ಸಾವಿನಿಂದ ಕೂದಲೆಳೆ ಅಂತರದಿಂದ ಪಾರಾದ ಪಾದಾಚಾರಿ ಮಹಿಳೆ: ಭಯಾನಕ ವಿಡಿಯೋ

ಪಾದಾಚಾರಿ (pedestrian) ಮಹಿಳೆಯೊಬ್ಬರು ದೊಡ್ಡ ಅಪಘಾತವೊಂದರಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಆ ಅಪಘಾತದ ದೃಶ್ಯಗಳನ್ನು ನೋಡುತ್ತಿದ್ದರೆ ಇದೊಂದು ಪವಾಡವೇ ಎನಿಸುತ್ತಿದೆ. 

pedestrian women miracle escaped from death, horror accident video goes viral akb

ಅಪಘಾತದ ಹಲವು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿದ್ದೇವೆ. ಕೆಲವೊಂದು ವಿಡಿಯೋಗಳನ್ನು ನೋಡಿದಾಗ ಪವಾಡವೇ ನಡೆದಿದೆ ಎಂದರೆ ತಪ್ಪಾಗಲಾರದು. ಬದುಕಲು ಅವಕಾಶವೇ ಇಲ್ಲದಂತಹ ಅನಾಹುತಗಳಲ್ಲಿ ಅನೇಕರು ಬದುಕಿ ಬಂದಂತಹ ಸನ್ನಿವೇಶಗಳ ವಿಡಿಯೋಗಳನ್ನು ನೋಡಿದಾಗ ನಿಜಕ್ಕೂ ಯಾವುದೇ ಅಗೋಚರ ಶಕ್ತಿಯೊಂದು ನಮ್ಮನ್ನು ಕಾಯುತ್ತಿದೆ ಎಂದು ನಂಬುವಂತೆ ಮಾಡುವುದು ಅದೇ ರೀತಿ ಇಲ್ಲೊಂದು ವಿಡಿಯೋದಲ್ಲಿ ಪಾದಾಚಾರಿ (pedestrian) ಮಹಿಳೆಯೊಬ್ಬರು ದೊಡ್ಡ ಅಪಘಾತವೊಂದರಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಆ ಅಪಘಾತದ ದೃಶ್ಯಗಳನ್ನು ನೋಡುತ್ತಿದ್ದರೆ ಇದೊಂದು ಪವಾಡವೇ ಎನಿಸುತ್ತಿದೆ. 

ತೆಲಂಗಾಣದ ಎಡಿಜಿಪಿ ವಿ.ಸಿ ಸಜ್ಜನರ್‌ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸಾವಿನಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರಾಗಿದ್ದಾರೆ. ಆದರೆ ನಾವು ಎಷ್ಟು ಸಮಯ ಅದೃಷ್ಟ ಕೈ ಹಿಡಿಯುವುದು ಎಂದು ನಂಬಲು ಸಾಧ್ಯ, ರಸ್ತೆಯಲ್ಲಿ ಜವಾಬ್ದಾರಿಯುತರಾಗಿ ವಾಹನ ಚಲಾಯಿಸಿ ಎಂದು ಬರೆದು ರಸ್ತೆ ಸುರಕ್ಷತೆಯ ಹ್ಯಾಶ್‌ಟ್ಯಾಗ್ ಜೊತೆ ಈ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. 

ಸಜ್ಜನರ್ ( V C Sajjana) ಹಂಚಿಕೊಂಡಿರುವ ವಿಡಿಯೋದಲ್ಲಿ ಬ್ಯುಸಿಯಾದ ರಸ್ತೆಯಲ್ಲಿ ಮಹಿಳೆಯೊಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ಅವರ ಮುಂದೆಯೇ ರಸ್ತೆ ಪಕ್ಕದಲ್ಲಿ ಒಂದು ಆಟೋ ನಿಂತಿರುತ್ತದೆ. ಆ ಆಟೋ ಹಿಂದಿನಿಂದ ಬಂದ ಕಾರೊಂದು ಆಟೋಗೆ (Auto) ಡಿಕ್ಕಿ ಹೊಡೆದು, ಆಟೋದ ಸಮೇತ ಮುಂದೆ ಹಾರುತ್ತದೆ. ಈ ವೇಳೆ ಮುಂದೆ ಮಹಿಳೆ ಇದ್ದರೂ ಅವರಿಗೆ ಸ್ವಲ್ಪವೂ ಹಾನಿಯಾಗಿಲ್ಲ. ಏನೂ ಆಗದಂತೆ ಅವರು ನಡೆದು ಬಂದಿದ್ದಾರೆ. 

ಮೊಮ್ಮಗಳ ಹಠ, ಕ್ಷಣಾರ್ಧದಲ್ಲಿ ಶವವಾದ ಅಜ್ಜ- ಅಜ್ಜಿ: ಭಯಾನಕ ದೃಶ್ಯ ಕಂಡು ಬೆಚ್ಚಿಬಿದ್ದ ಜನ!

ಈ ವಿಡಿಯೋ ನೋಡಿದ ಅನೇಕರು ಸಂಚಾರ ನಿಯಮವನ್ನು (Traffic Rules) ಪಾಲಿಸುವಂತೆ ಕಾಮೆಂಟ್ ಮಾಡಿದ್ದಾರೆ, ಸಜ್ಜನ್ ಅವರ ಬರಹವನ್ನು ಒಪ್ಪಿಕೊಂಡ ಜನ ಚಾಲನೆ ಮಾಡುವ ವೇಳೆ ಸಾಕಷ್ಟು ಜವಾಬ್ದಾರಿಯುತವಾಗಿರಬೇಕು. ಜೊತೆಗೆ ಪಾದಾಚಾರಿಗಳು ಕೂಡ ರಸ್ತೆ ಬದಿ ನಡೆಯುವಾಗ ರಸ್ತೆ ದಾಟುವಾಗ ಜಾಗರೂಕರಾಗಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ದೇಶದ ನಾಗರಿಕರು ಬೇರೆಯವರ ಸುರಕ್ಷತೆಯನ್ನು ಕೂಡ ಗಮನದಲ್ಲಿರಿಸಿಕೊಂಡು ಜವಾಬ್ದಾರಿಯಿಂದ ವಾಹನ ಚಾಲನೆ ಮಾಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕುಡಿದು ವಾಹನ ಚಾಲನೆ (Drunken driving) ಮಾಡುವುದು, ಅಪ್ರಾಪ್ತರ ಕೈಗೆ (minor driving)ವಾಹನ ನೀಡುವುದು, ರಾಶ್ ಡ್ರೈವಿಂಗ್ (rash driving) ಮಾಡುವುದು ಮುಂತಾದ ನಿಯಮ ಉಲ್ಲಂಘನೆಯನ್ನು ದೇಶದ ಜನ ಕಠಿಣವಾಗಿ ವಿರೋಧಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಪ್ರಕರಣದಲ್ಲಿ ಆಟೋ ಚಾಲಕ ಅದೃಷ್ಟವಂತನಾಗಿರಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ನೋಡ ನೋಡುತ್ತಿದ್ದಂತೆಯೇ ಸಂಭವಿಸಿತು ಭಯಾನಕ ಅಪಘಾತ, ವೈರಲ್ ಆಯ್ತು ವಿಡಿಯೋ
ಅಪಘಾತದ ಹಲವು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದನ್ನು ನೀವು ನೋಡಿರಬಹುದು. ರಸ್ತೆಯ ಪಕ್ಕದ ಸ್ಥಳದಲ್ಲಿರುವ ಕೆಲವು ಸಿಸಿಟಿವಿ ವಿಡಿಯೋಗಳಲ್ಲಿ ಅಪಘಾತದ ದೃಶ್ಯಗಳು ಸೆರೆ ಆಗಿವೆ. ಅದೇ ರೀತಿ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕತ್ರಿಗುಪ್ಪೆ ಬಳಿ ಕಾಫಿ ಕುಡಿಯಲು ಬಂದಿದ್ದ ನಾಲ್ವರು ಯುವಕರು ರಸ್ತೆ ಬದಿ ನಡ್ಕೊಂಡು ಬರ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದರು. ಅಪಘಾತದ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಕಿರುತೆರೆ ಅಸಿಸ್ಟೆಂಟ್ ಡೈರೆಕ್ಟರ್ ಮುಖೇಶ್ ಎಂಬಾತ ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಪರಿಣಾಮ ಈ ದುರಂತ ಸಂಭವಿಸಿತ್ತು. ಪಾದಚಾರಿಗಳಿಗೆ ಗುದ್ದಿದ್ದ ಕಾರು ನಂತರ 1 ಬೈಕ್, 1 ಕಾರಿಗೂ ಡಿಕ್ಕಿ ಹೊಡೆದಿತ್ತು.

Latest Videos
Follow Us:
Download App:
  • android
  • ios