Asianet Suvarna News Asianet Suvarna News

ಟಾಯ್ಲೆಟ್‌ನಲ್ಲಿ ಮೊಬೈಲ್‌ ಬಳಕೆಯಿಂದ ಮೂಲವ್ಯಾಧಿ ಕಾಯಿಲೆ ಬರುತ್ತಂತೆ!

ತಮಾಷೆ ಅಲ್ಲ... ಟಾಯ್ಲೆಟ್‌ನಲ್ಲಿ ಮೊಬೈಲ್‌ ಬಳಕೆಯಿಂದ ಮೂಲವ್ಯಾಧಿ ಕಾಯಿಲೆ ಬರುತ್ತಂತೆ!| ಇಲ್ಲಿದೆ ಶಾಕಿಂಗ್ ಮಾಹಿತಿ

Using Your Phone While You Poo Can Cause Hemorrhoids
Author
Bangalore, First Published Sep 26, 2019, 11:07 AM IST

ನವದೆಹಲಿ[ಸೆ.26]: ಇತ್ತೀಚಿನ ದಿನಗಳಲ್ಲಿ ಜನರು ಎಲ್ಲೆಂದರಲ್ಲಿ ಮೊಬೈಲ್‌ ಬಳಸುವುದು ಸಾಮಾನ್ಯ ಸಂಗತಿ. ಕೆಲವರಂತೂ ಮೊಬೈಲ್‌ನಲ್ಲಿ ಚಾಟಿಂಗ್‌ ಮಾಡುತ್ತಾ ಟಾಯ್ಲೆಟ್‌ನಲ್ಲಿ ಕೂರುತ್ತಾರೆ.

ನೀವು ಸಹ ಟೈಮ್‌ ಪಾಸ್‌ಗೆಂದು ಟಾಯ್ಲೆಟ್‌ನಲ್ಲಿ ಮೊಬೈಲ್‌ ನೋಡುವ ಹವ್ಯಾಸ ಬೆಳೆಸಿಕೊಂಡಿದ್ದರೆ ಎಚ್ಚರ. ಮಲ ವಿಸರ್ಜನೆಯ ವೇಳೆ ಮೊಬೈಲ್‌ ವೀಕ್ಷಣೆಯಿಂದ ಮೂಲವ್ಯಾಧಿ ಕಾಯಿಲೆ ಕಾಣಿಸಿಕೊಳ್ಳಬಹುದು ಎಂದು ಬ್ರಿಟನ್‌ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಯುಗೌ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯ ವೇಳೆ ಬ್ರಿಟನ್ನಿನ ಶೇ.57ರಷ್ಟುಮಂದಿ ತಾವು ಟಾಯ್ಲೆಟ್‌ನಲ್ಲಿ ಮೊಬೈಲ್‌ ಬಳಸುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಟಾಯ್ಲೆಟ್‌ನಲ್ಲಿ ಮೊಬೈಲ್‌ ಬಳಕೆಯನ್ನು ಆದಷ್ಟುಕಡಿಮೆ ಮಾಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Follow Us:
Download App:
  • android
  • ios