Masjid-e-Jamaye Abdullah mystery: ಬಾಂಗ್ಲಾದೇಶದ ಮಸ್ಜಿದ್-ಎ-ಜಮಾಯೆ ಅಬ್ದುಲ್ಲಾ ಎಂಬ ಮಸೀದಿ ಮನುಷ್ಯರಲ್ಲ, ಬದಲಾಗಿ ಜಿನ್‌ಗಳು ಒಂದೇ ರಾತ್ರಿಯಲ್ಲಿ ನಿರ್ಮಿಸಿವೆ ಎಂದು ನಂಬಲಾಗಿದೆ. ಇಲ್ಲಿ ಮಧ್ಯರಾತ್ರಿ ಕುರಾನ್ ಪಠಣದಂತ ವಿಚಿತ್ರ ಶಬ್ದ ಕೇಳಿಬರುತ್ತವೆ ಈ ನಿಗೂಢ ಸ್ಥಳಕ್ಕೆ ಭೇಟಿ ನೀಡುವವರು ಎಚ್ಚರಿಕೆ

ಭಾರತದ ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ಒಂದು ನಿಗೂಢ ಮಸೀದಿ ಇದೆ, ಅದನ್ನು ಯಾವುದೇ ಮನುಷ್ಯನು ನಿರ್ಮಿಸಿಲ್ಲ, ಬದಲಾಗಿ ಒಬ್ಬ ಜಿನನು(Jinns) ನಿರ್ಮಿಸಿದ್ದಾನೆ ಎಂದು ಹೇಳಲಾಗುತ್ತದೆ. ಈ ಮಸೀದಿಯ ಹೆಸರು ಮಸ್ಜಿದ್-ಎ-ಜಮಾಯೆ ಅಬ್ದುಲ್ಲಾ(Masjid-e-Jamaye Abdullah) . ಜಿನ್ ಗಳಿಗೆ ಸಂಬಂಧಿಸಿದ ಇದರ ಕುತೂಹಲಕಾರಿ ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ.

ಬಾಂಗ್ಲಾದೇಶದ ಲಕ್ಷ್ಮಿಪುರದಲ್ಲಿರುವ ಮಸ್ಜಿದ್-ಎ-ಜಮಾಯೆ ಅಬ್ದುಲ್ಲಾ ಎಲ್ಲ ಮಸೀದಿಗಳಂತಲ್ಲ. ಇದನ್ನು ಮನುಷ್ಯರಿಂದ ನಿರ್ಮಿಸಲಾಗಿಲ್ಲ, ಬದಲಾಗಿ ಒಬ್ಬ ಜಿನ್‌ನಿಂದ ಒಂದೇ ರಾತ್ರಿಯಲ್ಲಿ ಕಟ್ಟಲ್ಪಟ್ಟಿದೆ ಎಂಬ ದಂತಕಥೆ ಸ್ಥಳೀಯರಲ್ಲಿ ಪ್ರಚಲಿತವಾಗಿದೆ. 1888ರಲ್ಲಿ ಮೌಲಾನಾ ಅಬ್ದುಲ್ಲಾ ಎಂಬಾತನ ಸಹಾಯದಿಂದ ಈ ಮಸೀದಿ ರಚನೆಯಾಯಿತು ಎಂದು ಹೇಳಲಾಗುತ್ತದೆ. ಆದರೆ ಇದರ ನಿಜವಾದ ರಹಸ್ಯ ಬೇರೆಯೇ ಇದೆ!

ಮಧ್ಯರಾತ್ರಿಯಲ್ಲಿ ಕೇಳಿಬರುತ್ತೆ ವಿಚಿತ್ರ ಶಬ್ದಗಳು

ಸ್ಥಳೀಯರ ಪ್ರಕಾರ, ಈ ಮಸೀದಿಯಲ್ಲಿ ಯಾವುದೇ ಮೌಲಾನಾ ಅಥವಾ ಮುಫ್ತಿ ವಾಸಿಸುವುದಿಲ್ಲ. ಆದರೂ, ಮಧ್ಯರಾತ್ರಿಯ ಸಮಯದಲ್ಲಿ ಕುರಾನ್‌ನ ಪದ್ಯಗಳನ್ನು ಯಾರೋ ಪಠಿಸುವಂತಹ ಶಬ್ದಗಳು ಕೇಳಿಬರುತ್ತವೆ. ಒಳಗೆ ಪ್ರವೇಶಿಸಿದವರಿಗೆ ಯಾರೋ ಹಿಂಬಾಲಿಸುತ್ತಿರುವಂತೆ ಭಯಾನಕ ಅನುಭವವಾಗುತ್ತದೆ. ಈ ಕಾರಣದಿಂದಲೇ ಇಲ್ಲಿ ಮನುಷ್ಯರಿಗಿಂತ ಜಿನ್‌ಗಳ ಸಂಖ್ಯೆಯೇ ಹೆಚ್ಚು ಎಂದು ನಂಬಲಾಗಿದೆ.

ಜಿನ್‌ಗಳ ವಾಸಸ್ಥಾನ:

ಈ ಮಸೀದಿಯ ಒಡಲಾಳದಲ್ಲಿ ಜಿನ್‌ಗಳು ವಾಸಿಸುತ್ತವೆ ಎಂಬ ನಂಬಿಕೆ ಗಟ್ಟಿಯಾಗಿದೆ. 200 ವರ್ಷಗಳಿಂದ ಈ ಮಸೀದಿಯನ್ನು ಜಿನ್‌ಗಳೇ ಆಕ್ರಮಿಸಿಕೊಂಡಿವೆ ಎಂದು ಸ್ಥಳೀಯರು ಹೇಳುತ್ತಾರೆ. ಇಂತಹ ನಿಗೂಢ ಮಸೀದಿಗಳು ಬಾಂಗ್ಲಾದೇಶದಲ್ಲಿ ಮಾತ್ರವಲ್ಲ, ಭಾರತ, ಅಜೆರ್ಬೈಜಾನ್, ಮತ್ತು ಸೌದಿ ಅರೇಬಿಯಾದಂತಹ ದೇಶಗಳಲ್ಲಿಯೂ ಇವೆ ಎಂಬ ದಂತಕತೆಗಳಿವೆ

ಎಚ್ಚರಿಕೆ: ಶುದ್ಧ ಹೃದಯವಿರಲಿ!

ಈ ಮಸೀದಿಗೆ ಭೇಟಿ ನೀಡುವವರು ಶುದ್ಧ ಹೃದಯದಿಂದ ಬರಬೇಕು ಎಂದು ಸ್ಥಳೀಯರು ಎಚ್ಚರಿಸುತ್ತಾರೆ. ಒಂದು ವೇಳೆ ಶುದ್ಧತೆ ಇಲ್ಲದಿದ್ದರೆ, ಜಿನ್‌ಗಳು ನಿಮ್ಮೊಂದಿಗೆ ಬಂದು ಬಿಡಬಹುದು ಎಂಬ ಭಯವಿದೆ! ಈ ರಹಸ್ಯಮಯ ಮಸೀದಿಯ ಕತೆ ನಿಮಗೆ ಭಯ, ಕುತೂಹಲ, ಅಥವಾ ಆಶ್ಚರ್ಯ ತಂದರೂ, ಒಂದು ವಿಷಯ ಸ್ಪಷ್ಟ, ಜಿನ್ನತ್ ಮಸೀದಿ ಒಂದು ಸಾಮಾನ್ಯ ಸ್ಥಳವಲ್ಲ, ಅದು ಅತೀಂದ್ರಿಯ ಶಕ್ತಿಗಳ ಕೇಂದ್ರವಾಗಿದೆ!