Asianet Suvarna News Asianet Suvarna News

ಮದುವೆ ದಿನ ಮಿರಿ ಮಿರಿ ಮಿಂಚಬೇಕೇ? ಮದುವಣಗಿತ್ತಿಗೆ 9 ಟಿಪ್ಸ್

ಮದುವೆ ಎಂದ್ರೆ ಹೆಣ್ಮಕ್ಕಳಿಗೆ ಮಧುರ ಭಾವನೆಗಳ ತೋರಣ. ಇನ್ನು ಅಲಂಕಾರದ ವಿಷಯಕ್ಕೆ ಬಂದರೆ ಅಂದು ಹೇಗೆಲ್ಲ ಕಾಣಿಸಿಕೊಳ್ಳಬೇಕು ಎಂಬ ಬಗ್ಗೆ ಮದುವೆ ಫಿಕ್ಸ್ ಆಗುವುದಕ್ಕೂ ಮೊದಲೇ ಅವರು ಕನಸುಗಳನ್ನು ಹಣೆದುಕೊಂಡು ಬಿಟ್ಟಿರುತ್ತಾರೆ. ಹೀಗಾಗಿ ಮದುವೆ ದಿನ ಹತ್ತಿರವಾಗುತ್ತಿದ್ದಂತೆ ತ್ವಚೆಯ ಚಿಂತೆ ಕಾಡಲಾರಂಭಿಸುತ್ತದೆ. ನಿಮಗೂ ಇಂಥ ಚಿಂತೆ ಕಾಡುತ್ತಿದ್ದರೆ ಇಲ್ಲಿದೆ ಸಿಂಪಲ್ ಡಯಟ್ ಪ್ಲ್ಯಾನ್.

9 Tips for bride to look beautiful on wedding day
Author
Bangalore, First Published Jan 3, 2020, 5:16 PM IST

ಮದುವೆಯೆಂದರೆ ಮಧುವಣಗಿತ್ತಿಗೆ ಸಿದ್ಧತೆಗಳ ಸರಮಾಲೆ. ಮದುವೆ ಹಿಂದಿನ ದಿನದ ತನಕ ಈ ತಲೆನೋವು ಇದ್ದಿದ್ದೆ. ಮೆಹಂದಿ, ಮುಹೂರ್ತ, ರಿಸೆಪ್ಷನ್ ಹೀಗೆ ಸಾಲು ಸಾಲು ಕಾರ್ಯಕ್ರಮಗಳಿಗೆ ತೊಡುವ ಉಡುಗೆ, ಜ್ಯುವೆಲ್ಲರಿ, ಹೇರ್‍ಸ್ಟೈಲ್, ಮೇಕಪ್.....ಹೀಗೆ ಪ್ರತಿ ವಿಷಯದ ಬಗ್ಗೆಯೂ ಸಾಕಷ್ಟು ರಿಸರ್ಚ್ ಮಾಡಿ,ಯೋಚಿಸಿ ತಯಾರಿ ನಡೆಸಬೇಕಾಗುತ್ತದೆ. ಇನ್ನು ಮದುವೆ ದಿನ ನಾನು ಮಿಸ್ ವಲ್ರ್ಡ್ತರಹ ಕಾಣಿಸಬೇಕು ಎಂಬ ಬಯಕೆ ಎಲ್ಲ ಹೆಣ್ಣುಮಕ್ಕಳಿಗೂ ಇರುತ್ತದೆ. ಇದಕ್ಕಾಗಿ 4-5 ತಿಂಗಳಿನಿಂದಲೇ ಸಿದ್ಧತೆ ಪ್ರಾರಂಭಿಸಿರುತ್ತಾರೆ. ಬ್ಯೂಟಿ ಪಾರ್ಲರ್, ಸ್ಪಾ, ಮನೆ ಮದ್ದು....ಹೀಗೆ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಲು ನಾನಾ ತರಹದ ಪ್ರಯೋಗಗಳನ್ನು ಮಾಡುತ್ತಾರೆ. ಆದರೆ, ಇವು ಯಾವುವೂ ತ್ವಚೆಯ ಆರೋಗ್ಯವನ್ನು ನಿರ್ಧರಿಸುವುದಿಲ್ಲ. ಇವು ಸ್ವಲ್ಪ ಮಟ್ಟಗೆ ನಿಮ್ಮ ತ್ವಚೆ ಮೇಲೆ ಪ್ರಭಾವ ಬೀರಬಹುದಷ್ಟೇ. ಆದರೆ, ನಿಮ್ಮ ತ್ವಚೆ ನೈಸರ್ಗಿಕವಾಗಿ ಕಾಂತಿಯುತವಾಗಿ ಕಂಗೊಳಿಸಲು ಉತ್ತಮ ಆಹಾರ ಕ್ರಮ ಅನುಸರಿಸುವುದು ಅತ್ಯಗತ್ಯ.ಇದರಿಂದ ಚರ್ಮದ ಕಾಂತಿ ಹೆಚ್ಚುವುದು ಮಾತ್ರವಲ್ಲ, ಶರೀರ ಕೂಡ ಫಿಟ್ ಆಗುತ್ತದೆ. ಹೆಚ್ಚುವರಿ ಕೊಬ್ಬೆಲ್ಲ ಕರಗಿ ಬಳಕುವ ದೇಹ ನಿಮ್ಮದಾಗುತ್ತದೆ.

ಮದುವೆಗೆ ಕನಿಷ್ಠ 2 ತಿಂಗಳಿರುವಾಗ ಬ್ಯಾಲೆನ್ಸಡ್ ಡಯಟ್ ಪ್ರಾರಂಭಿಸಿ. ಆದರೆ, ಒಂದು ವಿಷಯ ನೆನಪಿಡಿ, ಡಯಟ್ ಪ್ಲ್ಯಾನ್ ಸಿದ್ಧಪಡಿಸುವಾಗ ಇರುವ ಉತ್ಸಾಹ ಅದನ್ನು ಕಾರ್ಯರೂಪಕ್ಕೆ ತರುವಾಗಲೂ ಇರಲಿ. ಎಲ್ಲಿಯೂ, ಯಾವುದೇ ಕಾರಣಕ್ಕೂ ರಾಜೀಯಾಗದೆ ಸ್ಟ್ರಿಕ್ಟ್ ಆಗಿ ಡಯಟ್ ಫಾಲೋ ಮಾಡಿದರೆ ಉತ್ತಮ ಫಲಿತಾಂಶ ಲಭಿಸುವ ಬಗ್ಗೆ ಅನುಮಾನವೇ ಬೇಡ.

ಈ ಪ್ರೀ ವೆಡ್ಡಿಂಗ್ ಶೂಟ್ ಸದಾ ನೆನಪಿರಲಿ

1.ಆಹಾರದಲ್ಲಿ ಇವೆಲ್ಲ ಇರಲಿ: ಹೆಚ್ಚಿನ ಶ್ರಮವಿಲ್ಲದೆ ದೇಹದ ತೂಕ ಇಳಿಸಿಕೊಳ್ಳಲು ಹಾಗೂ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಲು ನೀವು ಮಾಡಬೇಕಾಗಿರುವುದು ಇಷ್ಟೇ- ನಿಮ್ಮ ನಿತ್ಯದ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಿ. ಲೀನ್ ಪ್ರೋಟೀನ್, ವಿಟಮಿನ್ ಇ ಹಾಗೂ ಫೈಬರ್‍ಗಳನ್ನೊಳಗೊಂಡ ಆಹಾರಗಳನ್ನು ಮರೆಯದೆ ಸೇವಿಸಿ. ಡೈರಿ ಪ್ರಾಡಕ್ಟ್ಗಳಿಂದ ಅಂತರ ಕಾಯ್ದುಕೊಳ್ಳಿ.

2.ಉಪವಾಸ ಏಕೆ?: ಡಯಟ್ ಎಂದ ತಕ್ಷಣ ಒಂದು ಹೊತ್ತಿನ ಊಟ ಬಿಡಬೇಕು ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಒಮ್ಮೆಗೆ ಹೊಟ್ಟೆ ಬಿರಿಯುವಷ್ಟು ತಿನ್ನುವುದಕ್ಕಿಂತ ಆಗಾಗ ಸ್ವಲ್ಪ ಸ್ವಲ್ಪ ಆಹಾರ ಸೇವಿಸುವುದು ಉತ್ತಮ ಕ್ರಮ. ಅಂದರೆ ನಿಮ್ಮ ತಿನ್ನುವ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ತನ್ನಿ. ದಿನಕ್ಕೆ ಮೂರು ಬಾರಿ ಆಹಾರ ಸೇವಿಸುವ ಅಭ್ಯಾಸ ನಿಮಗಿದ್ದರೆ ಅಷ್ಟೇ ಆಹಾರವನ್ನು 5-6 ಬಾರಿ ತಿನ್ನಲು ಅನುಕೂಲವಾಗುವಂತೆ ವಿಭಾಗಿಸಿಕೊಳ್ಳಿ. 

3.ಸಕ್ಕರೆ ಕಂಡರೆ ದೂರ ನಿಲ್ಲಿ:  ನೀವು ಸಿಹಿ ಪ್ರಿಯರಾಗಿದ್ದರೆ ಮದುವೆ ದಿನದ ತನಕ ಬಾಯಿಗೆ ಬೀಗ ಹಾಕಿಕೊಳ್ಳುವುದು ಒಳ್ಳೆಯದು. ಸಕ್ಕರೆ ಹಾಗೂ ಸಿಹಿ ಪದಾರ್ಥಗಳಲ್ಲಿ ಕ್ಯಾಲೋರಿ ಹೆಚ್ಚಿರುವ ಕಾರಣ ದೇಹದ ತೂಕ ಹೆಚ್ಚುತ್ತದೆ. ಪ್ಯಾಕಡ್ ಫುಡ್ಸ್ ಹಾಗೂ ರೆಡಿ ಟು ಈಟ್ ಫುಡ್‍ಗಳಲ್ಲಿ ಸಕ್ಕರೆ, ಕಾರ್ಬೋಹೈಡ್ರೇಟ್ ಹಾಗೂ ಸೋಡಿಯಂ ಅಧಿಕವಿದ್ದು, ಇವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡಬಲ್ಲವು. ಹಾರ್ಮೋನ್‍ಗಳ ಅಸಮತೋಲನಕ್ಕೆ ಹಾಗೂ ರಕ್ತದಲ್ಲಿ ಸಕ್ಕರೆ ಅಂಶದ ಹೆಚ್ಚಳಕ್ಕೂ ಕಾರಣವಾಗಬಲ್ಲವು. 

4.ಪಿಜ್ಜಾ, ಬರ್ಗರ್‍ಗೆ ನೋ ಅನ್ನಿ: ನಾಲಗೆಗೆ ರುಚಿಸುವ ಪಿಜ್ಜಾ, ಬರ್ಗರ್ ಆರೋಗ್ಯಕ್ಕೆ ಕಹಿಯನ್ನೇ ಉಣಬಡಿಸುತ್ತವೆ ಎಂಬುದು ನೆನಪಿರಲಿ. ಆದಕಾರಣ ಇಂಥ ಆಹಾರಗಳಿಂದ ಆದಷ್ಟು ಅಂತರ ಕಾಯ್ದುಕೊಳ್ಳಿ.

5. ಎಳನೀರು, ಫ್ರೆಶ್ ಜ್ಯೂಸ್ ಮೊರೆ ಹೋಗಿ: ಎಳನೀರು, ತಾಜಾ ಹಣ್ಣಿನ ರಸಗಳು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಮೂಲಕ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತವೆ. ಇವು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತವೆ. 

6.ನೀರು ಕುಡಿದಷ್ಟು ಬೇಕೆನ್ನಿ: ನೀರು ಸರ್ವರೋಗಕ್ಕೂ ಮದ್ದು. ಆದಕಾರಣ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ. ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯಲು ಮರೆಯಬೇಡಿ.

ಒಂದೇ ಮಂಟಪದಲ್ಲಿ ಅಕ್ಕ-ತಂಗಿಯನ್ನು ಮದ್ವೆಯಾದ ಭೂಪ

7.ತಾಜಾ ಹಣ್ಣು, ತರಕಾರಿಗಳನ್ನು ಪ್ರೀತಿಸಿ: ಡಯಟ್‍ನಲ್ಲಿರುವವರಿಗೆ ಹಣ್ಣು ಮತ್ತು ತರಕಾರಿಗಳಷ್ಟು ಉತ್ತಮವಾದ ಆಹಾರ ಬೇರೆಯಿಲ್ಲ. ಪ್ರತಿದಿನ ಕನಿಷ್ಠ 3-4 ವಿಧದ ಹಣ್ಣುಗಳು ನಿಮ್ಮ ಡಯಟ್‍ನಲ್ಲಿರುವಂತೆ ನೋಡಿಕೊಳ್ಳಿ. ತರಕಾರಿಗಳನ್ನು ಆದಷ್ಟು ಹಸಿಯಾಗಿಯೇ ಸೇವಿಸಲು ಪ್ರಯತ್ನಿಸಿ.

8.ಒಣಹಣ್ಣುಗಳಿಗೂ ಜಾಗ ನೀಡಿ: ಒಣಹಣ್ಣುಗಳು ಅನೇಕ ಪೋಷಕಾಂಶಗಳ ಆಗರವಾಗಿವೆ. ಇವು ಬಾಯಿಗೆ ರುಚಿ ನೀಡುವ ಜೊತೆಗೆ ದೇಹಕ್ಕೂ ಸಿಹಿಯ ಅನುಭವಗಳನ್ನು ನೀಡುತ್ತವೆ. ಹೀಗಾಗಿ ನಿಮಗೆ ಸ್ವೀಟ್ ತಿನ್ನುವ ಬಯಕೆಯಾದಾಗಲೆಲ್ಲ ಒಣಹಣ್ಣುಗಳನ್ನು ಸೇವಿಸಿ.

9.ಕಾಫಿ ರುಚಿ ಮರೆತುಬಿಡಿ: ಕಾಫಿ ಡೇಹೈಡ್ರೇಷನ್‍ಗೆ ಕಾರಣವಾಗಬಲ್ಲದು. ಆದಕಾರಣ ದೇಹದಲ್ಲಿ ತೇವಾಂಶವನ್ನು ಹೆಚ್ಚಿಸಿಕೊಳ್ಳಲು ಕಾಫಿಯಿಂದ ದೂರವಿರುವುದು ಅಗತ್ಯ. 

Follow Us:
Download App:
  • android
  • ios