ಪ್ರಿಯ ಮಗನೇ, ವೈವಾಹಿಕ ಜೀವನದಲ್ಲಿ ನಾನು ಮಾಡಿದ ತಪ್ಪನ್ನು ನೀನು ಪುನರಾವರ್ತಿಸಬೇಡ...

ಮಗನ ವಿವಾಹ ಅಂದ್ರೆ ತಂದೆಯ ಸಡಗರ ಹೇಳತೀರದ್ದೇ. ಆದರೆ, ಇಲ್ಲೊಬ್ಬ ತಂದೆ ಕೇವಲ ಸಡಗರ ಹಂಚಿಕೊಳ್ಳುವುದಷ್ಟೇ ಅಲ್ಲ, ವೈವಾಹಿಕ ಜೀವನದಲ್ಲಿ ತಾವು ಮಾಡಿದ ತಪ್ಪುಗಳನ್ನು, ಕಲಿತ ಪಾಠಗಳನ್ನು ಮಗನಿಗೆ ಹೇಳುತ್ತಿದ್ದಾರೆ. ಆ ಮೂಲಕ ತಾನು ಮಾಡಿದ ತಪ್ಪು ಮಗ ಮಾಡದೆ ಜೋಡಿಯು ಸುಖವಾಗಿರಲಿ ಎಂಬ ಆಶಯ ಅಪ್ಪನದ್ದು. 

A letter from a father to his son about relationship

ಪ್ರೀತಿಯ ಮಗನೇ,
ನೀನು ಮೆಚ್ಚಿದ ಹುಡುಗಿಯೊಡನೆಯೇ ನಿನ್ನ ವಿವಾಹ ಗೊತ್ತು ಮಾಡಿದ್ದೇನೆ. ಇನ್ನೇನು ಕೆಲವೇ ದಿನಗಳಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದೀಯೇ. ಶುಭಾಶಯಗಳು. ಆದರೆ ಇದಕ್ಕೂ ಮುನ್ನ ನಾನು ನಿನಗೆ ಕೆಲ ವಿಷಯಗಳನ್ನು ಹೇಳಬೇಕಿದೆ. ಏಕೆಂದರೆ, ಅಪ್ಪ ಮಾಡಿದ ತಪ್ಪನ್ನು ಮಗ ಪುನರಾವರ್ತಿಸಬಾರದಲ್ಲವೇ? 

ಸೆಲ್ಫೀ ಕೇಳಿದ ಸಾತ್ವಿಕ್ ಹೆಗಡೆಗೆ ಧೈರ್ಯ ಬಂದಿದ್ದೆಲ್ಲಿಂದ?

ಹೌದು, ವೈವಾಹಿಕ ಜೀವನದಲ್ಲಿ ನಾನು ಕೆಲವೊಂದಿಷ್ಟು ತಪ್ಪುಗಳನ್ನು ಮಾಡಿದ್ದೇನೆ, ಅದರಿಂದ ಪಾಠ ಕಲಿತು ತಿದ್ದಿಕೊಂಡಿದ್ದೇನೆ ಕೂಡಾ. ಏನು? ನೀನು ಹೀರೋ ಎಂದುಕೊಂಡಂಥ ಅಪ್ಪ ತಪ್ಪು ಮಾಡಲು ಸಾಧ್ಯವೇ ಎಂದು ನಿನಗೆ ಆಶ್ಚರ್ಯವಾಗಬಹುದು. ಆದರೆ, ಅನುಭವಗಳು ತಾನೇ ನಮ್ಮನ್ನು ಪಳಗಿಸುವುದು... 

ನಾವು ಮದುವೆಯಾಗುವಾಗ ನಾನಿನ್ನೂ ಬಹಳ ಯಂಗ್ ಆಗಿದ್ದೆ ಹಾಗೂ ನಿನ್ನಮ್ಮನನ್ನು ಜೀವಕ್ಕಿಂತಾ ಹೆಚ್ಚು ಪ್ರೀತಿಸುತ್ತಿದ್ದೆ... ಜೀವನದ ಈ ಸುಂದರ ಜಂಟಿ ಪಯಣವನ್ನು ಆರಂಭಿಸುವಾಗ ಪ್ರೀತಿಯೊಂದಿದ್ದರೆ ಸಾಕು, ಬದುಕಿನಲ್ಲಿ ಬರುವ ಎಲ್ಲ ಅಡೆತಡೆಗಳನ್ನು ಸುಲಭವಾಗಿ ಮೀರಿಬಿಡಬಹುದು ಎಂಬ ನಂಬಿಕೆಯಲ್ಲೇ ಇಬ್ಬರೂ ಇದ್ದೆವು.

ಆದರೆ, ಈ ಅಡೆತಡೆಗಳು ಪರ್ವತದಷ್ಟು ಎತ್ತರವೂ, ಕಠಿಣವೂ ಆಗಿರಬಹುದೆಂಬ ಸಣ್ಣ ಕಲ್ಪನೆ ಕೂಡಾ ನಮಗಿರಲಿಲ್ಲ. ನಾವು ಮಾತ್ರವಲ್ಲ, ಬಹುತೇಕರಿಗೆ ಈ ಕಲ್ಪನೆ ಇರುವುದಿಲ್ಲ. ಕೆಲವೊಮ್ಮೆ ಎಂಥೆಂಥ ಸನ್ನಿವೇಶಗಳು ಸೃಷ್ಟಿಯಾಗುತ್ತವೆಂದರೆ, ಈ ವಿವಾಹವೆಂಬ ಬಂಧನದ ಮೇಲೇ ಅನುಮಾನ ಹುಟ್ಟಿಕೊಳ್ಳುತ್ತದೆ. ಆದರೆ, ನಾವು ಅದಕ್ಕೆ ಬಗ್ಗಲಿಲ್ಲ. ನಮ್ಮ ಇಂಥ ಕೆಟ್ಟ ಭಯಗಳನ್ನೆಲ್ಲ ದಾಟಿ, ಸಬಲತೆಯನ್ನು ಹಿಗ್ಗಿಸಿಕೊಳ್ಳುತ್ತಾ ಮುನ್ನಡೆದೆವು. ನನ್ನ ತಪ್ಪುಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ. ಇತ್ತು ನಾನು ನಿನ್ನಮ್ಮನಿಗೆ ಉತ್ತಮ ಪತಿಯಾಗಿದ್ದೇನೆಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ಅಷ್ಟೇ ಅಲ್ಲ,ವ್ಯಕ್ತಿಗತವಾಗಿಯೂ ಬಹಳಷ್ಟು ಸುಧಾರಿಸಿದ್ದೇನೆ. ವ್ಯಕ್ತಿತ್ವದ ಬೆಳವಣಿಗೆ ನಿರಂತರ ಎಂಬುದನ್ನು ಅರಿತಿದ್ದೇನೆ.

ಕ್ಷಮೆ ಹಾಗೂ ಮರೆವು

ಹಳೆ ಲವರ್ ನೆನಪುಗಳಿಂದ ಹೊರಬರೋಕೆ ಇಲ್ಲಿದೆ ಸುಲಭ ಟ್ರಿಕ್ಸ್!

ನಮ್ಮ ಮದುವೆಯ ಮೊದಲ ವರ್ಷ ಬಹಳಷ್ಟು ಕಷ್ಟದಾಯಕವಾಗಿತ್ತು. ಇಬ್ಬರಿಗೂ ಬಹಳ ವರ್ಷಗಳಿಂದ ಪರಿಚಯವಿದ್ದರೂ ಒಟ್ಟಿಗೇ ಇರಲಾರಂಭಿಸಿದ ಮೇಲೆ ಹಲವಾರು ವಿಷಯಕ್ಕೆ ಜಗಳವಾಗುತ್ತಿತ್ತು. ನನಗೆ ಒಪ್ಪಿಗೆಯಾಗಿದ್ದು ಅವಳಿಗಾಗಲ್ಲ, ಅವಳಿಗೆ ಇಷ್ಟವಾಗಿದ್ದು ನನಗಾಗಲ್ಲ ಇತ್ಯಾದಿ. ಇಂಥ ಕೆಲವು ವಾದ, ಜಗಳಗಳು ಲವರ್‌ಗಳ ನಡುವೆ ಇರುವಂಥವೇ ಎಂದು ಬಿಡಬಹುದಾದರೂ ಮತ್ತೆ ಕೆಲವು ನಾವು ಒಟ್ಟಿಗೇ ಇರಲು ಬಯಸಿ ಮದುವೆಯಾಗಿ ತಪ್ಪು ಮಾಡಿದೆವೇನೋ ಎಂದು ಯೋಚಿಸುವಷ್ಟು ದೊಡ್ಡದಾಗುತ್ತಿತ್ತು. ಇದರಿಂದ ಹಲವಾರು ದಿನಗಳ ಕಾಲ ಇಬ್ಬರೂ ಮಾತು ಬಿಟ್ಟುಕೊಂಡು, ಸಿಟ್ಟು ಮಾಡಿಕೊಂಡು, ಒಳಗೊಳಗೇ ಕೊರಗುತ್ತಾ ಕಳೆಯುತ್ತಿದ್ದೆವು. ಕೆಲವೊಮ್ಮೆ ಎಲ್ಲ ವಿಷಯಗಳಿಗೂ ಹಳೆಯ ಜಗಳಗಳನ್ನು ತಂದು ಎಳೆದಾಡಿದ್ದೂ ಇದೆ. ಆದರೆ, ನಿಧಾನವಾಗಿ ನಾನು ಕ್ಷಮೆಗಿರುವ ಶಕ್ತಿಯನ್ನು ಕಂಡುಕೊಂಡೆ. ಅಯ್ಯೋ ಮುಂಚೆಯೇ ಈ ವಿಷಯ ತಿಳಿದಿರಬಾರದಿತ್ತೇ ಎಂದುಕೊಂಡೆ. ಯಾವುದೇ ತಪ್ಪನ್ನೂ ಎಳೆದಾಡದೆ ಒಮ್ಮೆ ಹೇಳಿ ಕ್ಷಮಿಸಿ ಅಲ್ಲಿಯೇ ಮರೆತುಬಿಟ್ಟರೆ ಮತ್ತೆ ಇಬ್ಬರೂ ಅದಕ್ಕಾಗಿ ಕೊರಗುತ್ತಾ ಕಳೆವ ಅಗತ್ಯವೇ ಇರುವುದಿಲ್ಲ. ಮಗನೇ, ಎಲ್ಲ ಜೋಡಿಗಳೂ ಜಗಳವಾಡುತ್ತಾರೆ. ಆದರೆ, ಆ ಜಗಳ ನೀವು ವಿವಾಹವಾಗಲು ತೆಗೆದುಕೊಂಡ ನಿರ್ಧಾರವನ್ನೇ ಅನುಮಾನಿಸುವಂತಿರಬಾರದು. 

ಅಮ್ಮ ವರ್ಸಸ್ ಹೆಂಡತಿ

ಬಹುತೇಕ ಗಂಡಸರು ಫೇಸ್ ಮಾಡಬೇಕಾಗುವ ವಿವಾಹದ ಅತಿ ಕೆಟ್ಟ ಮುಖವಿದು. ತಾಯಿ ಮಗನನ್ನು ಹೇಗೆ ಪ್ರೀತಿಸುತ್ತಾಳೋ, ಪತ್ನಿಯೂ ಅಷ್ಟೇ ಪ್ರೀತಿಸಬಲ್ಲಳು. ಆದರೆ, ಅವರಿಬ್ಬರ ನಡುವೆ ಜಗಳ ಕದನ ಆರಂಭವಾದಾಗ ಮಾತ್ರ ಮಗ ಬಡವಾಗಬೇಕಾಗುತ್ತದೆ. ಇಬ್ಬರೂ ಜಗಳಾಡಿಕೊಂಡು ನಿನ್ನಲ್ಲಿ ದೂರು ಹೇಳುತ್ತಾ ನ್ಯಾಯ ಕೇಳಿಕೊಂಡು ಬರಬಹುದು. ಆಗ, ಇಬ್ಬರನ್ನೂ ಸಮಾಧಾನಿಸಿ ನೀವು ಒಳ್ಳೆಯ ಮಗ ಹಾಗೂ ಒಳ್ಳೆಯ ಪತಿಯಾಗಿ ಏಕಕಾಲದಲ್ಲಿ ಇರಬಲ್ಲಿರಿ ಎಂಬುದನ್ನು ಸಾಬೀತುಪಡಿಸಿಬೇಕಾಗುತ್ತದೆ. ನಾನು ನನ್ನ ತಾಯಿಯ ಪರ ವಹಿಸಿ ತಪ್ಪು ಮಾಡುತ್ತಿದ್ದೆ. ಆದರೆ, ಬಹುಬೇಗ ನನ್ನ ತಪ್ಪನ್ನರಿತು, ಬ್ಯಾಲೆನ್ಸ್ ಮಾಡಲು ಕಲಿತೆ. 

ಪತ್ನಿಗಿಂತ ಆಕೆ ಮಹಿಳೆ ಎಂಬುದು ನೆನಪಿಡು

ನಿಮ್ಮ ಗರ್ಲ್‌ಫ್ರೆಂಡ್ ನಿಮ್ಮಿಂದ ಬಯಸುವುದೇನು ಗೊತ್ತಾ ?

ಆಕೆ ಕೇವಲ ನಿನ್ನ ಪತ್ನಿಯಲ್ಲ, ಆಕೆಗೆ ಹಲವು ಪಾತ್ರಗಳಿವೆ- ತಾಯಿಯಾಗಿ, ಮಗಳಾಗಿ, ತಂಗಿಯಾಗಿ, ಗೆಳತಿಯಾಗಿ... ನಿನ್ನ ಹಾಗೆಯೇ ಆಕೆಗೂ ಹಲವಾರು ಜವಾಬ್ದಾರಿಗಳಿರುತ್ತವೆ. ಆಕೆಯ ಕೆಲಸಗಳನ್ನು ಮಾಡಲು ನಿನ್ನ ಅಗತ್ಯವಿರುತ್ತದೋ ಇಲ್ಲವೋ, ಆದರೆ, ಆಕೆ ಪತ್ನಿಯ ಜವಾಬ್ದಾರಿ ನಿರ್ವಹಿಸುವ ಸಲುವಾಗಿ ಉಳಿದ ಪಾತ್ರಗಳಿಗೆ ಸಮಯ ನೀಡಲಾಗದಂತಾದರೆ, ಅದನ್ನು ಸರಿಪಡಿಸುವುದು ಪತಿಯಾಗಿ ನಿನ್ನ ಜವಾಬ್ದಾರಿ. ನಾನು ಈ ವಿಷಯದಲ್ಲಿ ಸೋತುಬಿಟ್ಟಿದ್ದೆ ಎನ್ನಲು ಸ್ವಲ್ಪ ಮುಜುಗರವಾಗುತ್ತದೆ.

ಮನೆಕೆಲಸ ಹಂಚಿಕೆ

ನಿಮ್ಮ ಅಜ್ಜಿ ಯಾವಾಗಲೂ, ಗಂಡಸರು ದುಡಿದು ತಂದು ಹಾಕಬೇಕು, ಹೆಂಗಸರು ಅಡುಗೆ ಮಾಡಿ ಹಾಕಬೇಕು ಎನ್ನುತ್ತಿದ್ದಳು. ನಾನು ಅದನ್ನೇ ನಂಬಿ ಬೆಳೆದೆ. ಮದುವೆಯಾದ ಬಳಿಕ ಅಡುಗೆಮನೆ, ಇತರೆ ಮನೆಗೆಲಸ, ಮಕ್ಕಳನ್ನು ನೋಡಿಕೊಳ್ಳುವುದು ಇವೆಲ್ಲವೂ ನಿನ್ನ ಅಮ್ಮನ ಜವಾಬ್ದಾರಿ ಎಂದುಕೊಂಡು ನನ್ನ ಪಾಡಿಗೆ ನಾನು ಆರಾಮಾಗಿದ್ದೆ. ಆಕೆ ಟೀಚರ್ ಆಗಿದ್ದಳು. ಒದ್ದಾಡಿಕೊಂಡು ಎಲ್ಲವನ್ನೂ ಬ್ಯಾಲೆನ್ಸ್ ಮಾಡುವಲ್ಲೇ ಆಕೆಯ ಜೀವನ ಕಳೆದುಹೋಯಿತು. ನನಗೇನಾದರೂ ಮತ್ತೊಮ್ಮೆ ಮದುವೆಯನ್ನು ಆರಂಭದಿಂದ ಶುರು ಮಾಡುವ ಅವಕಾಶ ಸಿಕ್ಕರೆ, ಮನೆಕೆಲಸವೆಲ್ಲವನ್ನೂ ನಿನ್ನ ತಾಯೊಬ್ಬಳೇ ಮಾಡಲು ಖಂಡಿತಾ ಬಿಡುವುದಿಲ್ಲ.

ಕೆಲಸ ಬಿಡೋಕೆ ಹೇಳ್ಬೇಡ

ನೀನು ಹುಟ್ಟಿದಾಗ ನಮ್ಮ ಖುಷಿ ಹೇಳಲಸಾಧ್ಯ. ನಿನ್ನೊಂದಿಗೆ ಪೋಷಕರಾಗಿ ನಾವು ಬೆಳೆದೆವು. ಆದರೆ, ನಿನ್ನ ಮೊದಲ ಹೆಜ್ಜೆಗಳನ್ನು ಮಿಸ್ ಮಾಡಿಕೊಂಡಿದ್ದಕ್ಕಾಗಿ ನಾನೀಗ ಪಶ್ಚಾತ್ತಾಪ ಪಡುತ್ತಿದ್ದೇನೆ. ನೀನು ಸೈಕಲ್ ಕಲಿಯುವ ಆರಂಭದಲ್ಲಿ ಭಯ ಪಡುವಾಗ ನಿನ್ನ ಪಕ್ಕ ಯಾರಾದರೂ ಧೈರ್ಯಕ್ಕೆ ಓಡಿ ಬರಬೇಕಿತ್ತು. ಆದರೆ, ಇದಕ್ಕಾಗಿ ನನ್ನ ಸಂತೋಷಗಳನ್ನು, ಕೆಲಸಗಳನ್ನು ಹೊಂದಾಣಿಕೆ ಮಾಡಿಕೊಳ್ಳಲು ನಾನು ತಯಾರಿರಲಿಲ್ಲ. ಬದಲಿಗೆ, ನಿನ್ನ ತಾಯಿಗೆ ಮಗುವನ್ನು ನೋಡಿಕೊಳ್ಳಲು ಕೆಲಸ ಬಿಡೆಂದು ಹೇಳಿದೆ. ಮಗುವಾಗಿದ್ದಕ್ಕೆ, ಮದುವೆಯಾಗಿದ್ದಕ್ಕೆ ನನ್ನ ಬದುಕೇನು ಹೆಚ್ಚು ಬದಲಾವಣೆಗಳನ್ನು ಕಾಣಲಿಲ್ಲ. ಆಕೆ ತನ್ನ ಪೋಷಕರನ್ನು ಬಿಟ್ಟು ಬರಬೇಕಾಗಿತ್ತಲ್ಲದೆ, ಈಗ ಕೆಲಸವನ್ನೂ ಬಿಡಬೇಕಾಯಿತು. ಮಗುವನ್ನು ನೋಡಿಕೊಳ್ಳುವುದು ಕೇವಲ ತಾಯಿಯ ಕೆಲಸ ಎಂದುಕೊಂಡ ನನ್ನ ಪುರುಷ ಅಹಂಕಾರವನ್ನು ಇಂದು ಹಳಿದುಕೊಳ್ಳುತ್ತಿದ್ದೇನೆ. 

ಮಹಿಳೆಯರಿಗೆ ಬೀಳೋ ಸೆಕ್ಸೀ ಕನಸಿಗೆ ಇದ್ಯಾ ಅರ್ಥ?

ಪತ್ನಿಗೆ ಸ್ವಾತಂತ್ರ್ಯ ಬೇಕು

ನಾನು ಪತ್ನಿಗೆ ಕೆಲಸ ಬಿಡಲು ಹೇಳಿ ತಪ್ಪು ಮಾಡಿದೆ. ಆದರೆ, ಪ್ರತಿಯೊಬ್ಬ ಮಹಿಳೆಯೂ ಆರ್ಥಿಕವಾಗಿ ಸ್ವಾತಂತ್ರ್ಯ ಹೊಂದಿದ್ದಾಗಲಷ್ಟೇ ಆಕೆ ಉಳಿದೆಲ್ಲ ಸ್ವಾತಂತ್ರ್ಯಗಳನ್ನು ನಿರ್ಭಿಡೆಯಿಂದ ಅನುಭವಿಸಬಲ್ಲಳು. ಹೀಗಾಗಿ, ನಿನ್ನ ಪತ್ನಿಗೆ ಆರ್ಥಿಕವಾಗಿ ಸ್ವತಂತ್ರವಾಗಿರಲು ಪ್ರೇರೇಪಿಸು. ಇದರಿಂದ ಯಾವ ರೀತಿಯ ಅವಲಂಬನೆಯೂ ಇರದೆ ನಿನಗೆ ಸರಿಸಮಳಾಗಿ ಗೆಳತಿಯಾಗಿ ಆಕೆ ಇರಬಲ್ಲಳು. 

ನಿನ್ನ ಅಮ್ಮನಿಗೆ ಕಳೆದುಕೊಂಡದ್ದೆನ್ನಲ್ಲ ಮರಳಿಸುವ ಶಕ್ತಿ ನನಗಿಲ್ಲ... ಹಾಗಾಗಿಯೇ ನಾನು ಮಾಡಿದ ತಪ್ಪುಗಳನ್ನೇ ನೀನು ಮಾಡಬೇಡ ಎಂದಿದ್ದು. ಜಂಟಿ ಜೀವನದಲ್ಲಿ ಜಂಟಿಯಾಗಿ ಬೆಳವಣಿಗೆ ಸುಖಸಂತೋಷ ಕಾಣಬೇಕೇ ಹೊರತು ಸ್ವಾರ್ಥಿಯಾದರೆ ಮತ್ತೊಬ್ಬರು ನೋವುದುಃಖ ಅನುಭವಿಸುತ್ತಾ ಜೀವನ ಸವೆಸುತ್ತಾರೆ. ನಮ್ಮನ್ನು ನಂಬಿ ಬಂದವರ ನೋವು ಕಷ್ಟಗಳೆಲ್ಲವೂ ನಮ್ಮದೇ ಅಲ್ಲವೇ? ಅಷ್ಟನ್ನು ಅರ್ಥ ಮಾಡಿಕೊಂಡರೆ ಸಾಕು. ನೀನು ಉತ್ತಮ ಪತಿಯೊಂದಿಗೆ, ಉತ್ತಮ ತಂದೆ, ಅತ್ಯುತ್ತಮ ವ್ಯಕ್ತಿಯಾಗಬಲ್ಲೆ. 

Latest Videos
Follow Us:
Download App:
  • android
  • ios