ರೋಟಿಯೊಂದಿಗೆ ಪಾಲಕ್ ಪನ್ನೀರ್ ರುಚಿ ಸವಿಯಿರಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Jul 2018, 11:44 AM IST
Tasty instant palak paneer recipe
Highlights

ಅದೇ ರೋಟಿ, ಚಪಾತಿ ತಿಂದ ಬೇಜಾರು ಆಗಿದ್ಯಾ? ಅದಕ್ಕೆ ಇಲ್ಲಿದೆ ಪಾಲಕ್ ಪನ್ನೀರ್ ರೆಸಿಪಿ. ಹೆಚ್ಚು ಪೌಷ್ಟಿಕಾಂಶವುಳ್ಳ ಇದು ಆರೋಗ್ಯಕ್ಕೂ ಒಳ್ಳೆಯದು, ನಾಲಿಗೆಗೂ ರುಚಿ. 

ಸಿಂಪಲ್ ಆಗಿ, ಸುಲಭವಾಗಿ ಮಾಡೋ ಪಾಲಕ್ ಪನ್ನೀರ್ ರೆಸಿಪಿ ಇಲ್ಲಿದೆ...

ಬೇಕಾಗುವ ಸಾಮಾಗ್ರಿಗಳು : 

 • 1 ಕಟ್ಟು ಪಾಲಕ್ ಸೊಪ್ಪು
 • 1 ಚೂರು ಶುಂಠಿ
 • 1ಚೂರು ಬೆಳ್ಳುಳ್ಳಿ
 • 3 ಮೆಣಸಿನಕಾಯಿ
 • 3 ಚಮಚ ಎಣ್ಣೆ
 • 1 ಚಮಚ ತುಪ್ಪ
 • 11 ಪನೀರ್
 • 1 ಚಮಚ ಜೀರಿಗೆ
 •  ಸಣ್ಣ ಚೂರು ಚಕ್ಕೆ
 •  4 ಲವಂಗ
 •  2 ಏಲಕ್ಕಿ
 • 1 ದಾಲ್ಚಿನಿ
 • 1 ಚಮಚ ಕಸ್ತೂರಿ ಮೇಥಿ
 • ಈರುಳ್ಳಿ
 • ಟೊಮ್ಯಾಟೊ
 • ಉಪ್ಪು
 • ಕಾಲು ಚಮಚ ಗರಂ ಮಸಾಲ
 • 2 ಚಮಚ ಕೆನೆ

ಮಾಡುವ ವಿಧಾನ:

 • ಕಾದಿರುವ ಬಿಸಿ ನೀರಿನಲ್ಲಿ 2 ನಿಮಿಷ ಪಾಲಕ್ ಬೆಯಿಸಿ ನಂತರ ಸೊಪ್ಪನ್ನು ತಣ್ಣಗಿರುವ ನೀರಿಗೆ ಹಾಕಬೇಕು. ಒಂದು ಮಿಕ್ಸಿಯಲ್ಲಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಮೆಣಸಿನಕಾಯಿ  ರುಬ್ಬಿಕೊಳ್ಳಬೇಕು.   
 • ಒಂದು ಪಾತ್ರೆಯಲ್ಲಿ ಎಣ್ಣಿ, ತುಪ್ಪ ಮತ್ತು ಪನ್ನೀರು ಸೇರಿಸಿ ಸೀಳು ಬಿಡದಂತೆ ರೋಸ್ಟ್ ಮಾಡಿ.
 • ಪನ್ನೀರು ಪಕ್ಕದಲ್ಲಿ ತೆಗೆದಿಡಿ. ನಂತರ ಅದಕ್ಕೆ ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ,  ಕಸ್ತೂರಿ ಮೇಥಿ ಹುರಿದುಕೊಳ್ಳಿ. ಅದಕ್ಕೆ ಈರುಳ್ಳಿ ಸೇರಿಸಿ. ಕೆಂಪಗೆ ಆಗೋವರೆಗೂ ಹುರಿಯಿರಿ. ನಂತರ ಮೃದುವಾಗಿರುವವರೆಗೂ ಟೊಮ್ಯಾಟೊ ಸೇರಿಸಿ. 
 • ಅದಕ್ಕೆ ರುಬ್ಬಿದ ಪಾಲಕ್, ಕಾಲು ಕಪ್ ನೀರು ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ, ರೋಸ್ಟ್ ಮಾಡಿದ ಪನ್ನೀರ್ ಸೇರಿಸಸಿ 10 ನಿಮಿಷ ಬೆಯಿಸಬೇಕು. ಅದರೆ ಮಧ್ಯದಲ್ಲಿ  ಮತ್ತೆ ಕಸ್ತೂರಿ ಮೆಥಿ ಮತ್ತು ಕ್ರೀಮ್ ಸೇರಿಸಿದರೆ ಪಾಲಕ್ ಪನ್ನೀರ್ ರೆಡಿ.
loader