹೇಳ್ತಾನೆ. ನಂತ್ರ ಮತ್ತೆ ಪುಷ್ ಅಪ್ ಮಾಡ್ತಾನೆ. ಕೊನೆಯಲ್ಲಿ ಮಗ ಕೂಡ ಪುಷ್ ಅಪ್ ಮಾಡುವ ಪ್ರಯತ್ನ ಮಾಡ್ತಾನೆ. ಇದನ್ನು ನೋಡಿ ತಂದೆ ಫುಲ್ ಖುಷಿಯಾಗ್ತಾನೆ.  

ಸಾವಿನಿಂದ ಕೂದಲೆಳೆ ಅಂತರದಿಂದ ಪಾರಾದ ಪಾದಾಚಾರಿ ಮಹಿಳೆ: ಭಯಾನಕ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ವಿಡಿಯೋ : ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊ ಸಾಕಷ್ಟು ಸುದ್ದಿ ಮಾಡಿದೆ. ಈವರೆಗೆ 8.6 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಅನೇಕರು ಇದನ್ನು ಶೇರ್ ಕೂಡ ಮಾಡಿದ್ದಾರೆ. ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಮಗುವಿನ ಪ್ರಯತ್ನವನ್ನು ಕೆಲವರು ಹೊಗಳಿದ್ದಾರೆ.  ಇಂಥ ವಿಡಿಯೋ ಹಿಂದೆ ವೀಕ್ಷಿಸಿರಲಿಲ್ಲವೆಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಈ ವಿಡಿಯೋಕ್ಕೆ ಪ್ರೇರಿತರಾಗಿದ್ದಾರೆ. ತಮ್ಮ ಮಕ್ಕಳೊಂದಿಗೆ ಅದೇ ರೀತಿ ಪುಪ್ ಅಪ್ ಮಾಡಲು ನಿರ್ಧರಿಸಿದ್ದಾರೆ.  ವಿಡಿಯೋ ತುಂಬಾ ಚೆನ್ನಾಗಿದೆ. ನಾನು ಕೂಡ ಪುಷ್ ಅಪ್ ಮಾಡಲು ಕಲಿಸ್ತೇನೆ. ನನ್ನ ಮಗನ ಜೊತೆ ನಾನು ಪುಷ್ ಅಪ್ ಮಾಡ್ಬಹುದು ಎಂದು ಕೆಲ ಬಳಕೆದಾರರು ಹೇಳಿದ್ದಾರೆ. 

ನೀರೊಳಗೆ ಬ್ಯೂಟಿಯ ಕ್ಯಾಟ್‌ವಾಕ್‌... ವಿಡಿಯೋ ಸಖತ್‌ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಇಂಥ ಅನೇಕ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಕೆಲ ದಿನಗಳ ಹಿಂದೆ  ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್‌ (Golden Temple ) ನಲ್ಲಿ ಆಫ್ರಿಕಾದ ವ್ಯಕ್ತಿ ಮತ್ತು ಅವನ ಮಗ ಮ್ಯಾಚಿಂಗ್ ಪೇಟವನ್ನು ಹಾಕಿದ್ದ ವೀಡಿಯೊವೊಂದು ವೈರಲ್ ಆಗಿತ್ತು. ಆ ಕ್ಲಿಪ್ ಅನ್ನು ಕೂಡ ಬಳಕೆದಾರರು ಅನೇಕ ಬಾರಿ ವೀಕ್ಷಿಸಿದ್ದರು. ಬಳಕೆದಾರರು ತಂದೆ ಮತ್ತು ಅವರ ಮಗನ ಹೊಸ ನೋಟವನ್ನು ಶ್ಲಾಘಿಸಿದ್ದರು.


 

 
 
 
 
 
 
 
 
 
 
 
 
 
 
 

A post shared by Joshua Terada (@joshterada)

Follow Us:
Download App:
  • android
  • ios