Asianet Suvarna News Asianet Suvarna News

ಅಣ್ಣನ ಗೆಳೆಯನ ಮೇಲೆ ಪ್ರೀತಿಯಾಗಿದೆ...

ಅಣ್ಣನ ಜತೆ ಮನೆಗೆ ಬರೋ ಫ್ರೆಂಡ್ಸ್ ಮೇಲೆ ಅನೇಕರಿಗೆ ಲವ್ ಆಗುತ್ತೆ. ಕೆಲವರಿಗೆ ಖುಷ್ ಖುಷಿಯಾಗಿ ಮದುವೆಯನ್ನು ಮಾಡಿಕೊಡುತ್ತಾರೆ ಪೋಷಕರು. ಆದರೆ, ಇನ್ನು ಕೆಲವರು ಹುಟ್ಟಿದ ಈ ಭಾವನೆಯನ್ನು ಎಕ್ಸ್‌ಪ್ರೆಸ್ ಮಾಡಿಕೊಳ್ಳಲು ಹೆದರುತ್ತಾರೆ. ಅಂಥದ್ದೇ ಹೆದರಿಕೆ ಇರೋ ಯುವತಿಗೆ ಸಿಕ್ಕ ಸಾಮಾಧಾನವಿದು.

The girl one who was in love with friend of brothers seeks console

ನನ್ನ ಅಣ್ಣನ ಗೆಳೆಯನ ಜೊತೆಗೆ ನನಗೆ ಪ್ರೀತಿಯಾಗಿದೆ. ಅವನು ಅಣ್ಣನ ಜೊತೆಗೆ ಆಗಾಗ ನಮ್ಮ ಮನೆಗೆ ಬರುತ್ತಿದ್ದಾಗ ಅವನನ್ನು ಮತ್ತೆ ಮತ್ತೆ ನೋಡಿ ತುಂಬಾ ಇಷ್ಟವಾಗಿಬಿಟ್ಟಿದ್ದಾನೆ. ಆದರೆ ಇದನ್ನು ಅವನಿಗೆ ನಾನಾಗಿಯೇ ಹೇಳುವ ಧೈರ್ಯವಿಲ್ಲ. ಅವನಿಗೆ ನಾನೆಂದರೆ ಇಷ್ಟವಾ? ಅದೂ ಗೊತ್ತಿಲ್ಲ. ನನ್ನ ಮನೆಯವರಿಗೆ ಈ ವಿಚಾರ ಗೊತ್ತಾದರೆ ಏನು ಅಂದುಕೊಳ್ಳುತ್ತಾರೋ? ಆ ಹುಡುಗನಿಗೆ ಗೊತ್ತಾದರೆ ನನ್ನ ಬಗ್ಗೆ, ನನ್ನ ಅಣ್ಣನ ಬಗ್ಗೆ, ನಮ್ಮ ಮನೆಯವರ ಬಗ್ಗೆ ಏನೆಂದುಕೊಂಡಾನು ಎನ್ನುವ ಭಯ ಕಾಡುತ್ತಲೇ ಇದೆ. ಈಗ ನನ್ನ ಪ್ರೀತಿ ಉಳಿಸಿಕೊಳ್ಳುವುದಾ? ಎಲ್ಲವನ್ನೂ ಮರೆತು ಸುಮ್ಮನಾಗುವುದಾ? ಸಲಹೆ ನೀಡಿ ಎಂದು ಹೆಸರು ಹೇಳಲಿಚ್ಚಿಸದ ಓದುಗರ ಪಶ್ನೆಗೆ
ಬಂದ ಉತ್ತರಗಳಿವು.

ದುಡುಕಬೇಡಿ, ನೇರವಾಗಿ ಮಾತನಾಡಿ ದುಡುಕಬೇಡಿ ನಿಧಾನವಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ. ನಿಮ್ಮ ಪ್ರೀತಿ ನಿಮ್ಮ ಅಣ್ಣನ ಗೆಳೆತನಕ್ಕೆ ತೊಂದರೆಯಾಗಬಾರದು. ಮೊದಲು ಅವರು ಯಾರನ್ನಾದರು ಪ್ರೀತಿ ಮಾಡುತ್ತಿದ್ದಾರ ಎಂದು ಖಚಿತಪಡಿಸಿಕೊಳ್ಳಿ. ಯಾರನ್ನೂ ಪ್ರೀತಿಸುತ್ತಿಲ್ಲ ಎಂದರೆ ನಿಮ್ಮ ಮಾರ್ಗ ಸುಲಭವಾಗುತ್ತದೆ. ಅವರಿಗೆ ನಿಮ್ಮ ಮನೆಯವರ ಬಗ್ಗೆ, ನಿಮ್ಮ ಬಗ್ಗೆ ಯಾವ ರೀತಿಯ ಅಭಿಪ್ರಾಯ ಇದೆ ಎಂದು ತಿಳಿದುಕೊಳ್ಳುವುದು ತುಂಬ ಮುಖ್ಯವಾಗುತ್ತದೆ. ಒಮ್ಮೆ ಅವರೊಂದಿಗೆ ನೇರವಾಗಿ ಮಾತನಾಡಿ ನಿಮ್ಮ ಅಭಿಪ್ರಾಯ ತಿಳಿಸಿ. ನನ್ನಿಂದ ನಿಮ್ಮ ಗೆಳೆತನಕ್ಕೆ ತೊಂದರೆಯಾಗಬಾರದು ಎಂದು ಹೇಳಿ. ನೇರವಾದ ಮಾತಿನಿಂದ ಪರಿಹಾರ ಸಿಗಬಹುದು. ಇದರಿಂದ ನಿಮಗೆ ಪ್ರೀತಿ ಸಿಗಬಹುದು, ನಿಮ್ಮ ಅಣ್ಣನ ಗೆಳೆತನವೂ ಉಳಿಯುವುದು. 
- ಎನ್. ರಘುವೀರ್ ಮಸ್ಕಲ್

ಪ್ರೀತಿ ಇದ್ದರೆ ಹೇಳಿಬಿಡಿ
ನಿಮಗೆ ಅವರ ಮೇಲೆ ಪ್ರೀತಿ ಆಗಿದೆ ಎನ್ನುವುದಾದರೆ ಬೇಗನೇ ಹೇಳಿಬಿಡಿ. ಅವರಿಗೂ ಕೂಡ ನಿಮ್ಮ ಮೇಲೆ ಪ್ರೀತಿಯಾಗಿರಬಹುದು. ಹೆದರುವುದು ಬೇಡ. ನೇರವಾಗಿ ನಿಮ್ಮ ಅಣ್ಣನ ಗೆಳೆಯನನ್ನು ಮೀಟ್ ಮಾಡಿ ಪ್ರೀತಿ ನಿವೇದನೆ ಮಾಡಿಕೊಳ್ಳಿ. ಪ್ರೀತಿಯನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗುವುದು ಬೇಡ. ಒಂದು ವೇಳೆ ಅವರಿಗೂ ನಿಮ್ಮ ಮೇಲೆ ಪ್ರೀತಿ ಇದ್ದರೆ ಇಬ್ಬರೂ ಒಪ್ಪಿದರೆ ಮುಂದೆ ನಿಮ್ಮ ಮನೆಯವರನ್ನು ಒಪ್ಪಿಸುವ ಆಲೋಚನೆ ಮಾಡಿ. ಒಂದು ವೇಳೆ ಅವರಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲದೇ ಇದ್ದರೆ ನೀವೂ ಕೂಡ ನೆಮ್ಮದಿಯಿಂದ ಮುಂದಿನ ಜೀವನ ನಡೆಸಲು ಸುಲಭವಾಗುತ್ತದೆ. ಇಲ್ಲದೇ ಇದ್ದರೆ ಅದೇ ಕೊರಗಿನಲ್ಲಿ ಇರಬೇಕಾಗುತ್ತದೆ.
- ಪ್ರಿಯಾ ವಾಲಿಕರ್

Follow Us:
Download App:
  • android
  • ios