'ಮುತ್ತಿ'ನಂಥ ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ...

Tips to select pearls
Highlights

'ಮುತ್ತು ತೊಟ್ಟ ಹೆಣ್ಣು ಮುದ್ದಾಗಿ ಕಾಣುತ್ತಾಳೆ.'  ಆದರೆ, ಈ ಮುತ್ತು ಸಮುದ್ರದ ಆಳದಲ್ಲಿ ಚಿಪ್ಪುಗಳ ಮಧ್ಯೆ ಸೃಷ್ಟಿಯಾಗುವ ಪರಿ ಎಂಥವರನ್ನೂ ಅಚ್ಚರಿ ಮೂಡಿಸುತ್ತದೆ. ಹಾಗಂತ ಸೃಷ್ಟಿಯಾದ ಮುತ್ತೆಲ್ಲವೂ ತೊಡಲು ಅರ್ಹವಾಗಿರುವುದಿಲ್ಲ. ಎಲ್ಲೆಡೆ ಮುತ್ತಿನಂಥ ಮುತ್ತು ಸಿಗುತ್ತದೆ. 

ಚಿಪ್ಪಿನೊಳಗೆ ಧೂಳಿನಂಥ ಕಣಗಳು ಒಳ ಹೊಕ್ಕಿರುತ್ತದೆ. ಚಿಪ್ಪಿನೊಳಗಿನಲ್ಲಿಯೇ ನಡೆಯುವ  ವಿವಿಧ ಕ್ರಿಯೆಗಳು ಈ ಧೂಳಿನ ಕಣಗಳನ್ನೇ ಮುತ್ತನ್ನಾಗಿ ಪರಿವರ್ತಿಸುತ್ತದೆ. ಅದಕ್ಕೆ ಅಗತ್ಯವಿರುವ ಪ್ರೋಟಿನ್‌ ಮತ್ತು ಕ್ಯಾಲ್ಸಿಯಂ ಅನ್ನು ಉತ್ಪತ್ತಿ ಮಾಡಿ, ಮುತ್ತಿಗೆ ಎಲ್ಲಿಲ್ಲದ ಸೌಂದರ್ಯವನ್ನು ತಂದು ಕೊಡುತ್ತದೆ. ಆದರೆ, ಅವುಗಳ ಗುಣಮಟ್ಟವನ್ನು ಆರಿಸುವುದು ಹೇಗೆ?

* ದೊಡ್ಡ ಗಾತ್ರವಿದ್ದರೆ ಬೆಲೆ ಹೆಚ್ಚು. ಆದರೆ, ಮುತ್ತಿನ ಮೇಲೆ ಯಾವುದೇ ಕಲೆ ಇರಬಾರದು. ಹೊಳಪಿದ್ದರೆ ಒಳ್ಳೆ ಮುತ್ತು ಎಂದರ್ಥ. 

* ಶುದ್ಧ ನೀರಿನಲ್ಲಿ ಮುತ್ತುಗಳು ನೇರಳೆ ಬಣ್ಣದಲ್ಲಿರುತ್ತವೆ. ಸುಮಾರು 100 ಮುತ್ತುಗಳಲ್ಲಿ ಕೇವಲ 10 ಮಾತ್ರ ಬಳಕೆಗೆ ಬರುತ್ತವೆ. ಇದರ ಮೌಲ್ಯ ಹೆಚ್ಚು.

* ಬೇರೆ ಬೇರೆ ಬಣ್ಣಗಳ ಮುತ್ತುಗಳಿಗೆ ತನ್ನದೇ ಆದ  ವೈಶಿಷ್ಟ್ಯಗಳಿರುತ್ತವೆ. ಕೆನೆ ಬಣ್ಣ, ಪಿಂಕ್, ತುಸು ನೀಲಿ...ಹೀಗಿ ವಿಧವಿಧವಾಗಿ ಸಿಗೋ ಮುತ್ತಿನ ಬೆಲೆ ಒಂದೊಂದಾಗಿರುತ್ತದೆ. 

* ದಕ್ಷಿಣ ಭಾಗದ ಸಮುದ್ರಗಳಲ್ಲಿ ಸಿಗೋ ಮುತ್ತಿನ ಅಳತೆ ಸಾಮಾನ್ಯವಾಗಿ ಸುಮಾರು 12 ಎಂಎಂ ಇರುತ್ತದೆ. ಶುದ್ಧ ನೀರಿನೊಳಗೆ ಸಿಗೋ ಒಂದು ಚಿಪ್ಪಿನೊಳಗೆ ಸುಮಾರು 20 ಮುತ್ತುಗಳಿದ್ದು, ಇದರ ಅಳತೆ 7 ಮಿಮೀ ಇರುತ್ತದೆ.

* ಎರಡು ಮುತ್ತುಗಳನ್ನು ಪರಸ್ಪರ ಉಜ್ಜಿದರೆ, ಮಣ್ಣಿನ ರೀತಿ ಭಾಸವಾದರೆ, ಅದು ಪ್ಯೂರ್ ಮುತ್ತು.

*  ಮುತ್ತು ಹಗುರವಾಗಿರಬೇಕು. ಅಕಸ್ಮಾತ್ ಭಾರವಿದ್ದರೆ ಅದು ಮನುಷ್ಯ ಸೃಷ್ಟಿ. ನೈಜ ಮುತ್ತು ಹೊಳಪಿನಿಂದ ಕೂಡಿದ್ದು, ಫಳ ಫಳ ಎಂದು ನೈಸರ್ಗಿಕವಾಗಿ ಹೊಳೆಯುತ್ತದೆ.

loader