ಉಪವಾಸ ಮಾಡಿ ಸಣ್ಣಗಾಗೋದು ಮುರ್ಖತನವೆನ್ನುತ್ತಾರೆ ಇಲಿಯಾನಾ?

There is no meaning in loosing weight by fasting
Highlights

ಮಾಮೂಲಿ ತಿನ್ನೋದ ಬಿಟ್ಟು, ಚಪಾತಿ ತಿಂದು, ದಿನಕ್ಕೆರಡು ಹೊತ್ತು ಮಾತ್ರ ಊಟ ಮಾಡಿ ಎಲ್ಲರೂ ಬೊಜ್ಜು ಇಳಿಸಿಕೊಳ್ಳಲು ಯತ್ನಿಸುತ್ತಾರೆ. ಇವರ ಮಧ್ಯ ವಿಭಿನ್ನ ಎನಿಸುವುದು ಬಾಲಿವುಡ್ ಬೆಡಗಿ ಇಲಿಯಾನ. ದಿನಕ್ಕೆ ನಾಲ್ಕೈದು ಬಾರಿ ಊಟ ಮಾಡಿಯೂ, ಫಿಟ್ ಆಗರೋದು ಹೇಗೆ ಎನ್ನುತ್ತಾರೆ ಓದಿ.

- ಎತ್ತರ :5.5 ಅಥವಾ 165 ಸೆಂ.ಮೀ
- ತೂಕ : 56 ಕೆಜಿ
- ಸುತ್ತಳತೆ :32-24-38
ಜಿಮ್ ಅಂದ್ರೆ ಬೋರ್, ಆದ್ರೆ ವಾರಕ್ಕೆರಡು ಬಾರಿ ಸ್ವಿಮ್ಮಿಂಗ್ ಮಾಡೋದು ಖುಷಿ. ಇಲಿಯಾನ ಬಟರ್‌ಫ್ಲೈ ಸ್ಟ್ರೋಕ್ ಹೊಡೀತಾರೆ. ಇದು ಸಾಮಾನ್ಯದವರಿಗೆ ಕಷ್ಟ, ಪರಿಣತ ಈಜುಗಾರರಿಗಷ್ಟೇ ತಿಳಿದಿರುವ ಟೆಕ್ನಿಕ್. ಎದೆಯ ಸಪೋರ್ಟ್ ತಗೊಂಡು ಕೈಗಳನ್ನು ಚಿಟ್ಟೆಯ ರೆಕ್ಕೆ ಬಡಿಯುವ ರೀತಿ ಬಡಿಯುತ್ತ ಈಜುವ ರೀತಿ ಇದು. ಇದರಿಂದ ಕೈ, ಎದೆ, ಭುಜ ಸೇರಿದಂತೆ ದೇಹಕ್ಕೆಲ್ಲ ಅತ್ಯುತ್ತಮ ವ್ಯಾಯಾಮ ಸಿಗುತ್ತೆ ಅಂತಾರೆ ಇಲಿಯಾನ.

ವಾರದಲ್ಲಿ ಮೂರು ದಿನ ನಾಲ್ಕು ಕಿಲೋಮೀಟರ್ ಓಡ್ತಾರೆ. ಓಡೋದ್ರಿಂದ ಒತ್ತಡ ಹತೋಟಿಗೆ ಬರುತ್ತೆ. ಮನಸ್ಸು ಹಗುರಾಗುತ್ತಂತೆ. ಅವರ ಎನರ್ಜಿ ಹೆಚ್ಚಾಗ್ಲಿಕ್ಕೂ ಇದು ಕಾರಣವಂತೆ. ತಿನ್ನೋದು ಇಷ್ಟ ಇಲಿಯಾನಾಗೆ ಹೊಟ್ಟೆ ಕಟ್ಟಿ ಉಪವಾಸ ಮಾಡಿ ಸಣ್ಣಗಾಗೋದು ಮೂರ್ಖತನ ಅನಿಸುತ್ತಂತೆ. ಅವರಿಗೆ ಊಟ, ತಿಂಡಿ ಮಾಡೋದಕ್ಕೆ ಬಹಳ ಇಷ್ಟ. ದಿನದಲ್ಲಿ ಐದಾರು ಬಾರಿಯಾದ್ರೂ ಊಟ, ತಿಂಡಿ ಮಾಡ್ತೀನಿ ಅಂತಾರೆ. 

ಫುಡ್ ಡೀಟೈಲ್
- ಬೆಳಗ್ಗೆ ಫ್ರುಟ್ ಜ್ಯೂಸ್, 2 ಮೊಟ್ಟೆ ಮತ್ತು ಎರಡು ಬ್ರೆಡ್ ಸ್ಲೈಸ್
- ಮಧ್ಯಾಹ್ನ 2 ಚಪಾತಿ, ಚಿಕನ್, ವೆಜಿಟೇಬಲ್ ಮತ್ತು ದಾಲ್
- ರಾತ್ರಿ ಊಟಕ್ಕೂ ಚಪಾತಿ, ನಾನ್‌ವೆಜ್ ಮತ್ತು ದಾಲ್

loader