ಭಾರತೀಯ ಯುವತಿಯೊಬ್ಬಳು ಸ್ವೀಡನ್ ಮತ್ತು ಭಾರತದ ಜೀವನಶೈಲಿಯನ್ನು ಹೋಲಿಸಿ ಮಾತನಾಡಿದ್ದಾಳೆ. ಭಾರತದಲ್ಲಿನ ಅನುಕೂಲಗಳು ಮತ್ತು ಸ್ವೀಡನ್‌ನ ಸವಾಲುಗಳ ಬಗ್ಗೆ ಆಕೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾಳೆ.
ಭಾರತದಿಂದ ವಿದೇಶಕ್ಕೆ ಹೋಗಿ ನೆಲೆಸುವುದು ಹೊಸತೇನಲ್ಲ. ಹಲವು ದಶಕಗಳಿಂದ ಭಾರತದ ತುಂಬಾ ಯುವಜನರು ವಿದೇಶದಲ್ಲಿ ಓದೋಕೆ, ಕೆಲಸ ಮಾಡೋಕೆ ಅಂತ ಎಂದು ಹೋಗಿ ಅಲ್ಲಿಯೇ ನೆಲೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಹೇಳಬಹುದು. ಅಲ್ಲಿಂದ ಬರೋ ವಿಡಿಯೋಗಳು, ಪೋಸ್ಟ್‌ಗಳು ನೋಡಿದ್ರೆ ವಿದೇಶದ ಲೈಫ್ ತುಂಬಾ ಚೆನ್ನಾಗಿದೆ ಅಂತ ತುಂಬಾ ಜನ ಅಂದುಕೊಳ್ಳುತ್ತಾರೆ. ಈಗ ಸ್ವೀಡನ್‌ನಲ್ಲಿ ಇರೋ ಒಬ್ಬ ಯುವತಿ ಇಂಡಿಯಾ ಮತ್ತೆ ಸ್ವೀಡನ್‌ನ ಕಂಪೇರ್ ಮಾಡಿ ಒಂದು ಪೋಸ್ಟ್ ಹಾಕಿದ್ದಾರೆ. ಅದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ.
ಸ್ವೀಡನ್‌ನಲ್ಲಿ ವಾಸಿಸುವ ಯುವತಿ, ಅಲ್ಲಿನ ಜೀವನ ಚೆನ್ನಾಗಿದೆ. ಆದರೆ ಭಾರತದಲ್ಲಿನ ಜೀವನ ಹೆಚ್ಚು ಅನುಕೂಲಕರ ಹಾಗೂ ಆರಾಮದಾಯಕವಾಗಿದೆ ಎಂದು ಹೇಳಿದ್ದಾಳೆ. ಅದಕ್ಕೆ ಆ ಯುವತಿ ಇನ್ನೂ ಕೆಲವು ಕಾರಣಗಳನ್ನು ನೀಡುತ್ತಾಳೆ. ಭಾರತದಲ್ಲಿ, ಸರಕುಗಳನ್ನು ನಿಮ್ಮ ಮನೆಗೆ 10 ನಿಮಿಷಗಳಲ್ಲಿ ತಲುಪಿಸಲಾಗುತ್ತದೆ. ಆದರೆ, ಸ್ವೀಡನ್‌ನಲ್ಲಿ ಅದನ್ನು ಖರೀದಿಸಲು ಬಸ್ ನಿಲ್ದಾಣಕ್ಕೆ 10 ನಿಮಿಷ ನಡೆದು ಹೋಗಬೇಕು ಎಂದು ಮಹಿಳೆ ಹೇಳುತ್ತಾರೆ.
ಇದನ್ನೂ ಓದಿ: ಈಜಾಡಲು ನೀರಿಗಿಳಿದವನ ಹೃದಯ ಬಡಿತ ನಿಲ್ಲಿಸುವಂತೆ ಮಾಡಿದ ಮೊಸಳೆಮರಿ : ವೀಡಿಯೋ ನೋಡಿ
ಅದೇ ರೀತಿ, ಭಾರತದಲ್ಲಿ ಮನೆಗಳಿಗೆ ಔಷಧಿಗಳನ್ನು ತಲುಪಿಸಲಾಗುತ್ತದೆ. ಆದರೆ, ಸ್ವೀಡನ್‌ನಲ್ಲಿ ಔಷಧಾಲಯಗಳು ಸಂಜೆ 6 ಗಂಟೆಯೊಳಗೆ ಮುಚ್ಚುತ್ತವೆ ಎಂದು ಯುವತಿ ಹೇಳಿದ್ದಾರೆ. ಈ ಸಣ್ಣ ವಿಷಯಗಳ ಬಗ್ಗೆ ನಾವು ಸಾಕಷ್ಟು ಚರ್ಚಿಸುವುದಿಲ್ಲ ಎಂದು ನನಗೆ ಅನಿಸುತ್ತದೆ. ವಿದೇಶದಲ್ಲಿ ಇರೋದನ್ನ ನೀವು ರೊಮ್ಯಾಂಟಿಕ್ ಆಗಿ ನೋಡಬೇಡಿ. ಸೋಶಿಯಲ್ ಮೀಡಿಯಾದಲ್ಲಿ ಕಾಣೋ ತರ ಇಲ್ಲಿನ ಪರಿಸ್ಥಿತಿ ಇರುವುದಿಲ್ಲ. ಅದು ದಾರಿತಪ್ಪಿಸುವ ಮಾತು ಎಂದು ಆ ಯುವತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ.
'ನನ್ನನ್ನು ತಪ್ಪು ತಿಳಿಬೇಡಿ, ಸ್ವೀಡನ್‌ನಲ್ಲಿ ಇರೋದು ನನಗೆ ಇಷ್ಟ' ಅಂತ ವಿಡಿಯೋ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ತುಂಬಾ ಜನ ನೆಟ್ಟಿಗರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಯಾವಾಗ ಇಂಡಿಯಾಕ್ಕೆ ವಾಪಸ್ ಬರ್ತೀರಾ ಅಂತ ಒಬ್ಬರು ಕೇಳಿದ್ದಾರೆ. ಇನ್ನೊಬ್ಬರು ಇಂಡಿಯಾದಲ್ಲಿ ಮಿಡಲ್ ಕ್ಲಾಸ್ ಜನ (ಮಧ್ಯಮ ವರ್ಗದವರು) ಕೂಡ ಚೆನ್ನಾಗಿರಬಹುದು ಅಂತ ಹೇಳಿದ್ದಾರೆ. ಆದರೆ, ಭಾರತದಲ್ಲಿ ಇರೋದು ತುಂಬಾ ಅನುಕೂಲ. ಅದೇ ಟೈಮ್‌ನಲ್ಲಿ ವಿದೇಶದಲ್ಲಿ ಇರೋದಕ್ಕೂ ಅದರದ್ದೇ ಆದ ಲಾಭಗಳಿವೆ ಅಂತ ಜನ ಕಮೆಂಟ್ ಮಾಡಿದ್ದಾರೆ. ಒಟ್ಟಾರೆ, ಯುವತಿಯ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವಿದೇಶ ವಾಸದ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ.
ಇದನ್ನೂ ಓದಿ: UPSC Success Story:ಕೂಲಿಯವನ ಮಗ-ತರಕಾರಿ ಮಾರುವ ತಾಯಿ, IPS ಆದ ಧೀರ ಅಧಿಕಾರಿ!
