ಈ ಅಭ್ಯಾಸ ದಾಂಪತ್ಯಕ್ಕೆ ತರುತ್ತೆ ಕುತ್ತು!

First Published 10, Nov 2018, 3:14 PM IST
things to avoid in bed to have good sex life
Highlights

ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಷಯಗಳಿಗೂ ದೊಡ್ಡ ಜಗಳವಾಗುತ್ತವೆ. ಆದರೆ, ಇದರ ಹಿಂದೊಂದು ದೊಡ್ಡ ಕಾರಣವಿರುತ್ತದೆ. ಆ ಕಾರಣವನ್ನು ಸರಿ ಮಾಡಿಕೊಂಡರೆ, ಹಾಲು ಜೇನಿನಂತೆ ದಾಂಪತ್ಯವೂ ಸುಖವಾಗಿರುತ್ತದೆ. ಏನವು?

'ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ' ಅಂತಾರೆ. ಆದರೆ ಮಲಗುವ ಕೋಣೆಯಲ್ಲೇ ನೆಗಟಿವ್ ಶಕ್ತಿ ಕೊಡುವ ಅಭ್ಯಾಸಗಳಿದ್ದರೆ ಮನಸ್ತಾಪ ತಪ್ಪಿದ್ದಲ್ಲ.  ಹಾಗಾದರೆ ಅವನ್ನು ಬಿಟ್ಟು ಬಿಡೋದು ಒಳಿತು...

  • ಮಲಗುವಾಗ ಯಾವುದೇ ಕೆಲಸವಿದ್ದರೂ ಪಕ್ಕಕ್ಕಿಟ್ಟು, ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಇಲ್ಲವಾದರೆ ಸಂಬಂಧದಲ್ಲಿ ಮನಸ್ತಾಪ ಮೂಡುತ್ತದೆ. ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ಕೆಲಸಗಳಿಂದಲೇ ದಾಂಪತ್ಯದಲ್ಲಿ ವಿರಸ ಹುಟ್ಟಿಕೊಳ್ಳುತ್ತದೆ. 
  • ಮಲಗುವ ಮುನ್ನ ಎಲ್ಲಾ ತುರ್ತು ಕೆಲಸವನ್ನೂ ಜ್ಞಾಪಕ ಮಾಡಿಕೊಳ್ಳುತ್ತೇವೆ. ಅದು ಇದು ಕಾರ್ಯವನ್ನೂ ಬಿಟ್ಟರೂ ಹೆಚ್ಚು ಟೆನ್ಷನ್ ಆಗ್ಬೇಡಿ. ಅದಕ್ಕೇ ವಿನಾಕಾರಣ ಸಂಗಾತಿಯೊಡನೆ ಬೇಡ ಜಗಳ. ಸಿಗೋ ಟೈಮನ್ನು ಎಂಜಾನ್ ಮಾಡಿ. ಇಲ್ಲ ಸಲ್ಲದ ಆರೋಪ, ಪ್ರತ್ಯಾರೋಪಗಳು ಬೇಡ. 
  • ಕೆಲವರಿಗೆ ಹಾಸಿಗೆ ಮೇಲೆ ಗೊಂಬೆಯೊಂದಿಗೋ, ಸಾಕು ಪ್ರಾಣಿಯೊಂದಿಗೋ ಮಲಗುವ ಅಭ್ಯಾಸವಿರುತ್ತದೆ. ಇದು ನಿಮ್ಮ ಸಂಗಾತಿಗೆ ಇಷ್ಟವೊ, ಇಲ್ಲವೊ ತಿಳಿದುಕೊಳ್ಳಿ. ಇದರಿಂದಲೇ ದಾಂಪತ್ಯ ದಂ ಕಳೆದುಕೊಳ್ಳುತ್ತದೆ. ಶಿವ ಪೂಜೆಯಲ್ಲಿ ಕರಡಿಗೆ ಬಿಟ್ಹಂಕೆ ಎನ್ನೋ ಹಾಗೆ ಸಂಗಾತಿಗೆ ನೀಡೋ ಸಮಯವನ್ನು ಸಂಪೂರ್ಣವಾಗಿ ಅವರಿಗೇ ಮೀಸಲಿಡಿ. ಸಾಕು ಪ್ರಾಣಿಯೊಂದಿಗಿರುವ ಸಮಯ ಅದಕ್ಕಿರಲಿ.
  • ಮಲಗೋ ಮುನ್ನ ಟಿವಿ ಬೇಡ. ಏಕೆಂದರೆ ಇದು ಇಬ್ಬರ ಮನಸ್ಸನ್ನು ಬದಲಾಯಿಸುತ್ತದೆ. ನೋಡುತ್ತಲೇ ಇಬ್ಬರು ಮಲಗಿದರೆ, ಮನಸ್ಸೂ ಕೆಡುತ್ತದೆ. ಮಾರನೇ ದಿನವೂ ಕೆಟ್ಟ ಮೂಡ್ ಕ್ಯಾರಿ ಓವರ್ ಆಗುತ್ತೆ. 
  • ಒಳ್ಳೆ ಮನಸ್ಸಿನಿಂದ, ಒಳ್ಳ ಮಾತುಗಳೊಂದಿಗೆ ನಿದ್ರಿಸಿದರೆ, ಸುಖ ನಿದ್ರೆಯೂ ನಿಮ್ಮದಾಗುತ್ತದೆ. ನೆಮ್ಮದಿಯೂ ನಿಮ್ಮನ್ನು ಕಾಪಾಡುತ್ತದೆ. 
loader