ಧಾರ್ಮಿಕ ಹಚ್ಚೆಗಳು ಈಗ ಫ್ಯಾಷನ್ ಆಗಿ ಮಾರ್ಪಟ್ಟಿವೆ. ಆದರೆ, ಸರಿಯಾದ ಸ್ಥಳದಲ್ಲಿ ಹಾಕಿಸಿಕೊಳ್ಳದಿದ್ದರೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಹಚ್ಚೆ ಹಾಕಿಸಿಕೊಳ್ಳುವ ಮುನ್ನ ಆಧ್ಯಾತ್ಮಿಕ ಸಲಹೆ ಪಡೆಯುವುದು ಉತ್ತಮ.

ಇತ್ತೀಚಿನ ದಿನಗಳಲ್ಲಿ ಹಚ್ಚೆ(Tattoo) ಹಾಕಿಸಿಕೊಳ್ಳುವುದು ದೊಡ್ಡ ಟ್ರೆಂಡ್ ಆಗಿದೆ. ಇಗಿನ ಯುವಪೀಳಿಗೆಯಲ್ಲಿ ವಿಶೇಷವಾಗಿ ಧಾರ್ಮಿಕ ಪ್ರೇರಣೆಯಿಂದ ದೇವರ ಚಿತ್ರಗಳನ್ನು ಶರೀರದಲ್ಲಿ ಹಾಕಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಹನುಮಾನ್, ಶಿವ, ಗಣೇಶ, ಕೃಷ್ಣ ಮುಂತಾದ ದೇವತೆಗಳ ಚಿತ್ರಗಳನ್ನು ಎದೆ, ಕೈ, ಹೆಗಲು ಅಥವಾ ಬೆನ್ನು ಮೇಲೆ ಹಾಕಿಸಿಕೊಂಡು ಭಕ್ತಿಯನ್ನು ವ್ಯಕ್ತಪಡಿಸುವವರು ಹೆಚ್ಚಿದ್ದಾರೆ. ಡ್ರೆಸ್, ಫ್ಯಾಷನ್(Fashion),ಬ್ಯೂಟಿ (Beauty)ಜೊತೆಗೆ ಧಾರ್ಮಿಕ ಹಚ್ಚೆ(Religious Tattoo)ಗಳನ್ನು ಹಾಕಿಸಿಕೊಳ್ಳುವುದರತ್ತ ಯುವಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಕೆಲ ಆಧ್ಯಾತ್ಮಿಕ ಸಲಹೆಗಳು ಮತ್ತು ಮುಂಜಾಗ್ರತಾ ಕ್ರಮಗಳ ಅಂಶಗಳಿವೆ. ಮನಸ್ಸಿಗೆ ಬಂದಂತೆ ಹಚ್ಚೆಗಳನ್ನ ದೇಹದ ಎಲ್ಲೆಂದರಲ್ಲಿ ಹಾಕಿಸಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ.

ಈಗ ಟ್ಯಾಟೂ(Tattoo) ಫ್ಯಾಷನ್ ಅಷ್ಟೇ ಅಲ್ಲದೇ ಜನರ ನಂಬಿಕೆ ಮತ್ತು ಆಧ್ಯಾತ್ಮಿಕತೆಯ(Spirituality) ಪ್ರತಿಬಿಂಬವಾಗಿ ಮಾರ್ಪಟ್ಟಿವೆ. ದೇವರ ಚಿತ್ರಗಳು, ಮಂತ್ರಗಳು ಮತ್ತು ಇತರ ಧಾರ್ಮಿಕ ಚಿಹ್ನೆಗಳ ಹಚ್ಚೆಗಳನ್ನು ಹಾಕಿಸಿಕೊಳ್ಳುವ ಪ್ರವೃತ್ತಿ ಯುವಕರಲ್ಲಿ ವೇಗವಾಗಿ ಬೆಳೆಯುತ್ತಿದೆ. ಈ ಹಚ್ಚೆಗಳು ದೇಹದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ, ವ್ಯಕ್ತಿಯಲ್ಲಿ ಆತ್ಮ ವಿಶ್ವಾಸ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದರೆ, ಈ ಹಚ್ಚೆಗಳನ್ನು ಸರಿಯಾದ ಸ್ಥಳದಲ್ಲಿ ಹಾಕಿಸಿಕೊಳ್ಳದಿದ್ದರೆ ಅವು ನಕಾರಾತ್ಮಕ ಪರಿಣಾಮ ಬೀರುತ್ತವೆ.

ಹಿಂದೂ ಧರ್ಮದಲ್ಲಿ ದೇವರನ್ನು ಅತ್ಯಂತ ಪವಿತ್ರತೆ ಮತ್ತು ಶ್ರದ್ಧೆಯಿಂದ ಪೂಜಿಸಲಾಗುತ್ತದೆ. ದೇವರ ವಿಗ್ರಹ, ಫೋಟೋ, ನಾಮ ಅಥವಾ ಚಿಹ್ನೆಯನ್ನು ಮನೆಯಲ್ಲಿ ದೇವರ ಕೋಣೆಗಳಲ್ಲಿ ಶ್ರದ್ಧೆಯಿಂದ ಇಡುತ್ತಾರೆ. ಇದೇ ರೀತಿ ದೇವರ ಚಿತ್ರವನ್ನು ಶರೀರದಲ್ಲಿ ಟ್ಯಾಟೂ ರೂಪದಲ್ಲಿ ಹಾಕಿಸಿಕೊಳ್ಳುವುದು ದೇವರ ಮೇಲಿನ ಪ್ರೀತಿ ಮತ್ತು ಶ್ರದ್ಧೆಯ ಭಾಗವೇ ಆಗಬಹುದು. ಆದರೆ ಜ್ಯೋತಿಶಿಗಳು ಪಂಡಿತರು, ಮತ್ತು ಕೆಲ ಧಾರ್ಮಿಕ ಗುರುಗಳು ಶರೀರದ ಎಲ್ಲ ಭಾಗಗಳು ದೇವರ ಚಿತ್ರ ಹಾಕಿಸಲು ಯೋಗ್ಯವಲ್ಲ ಇದರಿಂದ ವ್ಯಕ್ತಿಯ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರಬಹುದು ಎಂದು ಹೇಳುತ್ತಾರೆ.

ನೀವೆನಾದ್ರೂ ದೇವರ ಚಿತ್ರಗಳು ಅಥವಾ ಮಂತ್ರಗಳಂತಹ ಧಾರ್ಮಿಕ ಹಚ್ಚೆಗಳನ್ನ ಹಚ್ಚೆ(Tattoo) ಹಾಕಿಕೊಳ್ಳಲು ಬಯಸಿದರೆ ಅವುಗಳ ಆಕಾರ ಮತ್ತು ಅಕ್ಷರಗಳು ಸ್ಪಷ್ಟವಾಗಿರಬೇಕು. ತಪ್ಪಾದ ಆಕಾರ ಅಥವಾ ತಪ್ಪಾಗಿ ಬರೆದ ಮಂತ್ರಗಳು ಕೆಟ್ಟ ಪರಿಣಾಮಗಳನ್ನು ಉಂಟು ಮಾಡಬಹುದು. ಕೆಲವರು ಹಚ್ಚೆ ಹಾಕಿಕೊಳ್ಳುವ ಸಮಯದಲ್ಲಿ ಫ್ಯಾಷನ್‌ಗೆ ತಕ್ಕಂತೆ ಮಂತ್ರಗಳ ಅಕ್ಷರಗಳನ್ನ ಹಾಕಿಸಿಕೊಳ್ಳುತ್ತಾರೆ.ಇದರಿಂದ ಹೆಚ್ಚು ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಈ ಹಚ್ಚೆಗಳನ್ನು ಹಾಕಿಸಿಕೊಳ್ಳದೇ ಇರುವುದು ಉತ್ತಮ.

ದೇವರ ಹಚ್ಚೆ ಹಾಕಿಕೊಳ್ಳುವ ಸಮಯದಲ್ಲಿ ಯಾವ ಅಕ್ಷರ ಮತ್ತು ದೇವರ ಆಕಾರವನ್ನ ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದರ ಜೊತೆಗೆ ದೇಹದ ಯಾವ ಭಾಗದಲ್ಲಿ ಹಾಕಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ.ಹಚ್ಚೆ ಹಾಕಿಕೊಳ್ಳುವ ಸಮಯದಲ್ಲಿ ದೇಹದ ಸರಿಯಾದ ಭಾಗವನ್ನು ಆರಿಸಿ. ದೇಹದ ಬಲ ಭಾಗದಲ್ಲಿ ಧಾರ್ಮಿಕ ಹಚ್ಚೆ ಹಾಕಿಸಿಕೊಳ್ಳುವುದು ಉತ್ತಮ. ಯಾಕೆಂದರೆ ಬಲ ಸಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ ಬಲ ಭಾಗವನ್ನು ಶುದ್ಧ ಮತ್ತು ಶಕ್ತಿಯುತವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯಲ್ಲಿ ಆತ್ಮ ವಿಶ್ವಾಸ ಮತ್ತು ಜೀವನದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ನೀವು ಯಾವ ಭಾಗದಲ್ಲಿ ಹಚ್ಚೆ(Tattoo) ಹಾಕಿಸಿಕೊಂಡಿದ್ದೇರೋ ಆ ಭಾಗದಲ್ಲಿ ಯಾವಾಗಲೂ ಸ್ವಚ್ಛವಾಗಿಡಬೇಕು.

ಧಾರ್ಮಿಕ ಹಚ್ಚೆಗಳ ಹಾಕಿಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚುತ್ತದೆ. ಆಧ್ಯಾತ್ಮಿಕತೆ ಮತ್ತು ನಂಬಿಕೆಯೊಂದಿಗೆ ಮನಸ್ಸಿಗೆ ಶಾಂತಿ ಹಾಗೂ ಸ್ಥಿರತೆಯನ್ನು ಈ ಹಚ್ಚೆಗಳು ನೀಡುತ್ತವೆ. ಆದರೆ, ಹಚ್ಚೆ ಹಾಕಿಸಿಕೊಳ್ಳುವಾಗ ವಿನ್ಯಾಸ ತಪ್ಪಾಗಿದ್ದರೆ ಅಥವಾ ದೇಹದ ತಪ್ಪು ಭಾಗದಲ್ಲಿ ಹಾಕಿಸಿಕೊಂಡಿದ್ದರೆ ಇದು ಕೆಟ್ಟ ಪರಿಣಾಮಗಳನ್ನು ಜೀವನದ ಮೇಲೆ ಉಂಟು ಮಾಡಬಹುದು. ಉದಾಹರಣೆಗೆ, ಇದು ಮಾನಸಿಕ ಅಶಾಂತಿ(Mental Unrest),ಕೆಲಸದಲ್ಲಿ ಹಿನ್ನಡೆ ಈ ರೀತಿಯಾಗಿ ಜೀವನದಲ್ಲಿ ಅಡೆತಡೆಗಳನ್ನು ಉಂಟಾಗಬಹುದು. ಆದ್ದರಿಂದ, ಧಾರ್ಮಿಕ ಹಚ್ಚೆ(Religious Tattoo) ಹಾಕಿಸಿಕೊಳ್ಳುವಾಗ ಸರಿಯಾದ ವಿನ್ಯಾಸ(Design), ಸರಿಯಾದ ಸ್ಥಳ ಮತ್ತು ಶುದ್ಧತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

ಟ್ಯಾಟೂ ಮಾಡುವಲ್ಲಿ ಚರ್ಮಕ್ಕೆ ಕೆಲವು ಕೆಮಿಕಲ್‌ ವಸ್ತುಗಳನ್ನು ಉಪಯೋಗಿಸುತ್ತಾರೆ. ಚರ್ಮದ ಅಲರ್ಜಿ(Allergy), ಇನ್‌ಫೆಕ್ಷನ್(Infection) ಅಥವಾ ಇಮ್ಯುನಿಟಿಗೆ ಪರಿಣಾಮ ಬೀರಬಹುದು. ಆದ್ದರಿಂದ ಯಾವುದೇ ಟ್ಯಾಟೂ ಹಾಕುವ ಮುನ್ನ ಆರೋಗ್ಯದ ದೃಷ್ಟಿಕೋನದಿಂದ ಗಮನ ಹರಿಸುವುದು ಉತ್ತಮ.