ಮಾದಕ ಚೆಲುವೆ ಸನ್ನಿ ಫಿಟ್’ನೆಸ್ ಗುಟ್ಟೇನು?

First Published 25, Jun 2018, 3:35 PM IST
Sunny Leone Fitness Secret
Highlights

ಮಾದಕ ಚೆಲುವೆ, ಹುಡುಗರ ಹಾರ್ಟ್ ಬೀಟ್ ಸನ್ನಿ ಲಿಯೋನ್ ಬಳಕುವ ಬಳ್ಳಿಯಂತಿದ್ದಾರೆ. ಅವರ ಫಿಟ್’ನೆಸ್’ಗೆ ಫಿದಾ ಆಗದವರು ಯಾರಿದ್ದಾರೆ ಹೇಳಿ? ಅವರ ಫಿಟ್’ನೆಸ್ ರಹಸ್ಯವನ್ನು ಸ್ವತಃ ಸನ್ನಿಯೇ ಹೇಳಿಕೊಂಡಿದ್ದಾರೆ. 
 
ಮಾದಕ ಚೆಲುವೆ, ಹುಡುಗರ ಹಾರ್ಟ್ ಬೀಟ್ ಸನ್ನಿ ಲಿಯೋನ್ ಬಳಕುವ ಬಳ್ಳಿಯಂತಿದ್ದಾರೆ. ಅವರ ಫಿಟ್’ನೆಸ್’ಗೆ ಫಿದಾ ಆಗದವರು ಯಾರಿದ್ದಾರೆ ಹೇಳಿ? ಅವರ ಫಿಟ್’ನೆಸ್ ರಹಸ್ಯವನ್ನು ಸ್ವತಃ ಸನ್ನಿಯೇ ಹೇಳಿಕೊಂಡಿದ್ದಾರೆ. 

ಸನ್ನಿ ಡಯಟ್!
 
ಬೆಳ್ಳಂಬೆಳಗ್ಗೆ ಒಂದಿಡೀ ಎಳನೀರು ಕುಡಿಯುವುದರೊಂದಿಗೆ ಸನ್ನಿ ದಿನದ ಆರಂಭ. ಈ ಪಂಜಾಬಿ ಹೆಣ್ಣುಮಗಳಿಗೆ ತೂಕ ಮತ್ತು ಬಾಡಿಶೇಪ್ ಮೈಂಟೇನ್ ಮಾಡೋದೆ ದೊಡ್ಡ ತಲೆನೋವು. ಅದಕ್ಕೆ ಜಂಕ್‌ಫುಡ್, ಕಾರ್ಬೋಹೈಡ್ರೇಟ್ ಇರುವ ಆಹಾರ ತಿನ್ನಬೇಕು ಅಂತ ಎಷ್ಟು ಆಸೆ ಆದರೂ ಕಂಟ್ರೋಲ್ ಮಾಡ್ತಾರೆ. ಸಮೃದ್ಧ ತರಕಾರಿ, ಸಾಕಷ್ಟು ಹಣ್ಣು ತಿನ್ನೋದನ್ನು ರೂಢಿಸಿಕೊಂಡಿದ್ದಾರೆ.

ಎಗ್ವೈಟ್, ಟೋಸ್ಟ್ ಮತ್ತು ಒಂದು ಗ್ಲಾಸ್ ಹಾಲಿನಲ್ಲಿ ಬೆಳಗಿನ ಉಪಾಹಾರ ಪೂರೈಸುತ್ತಾರೆ. ಮಧ್ಯಾಹ್ನ ಗ್ರಿಲ್ಡ್ ಚಿಕನ್ ಮತ್ತು ತರಕಾರಿ, ಸಂಜೆ ಹಣ್ಣು, ತರಕಾರಿ, ನಟ್ಸ್ ತಿನ್ನುತ್ತಾರೆ. ರಾತ್ರಿ  ಬಹಳ ಕಡಿಮೆ ಆಹಾರ.  

loader