Summer Tips : ಸೊಳ್ಳೆ ನಿಮ್ಮನೆ ಕಡೆ ತಿರುಗಿಯೂ ನೋಡ್ಬಾರದು ಅಂದ್ರೆ ಹೀಗೆ ಮಾಡಿ

Home Remedies to protect yourselves from Mosquitoes. ಪಾರ್ಕ್ ಗೆ ಹೋಗಿ ಇಲ್ಲ ಮನೆಯಲ್ಲಿರಿ, ಸೊಳ್ಳೆ ಮಾತ್ರ ನಿಮ್ಮನ್ನ ಬಿಡೋದಿಲ್ಲ. ಬೆಳಿಗ್ಗೆ –ಸಂಜೆ ಎನ್ನದೆ ನಿಮ್ಮನ್ನು ಹಿಂಬಾಲಿಸುವ ಸೊಳ್ಳೆ ಮಕ್ಕಳಿಗೆ ಮತ್ತಷ್ಟು ಡೇಂಜರ್. ಅದ್ರಿಂದ ರಕ್ಷಣೆ ಬೇಕೆಂದ್ರೆ ಸುಲಭ ಮನೆ ಮದ್ದನ್ನು ಬಳಸ್ಬೇಕು. 
 

Home Remedies To Protect yourselves from Mosquitoes

ಬೇಸಿಗೆ (Summer) ಶುರುವಾಗಿದೆ. ಬೇಸಿಗೆ (Hot) ಬಿಸಿಲ ಝಳದ ಜೊತೆ ಸೊಳ್ಳೆ (Mosquito) ಗಳ ಕಾಟವೂ ಶುರುವಾಗಿದೆ. ವಾತಾವರಣ ಬದಲಾವಣೆ, ಆಗಾಗ ಬೀಳುವ ಮಳೆ ಹಾಗೂ ಗಾಢವಾದ ಬಿಸಿಲಿನಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಲಿದೆ. ಸೊಳ್ಳೆಗಳು ಮಲೇರಿಯಾ, ಚಿಕೂನ್ ಗುನ್ಯಾ, ಡೆಂಗ್ಯೂ ಮುಂತಾದ ಅಪಾಯಕಾರಿ ರೋಗಗಳನ್ನು ಹರಡುತ್ತವೆ. ಈ ಸಮಯದಲ್ಲಿ ಸೊಳ್ಳೆಗಳಿಂದ ದೂರವಿರುವುದ ಬಹಳ ಮುಖ್ಯ. ಅದ್ರಲ್ಲೂ ಮನೆಯ ಚಿಕ್ಕ ಮಕ್ಕಳನ್ನು ಈ ಸೊಳ್ಳೆಗಳ ಕಾಟದಿಂದ ರಕ್ಷಿಸಬೇಕು.  ಏಕೆಂದರೆ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಸೊಳ್ಳೆ ಕಚ್ಚಿದ್ರೆ ಮಕ್ಕಳು ಬೇಗ ಹಾಸಿಗೆ ಹಿಡಿಯುತ್ತಾರೆ. ಮಕ್ಕಳು ಮಾತು ಕೇಳುವುದಿಲ್ಲ. ಸೊಳ್ಳೆಯಿರುವ ಜಾಗದಲ್ಲಿಯೇ ಆಟವಾಡುವುದು ಹೆಚ್ಚು. ಚಿಕ್ಕ ಮಕ್ಕಳನ್ನು ಸೊಳ್ಳೆಗಳಿಂದ ರಕ್ಷಿಸಲು ಕೆಲ ಉಪಾಯಗಳನ್ನು ನೀವು ಅನುಸರಿಸಬಹುದು. ಸೊಳ್ಳೆಗಳಿಂದ ಮಕ್ಕಳನ್ನು ರಕ್ಷಿಸುವ ಮಾರ್ಗಗಳ ಬಗ್ಗೆ ನಾವಿಂದು ಹೇಳ್ತೇವೆ.

ಸೊಳ್ಳೆಗಳಿಂದ ಮಕ್ಕಳ ರಕ್ಷಣೆ :  

ಸ್ವಚ್ಛತೆ : ಎಲ್ಲರಿಗೂ ತಿಳಿದಿರುವಂತೆ ಸೊಳ್ಳೆಗಳು ಉತ್ಪತ್ತಿಯಾಗುವುದು ಕೊಳಕಿನಲ್ಲಿ.  ನಿಮ್ಮ ಮನೆಯ ಸುತ್ತ ಕಸ ಅಥವಾ ಕಸದ ರಾಶಿಯಿದ್ದರೆ, ಇಂದೇ ಅದನ್ನು ತೆಗೆದುಹಾಕಿ. ನಿಮ್ಮ ಮನೆಯನ್ನು ಸೊಳ್ಳೆಗಳಿಂದ ಮುಕ್ತಗೊಳಿಸಲು, ನಿಮ್ಮ ಮನೆಯ ಸುತ್ತಲೂ ನೀರು ಮತ್ತು ಕೊಳೆ ಸಂಗ್ರಹವಾಗದಂತೆ ನೋಡಿಕೊಳ್ಳಿ. ಮನೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ. ಮನೆಯೊಳಗೂ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿ. ಕಸಗಳನ್ನು ಪ್ರತಿ ದಿನ ಹೊರಗೆ ಹಾಕಿ.

ನೈಸರ್ಗಿಕ ಉತ್ಪನ್ನ ಅಂತ ಕಿಚನ್‌ನಲ್ಲಿ ಸಿಕ್ಕಿದ್ದೆಲ್ಲಾ ಮುಖಕ್ಕೆ ಹಚ್ಬೇಡಿ, ಅಪಾಯ ತಪ್ಪಿದ್ದಲ್ಲ !

ತುಳಸಿ ಗಿಡ : ತುಳಸಿ ಗಿಡ ಸೊಳ್ಳೆಗಳನ್ನು ನಾಶಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ತುಳಸಿಯನ್ನು ಬಾಗಿಲ ಬಳಿ ಇಡುವುದರಿಂದ ಸೊಳ್ಳೆಗಳು ಮನೆಗೆ ಬರುವುದಿಲ್ಲ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹಾಗಾಗಿ ನೀವು ಕೂಡ ನಿಮ್ಮ ಮಕ್ಕಳನ್ನು ಸೊಳ್ಳೆಗಳಿಂದ ದೂರವಿಡಬೇಕೆಂದಿದ್ದರೆ ಖಂಡಿತವಾಗಿ ನಿಮ್ಮ ಮನೆಯ ಕಿಟಕಿ ಬಾಗಿಲುಗಳ ಬಳಿ ತುಳಸಿ ಗಿಡವನ್ನು ನೆಡಿ. ಇದಲ್ಲದೆ, ನೀವು ತುಳಸಿ ರಸವನ್ನು ಮಕ್ಕಳ ದೇಹಕ್ಕೆ ಹಚ್ಚಬಹುದು ಅಥವಾ ನಿಮ್ಮ ಮನೆಗೆ ತುಳಸಿ ರಸವನ್ನು ಸಿಂಪಡಿಸಬಹುದು.

ನಿಂಬೆ ಹುಲ್ಲು : ನಿಂಬೆ ಹುಲ್ಲು ಔಷಧಿ ಗುಣಗಳನ್ನು ಹೊಂದಿದೆ. ಇದಯ ಸೊಳ್ಳೆಗಳನ್ನು ದೂರವಿಡುವ ಸಸ್ಯವಾಗಿದೆ. ನಿಂಬೆ ಹುಲ್ಲನ್ನು ಲೆಮನ್ ಟೀ ರೂಪದಲ್ಲಿ ಬಳಸಲಾಗುತ್ತದೆ. ಆದರೆ ನಿಂಬೆ ಹುಲ್ಲನ್ನು ನಿಮ್ಮ ಮನೆಯ ಮಡಿಕೆ ಅಥವಾ ಹುಲ್ಲುಹಾಸಿನಲ್ಲಿ ಬೆಳೆಸಿದರೆ ಅದರ ವಾಸನೆಯು ನಿಮ್ಮ ಮನೆಯ ಸುತ್ತ ಹರಡುತ್ತದೆ. ಇದರ ವಾಸನೆಗೆ ಸೊಳ್ಳೆ ಮನೆ ಪ್ರವೇಶ ಮಾಡುವುದಿಲ್ಲ. ನಿಮ್ಮ ಮಕ್ಕಳು ಸೊಳ್ಳೆಗಳಿಂದ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತಾರೆ.

ತಲೆನೋವು ಅಂತ ಆಗಾಗ ಬಾಮ್ ಹಚ್ಚಿಕೊಳ್ಬೇಡಿ, ಇದ್ರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಯಾಗುತ್ತೆ ನೋಡಿ !

ಬೇವಿನಲ್ಲಿದೆ ಸೊಳ್ಳೆ ಓಡಿಸುವ ಶಕ್ತಿ : ಕಹಿಬೇವು ಮನುಷ್ಯರಿಗೆ ತುಂಬಾ ಪ್ರಯೋಜನಕಾರಿ ಎಂದು ವಿಜ್ಞಾನವೂ ಸಾಬೀತುಪಡಿಸಿದೆ. ಬೇವು ಆರೋಗ್ಯ ವರ್ಧಕವಾಗಿರುವುದರ ಜೊತೆಗೆ ಮಕ್ಕಳನ್ನು ಸೊಳ್ಳೆಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಬೇವಿನ ಎಣ್ಣೆಯನ್ನು ದೇಹಕ್ಕೆ ಹಚ್ಚುವುದರಿಂದ ಸೊಳ್ಳೆಗಳು ನಿಮ್ಮ ಸುತ್ತಲೂ ಬರುವುದಿಲ್ಲ. ಅಲ್ಲದೆ, ಬೇವಿನ ಎಣ್ಣೆ ಮತ್ತು ತೆಂಗಿನ ಎಣ್ಣೆಯ ಮಿಶ್ರಣವನ್ನು ತಯಾರಿಸಿ ಅದನ್ನು ನಿಮ್ಮ ಮನೆಯೊಳಗೆ ಸಿಂಪಡಿಸುವುದರಿಂದ ನಿಮ್ಮ ಮನೆಯೊಳಗೆ ಸೊಳ್ಳೆಗಳು ಬರುವುದಿಲ್ಲ.
ತೆಂಗಿನೆಣ್ಣೆ ಮತ್ತು ಬೇವಿನ ಎಣ್ಣೆಯ ಮಿಶ್ರಣದಿಂದ ಮನೆಯಲ್ಲಿ ದೀಪವನ್ನು ಹಚ್ಚಬಹುದು. ಈ ದೀಪದ ವಾಸನೆಯು ಮನೆ ಹಾಗೂ ಮನೆ ಸುತ್ತ ಹರಡುತ್ತದೆ. ಇದರಿಂದ ನೀವು ಮತ್ತು ನಿಮ್ಮ ಮಕ್ಕಳಿಂದ ಸೊಳ್ಳೆಗಳನ್ನು ದೂರವಿಡಬಹುದು. ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿ ಫಂಗಲ್, ಆಂಟಿ ವೈರಲ್ ಮಿಶ್ರಣವಾಗಿದ್ದು, ಸೊಳ್ಳೆಗಳಿಂದ ರಕ್ಷಣೆ ನೀಡುತ್ತದೆ. 

ಲ್ಯಾವೆಂಡರ್ : ಮೇಲಿನವುಗಳಲ್ಲದೆ ನೀವು ಲ್ಯಾವೆಂಡರ್ ಗಿಡವನ್ನು ಕೂಡ ಮನೆಯಲ್ಲಿ ಬೆಳೆಸಬಹುದು. ಇದು ಕೂಡ ಸೊಳ್ಳೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಅದ್ರ ವಾಸನೆ ಸೊಳ್ಳೆ ಓಡಿಸಲು ಪರಿಣಾಮಕಾರಿಯಾಗಿದೆ.

Latest Videos
Follow Us:
Download App:
  • android
  • ios