ಚಹಾ ಅನೇಕರಿಗೆ ಇಷ್ಟವಾದರೂ, ಮನೆಯಲ್ಲಿ ಮಾಡಿದಾಗ ಅಂಗಡಿಯ ರುಚಿ ಬರುವುದಿಲ್ಲ, ಇದಕ್ಕೆ ಚಹಾದ ಮೇಲೆ ಕೆನೆ ಕಟ್ಟುವುದು ಒಂದು ಕಾರಣ. ಚಹಾ ಮಾಡುವಾಗ ಚಮಚದಿಂದ ನಿರಂತರವಾಗಿ ಕದಡುತ್ತಾ ಇರುವುದರಿಂದ ಕೆನೆ ಕಟ್ಟುವುದು ತಪ್ಪುತ್ತದೆ ಮತ್ತು ಚಹಾ ಹೆಚ್ಚು ಸ್ವಾದಿಷ್ಟವಾಗಿ ಬರುತ್ತದೆ.

ಎಷ್ಟೋ ಮಂದಿಗೆ ಬೆಳಿಗ್ಗೆ ಒಂದು ಕಪ್​ ಟೀ ಕುಡಿದರೆ ಮನಸ್ಸಿಗೆ ಅಹ್ಲಾದ. ದಿನಪೂರ್ತಿ ಶಕ್ತಿ ತುಂಬುವ ವಸ್ತು ಅದು. ಕೆಲವರಿಗೆ ಟೀ ಕುಡಿಯದೇ ಹೋದರೆ ತಲೆನೋವು ಬರುವುದು ಇದೆ, ತಲೆನೋವು ಬಂದಾಗ ಒಂದು ಕಪ್​ ಚಹಾ ಕುಡಿದರೆ ಅದು ತಲೆನೋವನ್ನು ಶಮನ ಮಾಡುವ ಔಷಧವಾಗಿಯೂ ಪರಿವರ್ತನೆ ಆಗುವುದು ಇದೆ. ಆದ್ದರಿಂದ ಚಹಾ ಎನ್ನುವುದು ಎಷ್ಟೋ ಮಂದಿಗೆ ಎಷ್ಟೋ ರೀತಿಯ ಪ್ರಯೋಜನ ನೀಡುತ್ತದೆ. ಹೀಗೆ ಟೀ ಪ್ರಿಯರು ಸ್ವಾದಿಷ್ಟವಾಗಿ ಚಹಕ್ಕಾಗಿ ಎಲ್ಲೆಲ್ಲೋ ಹುಡುಕಿಕೊಂಡು ಹೋಗುವುದು ಇದೆ. ಮನೆಯಲ್ಲಿ ಮಾಡಿದ ಟೀಗಿಂತ ಅಂಗಡಿಯ ಚಹಾ ಟೇಸ್ಟ್​ ಎನ್ನಿಸುವುದು ಇದಕ್ಕೆ. ಇದಕ್ಕೆ ಕಾರಣ ಹಲವು ಇದ್ದರೂ, ಒಂದು ಟಿಪ್ಸ್​ ಇಲ್ಲಿ ನೀಡಲಾಗಿದೆ.

ಒಂದೇ ಆದರೂ ಭಿನ್ನ ಟೇಸ್ಟ್​

ಟೀ ಮಾಡುವುದು ಕೂಡ ಒಂದು ಕಲೆ. ಅದೇ ನೀರು, ಹಾಲು, ಟೀ ಪೌಡರ್‌, ಅದೇ ಸಕ್ಕರೆ ಹಾಕಿದರೂ ಒಬ್ಬೊಬ್ಬರು ಮಾಡುವ ಚಹಾ ಒಂದೊಂದು ಟೇಸ್ಟ್‌ ಬರುತ್ತದೆ. ಅದು ಕೈಗುಣ ಎಂದು ಹೇಳಲಾಗುತ್ತದೆಯಾದರೂ, ನೀವು ಕೂಡ ಕೆಲವೊಂದು ಟಿಪ್ಸ್‌ ಅಳವಡಿಸಿಕೊಂಡರೆ ಖಂಡಿತವಾಗಿಯೂ ಟೇಸ್ಟಿ ಟೇಸ್ಟಿ ಟೀ ಮಾಡಬಹುದು.

ಅಷ್ಟಕ್ಕೂ ಚಹ ಮಾಡುವಾಗ ಕೆನೆ ಕಟ್ಟುವುದು ಸಾಮಾನ್ಯ. ಕೆಲವರು ಹಾಲಿನಿಂದ ಟೀ ಮಾಡುತ್ತಾರೆ, ಕೆಲವರು ನೀರು ಹಾಕಿ ಆಮೇಲೆ ಹಾಲು ಹಾಕುತ್ತಾರೆ. ಏನೇ ಆದರೂ, ಚಹಾದ ಮೇಲೆ ಕೆನೆ ಕಟ್ಟಿದಾಗ ಅದು ಟೇಸ್ಟ್​ ಚೆನ್ನಾಗಿ ಬರುವುದಿಲ್ಲ. ಟೀ ಮಾಡಿದ ಬಳಿಕ, ಅದನ್ನು ಸೋಸಿ ಕುಡಿದರೂ, ಕೆನೆ ಕಟ್ಟಿದರೆ ಅದರ ಟೇಸ್ಟೇ ಹಾಳಾಗಿ ಹೋಗುತ್ತದೆ.

ಇಲ್ಲಿದೆ ನೋಡಿ ಆ ಗುಟ್ಟು

ಆದ್ದರಿಂದ ಕೆನೆ ಕಟ್ಟದೇ ಟೇಸ್ಟಿ ಟೇಸ್ಟಿ ಚಹಾ ಮಾಡುವ ವಿಧಾನ ಇದೆ. ಅದೇನೆಂದರೆ, ಚಹಾ ಮಾಡುವ ಸಮಯದಲ್ಲಿ ಒಂದು ಚಮಚದ ಸಹಾಯದಿಂದ ಅದನ್ನು ಕದಡುತ್ತಾ ಇರಬೇಕು. ಇದರಿಂದ ಕೆನೆ ಕಟ್ಟುವುದು ತಪ್ಪುವುದು ಮಾತ್ರವಲ್ಲದೇ, ಚಹ ಕೂಡ ಸಕತ್​ ಟೇಸ್ಟಿ ಆಗಿ ಬರುವುದು. ಟೀ ಮಾಡುವಾಗ ನೀವು ಮೊದಲು ಏನನ್ನಾದರೂ ಹಾಕಿ, ನೀರು ಹಾಕಿ, ಹಾಲು ಹಾಕಿ, ನೀವು ಮಾಡುವ ವಿಧಾನದಿಂದಲೇ ಮಾಡಿ. ಆದರೆ ಒಂದು ಚಮಚ ಹಾಕಿ ಟೀಯನ್ನು ಕಲಕುತ್ತಾ, ತಿರುಗಿಸುತ್ತಾ ಇದ್ದರೆ ಕೆನೆ ಕಟ್ಟುವುದಿಲ್ಲ, ಜೊತೆಗೆ ಟೀ ಕೂಡ ತುಂಬಾ ಸ್ವಾದಿಷ್ಟವಾಗಿ ಬರುತ್ತದೆ.