ಮಕ್ಕಳು ಮೊಬೈಲ್ ಯೂಸ್ ಮಾಡ್ತಾರಂತ ಬೀಗಬೇಡಿ, ಅನಾರೋಗ್ಯಕ್ಕಿದು ದಾರಿ
ಐದು ವರ್ಷದೊಳಗಿನ ಮಕ್ಕಳು ಟಿವಿ, ಮೊಬೈಲ್, ಟ್ಯಾಬ್ಲೆಟ್ ಬಳಸುವುದು ಖಂಡಿತಾ ಒಳ್ಳೆಯದಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗೆ ಸ್ಕ್ರೀನ್ ನೋಡುವುದರಿಂದ ಏನಾಗುತ್ತದೆ ಗೊತ್ತೇ ?
ತಮ್ಮ ಒಂದೂವರೆ ವರ್ಷದ ಮಗ ಮೊಬೈಲ್ ಸ್ಕ್ರೀನ್ ಟಚ್ ಮಾಡಿ ಯೂಟ್ಯೂಬ್ ನಲ್ಲಿ ಚಿನ್ನು ವಿಡಿಯೋಗಳನ್ನು ಹಾಕಿಕೊಳ್ಳುತ್ತಾನೆ ಎಂಬುದು ಈಗಿನ ಪೋಷಕರಿಗೆ ಹೆಮ್ಮೆಯ ಸಂಗತಿ. ಅವನು ಸಾಂಗ್ಸ್ ಕೂಡಾ ಚೇಂಜ್ ಮಾಡಿಕೊಳ್ಳಬಲ್ಲ ಎಂದು ಮಗುವಿನ ಬುದ್ಧಿವಂತಿಕೆ ಕುರಿತು ಬೀಗುತ್ತಾರೆ. ಇನ್ನು ಫೋನ್ ಕೊಡದೆ ಮಗು ಊಟ ಮಾಡುವುದಿಲ್ಲ ಎಂದು ರಚ್ಚೆ ಹಿಡಿದರೆ ಪೋಷಕರು ಅಸಹಾಯಕರು. ಆದರೆ ಇದು ಖಂಡಿತಾ ಉತ್ತಮ ಅಭ್ಯಾಸವಲ್ಲ. ಐದು ವರ್ಷದೊಳಗಿನ ಮಕ್ಕಳನ್ನು ಟಿವಿ, ಮೊಬೈಲ್ ಸ್ಕ್ರೀನ್ ಗಳಿಂದ ದೂರವಿಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ.
ಅದರಲ್ಲೂ ಎರಡು ವರ್ಷದೊಳಗಿನ ಮಕ್ಕಳಿಗೆ ಸ್ಕ್ರೀನ್ ತೋರಿಸಲೇಬೇಡಿ. ಆ ಬಳಿಕ ದಿನಕ್ಕೆ ಗರಿಷ್ಠ 1 ಗಂಟೆ ಟಿವಿ ನೋಡಿದರೆ ಪರವಾಗಿಲ್ಲ. ನೋಡದಿದ್ದರೆ ಒಳ್ಳೆಯದು ಎಂದು ಸಂಸ್ಥೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ.
ಮಕ್ಕಳು ಕಮ್ಮಿ ಮಾರ್ಕ್ಸ್ ತೆಗೀಲಿಕ್ಕೆ ಪೋಷಕರೇ ಕಾರಣ!
ವಿಪರೀತ ಸ್ಕ್ರೀನ್ ಚಟಗಳಿಂದ ಮಕ್ಕಳು ಬೊಜ್ಜು ಬೆಳೆಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮೆದುಳಿನ ಬೆಳವಣಿಗೆ ವೇಗ ತಗ್ಗುತ್ತದೆ. ಜೊತೆಗೆ, ವರ್ತನಾ ಸಮಸ್ಯೆಗಳು ಶುರುವಾಗುತ್ತವೆ ಎಂದು ಡಬ್ಲೂಎಚ್ಒ ಎಚ್ಚರಿಕೆ ನೀಡಿದೆ.
ಈ ಸಮಯದಲ್ಲಿ ಮಕ್ಕಳನ್ನು ಹಾಡು, ನೃತ್ಯ, ಕಲರಿಂಗ್, ಪಜಲ್ಸ್ ಎಂದು ಬ್ಯುಸಿಯಾಗಿಟ್ಟರೆ ಮೆದುಳಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಸಾಧ್ಯವಾದಷ್ಟು ದೈಹಿಕ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವಂತೆ ನೋಡಿಕೊಳ್ಳಿ ಎಂದು ಸಂಸ್ಥೆ ಸಲಹೆ ನೀಡಿದೆ.
ನಿಮಗೆ ಗೊತ್ತಾಗದೆ ಮಕ್ಕಳು ಹೇಳಿಕೊಡುವ ತಿನ್ನೋ ಪಾಠ!
ಹೆಚ್ಚು ಸಮಯ ಮೊಬೈಲ್, ಟಿವಿ ಮುಂದೆ ಕಳೆವ ಮಕ್ಕಳು ಐದು ವರ್ಷವಾಗುವ ಹೊತ್ತಿಗೆ ಬಹಳಷ್ಟು ಕೆಟ್ಟ ವರ್ತನೆ ತೋರುತ್ತಾರೆ ಇಲ್ಲವೇ ಏಕಾಗ್ರತೆ ಕೊರತೆಯ ಎಡಿಎಚ್ಡಿ ಸಮಸ್ಯೆಯಿಂದ ಬಳಲುತ್ತಾರೆ ಎಂದು ಈಗಾಗಲೇ ನಡೆದಿರುವ ಹಲವು ಅಧ್ಯಯನ ಫಲಿತಾಂಶಗಳು ದೃಢಪಡಿಸಿವೆ.