Asianet Suvarna News Asianet Suvarna News

ರಿಪೋರ್ಟರ್‌ ಡೈರಿ;ಬಾತ್‌ರೂಮ್‌ನಲ್ಲಿ ನೀರು ಇಲ್ಲ, ಸಾಂಬರ್‌ನಲ್ಲಿ ನೀರು ಇದೆ!

ಕಾಲೇಜ್‌ ಅಂದಮೇಲೆ ಕಾರ್ಯಕ್ರಮಗಳು, ಸ್ಪೋರ್ಟ್ಸ್, ಜಯಂತಿಗಳು ಹೀಗೆ ನಡೆಯುತ್ತಾ ಇರುತ್ತವೆ. ಅಂದು ನಮ್ಮ ಕಾಲೇಜ್‌ ಕಾರಿಡಾರ್‌ನಲ್ಲಿ ಸ್ಟ್ರೈಕ್ ಇತ್ತು.....

S yerriswamy from VSK UNIVERSITY writes about college protest
Author
Bangalore, First Published Sep 12, 2019, 11:44 AM IST

ನೈಟ್‌ ಲೇಟಾಗಿ ಮಲಗಿದ್ದರಿಂದ ಬೆಳಗ್ಗೆ ಕ್ಲಾಸಿಗೆ ಲೇಟಾಗಿ ಹೋದೆ. ಡಿಪಾರ್ಟ್‌ಮೆಂಟ್‌ ಹತ್ತಿರ ಹೋಗುತ್ತಿದ್ದಂತೆ ನಮ್ಮ ಲೆಕ್ಚರ​ರ್‍ಸ್ ಎಲ್ಲರೂ ನಿಶ್ಯಬ್ದ. ನನಗೆ ಅನುಮಾನ ಏನಾಯಿತು ಅಂತ. ನನ್ನ ನೋಡಿ ‘ಯಾಕೋ ಲೇಟ್‌? ಟೈಮ್‌ಗೆ ಬರೋದಕ್ಕೆ ಆಗೋಲ್ವಾ?’ ಅಂದ್ರು. ‘ಅದ್ಯಾಕೆ ಮಾತನಾಡದೇ ನಿಂತಿದ್ದೀಯಾ? ಅಲ್ಲಿ ನಿಮ್ಮ ಹಾಸ್ಟೆಲ್‌ ವಿದ್ಯಾರ್ಥಿಗಳು ಸ್ಟೆ್ರೖಕ್‌ ಮಾಡ್ತಾ ಇದ್ದಾರೆ, ಹೋಗಿ ರಿಪೋರ್ಟ್‌ ಮಾಡಿಕೊಂಡು ಫೋಟೋ ತೆಗೆದುಕೊಂಡು ಬಾ’ ಎಂದು ಹೇಳಿದರು.

ನಾನು ಯೂನಿವರ್ಸಿಟಿಯಲ್ಲಿ ಜರ್ನಲಿಸಂ ಅಂತಿಮ ವರ್ಷದ ವಿದ್ಯಾರ್ಥಿ. ಒಂದು ಕ್ಯಾಮೆರಾ, ಬುಕ್‌, ಪೆನ್ನು ತೆಗೆದುಕೊಂಡು ಸ್ಟೆ್ರೖಕ್‌ ನಡೆಯುತ್ತಿದ್ದ ಜಾಗಕ್ಕೆ ಹೋಗುತ್ತಿದ್ದೆ. ಹತ್ತಿರ ಹೋದಂತೆ ಸ್ಟೆ್ರೖಕ್‌ ಸೌಂಡ್‌ ಜಾಸ್ತಿಯಾಯ್ತು. ಅವರು ಕೂಗುತ್ತಿದ್ದ ಡೈಲಾಗ್‌ ಹೀಗಿತ್ತು- ‘ಬಾತ್‌ರೂಮ್‌ನಲ್ಲಿ ನೀರು ಇಲ್ಲ, ಸಾಂಬರ್‌ನಲ್ಲಿ ನೀರು ಇದೆ, ವೀ ವಾಂಟ್‌ ಜಸ್ಟೀಸ್‌’.

ಈಗಲೂ ನೆನಪಿದೆ ಬಾಲ್ಯದ ಬಾಸುಂಡೆ!

ಒಂದು ಕಡೆ ಹುಡುಗಿಯರು ಇನ್ನೊಂದು ಕಡೆ ಹುಡುಗರು ಇದ್ದರು. ಅವರಲ್ಲಿ ಇಬ್ಬರ ಕಡೆಯಿಂದಲೂ ಕೆಲ ಲೀಡರ್‌ಗಳು ಇದ್ದರು. ನೀರು ಇಲ್ಲ ಎಂದು ಸ್ಟೆ್ರೖಕ್‌ ಇದ್ದರೆ, ಹುಡುಗಿಯರ ಮುಖ ಮಾತ್ರ ನೀಟಾಗಿ ಸ್ನಾನ ಮಾಡಿ ಫಂಕ್ಷನ್‌ಗೆ ಕೂರುವಂತೆ ಡ್ರೆಸ್‌ ಆಗಿ ಮೇಕಪ್‌ ಮಾಡಿಕೊಂಡು ಇದ್ದರು. ಕೆಲ ಹುಡುಗಿಯರು ಮಾಡಿಕೊಂಡಿರುವ ಮೇಕಪ್‌ ಹಾಳಾಗುತ್ತೆ ಎಂದು ಮುಖಕ್ಕೆ ವೇಲು ಹಾಕಿಕೊಂಡು, ಫೇಸ್ಬುಕ್‌ ಸ್ಟೇಟಸ್‌ಗಾಗಿ ಸೆಲ್ಫೀ ಕ್ಲಿಕ್‌ ಮಾಡುತ್ತಿದ್ದರು. ಇನ್ನು ಕೆಲವರು ಸರ್‌ ಬಂದರೆ ನೋಡುತ್ತಾರೆ ಎಂದು ಬಚ್ಚಿಟ್ಟುಕೊಳ್ಳುತ್ತಾ ಇದ್ದರು. ಇನ್ನು ಹುಡುಗರು ಏಕೆ ನೀವು ಕೂಗುತ್ತಿದ್ದೀರಿ ಎಂದರೆ ‘ಹುಡುಗಿಯರು ಇದ್ದಾರೆ ಅಂದ ಮೇಲೆ ನಾವೂ ಇರಬೇಕಲ್ವಾ ಅಂತಾರೆ. ಯಾರಾದರು ಹುಡುಗಿಯರು ನೋಡುತ್ತಾರೆಂದು ಜೋರಾಗಿ ಕೂಗುತ್ತಾ ಹೀರೋ ರೀತಿ ಫೋಸ್‌ ಕೊಡೋದು, ಯಾರಾದರೂ ಅಧಿಕಾರಿಗಳು ಬಂದರೆ ಗಟ್ಟಿಯಾಗಿ ಸೌಂಡ್‌ ಮಾಡೋದು, ನೀರು ಇಲ್ಲ ಅಂತ ಹೇಳಿದರೂ ಎಲ್ಲರೂ ಸ್ನಾನ ಮಾಡಿ ಬಂದವರು, ಟಿಫನ್‌ ಮಾಡದೆ ಇರುವವರು ಮೆಲ್ಲಗೆ ಕ್ಯಾಂಟೀನ್‌ ಅಲ್ಲಿ ತಿಂದು ಕೂತಿದ್ದರು.

ಒಂದು ಮುತ್ತಿನ ಕತೆ ; ಅರ್ಧ ಮುಗಿದ ದಾರಿ

ಪ್ರತಿಭಟನೆ ಎನ್ನುವುದು ಈ ಕಾಲೇಜ್‌ ಹುಡುಗರಿಗೆ ಒಂದು ರೀತಿಯ ಮನೋರಂಜನೆಯಾಗಿದೆ. ಕೆಲವರು ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಶೇರ್‌ ಮಾಡುವುದು, ಇನ್ನು ಲವ​ರ್‍ಸ್ ಇದ್ದವರು ಪಾರ್ಕ್ಗಳಲ್ಲಿ ಸದ್ದಿಲ್ಲದೆ ಸುದ್ದಿ ಹೇಳಿದ ಹಾಗೆ ಇರುವವರು. ಇವೆಲ್ಲವನ್ನು ರಿಪೋರ್ಟ್‌ ಮಾಡಲು ಹೋದ ನನಗೆ ಅನ್ನಿಸಿದ್ದು ‘ಇವರದ್ದು ಸ್ಟೆ್ರೖಕ್‌ ಅಥವಾ ಫ್ಯಾಷನ್ನಾ?’ ಅನಿಸಿತು.

Follow Us:
Download App:
  • android
  • ios