ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಎತ್ತರವು ವ್ಯಕ್ತಿತ್ವವನ್ನು ಸೂಚಿಸುತ್ತದೆ. ಎತ್ತರದವರು ವಿವೇಕಿಗಳು, ಸಿಹಿ ಮಾತುಗಾರರು, ಆತ್ಮಗೌರವವುಳ್ಳವರು, ಸ್ವತಂತ್ರರು. ಕುಳ್ಳಗಿನವರು ಪ್ರಾಯೋಗಿಕ, ಮಿತವ್ಯಯಿ, ಬುದ್ಧಿವಂತರು, ಮಾತಿನಲ್ಲಿ ನಿಪುಣರು. ಸಾಮಾನ್ಯ ಎತ್ತರದವರು ಚಿಂತನಶೀಲರು, ಧಾರ್ಮಿಕ, ಕೋಪಿಷ್ಠರು, ಶ್ರಮಶೀಲರು, ಸದ್ಗುಣಿಗಳು, ಭಾವುಕರು.
ಯಾವುದೇ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ನಾವು ಮೊದಲು ಅವರ ಸ್ವಭಾವವನ್ನು ಗಮನಿಸುತ್ತೇವೆ. ಒಬ್ಬ ವ್ಯಕ್ತಿ ಹೇಗೆ ಮಾತನಾಡುತ್ತಾನೆ ಮತ್ತು ಜನರೊಂದಿಗೆ ವರ್ತಿಸುತ್ತಾನೆ ಎಂಬುದನ್ನು ತಿಳಿಯುವ ಮೂಲಕ ನಾವು ಅವರ ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ, ನಮ್ಮ ಊಹೆ ಪ್ರತಿ ಬಾರಿಯೂ ಸರಿಯಾಗಿರಲೇಬೇಕು ಎಂದೇನೂ ಇಲ್ಲ. ಹಲವು ಬಾರಿ, ನಾವು ಒಬ್ಬ ವ್ಯಕ್ತಿಯ ಬಗ್ಗೆ ಅವರ ಸ್ವಭಾವದ ಆಧಾರದ ಮೇಲೆ ಏನೇ ಯೋಚಿಸಿದರೂ, ಅವರ ನಿಜವಾದ ವ್ಯಕ್ತಿತ್ವವು ನಾವಂದುಕೊಂಡದ್ದಕ್ಕಿಂತ ವಿರುದ್ಧವಾಗಿರುತ್ತದೆ. ಹಾಗಾದರೆ ನಿಜವಾದ ವ್ಯಕ್ತಿತ್ವವನ್ನು ಹೇಗೆ ಗುರುತಿಸುವುದು ಎಂಬುದು ನಿಮಗೆ ಕಠಿಣ ಪ್ರಶ್ನೆಯಾಗಿದ್ದರೆ ಅವರ ವ್ಯಕ್ತಿತ್ವ ಪರೀಕ್ಷೆಯನ್ನು ಸುಲಭವಾಗಿ ಮಾಡಬಹುದಾದ ಹಲವು ವಿಧಾನಗಳನ್ನು ಇಲ್ಲಿ ಹೇಳಿದ್ದೇವೆ. ಹೌದು, ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಎತ್ತರವು ಅವರ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡುತ್ತದೆಯಂತೆ!
ಜ್ಯೋತಿಷ್ಯದಲ್ಲಿ ಜಾತಕದ ಜೊತೆಗೆ , ವ್ಯಕ್ತಿಯ ಹಣೆ, ಮುಖ, ಕೈಗಳು, ಪಾದಗಳ ರಚನೆ ಮತ್ತು ಕೈಗಳ ಮೇಲಿನ ರೇಖೆಗಳನ್ನು ನೋಡುವ ಮೂಲಕ ನಾವು ಅವರ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬಹುದು. ಹಸ್ತಸಾಮುದ್ರಿಕ ಶಾಸ್ತ್ರ ಮತ್ತು ಸಾಮುದ್ರಿಕಾ ಶಾಸ್ತ್ರಗಳಲ್ಲಿ ವ್ಯಕ್ತಿಯ ಎತ್ತರ ಮತ್ತು ಮೈಕಟ್ಟು ನೋಡಿ ಅವನ ವ್ಯಕ್ತಿತ್ವ, ಸ್ವಭಾವ ಮತ್ತು ಹವ್ಯಾಸಗಳನ್ನು ಅಂದಾಜು ಮಾಡಬಹುದು ಎಂದು ಹೇಳಲಾಗಿದೆ. ಅಂದರೆ ಒಬ್ಬ ವ್ಯಕ್ತಿಯನ್ನು ದೂರದಿಂದ ನೋಡುವ ಮೂಲಕವೇ ಅವನ ಸ್ವಭಾವ ಹೇಗಿರುತ್ತದೆ ಎಂದು ನೀವು ತಿಳಿದುಕೊಳ್ಳಬಹುದು. ಹಾಗಾದರೆ ಒಬ್ಬ ವ್ಯಕ್ತಿಯ ಎತ್ತರದ ಆಧಾರದ ಮೇಲೆ ಅವನ ಸ್ವಭಾವವನ್ನು ಹೇಗೆ ತಿಳಿಯಬಹುದು ಎಂಬುದನ್ನು ಇಲ್ಲಿ ನಾವು ನಿಮಗೆ ಹೇಳಲಿದ್ದೇವೆ.
ಎತ್ತರದ ಜನರು
ಕೆಲವು ಜನರು ತುಂಬಾ ಎತ್ತರವಾಗಿರುತ್ತಾರೆ. ಎತ್ತರದ ಪುರುಷರು ಮತ್ತು ಮಹಿಳೆಯರು ಸದ್ಗುಣಶೀಲರು, ಬಹಳ ವಿವೇಕಿಗಳು, ಸಿಹಿಯಾಗಿ ಮಾತನಾಡುವವರು ಮತ್ತು ಉತ್ಸಾಹಭರಿತರು. ಆಗಾಗ್ಗೆ ತಮಗೆ ಇಷ್ಟವಾದದ್ದನ್ನು ಮಾಡಲು ಇಷ್ಟಪಡುತ್ತಾರೆ. ಅವರಿಗೆ ತಮ್ಮ ಕೆಲಸವನ್ನು ಚೆನ್ನಾಗಿ ಮಾಡುವುದು ಹೇಗೆಂದು ತಿಳಿದಿದೆ. ಆತ್ಮಗೌರವ ಹೆಚ್ಚು. ಅಂತಹ ಜನರು ನಿರಾತಂಕ ಮತ್ತು ಸ್ವಭಾವತಃ ಉದ್ವಿಗ್ನರಾಗಿರುತ್ತಾರೆ. ಧರ್ಮ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಆಸಕ್ತಿ ಕಡಿಮೆ. ಅವರ ವ್ಯಕ್ತಿತ್ವದ ವಿಶೇಷತೆಯೆಂದರೆ, ತಮ್ಮ ಕೆಲಸವನ್ನು ಯಾವುದೇ ವಿಧಾನದಿಂದ ಹೇಗೆ ಮಾಡಬೇಕೆಂದು ತಿಳಿದಿದ್ದಾರೆ. ಯಾರ ಒತ್ತಡದಲ್ಲೂ ಬದುಕಲು ಇಷ್ಟಪಡುವುದಿಲ್ಲ. ಒಟ್ಟಾರೆ ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಎತ್ತರದ ಮಹಿಳೆಯರು ಅಲಂಕಾರದ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಅವರಿಗೆ ಪುಸ್ತಕಗಳಿಗಿಂತ ಮನರಂಜನೆಯ ಕಡೆಗೆ ಹೆಚ್ಚಿನ ಒಲವು ಇರುತ್ತದೆ.
ಕಡಿಮೆ ಎತ್ತರದ ಜನರು
ಕೆಲವು ಜನರು ತುಂಬಾ ಕಡಿಮೆ ಎತ್ತರ ಇರುತ್ತಾರೆ. ಸಾಮಾನ್ಯಕ್ಕಿಂತ ಕಡಿಮೆ ಎತ್ತರವಿರುವ ಜನರು ತುಂಬಾ ಪ್ರಾಕ್ಟಿಕಲ್. ಇಂತಹ ಜನರು ಜೀವನದ ಪ್ರತಿಯೊಂದು ನಿರ್ಧಾರವನ್ನು ಬಹಳ ಯೋಚಿಸಿ ತೆಗೆದುಕೊಳ್ಳುತ್ತಾರೆ. ವಿಶೇಷವಾಗಿ ಹಣವನ್ನು ಬಹಳಷ್ಟು ಯೋಚಿಸಿದ ನಂತರವೇ ಖರ್ಚು ಮಾಡುತ್ತಾರೆ. ಇದರಿಂದಾಗಿ ಅವರನ್ನು ಜಿಪುಣರೆಂದು ಪರಿಗಣಿಸಲಾಗುತ್ತದೆ.ವಾಸ್ತವವಾಗಿ ಅಂತಹ ಜನರು ಮಿತವ್ಯಯಿಗಳು. ಇವರ ಬುದ್ಧಿಮತ್ತೆ ಅದ್ಭುತವಾಗಿದೆ. ತಮ್ಮ ಕೆಲಸವನ್ನು ಯಾವುದೇ ವಿಧಾನದಿಂದ ಹೇಗೆ ಮಾಡಬೇಕೆಂದು ತಿಳಿದಿದೆ. ಈ ಜನರು ಮಾತಿನಲ್ಲಿ ಶ್ರೀಮಂತರು. ಅವರು ಎಷ್ಟು ಸಿಹಿಯಾಗಿ ವರ್ತಿಸುತ್ತಾರೆಂದರೆ, ಅನೇಕ ಬಾರಿ ಜನರಿಗೆ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಇವರನ್ನು ಅತ್ಯಂತ ಎಚ್ಚರಿಕೆಯಿಂದ ಪರಿಗಣಿಸಬೇಕು.
ಸಾಮಾನ್ಯ ಎತ್ತರ
ಕೆಲವು ಜನರು ಸಾಮಾನ್ಯ ಎತ್ತರದವರು. ಬಹಳ ಚಿಂತನಶೀಲರು. ಬಹಳಷ್ಟು ಯೋಚಿಸುತ್ತಾರೆ.ಇವರಿಗೆ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಇವರಿಗೆ ತುಂಬಾ ಸುಲಭವಾಗಿ ಕೋಪ ಬರುತ್ತದೆ. ತಮ್ಮ ಕೋಪವನ್ನು ವ್ಯಕ್ತಪಡಿಸಲು ಹೆದರುವುದಿಲ್ಲ. ಶ್ರಮಶೀಲರು, ಸದ್ಗುಣಶೀಲರು, ಬುದ್ಧಿವಂತರು, ಸೌಮ್ಯರು ಮತ್ತು ವಿವೇಕಿಗಳು. ಸಾಮಾನ್ಯ ಎತ್ತರದ ಪುರುಷರು ಮತ್ತು ಮಹಿಳೆಯರು ತಮ್ಮ ಎಲ್ಲಾ ಕೆಲಸಗಳನ್ನು ಬ್ಯಾಲೆನ್ಸ್ ಆಗಿ ಮಾಡಲು ಇಷ್ಟಪಡುತ್ತಾರೆ. ದಯೆ, ಕ್ಷಮೆ, ಶಾಂತಿ ಮತ್ತು ತಾಳ್ಮೆಯಂತಹ ಗುಣಗಳು ಇವರಲ್ಲಿ ಹೇರಳವಾಗಿವೆ. ಅತಿಯಾದ ಭಾವನಾತ್ಮಕತೆ ಮತ್ತು ಪ್ರಾಕ್ಟಿಕಲ್ ನೇಚರ್ ನಿಂದಾಗಿ ಜೀವನದಲ್ಲಿ ಸಾಕಷ್ಟು ಕಷ್ಟಪಡಬೇಕಾಗುತ್ತದೆ.
