ಪಾರ್ಟಿಗೆ ಹೋಗೋಕೆ ರೆಡಿಯಾಗಿ ಇನ್ನೇನೂ ಮನೆಯಿಂದ ಹೊರಡಬೇಕು ಎನ್ನುವಾಗ ಸಡನ್ ಆಗಿ ಕೈ ನೋಡುತ್ತೀರಿ? ಕೈ ಬೆರಳುಗಳು ಯಾಕೋ ಡಲ್ ಹೊಡಿತಿವೆಯಲ್ಲ ಅಂದ್ಕೊಳ್ಳುವಾಗಲೇ ನೈಲ್ ಪಾಲಿಶ್ ಹಾಕಿಲ್ಲ ಎಂಬುದು
ಅರಿವಾಗುತ್ತದೆ. ಟೈಮ್ ಇರುವಾಗಲೇ ನೈಲ್ ಪಾಲಿಶ್ ಹಾಕೊಳ್ಳೋದು ಕಷ್ಟದ ಕೆಲಸ. ಇನ್ನು ಪಾರ್ಟಿಗೆ ಹೋಗುವ ಈ ಗಡಿಬಿಡಿಯಲ್ಲಿ ಹಚ್ಕೊಂಡ್ರೆ ಡ್ರೆಸ್‍ಯೆಲ್ಲ ಹಾಳಾಗೋದು ಪಕ್ಕಾ ಎಂದು ಭಾವಿಸಿ ಒಲ್ಲದ ಮನಸ್ಸಿನಿಂದ
ಹಾಗೆಯೇ ಹೊರಟು ಬಿಡುತ್ತೀರಿ. ನಿಜ, ನೈಲ್ ಪಾಲಿಶ್ ಹಾಕೊಳ್ಳೋದಕ್ಕೆ ತಾಳ್ಮೆ ಹಾಗೂ ಏಕಾಗ್ರತೆ ಎರಡೂ ಬೇಕು. ಸ್ವಲ್ಪ ಆ ಕಡೆ ಈ ಕಡೆ ನೋಡಿದ್ರೆ, ಇಲ್ಲ ಕೈ ಅಲುಗಾಡಿಸಿದ್ರೆ ಎಡವಟ್ಟಾಗೋದು ಗ್ಯಾರಂಟಿ. ನೈಲ್ ಪಾಲಿಶ್
ಉಗುರು ಬಿಟ್ಟು ಅಕ್ಕಪಕ್ಕದ ಚರ್ಮಕ್ಕೆಲ್ಲ ತಾಗಿದ್ರೆ ಅದನ್ನು ಕ್ಲೀನ್ ಮಾಡೋದು ತಲೆನೋವಿನ ಕೆಲಸ. ಇನ್ನು ನೈಲ್ ಪಾಲಿಶ್ ಹಚ್ಚೊಂಡಾದ ನಂತರ 15-20 ನಿಮಿಷ ಕೈಗಳನ್ನು ಮುಂದಿರಿಸಿಕೊಂಡು ಗೊಂಬೆಯಂತೆ ಕುಳಿತಿರುವುದು
ದೊಡ್ಡ ಶಿಕ್ಷೆ. ನೈಲ್ ಪಾಲಿಶ್ ಹಚ್ಚಿಕೊಳ್ಳುವಾಗ ಇಂಥ ರಗಳೆಗಳನ್ನು ನಾವೆಲ್ಲರೂ ಅನುಭವಿಸಿಯೇ ಇರುತ್ತೇವೆ. ಆದರೆ, ಕೆಲವೊಂದು ಟ್ರಿಕ್ಸ್ ಅನುಸರಿಸುವ ಮೂಲಕ ನೈಲ್ ಪಾಲಿಶ್ ಹಚ್ಚುವ ಕಾರ್ಯವನ್ನು
ಸರಳವಾಗಿಸಿಕೊಳ್ಳಬಹುದು. 

ಮದುವಣಗಿತ್ತಿ ಮಿರಿ ಮಿರಿ ಮಿಂಚಲು ಇಲ್ಲಿವೆ ಟಿಪ್ಸ್

ಎಣ್ಣೆ ಹಚ್ಚಿಯೇ ಕೆಲಸ ಪ್ರಾರಂಭಿಸಿ: ನೈಲ್ ಪಾಲಿಶ್ ಹಚ್ಚುವಾಗ ಗಮನ ಸ್ವಲ್ಪ ಆ ಕಡೆ ಈ ಕಡೆಯಾದರೂ ಬಣ್ಣ ಉಗುರಿನ ಹೊರಗೆ ಹೋಗಿ ಚರ್ಮಕ್ಕೆಲ್ಲ ಅಂಟಿಕೊಳ್ಳುವುದು ಸಾಮಾನ್ಯ. ಇದನ್ನು ತಪ್ಪಿಸಲು ನೈಲ್ ಪಾಲಿಶ್ ಅಪ್ಲೈ
ಮಾಡುವ ಮುನ್ನ ಕೈಗಳಿಗೆ ಎಣ್ಣೆ ಅಥವಾ ಲೋಷನ್ ಲೇಪಿಸಿಕೊಳ್ಳಿ. ಇದರಿಂದ ಉಗುರಿನ ಸುತ್ತಲಿನ ಚರ್ಮಕ್ಕೆ ಅಂಟಿಕೊಂಡಿರುವ ನೈಲ್ ಪಾಲಿಶ್ ಕ್ಲೀನ್ ಮಾಡಲು ಸುಲಭವಾಗುತ್ತದೆ. ಅಲ್ಲದೆ, ಉಗುರುಗಳಿಗೆ ಪರ್ಫೆಕ್ಟ್ ಲುಕ್
ಸಿಗುವ ಮೂಲಕ ನಿಮ್ಮ ಕೈಗಳ ಅಂದ ಹೆಚ್ಚುತ್ತದೆ.

ಐಸ್ ವಾಟರ್ನಲ್ಲಿ ಉಗುರು ನೆನೆಸಿ: ನೈಲ್ ಪಾಲಿಶ್ ಅಪ್ಲೈ ಮಾಡುವ ಮುನ್ನ ಒಂದು ಪಾತ್ರೆಗೆ ಐಸ್ ಕ್ಯೂಬ್ಸ್ ಹಾಗೂ ನೀರು ತುಂಬಿಸಿಡಿ. ನೀವು ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಿಯಾದ ಬಳಿಕ ಈ ಪಾತ್ರೆಯಲ್ಲಿ ಬೆರಳುಗಳ
ತುದಿಯನ್ನು ಸ್ವಲ್ಪ ಹೊತ್ತು ಮುಳುಗಿಸಿಟ್ಟುಕೊಳ್ಳಿ. ಕೋಲ್ಡ್ ನೀರು ನೈಲ್ ಪಾಲಿಶ್ ಅನ್ನು ಗಟ್ಟಿಗೊಳಿಸುವ ಮೂಲಕ ಬೇಗ ಒಣಗಿಸುತ್ತದೆ. 

ಉಗುರಿನ ಸುತ್ತಲಿನ ಚರ್ಮಕ್ಕೆ ಜೆಲ್ಲಿ ಹಚ್ಚಿ: ಉಗುರಿನ ಸುತ್ತಮುತ್ತಲಿನ ಚರ್ಮಕ್ಕೆ ಕ್ಯೂ-ಟಿಪ್ ನೆರವಿನಿಂದ ಪೆಟ್ರೋಲಿಯಂ ಜೆಲ್ಲಿ ಹಚ್ಚಿ. ನಂತರ ನೈಲ್ ಪಾಲಿಶ್ ಅಪ್ಲೈ ಮಾಡಿ. ಸ್ವಲ್ಪ ಸಮಯ ಒಣಗಲು ಬಿಡಿ. ಆ ಬಳಿಕ ಕ್ಯೂ ಟಿಪ್
ನೆರವಿನಿಂದ ಉಳಿದ ಪಾಲಿಶ್ ಅನ್ನು ತೆಗೆಯಿರಿ. ಪೆಟ್ರೋಲಿಯಂ ಜೆಲ್ಲಿ ಹಚ್ಚಿರುವ ಕಾರಣ ಹೆಚ್ಚುವರಿ ನೈಲ್ ಪಾಲಿಶ್ ಸುಲಭವಾಗಿ ಕ್ಲೀನ್ ಆಗುತ್ತದೆ.

ಬೇಗ ಒಣಗಲು ಡ್ರೈಯರ್ ಬಳಸಿ: ಕೂದಲು ಒಣಗಿಸಲು ಡ್ರೈಯರ್ ಬಳಸುತ್ತೇವೆ. ಆದರೆ. ಇದರ ಮೂಲಕ ಉಗುರುಗಳಿಗೆ ಹಚ್ಚಿರುವ ನೈಲ್ ಪಾಲಿಶ್ ಅನ್ನು ಕೂಡ ಒಣಗಿಸಬಹುದು. ಹೆಚ್ಚಿನ ಉಷ್ಣಾಂಶದಲ್ಲಿ ಹಾಗೂ ಅತ್ಯಧಿಕ
ಸ್ಪೀಡ್‍ನಲ್ಲಿ ಡ್ರೈಯರ್ ಅನ್ನು ಉಗುರುಗಳಿಗೆ ಹಿಡಿದರೆ ಕೆಲವೇ ಕ್ಷಣಗಳಲ್ಲಿ ನೈಲ್ ಪಾಲಿಶ್ ಒಣಗುತ್ತದೆ.

ಹುಬ್ಬಿನ ಅಂದ ಹೆಚ್ಚಿಸೋ ಐಬ್ರೋ ಎಂಬ್ರಾಯಿಡರಿ

ಕ್ಯಾಪ್ ಟೈಟ್ ಆಗಿರಲಿ: ನೈಲ್ ಪಾಲಿಶ್ ಬಳಕೆ ಮಾಡಿದ ಬಳಿಕ ಅದರ ಬಾಟಲ್ ಕ್ಯಾಪ್ ಅನ್ನು ಸಮರ್ಪಕವಾಗಿ ಹಾಕಿಡಿ. ಗಾಳಿ ಬಾಟಲ್ ಒಳಗೆ ಸೇರಿದರೆ ನೈಲ್ ಪಾಲಿಶ್ ಗಟ್ಟಿಯಾಗಿ ಮತ್ತೆ ಬಳಕೆಗೆ ಯೋಗ್ಯವಾಗಿರುವುದಿಲ್ಲ. ನೈಲ್
ಪಾಲಿಶ್ ಹಚ್ಚುವ ಮುನ್ನ ಬಾಟಲಿಯನ್ನು ಚೆನ್ನಾಗಿ ಅಲುಗಾಡಿಸಿದ ಬಳಿಕವೇ ಬಳಸಬೇಕು. ಇದರಿಂದ ನೈಲ್ ಪಾಲಿಶ್ ಹಳೆಯದಾಗಿದ್ದರೂ ಹೊಚ್ಚ ಹೊಸತರಂತಹ ಲುಕ್ ನೀಡುತ್ತದೆ. ನೈಲ್ ಪಾಲಿಶ್ ಬಾಟಲ್‍ಗಳನ್ನು ಫ್ರಿಜ್‍ನಲ್ಲಿಟ್ಟರೆ
ದೀರ್ಘಕಾಲ ಬಾಳಿಕೆ ಬರುತ್ತವೆ.

ಹೊಳಪು ಬರಲು ಹೀಗೆ ಮಾಡಿ: ಕೆಲವು ಕಲರ್‍ಗಳು ಉಗುರಿನ ಮೇಲೆ ಡಲ್ ಆಗಿ ಕಾಣಿಸುತ್ತವೆ. ಹೀಗಾಗಿ ಇವುಗಳನ್ನು ಬಳಸುವ ಮುನ್ನ ಉಗುರಿಗೆ ತಿಳಿ ಅಥವಾ ಮೆಟಾಲಿಕ್ ಬಣ್ಣದ ಒಂದು ಕೋಟ್ ಹಚ್ಚಬೇಕು. ಆ ಬಳಿಕ ನಿಮಿಷ್ಟದ
ಬಣ್ಣ ಹಚ್ಚುವುದರಿಂದ ಉಗುರುಗಳ ಹೊಳಪು ಹೆಚ್ಚುತ್ತದೆ. ಯಾವುದೇ ಬಣ್ಣದ ನೈಲ್ ಪಾಲಿಶ್ ಬಳಸುವ ಮುನ್ನ ಈ ವಿಧಾನವನ್ನು ಅನುಸರಿಸಬಹುದು.