"S" ಅಕ್ಷರದಿಂದ ಆರಂಭವಾಗುವ ಹೆಸರಿನವರು ಬುದ್ಧಿವಂತರು, ಕಠಿಣ ಪರಿಶ್ರಮಿಗಳು, ನಿರ್ಭೀತರು, ಗಮನವಿಟ್ಟು ಕೆಲಸ ಮಾಡುವವರು. ಸ್ವಲ್ಪ ಕೋಪಿಷ್ಠರು, ಹಠಮಾರಿಗಳೂ ಆಗಿರುತ್ತಾರೆ. ಚಾಣಕ್ಯನಂತಹ ಬುದ್ಧಿವಂತಿಕೆ ಇವರಲ್ಲಿದೆ. ಯಾವುದೇ ಸನ್ನಿವೇಶವನ್ನು ಧೈರ್ಯದಿಂದ ಎದುರಿಸುತ್ತಾರೆ.  

Psychology of Names: ಯಾವುದೇ ವ್ಯಕ್ತಿಯನ್ನು ಗುರುತಿಸಲು ನಮಗೆ ಇರುವ ಅತ್ಯಂತ ನೇರ ಮತ್ತು ಸರಳ ಮಾರ್ಗವೆಂದರೆ ಅವನ/ಅವಳ ಹೆಸರು. ಹೆಸರು ಅಂತಿದ್ದರೆ ನಾವು ಯಾರನ್ನಾದರೂ ಕರೆಯಲು ಅಥವಾ ಅವರ ಬಗ್ಗೆ ಜನರೊಂದಿಗೆ ಮಾತನಾಡಲು ಸಾಧ್ಯ ಅಲ್ಲವೇ. ಜಗತ್ತಿನ ಯಾವುದೇ ವ್ಯಕ್ತಿ ಮೊದಲು ತನ್ನ ಹೆಸರಿನಿಂದಲೇ ಜನರಲ್ಲಿ ಪ್ರಸಿದ್ಧನಾಗುತ್ತಾನೆ. ಆದರೆ ನಿಮಗೆ ಗೊತ್ತಾ...?, ಅದು ಕೇವಲ ಒಂದು ಗುರುತಲ್ಲ, ಬದಲಾಗಿ ನಮ್ಮ ವ್ಯಕ್ತಿತ್ವದ ಕನ್ನಡಿ.

ನಾವು ಸಾಮಾನ್ಯವಾಗಿ ಒಬ್ಬರ ಸ್ವಭಾವವನ್ನು ಆಧರಿಸಿ ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಇದಲ್ಲದೆ ನಾವು ಯಾರ ಬಗ್ಗೆಯಾದರೂ ತಿಳಿದುಕೊಳ್ಳಲು ಬಯಸಿದರೆ ಅವರ ಹೆಸರಿನ ಮೊದಲ ಅಕ್ಷರದಿಂದಲೇ ಎಲ್ಲವನ್ನೂ ಅರ್ಥಮಾಡಿಕೊಳ್ಳಬಹುದು. ಹೌದು, ಇದು ಸ್ವಲ್ಪ ಆಶ್ಚರ್ಯಕರವೆನಿಸಬಹುದು. ಆದರೆ ಪ್ರತಿಯೊಬ್ಬ ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ಅವನು ಯಾವ ರೀತಿಯ ವ್ಯಕ್ತಿ ಎಂದು ಹೇಳುತ್ತದೆ. ಇದರ ಬಗ್ಗೆ ಎಲ್ಲವನ್ನೂ ವಿಜ್ಞಾನದ ಮೂಲಕ ಬಹಳ ಸುಲಭವಾಗಿ ತಿಳಿದುಕೊಳ್ಳಬಹುದು. ಇವತ್ತು ನಾವು ನಿಮಗೆ "S" ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳ ಜನರ ಬಗ್ಗೆ ಹೇಳುತ್ತೇವೆ. ವೈದಿಕ ಜ್ಯೋತಿಷ್ಯದ ಪ್ರಕಾರ, S ಅಕ್ಷರವು ಅನೇಕ ಗುಣಗಳನ್ನು ಹೊಂದಿದೆ. ಈ ಜನರು ಬಹಳ ಯೋಚಿಸಿದ ನಂತರ ಮಾತನಾಡುತ್ತಾರೆ. ಬಹುಮುಖ ಪ್ರತಿಭೆಯುಳ್ಳವರು. ಈ ಗುಣದಿಂದಾಗಿಯೇ ಜನರು ಅವರ ಕಡೆಗೆ ಆಕರ್ಷಿತರಾಗುತ್ತಾರೆ. ಹಾಗಾದರೆ S ಅಕ್ಷರದಿಂದ ಪ್ರಾರಂಭವಾಗುವ ಜನರ ವ್ಯಕ್ತಿತ್ವ ಮತ್ತು ಸ್ವಭಾವ ಹೇಗಿರುತ್ತದೆ ಎಂದು ತಿಳಿಯೋಣ... 

Vastu Tips: ಲಕ್ಷ್ಮಿ ದೇವಿ ಮನೆಗೆ ಆಗಮಿಸಬೇಕೆಂದರೆ ಅಕ್ಷಯ ತೃತೀಯಕ್ಕೂ ಮುನ್ನ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ

ಸಣ್ಣ ಸಣ್ಣ ವಿಷ್ಯಕ್ಕೂ ಕೋಪ 
ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನರು ಸ್ವಲ್ಪ ಕೋಪಿಷ್ಟರು. ಇವರು ಸಣ್ಣ ಸಣ್ಣ ವಿಷಯಗಳಿಗೂ ಬೇಗನೆ ಕೋಪಗೊಳ್ಳುತ್ತಾರೆ. ಕೆಲವೊಮ್ಮೆ, ಅವರು ಕೋಪದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ತೊಂದರೆಗೂ ಸಿಲುಕುತ್ತಾರೆ.

ಸೋಮಾರಿತನದಿಂದ ಬಹಳ ದೂರ 
ಈ ಹೆಸರಿನ ಜನರು ತುಂಬಾ ಶ್ರಮಶೀಲರು ಮತ್ತು ಸೋಮಾರಿತನ ಇಷ್ಟಪಡುವುದಿಲ್ಲ. ಅಷ್ಟೇ ಏಕೆ ಸೋಮಾರಿಗಳನ್ನು ಇಷ್ಟಪಡುವುದಿಲ್ಲ. ಇವರು ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

ಬಹಳ ಗಮನವಿಟ್ಟು ಕೆಲಸ 
 "S" ಹೆಸರಿನ ಜನರು ತಮ್ಮ ಎಲ್ಲಾ ಕೆಲಸಗಳನ್ನು ಹೆಚ್ಚಿನ ಗಮನ ಕೊಟ್ಟು ಮಾಡುತ್ತಾರೆ. ಅವರು ಯಾವುದೇ ಕೆಲಸವನ್ನು ಮಾಡುತ್ತಿದ್ದರೆ ಅದನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ. ಏಕೆಂದರೆ ಆ ಕೆಲಸವನ್ನು ಅವರು ಚೆನ್ನಾಗಿ ಪೂರ್ಣಗೊಳಿಸಬಹುದು. ಅವರು ನೋಡುವ ಅಥವಾ ಕೇಳುವ ಯಾವುದನ್ನಾದರೂ ಬೇಗನೆ ನೆನಪಿಸಿಕೊಳ್ಳುತ್ತಾರೆ. 

ಭಯ ಅಂದ್ರೇನೇ ಗೊತ್ತಿಲ್ಲ 
ಅಂದಹಾಗೆ ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನರ ಮನಸ್ಸಿನಲ್ಲಿ ಯಾವುದೇ ಭಯವಿರುವುದಿಲ್ಲ. ಅವರು ನಿರ್ಭೀತರು ಮತ್ತು ಜೀವನದ ಪ್ರತಿಯೊಂದು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುತ್ತಾರೆ. ಅವರ ಈ ಪ್ರತಿಭೆಯೇ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.

ಚಾಣಕ್ಯನಂತಹ ಬುದ್ಧಿವಂತಿಕೆ
ಈ ಜನರು ಬಹಳ ಬುದ್ಧಿವಂತರು ಮತ್ತು ಅವರ ಬುದ್ಧಿವಂತಿಕೆ ಚಾಣಕ್ಯನಂತೆಯೇ ಇರುತ್ತದೆ. ಜೀವನದ ಅತ್ಯಂತ ಕಠಿಣ ಸಂದರ್ಭಗಳು ಸಹ ಅವರಿಗೆ ಸುಲಭವಾಗಿ ಕಾಣುತ್ತವೆ ಮತ್ತು ಅವರು ಎಲ್ಲದಕ್ಕೂ ಕ್ಷಣಾರ್ಧದಲ್ಲಿ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ. 

ಈ ಅಕ್ಷರ ನಿಮ್ಮ ಹೆಸರಲ್ಲಿ ಇದ್ರೆ ದುಡ್ಡಿಗೆ ಬರವಿಲ್ಲ!

ಸ್ವಲ್ಪ ಹಠಮಾರಿಗಳು
ಈ ಹೆಸರಿನ ಜನರು ಸ್ವಲ್ಪ ಹಠಮಾರಿಗಳು. ಅವರು ಒಮ್ಮೆ ಏನನ್ನಾದರೂ ಮಾಡಲು ನಿರ್ಧರಿಸಿದರೆ, ಅದನ್ನು ಮಾಡುವವರೆಗೂ ಅವರಿಗೆ ಶಾಂತಿ ಸಿಗುವುದಿಲ್ಲ. ಈ ಜನರು ತಮ್ಮ ಹಠಮಾರಿತನದಿಂದಾಗಿ ಇತರರ ಮಾತನ್ನು ಕೇಳುವುದೇ ಇಲ್ಲ. ಅವರು ತಮ್ಮ ಮನಸ್ಸಿನಲ್ಲಿರುವುದನ್ನು ಮಾತ್ರ ಮಾಡುತ್ತಾರೆ.