ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲಿಯೇ ಅರಂಭ: ಎಲ್ಲಿದೆ ಈ ನಿಗೂಢ ನಿಧಿ? ಎಷ್ಟಿದೆ ಬಂಗಾರ?
ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ (DGML) ನೇತೃತ್ವದ ಈ ಯೋಜನೆಯು, ದೇಶದ ಚಿನ್ನದ ಆಮದನ್ನು ಕಡಿಮೆ ಮಾಡಿ ಆರ್ಥಿಕತೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಖಾಸಗಿ ಚಿನ್ನದ ಗಣಿ
ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಶೀಘ್ರದಲ್ಲಿಯೇ ಪೂರ್ಣ ಪ್ರಮಾಣದ ಖಾಸಗಿ ಗಣಿಗಾರಿಕೆ ಪೂರ್ಣ ಪ್ರಮಾಣದ ಚಿನ್ನವನ್ನು ಉತ್ಪಾದನೆಯಾಗುವ ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದ್ದು, ಇಲ್ಲಿಯ ವಹಿವಾಟು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
1 ಸಾವಿರ ಟನ್ ಚಿನ್ನ ಆಮದು
ಈ ಖಾಸಗಿ ಚಿನ್ನದ ಗಣಿಗಾರಿಕೆಯಿಂದ ಹಲವು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಈ ಸುತ್ತಲಿನ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳು ಏರಿಕೆಯಾಗಲಿವೆ. ಪ್ರಸ್ತುತ ಭಾರತ ಪ್ರತಿ ವರ್ಷ ಸುಮಾರು 1 ಸಾವಿರ ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಿದೆ. ಕಚ್ಚಾ ತೈಲದ ಬಳಿಕ ಭಾರತ ಆಮದು ಮಾಡಿಕೊಳ್ಳುವ ವಸ್ತು ಚಿನ್ನವಾಗಿದೆ.
ಎಲ್ಲಿದೆ ಭಾರತದ ಮೊದಲ ಖಾಸಗಿ ಚಿನ್ನದ ಗಣಿಗಾರಿಕೆ?
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತುಗ್ಗಲಿ ಮಂಡಲದ ಜೊನ್ನಗಿರಿ, ಎರ್ರಗುಡಿ ಮತ್ತು ಪಗದಿರಾಯ್ ಗ್ರಾಮಗಳ ಬಳಿ ಚಿನ್ನದ ಗಣಿಗಾರಿಕೆ ನಡೆಯಲಿದೆ. ಈ ಗಣಿಗಾರಿಕೆಯ ಡೆವಲಪರ್ ಆಗಿರುವ ಜಿಯೋಮೈಸೋರ್ ಸರ್ವೀಸಸ್ ಇಂಡಿಯಾ ಲಿಮಿಟೆಡ್‌ನಲ್ಲಿ ಚಿನ್ನದ ಪರಿಶೋಧನಾ ಕಂಪನಿಯಾದ ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಡಿಜಿಎಂಎಲ್) ಪಾಲನ್ನು ಹೊಂದಿದೆ. ಗುರುವಾರ ಡಿಜಿಎಂಎಲ್ ಷೇರು 9.95% ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಷೇರು ಸುಮಾರು 12% ರಷ್ಟು ಕುಸಿದಿತ್ತು.
ಡಿಜಿಎಂಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹನುಮ ಪ್ರಸಾದ್ ಹೇಳಿಕೆ
ಜೊನ್ನಗಿರಿಯ ಚಿನ್ನದ ಗಣಿಗಾರಿಕೆಗೆ ಜೂನ್ ಮತ್ತು ಜುಲೈನಲ್ಲಿ ಪರಿಸರ ಇಲಾಖೆಗಳಿಂದ ಅನುಮತಿ ದೊರೆತಿದೆ. ಮುಂದಿನ ದಿನಗಳಲ್ಲಿ ಇತರೆ ರಾಜ್ಯಗಳಿಂದಲೂ ಅನುಮತಿ ಸಿಗಲಿದೆ. ಯೋಜನೆಯ ಸ್ಥಿರೀಕರಣ, ಸ್ಥಾವರ ತಂತ್ರಜ್ಞಾನದ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಗಣಿಗಾರಿಕೆ ಆರಂಭವಾಗಲಿದೆ ಎಂದು 2025ರ ಸಿಐಐ ಇಂಡಿಯಾ ಮೈನಿಂಗ್ ಶೃಂಗಸಭೆಯಲ್ಲಿ ಡಿಜಿಎಂಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹನುಮ ಪ್ರಸಾದ್ ಹೇಳಿದ್ದಾರೆ.
ಮೊದಲ ಹಂತದಲ್ಲಿ 750 ಕೆಜಿ ಚಿನ್ನ ಉತ್ಪಾದನೆ
ಒಮ್ಮೆ ಚಿನ್ನದ ಗಣಿಗಾರಿಕೆ ಆರಂಭವಾದ್ರೆ ವಾರ್ಷಿಕವಾಗಿ ಸುಮಾರು 750 ಕೆಜಿಯಷ್ಟು ಚಿನ್ನ ಉತ್ಪಾದನೆ ಮಾಡುವ ನಿರೀಕ್ಷೆಗಳಿವೆ. ಎರಡರಿಂದ ಮೂರು ವರ್ಷಗಳ ನಂತರ ಚಿನ್ನದ ಉತ್ಪಾದನೆ ಸಾಮರ್ಥ್ಯ 750 ರಿಂದ 1 ಸಾವಿರ ಕೆಜಿಗೆ ವಿಸ್ತರಿಸುವ ಸಾಧ್ಯತೆಗಳಿವೆ. ಸದ್ಯ ಭಾರತದಲ್ಲಿ 1.5 ಟನ್ ಚಿನ್ನ ಉತ್ಪಾದನೆ ಮಾಡಲಾಗುತ್ತಿದೆ ಎಂದು ಹನುಮ ಪ್ರಸಾದ್ ಹೇಳಿದ್ದಾರೆ.
ಇದನ್ನೂ ಓದಿ: 5 ಮಿಲಿಯನ್ ಟನ್ ಮಣ್ಣಿನಲ್ಲಿ ಅಡಗಿದೆ ಬರೋಬ್ಬರಿ 25 ಟನ್ ಚಿನ್ನ: ಕರ್ನಾಟಕದ ಏಳು ಬೆಟ್ಟಗಳ ನಿಧಿ ರಹಸ್ಯ!
ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್
2003 ರಲ್ಲಿ ಸ್ಥಾಪನೆಯಾದ ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ , ಕಿರ್ಗಿಸ್ತಾನ್, ಫಿನ್ಲ್ಯಾಂಡ್ ಮತ್ತು ಟಾಂಜಾನಿಯಾ ಸೇರಿದಂತೆ ಭಾರತ ಮತ್ತು ವಿದೇಶಗಳಲ್ಲಿ ಗಣಿಗಾರಿಕೆ ಸ್ವತ್ತುಗಳ ಪೋರ್ಟ್ಫೋಲಿಯೊವನ್ನು ನಿರ್ಮಿಸಿದೆ. ಇದೀಗ ಭಾರತದಲ್ಲಿಯೂ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದೆ.
ಇದನ್ನೂ ಓದಿ: ಚೀನಾದ ಅವಲಂಬನೆ ಕಡಿಮೆ ಮಾಡಲು, ಭಾರತದಲ್ಲೇ TBM ಅಭಿವೃದ್ಧಿಗೆ ಮುಂದಾದ ಬೆಂಗಳೂರಿನ ಬೆಮೆಲ್!