ಸಂಕ್ರಾಂತಿಯ ಈ ವಿಶೇಷ ವಾರದಲ್ಲಿ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..?

life | Sunday, January 14th, 2018
Suvarna Web Desk
Highlights

ಸಂಕ್ರಾಂತಿಯ ಈ ವಿಶೇಷ ವಾರದಲ್ಲಿ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..?

ಮೇಷ

ಈ ಬಾರಿಯ ಸಂಕ್ರಾಂತಿ ನಿಮ್ಮ ಪಾಲಿಗೆ

ವಿಶೇಷವಾಗಿರಲಿದೆ. ಸಾಲ ಮಾಡಬೇಕಾದ

ಪರಿಸ್ಥಿತಿ ಬರಲಿದೆ. ಮಿತವ್ಯಯಕ್ಕೆ ಮಹತ್ವ ನೀಡಿ.

ಆತ್ಮೀಯರೊಂದಿಗೆ ವಿನಾಕಾರಣ ಮನಸ್ತಾಪ ಬೇಡ. ನಿರೀಕ್ಷಿತ

ಮೂಲಗಳಿಂದ ಒಳ್ಳೆಯ ಲಾಭ ಸಿಗಲಿದೆ. ನವ ದಂಪತಿಗಳಿಗೆ

ಶುಭವಾಗಲಿದೆ.

 

ವೃಷಭ

ಸಂಕ್ರಾಂತಿ ಹಬ್ಬದ ನಂತರ ಒಳ್ಳೆಯ ದಿನಗಳು

ಆರಂಭವಾಗಲಿವೆ. ಹೊಸ ಪರಿಚಿತರ ಬಗ್ಗೆ

ಎಚ್ಚರವಿರಲಿ. ಬಂಡವಾಳ ಹೂಡಿಕೆದಾರರು

ಯಾವುದೇ ಆತಂಕವಿಲ್ಲದೇ ಉದ್ಯಮ ಪ್ರಾರಂಭಿಸಬಹುದು.

ಬಹುದಿನಗಳ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರಕಲಿದೆ. ಯಾರ

ಬಗ್ಗೆಯೂ ಹಗುರವಾಗಿ ಮಾತನಾಡಬೇಡಿ

 

ಮಿಥುನ

ಹೊಸ ಆಸ್ತಿ ಕೊಳ್ಳುವವರಿಗೆ ಸೂಕ್ತ ಸಮಯ.

ಹತ್ತಿರದ ಗೆಳೆಯರಿಂದ ಆರ್ಥಿಕ ಸಹಾಯ.

ಆರೋಗ್ಯದ ಕಡೆ ಮತುವರ್ಜಿ ವಹಿಸಿ.

ಹೊಸದಾಗಿ ಸೇರಿದ ಕೆಲಸದಲ್ಲಿ ಪ್ರಗತಿ ಕಂಡು ಬರಲಿದೆ.

ಸಂಕ್ರಾಂತಿಯನ್ನು ವ್ಯವಸ್ಥಿತವಾಗಿ ಆಚರಿಸಿ. ಸ್ನೇಹಿತರನ್ನು

ಭೇಟಿ ಮಾಡುವ ಅವಕಾಶ ಒದಗಲಿದೆ.

 

ಕಟಕ

ಮಾನಸಿಕ ನೆಮ್ಮದಿ ಹೆಚ್ಚಲಿದೆ. ಅಪರಿಚಿತರ

ನೆರವಿನಿಂದ ಒಳ್ಳೆಯ ಉದ್ಯೊಗದ ಬಗ್ಗೆ ಮಾಹಿತಿ.

ನಿವೇಶನ ಖರೀದಿಗೆ ಆಲೋಚನೆ.

ವಿದ್ಯಾಭ್ಯಾಸದಲ್ಲಿ ಪ್ರಗತಿ. ಹೊಸ ವರ್ಷದಿಂದ

ಯಶಸ್ಸುದಾಯಕ ಜೀವನದ ಆರಂಭ. ರೈತರಿಗೆ ಈ

ಬಾರಿಯ ಸುಗ್ಗಿ ಹರ್ಷ ತರಲಿದೆ.

 

ಸಿಂಹ

ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ಕೆಲಸ ಬೇಡ.

ಒಂದೇ ವಿಚಾರದ ಬಗ್ಗೆ ಪದೇ ಪದೇ ಚಿಂತಿಸದಿರಿ.

ಆರೋಗ್ಯದಲ್ಲಿ ಚೇತರಿಕೆ. ವಾಹನ ಸವಾರರು

ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಚಿನ್ನಾಭರಣದ

ಮೇಲೆ ಹೂಡಿಕೆ ಮಾಡುವಿರಿ. ಮನೆಯಲ್ಲಿ ಶುಭ ಕಾರ್ಯ

ನಡೆಯಲಿದೆ.

 

ಕನ್ಯಾ

ದೀರ್ಘ ಕಾಲದ ಸಾಲಗಳು ವಾಪಸ್ ಆಗಲಿವೆ.

ಕೆಲಸದಲ್ಲಿ ನಿಧಾನ ಪ್ರಗತಿ. ಹೊಸ ವಸ್ತುಗಳು

ಮನೆ ಸೇರಲಿವೆ. ಪ್ರೀತಿ, ಪ್ರೇಮದ ವಿಚಾರದಲ್ಲಿ

ತುಸು ಎಚ್ಚರಿಕೆಯಿಂದ ಇರಬೇಕು. ಮಿತ ಆಹಾರ ಸೇವನೆ

ಸೂಕ್ತ. ಸಾಂಸ್ಕೃತಿಕ ರಂಗದಲ್ಲಿ ಸಕ್ರಿಯವಾಗಿ

ತೊಡಗಿಸಿಕೊಳ್ಳುವಿರಿ.

 

ತುಲಾ

ಧಾರ್ಮಿಕ ಕಾರ್ಯಕ್ರಮಗಳಲ್ಲಿ

ಸಕ್ರಿಯರಾಗುವಿರಿ. ಹೊಸ ಉದ್ಯಮ

ಪ್ರಾರಂಭಿಸುವವರಿಗೆ ಶುಭ ಕಾಲ.

ಅವಿವಾಹಿತರಿಗೆ ಮದುವೆಯ ಯೋಗ. ಮಕ್ಕಳ

ಆರೋಗ್ಯದ ಕಡೆ ಗಮನವಿರಲಿ. ಪ್ರಕೃತಿ ಯೊಂದಿಗೆ ಹೆಚ್ಚಿನ

ಸಮಯ ಕಳೆಯುವ ಯೋಗ. ವಾರ ಪೂರ್ಣ ಸಂತಸ.

 

ವೃಶ್ಚಿಕ

ಧನಾಗಮನವಾಗಲಿದೆ. ತಂದೆಯ

ಆರೋಗ್ಯದಲ್ಲಿ ಚೇತರಿಕೆ. ವಿನಾಕಾರಣ

ಸ್ನೇಹಿತರೊಂದಿಗೆ ಜಗಳ ಬೇಡ. ಬೆಳಿಗ್ಗೆ ಬೇಗ

ಏಳುವ ಅಭ್ಯಾಸ ಮಾಡಿಕೊಳ್ಳಿ. ಹೃದಯ ಸಂಬಂಧಿ

ತೊಂದರೆ ಇರುವವರಿಗೆ ಆರೋಗ್ಯದಲ್ಲಿ ಚೇತರಿಕೆ

ಕಾಣಲಿದೆ. ವಿದ್ಯಾಭ್ಯಾಸದ ಕಡೆ ಗಮನವಿರಲಿ.

 

 

ಧನಸ್ಸು

ಬಂಧುಗಳ ಬಳಿ ವ್ಯವಹಾರ ಬೇಡ.

ಸಿನಿಮಾದಲ್ಲಿ ಆಸಕ್ತಿ ಇದ್ದವರಿಗೆ ಒಳ್ಳೆಯ

ದಿನಗಳು ಬರಲಿವೆ. ಗೆಳೆಯರೊಂದಿಗೆ

ತಾಳ್ಮೆಯಿಂದ ವರ್ತಿಸಿ. ಆರೋಗ್ಯದ ಕಡೆ ಗಮನವಿರಲಿ.

ಕೆಟ್ಟ ವಿಚಾರಗಳಿಗೆ ಮಹತ್ವ ಬೇಡ.

 

 

ಮಕರ

ಉದ್ಯೋಗಿಗಳ ಉಳಿತಾಯದಲ್ಲಿ ಗಣನೀಯ

ಏರಿಕೆ ಕಾಣಲಿದೆ. ಹೊಸ ವಾಹನ

ಖರೀದಿಸುವವರು ಸ್ವಲ್ಪ ದಿನ ನಿಧಾನ ಮಾಡಿದರೆ

ಒಳ್ಳೆಯದು. ಖ್ಯಾತ ನಾಮರನ್ನು ಭೇಟಿ ಮಾಡುವ

ಅವಕಾಶ ಒದಗಿ ಬರಲಿದೆ.

 

 

ಕುಂಭ

ಬಂಧುಗಳೊಂದಿಗೆ ಸೌಜನ್ಯಯುತವಾಗಿ

ವರ್ತಿಸಿ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ನಿಧಾನಗತಿಯ ಪ್ರಗತಿ. ಸಮಾಜದ ಗಣ್ಯ ವ್ಯಕ್ತಿಗ

ಳಿಂದ ಸನ್ಮಾನ. ಸಹೋದ್ಯೋಗಿಗಳೊಂದಿಗೆ ಉತ್ತಮ

ಒಡನಾಟ. ವ್ಯಾಯಾಮ ಮಾಡಿ. ನಿತ್ಯದ ಜಂಜಾಟದಿಂದ

ದೂರವಿದ್ದು, ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ.

 

ಮೀನ

ಶುಭ ಕಾರ್ಯಗಳಿಗೆ ಇದ್ದ ಅಡೆತಡೆಗಳು

ದೂರವಾಗಲಿವೆ. ಹೊಸ ಸಾಲಕ್ಕೆ ಕೈ ಹಾಕಬೇಡಿ.

ಕೆಲಸದಲ್ಲಿ ಪ್ರಗತಿ. ಆತ್ಮೀಯ ಗೆಳೆಯರು

ಇನ್ನಷ್ಟು ಹತ್ತಿರವಾಗಲಿದ್ದಾರೆ. ಗೆಳೆಯರೊಂದಿಗೆ

ಪ್ರವಾಸ ಯೋಗ.

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk