ಈ ಔಷಧದ ಬೆಲೆ 14 ಕೋಟಿ ರು.!| ಮಕ್ಕಳ ಸ್ನಾಯು ಚಿಕಿತ್ಸೆಗೆ ಬಳಸುವ ಔಷಧಿ ಮಾರುಕಟ್ಟೆಗೆ

ನ್ಯೂಯಾರ್ಕ್[ಮೇ.26]: ಹಸುಗೂಸುಗಳಲ್ಲಿ ಕಾಣುವ ಅಪರೂಪದ ಸ್ನಾಯು ಅಥವಾ ದೈಹಿಕ ಶಕ್ತಿಗೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆ ಬಳಸಬಹುದಾದ ಔಷಧವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನೊರ್ವಾಟಿಸ್‌ ಕಂಪನಿಗೆ ಅಮೆರಿಕದ ಆಹಾರ ಮತ್ತು ಔಷಧಗಳ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಔಷಧಿಯ ಬೆಲೆಯನ್ನು ಇದೀಗ ಕಂಪನಿ ಬಹಿರಂಗಪಡಿಸಿದೆ. ಅಚ್ಚರಿಯ ವಿಷಯವೆಂದರೆ ಈ ಔಷಧದ ಬೆಲೆ ಭರ್ಜರಿ 14.5 ಕೋಟಿ ರು. ಇದರೊಂದಿಗೆ ಇದು ವಿಶ್ವದಲ್ಲೇ ಅತ್ಯಂತ ದುಬಾರಿ ದರದ ಔಷಧಿ ಎಂಬ ದಾಖಲೆಗೆ ಪಾತ್ರವಾಗಿದೆ. ವಂಶವಾಹಿ ಥೆರಪಿ ಮೂಲಕ ನೀಡಲಾಗುವ ಈ ಔಷಧಿಯನ್ನು ಪಡೆದುಕೊಂಡರೂ, ಸ್ನಾಯು ತೊಂದರೆಗೆ ಸಿಲುಕಿದ ಮಕ್ಕಳ ಸ್ನಾಯುಗಳು ಸಾಮಾನ್ಯ ಮಕ್ಕಳಷ್ಟು ಬಲಿಷ್ಠರಾಗಲು ಸಾಧ್ಯವೇ ಇಲ್ಲ. ಹಾಗಾಗಿ, ಇಂಥ ಮಕ್ಕಳಿಗೆ ಗಾಲಿ ಕುರ್ಚಿಗಳು ಮತ್ತು ಇತರ ಸಲಕರಣೆಗಳ ಅಗತ್ಯವಿರಲಿದೆ ಎಂದು ನಾವರ್ಟೀಸ್‌ ಹೇಳಿದೆ.

ಇದೇ ರೀತಿಯ ಔಷಧಿಗಳನ್ನು ಬೇರೆ ಕಂಪನಿಗಳು ಉತ್ಪಾದನೆ ಮಾಡುತ್ತಾವಾದರೂ, ಅದನ್ನು ಜೀವಮಾನವಿಡೀ ಪಡೆಯುತ್ತಲೇ ಇರಬೇಕು.