ದೇಹದ ಕೊಬ್ಬನ್ನ ಮಿತಿಯಲ್ಲಿಡುವುದು ಪ್ರತಿಯೊಬ್ಬರಿಗೂ ಸವಾಲು.. ಬಾಯಿ ಚಪಲದಿಂದ ಮಾಂಸಾಹಾರ, ಕರಿದ ತಿಂಡಿಗಳನ್ನ ತಿಂದು ದಪ್ಪಗಾಗಿ ಪರಿತಪಿಸುತ್ತಿರುತ್ತಾರೆ. ಕೊಲೆಸ್ಟ್ರಾಲ್ ಆಹಾರ ಕಂಟ್ರೋಲ್ ಮಾಡೋಕೆ ನಿರ್ಧರಿಸಿದವರೂ ಸಹ ಒಮ್ಮೊಮ್ಮೆ ಕಂಟ್ರೋಲ್ ಮೀರಿ ತಿಂದು ಮತ್ತೆ ವ್ಯಥೆಪಡುವುದುಂಟು. ಈ ರೀತ ಪರಿತಪಿಸುತ್ತಿರುವವರಿಗಾಗಿಯೇ ಇಲ್ಲಿವೆ ಕೆಲ ಕೊಲೆಸ್ಟ್ರಾಲ್ ಮ್ಯಾನೇಜ್‘ಮೆಂಟ್ ಟಿಪ್ಸ್..

ದೇಹದ ಕೊಬ್ಬನ್ನ ಮಿತಿಯಲ್ಲಿಡುವುದು ಪ್ರತಿಯೊಬ್ಬರಿಗೂ ಸವಾಲು.. ಬಾಯಿ ಚಪಲದಿಂದ ಮಾಂಸಾಹಾರ, ಕರಿದ ತಿಂಡಿಗಳನ್ನ ತಿಂದು ದಪ್ಪಗಾಗಿ ಪರಿತಪಿಸುತ್ತಿರುತ್ತಾರೆ. ಕೊಲೆಸ್ಟ್ರಾಲ್ ಆಹಾರ ಕಂಟ್ರೋಲ್ ಮಾಡೋಕೆ ನಿರ್ಧರಿಸಿದವರೂ ಸಹ ಒಮ್ಮೊಮ್ಮೆ ಕಂಟ್ರೋಲ್ ಮೀರಿ ತಿಂದು ಮತ್ತೆ ವ್ಯಥೆಪಡುವುದುಂಟು. ಈ ರೀತ ಪರಿತಪಿಸುತ್ತಿರುವವರಿಗಾಗಿಯೇ ಇಲ್ಲಿವೆ ಕೆಲ ಕೊಲೆಸ್ಟ್ರಾಲ್ ಮ್ಯಾನೇಜ್‘ಮೆಂಟ್ ಟಿಪ್ಸ್..

1. ಮಾಂಸಾಹಾರ ಸೇವನೆ ಮಿತಿಯಲ್ಲಿರಲಿ: ಮಾಂಸ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಅದರಲ್ಲೂ ಕೆಂಪುಮಾಂಸ ಸೇವನೆಯನ್ನ ಮಿತಿಯಲ್ಲಿಟ್ಟರೆ ಒಳ್ಳೆಯದು. ಬೀಫ್, ಹಂದಿ ಮತ್ತು ಕುರಿಮಾಂಸ ಸೇವನೆ ಕಡಿಮೆ ಮಾಡಿ.

2. ನಾರಿನಾಂಶವುಳ್ಳ ಆಹಾರ ಹೆಚ್ಚು ಸೇವಿಸಿ: ಪ್ರತಿನಿತ್ಯ ನಿಮ್ಮ ಊಟದಲ್ಲಿ 5ರಿಂದ 10 ಗ್ರಾಂ ನಾರಿನಾಂಶ ಇರುವ ಆಹಾರ ಸೇವಿಸಿ. ಬೆಳಗಿನ ಉಪಾಹಾರದಲ್ಲಿ ಓಟ್ಸ್ ಮತ್ತು ತರಕಾರಿಯನ್ನ ಹೆಚ್ಚಾಗಿ ಸೇವಿಸಿ.

3. ನಿಯಮಿತವಾಗಿ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿಕೊಳ್ಳಿ: ಕೊಲೆಸ್ಟ್ರಾಲ್ ಏರಿಳಿತವನ್ನ ತಿಳಿಯಲು ನಿಯಮಿತವಾಗಿ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿಕೊಳ್ಳಿ. ಬ್ಯಾಡ್ ಕೊಲೆಸ್ಟ್ರಾಲ್ ಬಗೆಗಿನ ಮಾಹಿತಿಯೂ ಇದರಿಂದ ಸಿಗುತ್ತೆ. ಬಳಿಕ ಕರಗಿಸುವ ಕ್ರಮ ಕೈಗೊಳ್ಳಬಹುದು.

4. ಕಡಿಮೆ ಕೊಬ್ಬಿನಾಂಶ ಇರುವ ಆಹಾರ ಸೇವಿಸಿ: ಸಮಸ್ಯೆ ಆದ ಮೇಲೆ ವ್ಯಥೆಪಡುವುದಕ್ಕಿಂತ ಸಮಸ್ಯೆ ಆಗದಂತೆಯೇ ಎಚ್ಚರಿಕೆ ವಹಿಸುವುದು ಜಾಣತನ. ಕಡಿಮೆ ಕೊಬ್ಬಿನಾಂಶ ಇರುವ ಆಹಾರ ಸೇವನೆ ದೇಹದಲ್ಲಿ ಸೇರದಂತೆ ನೋಡಿಕೊಳ್ಳುವ ಒಳ್ಳೆಯ ಉಪಾಯ. ಹಣ್ಣು, ಹಸಿರು ತರಕಾರಿ, ಧಾನ್ಯದ ಪದಾರ್ಥಗಳ ಸೇವನೆ ಉತ್ತಮ.

5. ದಿನನಿತ್ಯ ವ್ಯಾಯಾಮ: ಬ್ಯಾಡ್ ಕೊಲೆಸ್ಟ್ರಾಲ್ ಕರಗಿಸಲು ವ್ಯಾಯಅಮ ರಾಮಬಾಣ. ಪ್ರತಿನಿತ್ಯ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ. ಆರೋಗ್ಯಕರ ತೂಕವನ್ನ ನಿರ್ಹಸಿಕೊಳ್ಳಿ. ತೂಕ ಹೆಚ್ಚಾಗದಂತೆ ನಿಗಾವಹಿಸಿ.

6. ಮೀನಿನ ಆಹಾರ ಸೇವಿಸಿ: ಬಹುತೇಕ ಮೀನುಗಳಲ್ಲಿ ಒಮೇಗಾ-3 ಫ್ಯಾಟಿ ಆಸಿಡ್ ಇರುವುದರಿಂದ ಕೊಬ್ಬು ಕರಗಿಸಲು ಸಹಕರಿಸುತ್ತದೆ. ಹೀಗಾಗಿ, ವಾರಕ್ಕೆ 2-3 ಬಾರಿ ಮೀನು ಮತ್ತು ಮೀನಿನೆಣ್ಣೆಯ ಸೇವನೆ ದೇಹಕ್ಕೆ ಒಳ್ಳೆಯದು.

7. ಆರೋಗ್ಯಕರ ತೂಕ: ಬಿಎಂಐ ಕ್ಯಾಲ್ಯುಕೇಟರ್ ಮೂಲಕ ನಿಮ್ಮ ಎತ್ತರಕ್ಕೆ ಸರಿಯಾದ ತೂಕ ಇರುವ ಬಗ್ಗೆ ಖಚಿತಪಡಿಸಿಕೊಂಡು. ಅದರಂತೆ, ತೂಕವನ್ನ ಮಿತಿಯಲ್ಲಿಡಿ.

8. ವಾಕಿಂಗ್ ಮಾಡಿ: ಹೆಚ್ಚು ವಾಕಿಂಗ್ ಮಾಡುವುದು ದೇಹಕ್ಕೆ ಉತ್ತಮ ಚಟುವಟಿಕೆಯಾಗಿದೆ. ಇದು ಕೊಲೆಸ್ಟ್ರಾಲ್ ಕರಗಿಸುವ ಅತ್ಯುತ್ತಮ ಮಾರ್ಗ. ಎಲಿವೇಟರ್ ಬದಿಗಿಟ್ಟು ಮೆಟ್ಟಿಲುಗಳನ್ನ ಹತ್ತುವುದನ್ನ ರೂಢಿಸಿಕೊಳ್ಳಿ. ಕಡಿಮೆ ಅಂತರದ ಸ್ಥಳಗಳಿಗೆ ನಡೆದೇ ಹೋಗುವುದನ್ನ ಅಭ್ಯಾಸ ಮಾಡಿಕೊಳ್ಳಿ.

9. ಮೊಟ್ಟೆ ಸೇವನೆ ಮಿತಿಯಲ್ಲಿರಲಿ: ಮೊಟ್ಟೆ ಸಹ ದೇಹದ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಹಾಗಾಗಿ, ಮೊಟ್ಟೆ ಸೇವನೆ ಮಿತಿಯಾಗಿರಲಿ. ರುಚಿ ಇದೆ ಎಂದು ಹೆಚ್ಚೆಚ್ಚು ತಿಂದರೆ ಹೃದಯಕ್ಕೆ ತೊಮದರೆ ಕೊಡುತ್ತೆ.

10. ಗ್ರೀನ್ ಟೀ ಕುಡಿಯಿರಿ: ನೀವು ಚಹಾ ಪ್ರಿಯರಾಗಿದ್ದರೆ ಗ್ರೀನ್ ಟೀ ಕುಡಿಯಿರಿ. ಇದರಲ್ಲಿರುವ ಕೆಟೆಚಿನ್ಸ್ ಎಂಬ ಆಂಟಿಆಕ್ಸಿಡೆಂಟ್ಸ್ ಕೊಬ್ಬನ್ನ ಕರಗಿಸುತ್ತವೆ. ದೇಹಕ್ಕೆ ದೀರ್ಘಾವಧಿಯ ರಕ್ಷಣೆ ಒದಗಿಸುತ್ತದೆ.

11. ಊಟದಲ್ಲಿರುವ ವೆರೈಟಿ ತರಕಾರಿ: ನೀವು ಮಾಡುವ ಊಟದಲ್ಲಿ ಹೆಚ್ಚು ತರಕಾರಿ ಇದ್ದರೆ ಉತ್ತಮದ ತರಕಾರಿಗಳು ದೇಹಕ್ಕೆ ವಿಟಮಿನ್, ಖನಿಜಾಂಶ ಮತ್ತು ಆಂಟಿ ಆಕ್ಸಿಡೆಂಟ್ಸ್ ಒದಗಿಸುತ್ತವೆ.

12. ಚೆನ್ನಾಗಿ ನಿದ್ದೆ ಮಾಡಿ: ನಿತ್ಯ ನೀವು ತೃಪ್ತಿಕರವಾದಷ್ಟು ನಿದ್ರೆ ಮಾಡುತ್ತಿದ್ದಾರಾ ಎಂಬುದನ್ನ ಖಚಿತಪಡಿಸಿಕೊಳ್ಳಿ. ಚೆನ್ನಾಗಿ ನಿದ್ರಿಸುವುದರಿಂದ ನಿಮ್ಮ ದೇಹ ಆರೋಗ್ಯವಾಗಿರುತ್ತೆ. ರಕ್ತ ಸಕ್ಕರೆ ಅಂಶ ಸಹ ಮಿತಿಯಲ್ಲಿರುತ್ತದೆ. ಮಾನಸಿಕ ಆರೋಗ್ಯವೂ ಉತ್ತಮವಾಗುತ್ತೆ. ಮುಖ್ಯವಾಗಿ ಜೀರ್ಣಶಕ್ತಿ ವೃದ್ಧಿಸಿ ಕೊಲೆಸ್ಟ್ರಾಲ್ ಹೆಚ್ಚಾಗುವುದು ತಪ್ಪುತ್ತದೆ.