'ದಬಾಂಗ್' ಬೆಡಗಿ ಸೋನಾಕ್ಷಿ ಬಗ್ಗೆ ನಿಮಗೆ ತಿಳಿಯದ ವಿಷಯಗಳಿವು

Unknown fact about Sonakshi Sinha
Highlights

'ದಬಾಂಗ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿ, ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಸೋನಾಕ್ಷಿ ಸಿನ್ಹಾಳಿಗೆ ಜೂನ್ 2ರಂದು ಹುಟ್ಟು ಹಬ್ಬದ ಸಂಭ್ರಮ. ಶತ್ರುಘ್ನಾ ಸಿನ್ಹಾ ಮಗಳಾದ ಸೋನಾಕ್ಷಿ ಅಭಿನಯನದ ಜತೆಗೆ ಬೋಲ್ಡ್  ಹೇಳಿಕೆಗಳಿಂದಲೂ ಪ್ರಸಿದ್ಧರಾದವರು. ಜೀರೋ ಸೈಜ್ ಎಂದರೆ ದೂರ ಓಡುವ ಈ ನಟಿ, ಗುಂಡು ಗುಂಡಗಿರೋ ಫಿಸಿಕ್‌ನಿಂದಲೂ ಅಭಿಮಾನಿಗಳನ್ನು ಮೋಡಿ ಮಾಡಿದವರು. ಈ ಬಾಲಿವುಡ್ ಕ್ಯೂಟ್ ನಟಿ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳಿವು.

'ದಬಾಂಗ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿ, ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಸೋನಾಕ್ಷಿ ಸಿನ್ಹಾಳಿಗೆ ಜೂನ್ 2ರಂದು ಹುಟ್ಟು ಹಬ್ಬದ ಸಂಭ್ರಮ. ಶತ್ರುಘ್ನಾ ಸಿನ್ಹಾ ಮಗಳಾದ ಸೋನಾಕ್ಷಿ ಅಭಿನಯನದ ಜತೆಗೆ ಬೋಲ್ಡ್  ಹೇಳಿಕೆಗಳಿಂದಲೂ ಪ್ರಸಿದ್ಧರಾದವರು. ಜೀರೋ ಸೈಜ್ ಎಂದರೆ ದೂರ ಓಡುವ ಈ ನಟಿ, ಗುಂಡು ಗುಂಡಗಿರೋ ಫಿಸಿಕ್‌ನಿಂದಲೂ ಅಭಿಮಾನಿಗಳನ್ನು ಮೋಡಿ ಮಾಡಿದವರು. ಈ ಬಾಲಿವುಡ್ ಕ್ಯೂಟ್ ನಟಿ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳಿವು....

-'ಬ್ಯುಟಿ ವಿತ್ ಬ್ರೈನ್' ಎಂದೇ ಹೆಸರು ವಾಸಿಯಾಗಿರುವ ಸೋನಾಕ್ಷಿಗೆ ಆ್ಯಕ್ಷನ್ ಅವತಾರದಲ್ಲಿ ಕಾಣೋ ಬಯಕೆ ಇತ್ತು. ಇದೆ ಸೆಪ್ಟಂಬರ್ 2ರಂದು ತೆರೆಕಾಣಲಿರುವ 'ಅಕಿರ'ದಲ್ಲಿ ಸಲ್ಮಾನ್ ಖಾನ್ ಹಾಗೂ ಆಮೀರ್ ಖಾನ್‌ರಿಂದ ಸ್ಫೂರ್ತಿ ಪಡೆದು ನಟಿಸಿದ್ದಾರೆ.

- ಸೋನಾಕ್ಷಿ ಬಗ್ಗೆ ಇಂಡಿಯನ್  ರ‍್ಯಾಪರ್ ಬಾದಶಾ ಮೆಚ್ಚುಗೆ ವ್ಯಕ್ತಪಡಿಸಿ, ಹಾಡೊಂದನ್ನು ರಚಿಸಿದ್ದಾರೆ. ಇದನ್ನು ವೀಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ನನ್ನ ಹೊಸ ವರ್ಷದ ಉಡುಗೊರೆ ಇದು,' ಎಂದು ಈ ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. 

- ತನ್ನದೇ ಬಟ್ಟೆ ಬ್ರಾಂಡ್‌ವೊಂದನ್ನು ಮಾರುಕಟ್ಟೆಗೆ ತರುವ ತಯಾರಿಯಲ್ಲಿದ್ದಾರೆ ಸೋನಾಕ್ಷಿ.

- ಬಾಲಿವುಡ್ ಪರದೆ ಮೇಲೆ ಬರುವ ಮುನ್ನ ಸೋನಾ  ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು. 2008 ಮತ್ತು 2009ರಲ್ಲಿ ರೂಪದರ್ಶಿಯಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು.

- ಸಿನಿಮಾ ರಂಗಕ್ಕೆ ಬರೋ ಸೋನಾ ಸಖತ್ ಡುಮ್ಮಗಿದ್ದರು. ನಂತರ 30 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.

- ಬಿಡುವಿನ ಸಮಯದಲ್ಲಿ ಸೋನಾಕ್ಷಿ ಚಿತ್ರ ಬಿಡಿಸುತ್ತಾರೆ.

- ಪುಸ್ತಕ ಓದೋ ಆಸಕ್ತಿಯೂ ಇರುವ ಸೋನಾಕ್ಷಿಗೆ ಶಾಂತರಾಮ ಮತ್ತು ದ ವಿಂಚಿ ಕೋಡ್ ಇಷ್ಟವಾದ ಬುಕ್ ಅಂತೆ.

- ಕುತ್ತಿಗೆ ಹಿಂದೆ ನಕ್ಷತ್ರದ ಟ್ಯಾಟು ಹಾಕಿಸಿಕೊಂಡಿರುವುದು ಇವರ ಮತ್ತೊಂದು ವಿಶೇಷ.

- ಅಡುಗೆ ಮಾಡೋದು ಮತ್ತೊಂದು ಹಾಬಿಯಾಗಿದ್ದು, ಚೀನಿ ಮತ್ತು ಥೈ ಶೈಲಿಯ ಅಡುಗೆ ಎಂದರೆ ಪ್ರಾಣ ಬಿಡುತ್ತಾರೆ. 

- 2005ರಲ್ಲಿ ಮೇರಾ ದಿಲ್ ಲೇಕೆ ದಿಕೋ ಚಿತ್ರದಲ್ಲಿ ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ. 

loader