ಸ್ವಸ್ತಿಕ್‌ ಕನ್ಯಾಡಿ

ಎಸ್‌ಡಿಎಂ ಕಾಲೇಜು, ಉಜಿರೆ.

‘ಒಂದು ಸಲ ಆ ಜೇನುಗೂಡಿಗೆ ಬೆಂಕಿ ಕೊಡ್ಲೇಬೇಕು’ ಉಪನ್ಯಾಸಕರೊಬ್ಬರ ಮಾರ್ಮಿಕ ಮಾತಿಗೆ ಮತ್ತೆಂದೂ ತಿರುಗಿ ಮಾತನಾಡದೆ ಎಷ್ಟೋ ಕಷ್ಟಪಟ್ಟು ಎಣ್ಣೆಹಚ್ಚಿ ಕನ್ನಡಿ ಮುಂದೆನಿಂತು ಗಂಟೆಗಟ್ಟಲೆ ಸವರಿಕೊಂಡಿದ್ದ ನೆಚ್ಚಿನ ಸಂಗಾತಿಯನ್ನು ದೂರ ಮಾಡಲೇಬೇಕಾಯಿತು. ಈ ಬೈಗುಳಗಳೇನೂ ಆತನಿಗೆ ಹೊಸತಲ್ಲ. ಎಲ್ಲಿ ಹೋದರೂ ಬೈಗುಳ ಆತನ ಬೆನ್ನುಬಿಟ್ಟಿದ್ದಿಲ್ಲ. ಎಲ್ಲಿವರೆಗೆಂದರೆ ಹೆತ್ತ ತಾಯಿಯಿಂದ ಹಿಡಿದು ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ನೆಂಟರವರೆಗೆ. ಹೊಗಳಿದ್ದು ಮಾತ್ರ ಆಕೆಯೊಬ್ಬಳೇ ಅಂತನ್ನಿಸುತ್ತದೆ..! ಇದು ಬಿಯರ್ಡ್‌ ಬಾಯ್ಸ… ಅಂತ ಕರೆಸಿಕೊಳ್ಳೋ ಕಾಲೇಜು ಹುಡುಗರ ಕತೆ.

ರಿಪೋರ್ಟರ್‌ ಡೈರಿ;ಬಾತ್‌ರೂಮ್‌ನಲ್ಲಿ ನೀರು ಇಲ್ಲ, ಸಾಂಬರ್‌ನಲ್ಲಿ ನೀರು ಇದೆ!...

ದಾಡಿ ಬೆಳೆಸೋದು ಅಂದ್ರೆ ತಮಾಷೆಯ ಮಾತಲ್ಲ. ಬಾರದ ದಾಡಿಗೆ ಅವರಿವರ ಮಾತು ಕೇಳಿ ಈರುಳ್ಳಿ ರಸ, ಗಡ್ಡ ದೆಣ್ಣೆ(ಬಿಯರ್ಡ್‌ ಆಯಿಲ…) ಇನ್ನಿತರೆ ಮಾರುಕಟ್ಟೆಯಲ್ಲಿ ದೊರಕುವ ಕೆಲವು ಕ್ರೀಮ… ಹಚ್ಚಿ ಕೈ ಸುಟ್ಟುಕೊಂಡವರೂ ಇದ್ದಾರೆ. ಹಾಗೋ ಹೀಗೋ ಬಂದ ಅಲ್ಪ ಕುರುಚಲು ಗಡ್ಡವನು ಮರುಭೂಮಿಯ ಮುಳ್ಳುಕಂಟಿಗೆ ಹೋಲಿಸಿ ಕತ್ತರಿಸಿ ತೆಗೆದು ಓರಣಗೊಳಿಸಿದರೆ ಇತರರ ದೃಷ್ಟಿಗೆ ಆತ ನಿಯತ್ತಿಗ. ಇಲ್ಲವಾದಲ್ಲಿ ಅದೇ ಅಲ್ಪ ಕಳೆಗೆ ಮತ್ತೆ ಮತ್ತೆ ಬೈಗುಳಕ್ಕೆ ತುತ್ತಾಗುವ ಆತನ ನೋವು ಯಾರಿಗೂ ಬೇಡ.

ಇನ್ನು ದಾಡಿಯೇ ಇಲ್ಲದವರ ವ್ಯಥೆ ಹೇಗಿರಬೇಡ? ಖರ್ಚಿಲ್ಲ, ನಿರ್ವಹಣಾ ಸಮಯ ಉಳಿತಾಯ. ತೋರಿಕೆಯ ಹರ್ಷ ಹೊರಸೂಸಿ ಒಳಗೊಳಗೇ ವ್ಯಥೆ ಪಡುವ ಬುದ್ಧಿವಂತರೂ ಇದ್ದಾರೆ. ಇನ್ನೂ ಸಮಯವಿದೆ ಬಂದಾಗ ಯೋಚಿಸಿದರಾಯ್ತು ಅನ್ನುವ ಆಶಾವಾದಿಗಳೂ ಒಂದಷ್ಟುಜನ. ದಾಡಿ ಬೆಳೆಸುವುದೆಂದರೆ ಸುಮ್ಮನೆಯೇನು? ಎಲ್ಲರಿಗೂ ನನ್ನಂತೆ ದಾಡಿ ಇರಲ್ಲ, ಶಿವಾಜಿ ಮಹಾರಾಜರಿಗೂ ನನ್ನಂತೆ ಚೂಪಾದ ಗಡ್ಡವಿತ್ತು ಎಂದು ಯುವಕನೊಬ್ಬ ಗರ್ವದಿಂದ ಹೇಳುತ್ತಿರಬೇಕಾದರೆ ಎಂಥವರಿಗಾದರೂ ದಾಡಿ ಬೆಳೆಸಬೇಕೆಂದು ಅನಿಸುವುದು ಸಹಜ.

ಈಗಲೂ ನೆನಪಿದೆ ಬಾಲ್ಯದ ಬಾಸುಂಡೆ! ...

ದಾಡಿಬಿಟ್ಟಮಾತ್ರಕ್ಕೆ ಆತ ಕೆಟ್ಟವನಾಗಲಾರ. ಆತನ ಮನಸ್ಸನ್ನು ಅರಿಯುವ ಪ್ರಯತ್ನ ಮಾಡಬೇಕು ಅಂತ ಒಬ್ಬ ಗಡ್ಡಧಾರಿ ವಿದ್ಯಾರ್ಥಿ ನನ್ನ ಬಳಿ ನೋವನ್ನು ತೋಡಿಕೊಂಡ. ಇನ್ನು ಕಾಲೇಜು ಕನ್ಯೆಯರಂತೂ ಕೇಳಲೇ ಬೇಡಿ, ತಾನಿಷ್ಟಪಡೋ ಹುಡಗನಲ್ಲಿ ಇದೊಂದು ಲಕ್ಷಣ ಬೇಕೇ ಬೇಕು ಅಂತಾರೆ. ಇಸ್ಲಾಂ ಧರ್ಮದಲ್ಲಿ ಗಡ್ಡಕ್ಕೆ ವಿಶೇಷ ಪ್ರಾತಿನಿಧ್ಯವಿದೆಯಂತೆ.

ಏನೇ ಆಗಲಿ ಕಾಲೇಜಿಗೂ ದಾಡಿಗೂ ಬಹಳ ಕಾಲದ ನಂಟು. ಕ್ಲೀನ್‌ ಶೇವ್‌ ಮಾಡಿದರಷ್ಟೇ ನಮ್ಮಲ್ಲಿ ಪ್ರವೇಶ ಎನ್ನುವ ಶಿಕ್ಷಣ ಸಂಸ್ಥೆಗಳು ಸಾಮನ್ಯ. ಶಿಸ್ತಿಗೂ ದಾಡಿಗೂ ಇರುವ ವೈಮನಸ್ಸು ಬಲ್ಲವಾರಾರು? ದಾಡಿ ಇರೋ ಗಂಡಸಿಗೇ ಡಿಮ್ಯಾಂಡಪ್ಪೋ ಡಿಮ್ಯಾಂಡು!