ಎಲ್ಲ ಹುಡುಗರಿಗೂ ಈ ಒಂದು ಪ್ರಶ್ನೆ ಕಾಡುತ್ತದೆ. ತನಗೆ ಸರಿಯಾದ ಹುಡುಗಿ ಇವಳೇ ಎಂದು ತಿಳಿದುಕೊಳ್ಳೋದು ಹೇಗೆ? ಅಂಥ ಸರಿಯಾದ ಹುಡುಗಿಯನ್ನು ಹುಡುಕುವುದಾದರೂ ಹೇಗೆ ಎಂದು. ಇಷ್ಟಕ್ಕೂ ಸರಿಯಾದ ಹುಡುಗಿ ಎಂದರೇನು? ಒಬ್ಬೊಬ್ಬರದು ಒಂದೊಂದು ವ್ಯಾಖ್ಯಾನ ಇರುತ್ತದೆ. ಒಬ್ಬೊಬ್ಬರು ಒಬ್ಬೊಬ್ಬರ ಜೊತೆ ಮಾತ್ರ ಸರಿಯಾಗಿ ಕನೆಕ್ಟ್ ಆಗಲು ಸಾಧ್ಯ. ನಿಮ್ಮ ಫ್ರೀಕ್ವೆನ್ಸಿಗೆ ಮ್ಯಾಚ್ ಆಗುವ ಜೀವ ಸಿಕ್ಕಾಗ ಈ ಕೆಲವು ಸಂಗತಿಗಳು ಘಟಿಸುತ್ತವೆ. ನಿಮಗೆ ಯಾರದಾದರೂ ಬಳಿ ಹೀಗೆಲ್ಲ ಆಗುತ್ತಿದ್ದರೆ ನಿಮ್ಮ ಹುಡುಗಿ ಅವಳೇ ಎಂದು ಪಕ್ಕಾ ತಿಳಿದುಕೊಂಡು ಬಿಡಿ.

1. ವಿಶಿಷ್ಠ ಅನುಭವ ಹಂಚಿಕೊಳ್ಳುತ್ತೀರಿ.

ನಿಮ್ಮ ಹುಡುಗಿ ಮಾತ್ರ ನಿಮ್ಮೊಂದಿಗೆ ಕೆಲವೊಂದಿಷ್ಟು ವಿಶಿಷ್ಠ ಅನುಭವಗಳನ್ನು ವೈಯಕ್ತಿಕವಾಗಿ ಹಂಚಿಕೊಳ್ಳಬಲ್ಲಳು. ಅಂಥ ಅನುಭವಗಳು ಆಕೆ ಜೊತೆಗಿದ್ದರೆ ಮಾತ್ರ ವಿಶೇಷವೆನಿಸುತ್ತವೆ. ಅವಳೊಂದಿಗಿರುವಾಗ ನಿಮಗೆ ಇಗೋ ಅಡ್ಡ ಬರುವುದಿಲ್ಲ. 

2. ಒಬ್ಬರಿಂದೊಬ್ಬರು ಕಲಿಯುತ್ತೀರಿ

ನಿಮಗೆ ನಿಮ್ಮ ಬಗ್ಗೆಯೇ ತಿಳಿಯದ ವಿಷಯಗಳನ್ನು ಆಕೆ ತಿಳಿಸಿಕೊಡಬಲ್ಲಳು. ಜೀವನದ ಕಷ್ಟದ ಸಂದರ್ಭಗಳನ್ನು ಎದುರಿಸುವುದು ಹೇಗೆಂದು ಇಬ್ಬರೂ ಒಟ್ಟಿಗೆ ಕಲಿಯುತ್ತೀರಿ. ಆಕೆ ಜೊತೆಗಿದ್ದರೆ ಕಷ್ಟವನ್ನು ಸುಲಭವಾಗಿ ಜಯಿಸಬಲ್ಲೆ ಎನಿಸುತ್ತದೆ. ಅವಳು ನಿಮಗೆ ಹೇಳುವುದೆಲ್ಲವನ್ನೂ ಪೂರ್ತಿ ಗಮನವಿಟ್ಟು ಕೇಳುತ್ತೀರಿ. 

3. ನಂಬಿಕೆಯ ಬುನಾದಿ ಗಟ್ಟಿಯಾಗಿರುತ್ತದೆ

ಆಕೆಗೆ ನಿಮ್ಮ ಮೇಲೆ ಅಪಾರ ನಂಬಿಕೆ ಇರುತ್ತದೆ. ನೀವು ಏನೇ ಮಾಡಿದರೂ ನಿಮಗಿಂತ ಹೆಚ್ಚು ಆತ್ಮವಿಶ್ವಾಸ ಆಕೆಗಿರುತ್ತದೆ. ಒಂದು ವೇಳೆ ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯಿದ್ದರೆ, ಆಕೆ ಅದನ್ನು ತುಂಬಿಕೊಡುತ್ತಾಳೆ. ಇತರರು ಹೇಳಿದ ಮಾತೇ ಆಕೆಯ ಬಾಯಲ್ಲಿ ಬಂದಾಗ ವಿಶೇಷವೆನಿಸುತ್ತದೆ, ಅದು ನಿಮಗೆ ವಿಶೇಷ ಧೈರ್ಯ ನೀಡುತ್ತದೆ. ಸರಿಯಾದ ಹುಡುಗಿಯು ನಿಮ್ಮನ್ನು ಎಷ್ಟು ಗೌರವಿಸುತ್ತಾಳೆಂದರೆ ಆಕೆ ಸಂಪೂರ್ಣ ಪ್ರಾಮಾಣಿಕವಾಗಿ ನಿಮ್ಮೊಂದಿಗೆ ವರ್ತಿಸುತ್ತಾಳೆ. ಅಷ್ಟೇ ಅಲ್ಲ, ನಿಮ್ಮ ಕಡೆಯಿಂದಲೂ ಅದೇ ನಂಬಿಕೆ, ಪ್ರಾಮಾಣಿಕತೆ ಬಯಸುತ್ತಾಳೆ. 

ಮಾತಿಲ್ಲ, ಕಥೆಯಿಲ್ಲ ಬರೀ ಇಮೋಜಿಯಲ್ಲೇ ಆರಂಭ ಪ್ರೇಮ

4. ಯೋಚನೆಗಳು ಒಗ್ಗೂಡುತ್ತವೆ

ಕೆಲವೇ ಸಮಯದಲ್ಲಿ ನಿಮ್ಮಿಬ್ಬರ ಯೋಚನೆಗಳು ಅದೆಷ್ಟು ಹೊಂದತೊಡಗುತ್ತವೆಂದರೆ, ನೀವು ಅರ್ಧ ಹೇಳಿದ ವಾಕ್ಯವನ್ನು ಆಕೆ ಪೂರ್ಣಗೊಳಿಸಬಲ್ಲಳು. ಕೆಲವೊಮ್ಮೆ ಇಬ್ಬರೂ ಒಂದೇ ಸಮಯದಲ್ಲಿ ಒಂದೇ ಮಾತುಗಳನ್ನು ಆಡಿ ಆಶ್ಚರ್ಯಗೊಳ್ಳುತ್ತೀರಿ. ಯಾವುದೇ ಸಮಸ್ಯೆಯನ್ನು ಪರಿಹರಿಸಲು ಇಬ್ಬರ ಯೋಚನೆಗಳೂ ಒಂದಾಗಿರುತ್ತವೆ. ಕೆಲವೊಮ್ಮೆ ನಿಮ್ಮ ಅಭಿಪ್ರಾಯವನ್ನು ಆಕೆ ಒಪ್ಪದಿದ್ದರೂ, ಅದನ್ನು ಗೌರವಿಸಬಲ್ಲಳು. 

5. ನಿಮ್ಮ ಗುರಿಗಳು ಏಕೈಕವಾಗುತ್ತವೆ

ನಿಮ್ಮ ಬದುಕಿನಲ್ಲಿ ಏನು ಮುಖ್ಯ, ಯಾವುದು ಅಮುಖ್ಯ ಎಂಬುದನ್ನು ಸರಿಯಾದ ಮಹಿಳೆ ನಿಮ್ಮೊಂದಿಗೆ ಚರ್ಚಿಸುತ್ತಾಳೆ. ನಿಮ್ಮಿಬ್ಬರ ಅಗತ್ಯಗಳೂ ಈಡೇರುವಂತೆ ಆಕೆ ನೋಡಿಕೊಳ್ಳುತ್ತಾಳೆ. ನಿಮ್ಮಿಬ್ಬರಿಗೂ ವೈಯಕ್ತಿಕವಾಗಿ ಬೇರೆ ಬೇರೆ ಗುರಿಗಳಿದ್ದರೂ ಬದುಕನ್ನು ಉತ್ತಮಗೊಳಿಸುವ ವಿಷಯದಲ್ಲಿ ಇಬ್ಬರೂ ಒಂದೇ ಹಂತದಲ್ಲಿದ್ದೀರಿ ಎಂಬುದನ್ನು ಆಕೆ ಕಂಡುಕೊಳ್ಳುತ್ತಾಳೆ. ಭವಿಷ್ಯದ ಬಗ್ಗೆ ಇಬ್ಬರೂ ಆಗಾಗ ಒಟ್ಟಿಗೆ ಕುಳಿತು ಚರ್ಚಿಸುವಿರಿ. 

6. ಪ್ರೀತಿ ನಿರಂತರ ಬೆಳೆಯುತ್ತಿರುತ್ತದೆ

ಇವಳನ್ನು ಇನ್ನೂ ಪ್ರೀತಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದುಕೊಳ್ಳುತ್ತೀರಿ. ಆದರೆ, ಆಕೆಯೆಡೆಗಿನ ನಿಮ್ಮ ಪ್ರೀತಿಯೇ ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚುತ್ತಲೇ ಹೋಗುತ್ತದೆ. ಆಕೆ ಹೇಗಿರುವಳೋ ಹಾಗೆ ಚೆನ್ನಾಗೆನಿಸತೊಡಗುತ್ತದೆ. ಆಕೆಯ ಎಲ್ಲ ಲೋಪದೋಷಗಳನ್ನೂ ಮುಲಾಜಿಲ್ಲದೆ ಒಪ್ಪಿಕೊಳ್ಳುತ್ತೀರಿ. ಆಕೆ ಕೂಡಾ ನಿಮ್ಮ ಲೋಪದೋಷಗಳನ್ನು ಬಾರ್ಗೇನ್ ಮಾಡದೆ ಒಪ್ಪಿಕೊಳ್ಳುತ್ತಾಳೆ. ಪ್ರೀತಿಗೆ ಸೀಮಾರೇಖೆ ಎಂಬುದೇ ಇಲ್ಲ. ಹೆಚ್ಚು ಹೆಚ್ಚು ಬೆರೆತಂತೆಲ್ಲ ಅದು ನಿಮ್ಮ ಅನುಭವಕ್ಕೆ ನಿಲುಕತೊಡಗುತ್ತದೆ.

ಮೊದಲ ಭೇಟಿ: ಆಕೆ ಅವನಲ್ಲಿ ಗಮನಿಸುವುದೇನು?

7. ಸಿಕ್ಕಾಪಟ್ಟೆ ನಗುತ್ತೀರಿ

ನೀವು ನಿಮ್ಮ ಗೆಳತಿಯೊಂದಿಗೆ ಸಣ್ಣ ಸಣ್ಣ ವಿಷಯಕ್ಕೂ ನಗಬಲ್ಲಿರಿ. ಮುಂಚೆ ವಿಷಯವೇ ಅಲ್ಲ ಅನ್ನಿಸುತ್ತಿದ್ದುದಕ್ಕೂ ಈಗ ನಗು ಬರುತ್ತದೆ. ಇಬ್ಬರೂ ಕೂಡಿ ಮನಸೋಇಚ್ಛೆ ನಕ್ಕ ಕೆಲ ನೆನಪುಗಳು ಸದಾ ಕಾಲ ಖುಷಿ ಕೊಡುತ್ತಿರುತ್ತವೆ. ಸರಿಯಾದ ಮಹಿಳೆ ನಿಮ್ಮೊಂದಿಗೆ ನಗುವುದನ್ನು ಎಂಜಾಯ್ ಮಾಡುತ್ತಾಳೆ. 

8. ಸೋಲಲು ಕಲಿಯುತ್ತೀರಿ

ಸರಿಯಾದ ಹುಡುಗಿ ಬದುಕಿನಲ್ಲಿ ಬಂದಾಗ ಎಂಥಾ ಹಠಮಾರಿ ಸ್ವಭಾವವೇ ನಿಮ್ಮದಾಗಿದ್ದರೂ ಆಕೆಗಾಗಿ ಸೋಲಲು, ಹೊಂದಿಕೊಳ್ಳಲು ಕಲಿಯುತ್ತೀರಿ. ಸೋಲಿನಲ್ಲೂ ಸಾಂತ್ವಾನ ಕಂಡುಕೊಳ್ಳುತ್ತೀರಿ. ನಿಮ್ಮ ಸೋಲನ್ನು ಆಕೆ ತನ್ನ ಗೆಲುವೆಂದು ಭಾವಿಸದೇ, ತಾನೂ ಸೋಲಲು ಬಯಸುತ್ತಾಳೆ.