ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿದೆ ಇಮೋಜಿಗಳ ಬಳಕೆ | ಮಾತಿಗಿಂತ ಇಮೀಜಿಗಳ ಬಳಕೆ ಜಾಸ್ತಿ |
ಹಿಂದೆ ಪಾರಿವಾಳ, ಕಾಗದ, ಹೂವನ್ನು ಕೊಟ್ಟು ತಮ್ಮ ಪ್ರೀತಿಯನ್ನು ಹೇಳುತ್ತಿದ್ದರು. ಅದು ನನ್ನ ಅಮ್ಮ, ಅಜ್ಜ-ಅಜ್ಜಿ ಕಾಲದಲ್ಲಿ. ಆದರೆ ಮೊನ್ನೆ ನನ್ನ ಫ್ರೆಂಡ್ ಬಂದು ತನ್ನ ಹುಡುಗ ಪ್ರಪೋಸ್ ಮಾಡಿದ ಎಂದು ಮೊಬೈಲ್ ತೆಗೆದು ವಾಟ್ಸಪ್ ತೋರಿಸಿದಳು. ಆದರೆ ಅದರಲ್ಲಿ ಇದ್ದದ್ದು ಬರೀ ಇಮೋಜಿಗಳೇ.
ಇದರಿಂದ ಒಂದಂತೂ ಪಕ್ಕಾ ಆಯ್ತು ಬದಲಾದ ಬೆಳವಣಿಗೆ. ಅದು ಸಂವಹನದ ಬೆಳವಣಿಗೆ. ಇದು ಸಾಧ್ಯವಾಗಿದ್ದು ಡಿಜಿಟಲೀಕರಣದಿಂದ. ಏಕೆಂದರೆ ಇಂದು ನಾವು ಬದುಕುತ್ತಿರುವುದೇ ಡಿಜಿಟಲ್ ಯುಗದಲ್ಲಿ.
ದಾಂಪತ್ಯವನ್ನೇ ಕುಲಗೆಡಿಸೋ ಐದು ವರ್ತನೆಗಳಿವು..
ತಂತ್ರಜ್ಞಾನಕ್ಕೆ ಸರಿಯಾಗಿ ನಮ್ಮ ಯುವ ಪೀಳಿಗೆಯ ಮೈಂಡ್‌ಸೆಟ್ ಸಹ ಬದಲಾಗುತ್ತಿದೆ. ಕಾಗದ ಮೂಲಕ ಪುಟಗಟ್ಟಲೆ ಪ್ರೀತಿಯನ್ನು ಹೇಳುತ್ತಿದ್ದ ಕಾಲಕ್ಕೂ ಇಂದು ಒಂದೇ ಒಂದು ಇಮೋಜಿಯ ಸಿಂಬಲ್ ಮೂಲಕ ಪ್ರೀತಿಯನ್ನು ಹೇಳುವುದಕ್ಕೂ ಎಷ್ಟುಬದಲಾವಣೆ ಇದೆ.
ದಿನ ಬೆಳಗಾದರೆ ಅಪ್‌ಡೇಟ್ ಆಗಬೇಕಾದ ಕಾಲ ಇದು. ಬದಲಾವಣೆಯ ಪರ್ವ ದಿನೇ ದಿನೇ ಬದಲಾಗುತ್ತಿದೆ. 2ಜಿ ಯಿಂದ 3ಜಿ, 4ಜಿ ಇದೀಗ 5ಜಿಗೆ ಮುನ್ನುಗ್ಗುವಾಗ ಯುವ ಮನಸ್ಸುಗಳು ಈ ರೀತಿಯ ತಮ್ಮ ಭಾವನೆಯನ್ನು, ಯೋಚನೆಯನ್ನು, ಒಂದು ಇಮೋಜಿ ಮೂಲಕ ಇನ್ನೊಬ್ಬರ ಬಳಿ ಹಂಚಿಕೊಳ್ಳಬಹುದು ಎಂದರೆ ಅದು ಆಶ್ಚರ್ಯವಾಗುತ್ತೆ. ಇಲ್ಲಿ ಮಾತಿಲ್ಲ ಕತೆಯಿಲ್ಲ, ಎಲ್ಲವೂ ಇಮೋಜೀಗಳೆ ಮನಸ್ಥಿಯನ್ನು ಸ್ಪಷ್ಟವಾಗಿ ಹೇಳುತ್ತವೆ.
ಇಮೋಜಿ ಆಯ್ತು ಅದಕ್ಕೆ ಹೊಂದಿಕೊಂಡಂತೆ ಇನ್ನೊಂದು ಟ್ರೆಂಡ್ ಕಾಲಿರಿಸಿರುವುದು ಟಿಕ್‌ಟಾಕ್. ಪ್ರೀತಿ ನಿವೇದನೆಯನ್ನು ಇಡಲು ಇವುಗಳ ಮೂಲಕ ಸಾಧ್ಯ ಅದು ಎರಡೇ ನಿಮಿಷಗಳಲ್ಲಿ. ಎಲ್ಲವೂ ಡಿಜಿಟಲ್ ಮಯ. ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿರುವ ಬಹುತೇಕರು ಟಿಕ್‌ಟಾಕ್ ಮತ್ತು ಇಮೋಜಿಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಅದರಲ್ಲೂ ಯುವಕರೇ ಹೆಚ್ಚಾಗಿದ್ದಾರೆ.
ಡ್ರೆಸ್ ಇಷ್ಟಿದ್ದರೆ ಟ್ರೆಂಡ್ ಫಾಲೋ ಮಾಡೋದು ಸುಲಭ...
ಸ್ಕ್ರೀನ್ ಶಾಟ್
ಮೊದಲೆಲ್ಲ ತಮ್ಮ ಪ್ರೀತಿಯನ್ನು ಒಂದು ಲೆಟರ್‌ನಲ್ಲಿ ಬರೆದೋ ಅಥವಾ ಹೂ ನೀಡಿ ಹೇಳುತ್ತಿದ್ದರು. ಅವನ್ನು ಯಾವುದಾದರು ಆಲ್ಬಂನಲ್ಲೋ, ಪುಸ್ತಕದ ಮಧ್ಯದಲ್ಲೋ ಇಟ್ಟುಕೊಳ್ಳುತ್ತಿದ್ದರು. ಪ್ರೀತಿ ಪಾತ್ರರು ಪ್ರೀತಿಯಿಂದ ಕೊಟ್ಟನೆನಪಿನ ವಸ್ತುವನ್ನೂ ಕೆಲವರು ಅಲ್ಲಿ ಇಲ್ಲಿ ಇಡಲಾಗದೆಂದು ಶೋಕೇಸ್‌ನಲ್ಲಿ ಇಟ್ಟಿರುತ್ತಿದ್ದರು. ಅದು ಎಲ್ಲರಿಗೂ ಕಾಣಿಸುತ್ತಿತ್ತು.
ಅವೇ ದಾಖಲೆಯೆಂದು ಅವುಗಳನ್ನು ಜೋಪಾನವಾಗಿ ಕಾಪಾಡುತ್ತಿದ್ದರು. ಹೀಗಿರುವಾಗ ಒಂದೇ ಒಂದು ಇಮೋಜಿ ಕಳುಹಿಸಿದ್ದನ್ನು ಹೇಗೆ ಕಾಪಾಡುತ್ತಾರೆ, ಅಳಿಸಿ ಹೋದರೆ ಎಂಬ ಭಯ ಇಲ್ಲಿಲ್ಲ. ಏಕೆಂದರೆ ಇವನ್ನೆಲ್ಲಾ ಸ್ಕ್ರೀನ್‌ಶಾಟ್‌ನಲ್ಲಿ ತೆಗೆದಿಟ್ಟುಕೊಂಡು ಒಂದು ಫೋಲ್ಡರ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳಬಹುದು.
ಅದು ಡೇಟ್ ವಿತ್ ಟೈಮ್ ಎರಡೂ ಕಾಣಸಿಗುತ್ತದೆ. ಇದನ್ನು ಯಾರೂ ಕದಿಯಲು, ಅಳಿಸಲು ಸಾಧ್ಯವಿಲ್ಲ. ಹೂ, ಹೃದಯ, ಹಾಯ್ ಹೇಳಲು ಕೈ ಎತ್ತುವ ಇಮೋಜಿ ಹೀಗೆ ಹಲವಾರಿವೆ. ಇವೆಲ್ಲ ಈಗಿನ ಭಾವನೆ ಹಾಗೂ ಸಂವಹನಗಳ ಅಡ್ವಾನ್ಸ್ ಫೀಚರ್ಸ್ಗಳು.
ಪ್ರಾಕ್ಟಿಕಲ್ ಪ್ರೇಮ
ಇತ್ತೀಚೆಗೆ ‘ದಿ ಲವ್ ಟೆಕ್ಸ್ಟ್‌ಪ್ರಾಜೆಕ್ಟ್’ ಎಂಬ ಸಂಶೋಧನೆ ನಡೆಸಲಾಯಿತು. ಸಾಮಾನ್ಯವಾಗಿ ಇಬ್ಬರು ಪ್ರೇಮಿಗಳ ನಡುವಿನ ಸಂವಹನದಲ್ಲಿ ಟೈಪ್ ಮಾಡುವಾಗ ಅಕ್ಷರ ಇಲ್ಲವೇ ವಾಕ್ಯಗಳೇ ತಪ್ಪಾಗುವ ಸಾಧ್ಯತೆಗಳು ಇರುತ್ತವೆ. ಹೀಗಿರುವಾಗ ಲೈಕ್ ಪದಕ್ಕೊಂದು ಇಮೋಜಿ, ಯು ಪದಕ್ಕೊಂದು ಇಮೋಜಿ ಹೀಗೆ ಪ್ರತಿ ಇಂಗ್ಲಿಷ್ ಗ್ರಾಮರ್‌ಗೂ ಇಮೋಜಿಗಳ ಮೂಲಕ ಸಂವಹಿಸುತ್ತಾರೆ.
ಇದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಈ ಇಮೋಜಿಗಳ ಮೂಲಕವೇ ಪ್ರೀತಿ ನಿವೇದನೆಯಾಗಲಿ ಮತ್ತೊಂದಾಗಲಿ ಇಂದಿನ ಟ್ರೆಂಡ್ ಆಗಿದೆ. ಸಾಮಾನ್ಯವಾಗಿ ಫೇಸ್‌ಬುಕ್‌ನಲ್ಲಿ ಅತಿ ಹೆಚ್ಚಾಗಿ ಕಾಣಬಹುದು. ಅವು ಮೂವಿಂಗ್ ಇಮೋಜಿಗಳು. ಅಂದ್ರೆ ಜಿಫ್ ಇಮೋಜಿಗಳು.
ಖುಷಿಯಾದಾಗ ಚಪ್ಪಾಳೆ ತಟ್ಟುವುದು, ಬೇಸರವಾದಾಗ ತಲೆತಗ್ಗಿಸುವುದು, ನೋವಾದಾಗ ಅಳುವುದು, ಇಷ್ಟವಾದಾಗ ಹಾರ್ಟ್ ನೀಡುವ ಇಮೋಜಿ, ಸಿಟ್ಟು ಬಂದಾಗ ಸಿಟ್ಟಿನಿಂದ ನೋಡುವ ಇಮೋಜಿ ಹೀಗೆ ಹಲವಾರು ಕಾಣಸಿಗುತ್ತದೆ.
ಗುಂಡಮ್ಮ' ಸತಿಯಾದರೆ ಪತಿಯ ಸಂತೋಷಕ್ಕಿರದು ಮಿತಿ!
ಒಟ್ಟಿನಲ್ಲಿ ಈ ಇಮೋಜಿಗಳೇ ಜೀವನದ ಒಂದು ಸಾರವಾಗಿ ಭಾವನೆ, ಯೋಚನೆ, ಪ್ರೀತಿ ಎಲ್ಲವನ್ನೂ ಒಬ್ಬರೊಂದಿಗೆ ಹಂಚಿಕೊಳ್ಳಲು ನಮಗೇ ಗೊತ್ತಿಲ್ಲದೆ ಅವುಗಳಿಗೆ ಒಗ್ಗಿಕೊಳ್ಳುತ್ತಿದ್ದೇವೆ. ಅವು ಹಕ್ಕಿಗೆ ರೆಕ್ಕೆಬಂದಂತಹ ಅನುಭವ ನೀಡುತ್ತವೆ. ಹೆಚ್ಚು ಶ್ರಮ ಇಲ್ಲಿಲ್ಲ. ಇದು ಯುವಪೀಳಿಗೆ ಅಷ್ಟೇ ಅಲ್ಲ ಎಲ್ಲಾ ವಯಸ್ಕರೂ ಇದಕ್ಕೆ ಅಪ್‌ಡೇಟ್ ಆಗುತ್ತಿದ್ದಾರೆ.
ಪ್ರಿಯಾ ಅಗರ್ವಾಲ್ ಅವರು ಹೇಳುವಂತೆ ‘ಇಂದು ಫೇಸ್‌ಬುಕ್, ಇನ್‌ಸ್ಟಾ, ವಾಟ್ಸಅಪ್‌ಗಳು ಯುವ ಪೀಳಿಗೆಗೆ ಹೆಚ್ಚು ಆಪ್ತವಾಗುತ್ತಿವೆ. ಅದು ಒಬ್ಬರನ್ನು ಅರಿಯಲು ಸಹಕಾರಿ ಹಾಗೂ ಈ ಮೂಲಕ ಒಬ್ಬರ ಜೊತೆ ನೇರವಾಗಿ ನಾವು ಯಾವ ರೀತಿಯ ಸಂಬಂಧವನ್ನು ಕಾಯ್ದುಕೊಳ್ಳುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ.
ಇನ್ನು ಇಂದಿನ ಯುವಪೀಳಿಗೆ ವಾಟ್ಸಅಪ್ ಮೆಸೆಂಜರ್ ಅನ್ನು ಒಂದು ಬುಕ್‌ನಂತೆ ಕಾಣಲು ಇಷ್ಟಪಡುತ್ತಿದ್ದಾರೆ. ಪ್ರತಿಯೊಂದು ಜೋಡಿಯು ವಾಟ್ಸಅಪ್ ಒಂದರಲ್ಲೇ ಸುಮಾರು 49 ಸಾವಿರಕ್ಕೂ ಹೆಚ್ಚು ಲವ್ ಎಕ್ಸಚೇಜಿಂಗ್ ಇಮೋಜಿಗಳು ಹಾಗೂ ತಮ್ಮ ಸೆಲ್ಫೀಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.’
- ಅಕ್ಷಯ ಕಾಂತಬೈಲು
