ಪುರುಷನ ವೀರ್ಯ, ಮಹಿಳೆಯ ಎದೆಹಾಲಿನಲ್ಲೂ ಪತ್ತೆಯಾಯ್ತು ಮೈಕ್ರೋಪ್ಲಾಸ್ಟಿಕ್ಸ್!
Microplastics Fertility problems ಚೀನಾದಲ್ಲಿ ಇತ್ತೀಚಿನ ನಡೆದ ಅಧ್ಯಯನದಲ್ಲಿ ಮಾನವನ ರಕ್ತ ಮಾತ್ರವಲ್ಲದೆ,ಮಹಿಳೆಯ ಗರ್ಭಚೀಲ, ಎದೆಹಾಲು ಹಾಗೂ ಪುರುಷರ ವೀರ್ಯದಲ್ಲೂ ಮೈಕ್ರೋಪ್ಲಾಸ್ಟಿಕ್‌ನ ಅಂಶ ಇರೋದು ಪತ್ತೆಯಾಗಿದೆ. ಇದರಿಂದ ಆಗಬಲ್ಲ ಆರೋಗ್ಯ ಪರಿಣಾಮಗಳ ಬಗ್ಗೆ ಇನ್ನೂ ತಿಳಿದಿಲ್ಲವಾದರೂ, ಮೈಕ್ರೋಪ್ಲಾಸ್ಟಿಕ್ಸ್‌ನ ಪ್ರಮಾಣ ಸಂತಾನೋತ್ಪತಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ನವದೆಹಲಿ (ಜೂ.14): ಪುರುಷನ ವೀರ್ಯದಲ್ಲೂ ಮೈಕ್ರೋಪ್ಲಾಸ್ಟಿಕ್ಸ್‌ನ ಅಂಶಗಳು ಕಂಡು ಬಂದಿವೆ ಎಂದು ಚೀನಾದಲ್ಲಿ ನಡೆದ ಇತ್ತೀಚಿನ ಅಧ್ಯಯನವೂ ತಿಳಿಸಿದೆ. ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಲಾದ ಎಲ್ಲಾ ಮಾನವ ವೀರ್ಯ ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವು ಕಂಡುಬಂದಿದೆ ಮತ್ತು ಸಂತಾನೋತ್ಪತ್ತಿಗೆ ಸಂಭವನೀಯ ಹಾನಿಯ ಕುರಿತು ಹೆಚ್ಚಿನ ಸಂಶೋಧನೆಯು ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ. ಪುರುಷರಲ್ಲಿ ವೀರ್ಯಾಣು ಕೌಂಟ್ ದಶಕಗಳಿಂದ ಕುಸಿಯುತ್ತಿವೆ ಮತ್ತು 40% ಲೋ ಕೌಂಟ್‌ನ ಕಾರಣವೇನು ಅನ್ನೋದೇ ಗೊತ್ತಾಗುತ್ತಿಲ್ಲ. ಹಾಗಿದ್ದರೂ, ರಾಸಾಯನಿಕ ಮಾಲಿನ್ಯವು ಇದಕ್ಕೆ ಕಾರಣವೂ ಆಗಿರಬಹುದು ಎಂದು ಹೆಚ್ಚಿನ ಅಧ್ಯಯಗಳಿಂದ ತಿಳಿದುಬಂದಿದೆ.ಚೀನಾದ ಜಿನಾನ್‌ನಲ್ಲಿ ವಿವಾಹಪೂರ್ವ ಆರೋಗ್ಯ ಮೌಲ್ಯಮಾಪನಕ್ಕೆ ಒಳಗಾಗುತ್ತಿರುವ ಆರೋಗ್ಯವಂತ ಪುರುಷರಿಂದ 40 ವೀರ್ಯ ಮಾದರಿಯಂದು ಸಂಗ್ರಹಿಸಲಾಗಿತ್ತು. ಮತ್ತೊಂದು ಇತ್ತೀಚಿನ ಅಧ್ಯಯನವು ಇಟಲಿಯಲ್ಲಿ 10 ಆರೋಗ್ಯವಂತ ಯುವಕರಲ್ಲಿ ಆರು ಜನರ ವೀರ್ಯದಲ್ಲಿ ಮೈಕ್ರೋಪ್ಲಾಸ್ಟಿಕ್ ಅನ್ನು ಕಂಡುಹಿಡಿದಿದೆ ಮತ್ತು ಚೀನಾದಲ್ಲಿ ಮತ್ತೊಂದು ಅಧ್ಯಯನವು 25 ಮಾದರಿಗಳಲ್ಲಿ ಅರ್ಧದಷ್ಟು ಮಾಲಿನ್ಯಕಾರಕಗಳನ್ನು ಕಂಡುಹಿಡಿದಿದೆ.
ಮೈಕ್ರೊಪ್ಲಾಸ್ಟಿಕ್‌ಗಳು ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ ಮತ್ತು ಇವುಗಳ ಉಪಸ್ಥಿತಿಯಿಂದ ಹಾರ್ಮೋನ್ ಅಡ್ಡಿಗೆ ಕಾರಣವಾಗುತ್ತವೆ ಎಂದು ಇಲಿಗಳಲ್ಲಿನ ಇತ್ತೀಚಿನ ಅಧ್ಯಯನಗಳು ವರದಿ ಮಾಡಿದೆ. ಮೈಕ್ರೋಪ್ಲಾಸ್ಟಿಕ್‌ಗಳು ಮತ್ತು ಮಾನವನ ಆರೋಗ್ಯದ ಕುರಿತಾದ ಸಂಶೋಧನೆಯು ವೇಗವಾಗಿ ನಡೆಯುತ್ತಿದೆ. ಮನುಷ್ಯನ ದೇಹದ ಎಲ್ಲಾ ಭಾಗಗಳಲ್ಲಿ ಮೈಕ್ರೋಪ್ಲಾಸ್ಟಿಕ್ಸ್‌ಗಳು ಕಂಡುಬರುತ್ತಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮಾನವನ ರಕ್ತ, ಗರ್ಭಿಣಿಯ ಮಾಸು ಚೀಲ, ಎದೆಹಾಲಿನಲ್ಲೀ ಮೈಕ್ರೋಪ್ಲಾಸ್ಟಿಕ್ಸ್ ಅಂಶವಿದೆ. ಮೇ ತಿಂಗಳಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಪರೀಕ್ಷಿಸಲಾದ ಎಲ್ಲಾ 23 ಮಾನವ ವೃಷಣ ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್ಸ್‌ಗಳು ಕಂಡುಬಂದಿವೆ. ಮೈಕ್ರೋ ಪ್ಲಾಸ್ಟಿಕ್ಸ್‌ನಿಂದ ಆರೋಗ್ಯದ ಮೇಲೆ ಆಗುವ ಪರಿಣಾಮವು ಇನ್ನೂ ತಿಳಿದಿಲ್ಲ ಆದರೆ ಮೈಕ್ರೋಪ್ಲಾಸ್ಟಿಕ್‌ಗಳು ಪ್ರಯೋಗಾಲಯದಲ್ಲಿ ಮಾನವ ಜೀವಕೋಶಗಳಿಗೆ ಹಾನಿಯನ್ನುಂಟುಮಾಡುತ್ತವೆ ಎಂದು ತೋರಿಸಲಾಗಿದೆ.
ಪ್ರತಿ ವರ್ಷ ಲಕ್ಷಾಂತರ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಸರಕ್ಕೆ ಸುರಿಯಲಾಗುತ್ತಿದೆ. ಇವುಗಲ್ಲಿ ಹೆಚ್ಚಿನವು ಮೈಕ್ರೋಪ್ಲಾಸ್ಟಿಕ್‌ಗಳಾಗಿ ವಿಭಜನೆಯಾಗುತ್ತದೆ. ಇವು ಮೌಂಟ್ ಎವರೆಸ್ಟ್ ಶಿಖರದಿಂದ ಆಳವಾದ ಸಾಗರಗಳವರೆಗೆ ಇಡೀ ಗ್ರಹವನ್ನುಇದು ಕಲುಷಿತಗೊಳಿಸಿವೆ. ಜನರು ಆಹಾರ ಮತ್ತು ನೀರಿನ ಮೂಲಕ ಸಣ್ಣ ಕಣಗಳನ್ನು ಸೇವಿಸುತ್ತಾರೆ ಮತ್ತು ಅವುಗಳನ್ನು ಉಸಿರಾಡುತ್ತಾರೆ ಎನ್ನಲಾಗಿದೆ.
ವೀರ್ಯ ಹೆಚ್ಚಳಕ್ಕೆ ಏನು ತಿನ್ನಬೇಕು ಗೊತ್ತಾ? ಚಾಣಕ್ಯ ನೀತಿಯಲ್ಲಿದೆ ಔಷಧ
'ಇತ್ತೀಚಿನ ಹೊಸ ಸಂಶೋಧನೆ ಪ್ರಕಾರ, ಮೈಕ್ರೋಪ್ಲಾಸ್ಟಿಕ್ಸ್ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಂಭಾವ್ಯ ಅಂಶವಾಗಿದೆ. ಇದು ಮಾನವನ ಸಂತಾನೋತ್ಪತ್ತಿ ಸಮಸ್ಯೆಗಳಿಗೂ ಕಾರಣವಾಗಿರಬಹುದು. ಇವುಗಳನ್ನು ಪತ್ತೆ ಹಚ್ಚಿ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ ಎಂದು ಚೀನಾದ ಕಿಂಗ್ಡಾವೊ ವಿಶ್ವವಿದ್ಯಾಲಯದ ನಿಂಗ್ ಲಿ ತಿಳಿಸಿದ್ದಾರೆ. ಸೈನ್ಸ್ ಆಫ್ ದಿ ಟೋಟಲ್ ಎನ್ವಿರಾನ್‌ಮೆಂಟ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯು ಎಂಟು ವಿಭಿನ್ನ ಪ್ಲಾಸ್ಟಿಕ್‌ಗಳನ್ನು ಪತ್ತೆ ಮಾಡಿದೆ. ಪ್ಯಾಕೇಜಿಂಗ್‌ಗಾಗಿ ಬಳಸಲಾಗುವ ಪಾಲಿಸ್ಟೈರೀನ್ ಅತ್ಯಂತ ಸಾಮಾನ್ಯವಾಗಿದೆ, ನಂತರ ಪಾಲಿಥಿಲೀನ್ ಅನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಬಳಸಲಾಗುತ್ತದೆ, ಪಿವಿಸಿ ಪ್ಲಾಸ್ಟಿಕ್ಸ್ ನಂತರದ ಸ್ಥಾನದಲ್ಲಿದೆ.
ಅಡುಗೆಗೆ ನಾನ್‌ಸ್ಟಿಕ್ ಪಾತ್ರೆ ಬಳಸ್ತೀರಾ ? ಮೈಕ್ರೋಪ್ಲಾಸ್ಟಿಕ್ಸ್ ಹೊಟ್ಟೆ ಸೇರ್ತವೆ ಹುಷಾರ್ !