ಹರಿದ ನೋಟುಗಳನ್ನು ಮೇಣದಬತ್ತಿಯಿಂದ ಸರಿಪಡಿಸುವ ಟ್ರಿಕ್ ವೈರಲ್ ಆಗಿದೆ. ಗಾಜಿನ ಬಳೆಗಳ ಬಾಳಿಕೆ ಹೆಚ್ಚಿಸಲು ಬಿಸಿ ನೀರಿನಲ್ಲಿ ಕುದಿಸುವ ಸಲಹೆಯನ್ನೂ ನೀಡಲಾಗಿದೆ. ಹೆಚ್ಚಿನ ಉಪಾಯಗಳನ್ನು ಲೇಖನದಲ್ಲಿ ತಿಳಿಯಿರಿ.

ಹಲವು ಬಾರಿ ನೋಟುಗಳು ಹಳೆಯದಾದಾಗ ಅಥವಾ ಇಟ್ಟಲ್ಲೇ ಕಿತ್ತು ಹೋಗುತ್ತವೆ. ಇಂತಹ ನೋಟುಗಳನ್ನು ಮಾರುಕಟ್ಟೆಯಲ್ಲಿ ಚಲಾವಣೆ ಮಾಡುವುದು ಕಷ್ಟವಾಗುತ್ತದೆ. ನೀವು ಸೆಲೋಟೇಪ್ ಹಚ್ಚಿ ಚಲಾವಣೆ ಮಾಡಿದರೂ ಅಥವಾ ಅಂತಹ ನೋಟುಗಳನ್ನು ಅಂಗಡಿಯವರಿಗೆ ಕೊಟ್ಟಾಗ ಅದನ್ನು ಸುಲಭವಾಗಿ ಗುರುತಿಸಿ ಹರಿದು ಹೋಗಿರುವ ನಟು ಎಂದು ನಮಗೆ ವಾಪಸ್ ಕೊಡುತ್ತಾರೆ. ಈಗ ವೈರಲ್ ಆಗಿರೋ ವಿಡಿಯೋದಲ್ಲಿ ಕಿತ್ತಿರೋ ನೋಟನ್ನು ಟೇಪ್ ಇಲ್ಲದೆ ಹೇಗೆ ಸರಿಮಾಡೋದು ಅಂತ ತೋರಿಸಿದ್ದಾರೆ.

ಕಿತ್ತಿರೋ ನೋಟು ಸರಿಮಾಡೋ ಟ್ರಿಕ್ (viral hack to stick torn notes)

View post on Instagram

Instagram ನಲ್ಲಿ chanda_and_family_vlogs ಪೇಜ್‌ನಲ್ಲಿ ಹರಿದು ತುಂಡಾಗಿರುವ ನೋಟು ಹೇಗೆ ಸರಿಮಾಡಬೇಕು ಎಂಬ ಟ್ರಿಕ್ ಶೇರ್ ಮಾಡಿದ್ದಾರೆ. ಮೇಣದಬತ್ತಿ ಮೂಲಕ ಹೇಗೆ ಸರಿಮಾಡೋದು ಅಂತ ತೋರಿಸಿದ್ದಾರೆ. ಹರಿದ ನೋಟಿನ ಮೇಲೆ ಮೇಣದಬತ್ತಿಯ ಕೆಲವು ಹನಿಗಳನ್ನು ಹಾಕಿ, ಅದನ್ನು ಕೈಯಿಂದ ಅಂಟಿಸಿ. ಆಗ ನಿಮ್ಮ ಹರಿದ ನೋಟು ಅಂಟಿಕೊಳ್ಳುತ್ತದೆ. ಜೊತೆಗೆ, ನೋಟು ಹರಿದಿದೆ ಎಂಬುದು ಕೂಡ ಗೊತ್ತಾಗುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ನೋಟು ಅಂಟಿಸುವ ಟ್ರಿಕ್ ಭಾರೀ ವೈರಲ್ ಆಗಿದೆ. ನೀವು ಕೂಡ ಇದನ್ನು ಟ್ರೈ ಮಾಡಿ ನೋಡಿ.

ಹರಿದ ನೋಟು ಸರಿಮಾಡೋ ಬೇರೆ ಉಪಾಯಗಳು (homemade note repairing hack)

  • ಹರಿದ ನೋಟು ಸರಿಮಾಡಲು ಟ್ರಾನ್ಸ್‌ಪರೆಂಟ್ ಸೆಲೋಟೇಪ್‌ನಿಂದ ಅಂಟಿಸಬಹುದು.
  • ಗ್ಲೂ ಗನ್‌ನಿಂದ ಸ್ವಲ್ಪ ಗ್ಲೂ ಹಚ್ಚಿ ಅಂಟಿಸಬಹುದು.
  • ನೋಟು ತುಂಬಾ ಕಿತ್ತಿದ್ರೆ, ಬ್ಯಾಂಕ್ ಅಥವಾ RBI ಶಾಖೆಯಲ್ಲಿ ಬದಲಾಯಿಸಬಹುದು.
  • ಆರ್‌ಬಿಐ ನಿಯಮದ ಪ್ರಕಾರ, ನೋಟಿನ 50% ಕ್ಕಿಂತ ಹೆಚ್ಚು ಭಾಗ ಸರಿಯಾಗಿದ್ದರೆ, ಅದನ್ನು ಬದಲಾಯಿಸಬಹುದು.

ಗಾಜಿನ ಬಳೆ ಒಡೆಯದಂತೆ ದೀರ್ಘಕಾಲ ಬಳಸುವುಸುದು ಹೇಗೆ?

ಇನ್ನು ನೋಟನ್ನು ಸರಿ ಮಾಡುವ ಸಲಹೆ ತಿಳಿಸಿದ ಮಹಿಳೆಯೇ ಭಾರತೀಯ ಮಹಿಳಾ ಸಂಪ್ರದಾಯ ಪ್ರತೀಕವಾದ ಗಾಜಿನ ಕೈಬಳೆಗಳನ್ನು ಒಡೆಯದೇ ದೀರ್ಘಕಾಲ ಕಾಪಾಡಿಕೊಳ್ಳುವುದು ಹೇಗೆ ಎಂಬ ಸಲಹೆಯನ್ನೂ ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾರೆ. ಗಾಜಿನ ಕೈಬಳೆಗಳು ಜೋಡಣೆ ಮಾಡಿದ ಜಾಗದಲ್ಲಿಯೇ ಬೇಗನೇ ಬಿಟ್ಟುಕೊಳ್ಳುತ್ತವೆ. ಹೀಗಾಗಬಾರದು ಎಂದರೆ ನೀವು ಬಳೆಗಳನ್ನು ಬಳಕೆ ಮಾಡುವ ಮುನ್ನ ಒಲೆಯ ಮೇಲೆ ಸ್ವಲ್ಪ ಬಿಸಿನೀರು ಕಾಯಿಸಿ ಗಾಜಿನ ಬಳೆಗಳು ಮುಳುಗಿಸಿ ಸ್ವಲ್ಪ ಹೊತ್ತು ಕುದಿಸಬೇಕು. ನಂತರ ಬಳೆಗಳನ್ನು ತೆಗೆದು ತಣ್ಣೀರಿನಲ್ಲಿ ಹಾಕದೇ ನೀರಿನಲ್ಲಿಯೇ ತಣ್ಣಗಾಗುವವರೆಗೂ ಬಿಡಬೇಕು. ನಂತರ ಬಳೆಗಳನ್ನು ನೀವು ಧರಿಸಿದರೆ ದೀರ್ಘಕಾಲದವರೆಗೆ ಬಳೆಗಳು ಬಾಳಿಕೆ ಬರುತ್ತವೆ ಎಂದು ತಿಳಿಸಿದರು.

View post on Instagram