Ayurvedic Tips : ಆರೋಗ್ಯಕ್ಕೆ ಈ ಹಣ್ಣು ಅಮೃತವಾದ್ರೂ ತಪ್ಪಾಗಿ ಸೇವನೆ ಮಾಡಿದ್ರೆ ಅಪಾಯ ಹೆಚ್ಚು

ನೇರಳೆ ಹಣ್ಣು (Jamun fruit) ಸಾಕಷ್ಟು ಔಷಧಿ ಗುಣವನ್ನು ಹೊಂದಿದೆ. ಇದನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಆಯುರ್ವೇದದಲ್ಲೂ (Ayurveda) ಇದನ್ನು ಅನೇಕ ಔಷಧಿಗೆ ಬಳಕೆ ಮಾಡ್ತಾರೆ. ಆದ್ರೆ ಅದನ್ನು ಸರಿಯಾಗಿ ಸೇವನೆ ಮಾಡ್ಬೇಕು. ಇಲ್ಲವೆಂದ್ರೆ ತೊಂದರೆ (problem) ಎದುರಿಸಬೇಕಾದೀತು.
 

According To Ayurveda This Summer Fruit Jamun  Used As Medicine Know When And How To Eat

ನೇರಳೆ (Jamun) ಹಣ್ಣು (Fruit) ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರೂ ಆಸೆಯಿಂದ ತಿನ್ನುವ ಹಣ್ಣುಗಳಲ್ಲಿ ನೇರಳೆ ಕೂಡ ಒಂದು. ಬೇಸಿಗೆ (Summer) ಋತುವಿನಲ್ಲಿ ಸಿಗುವ ಹಣ್ಣು ಅನೇಕ ಆಯುರ್ವೇದ (Ayurveda) ಗುಣಗಳನ್ನು ಹೊಂದಿದೆ. ಈ ಹಣ್ಣಿನಲ್ಲಿ ವಿಟಮಿನ್ (Vitamin) ಗಳು ಹೇರಳವಾಗಿವೆ. ನೇರಳೆ ಹಣ್ಣಿನಲ್ಲಿ ವಿಟಮಿನ್ ಎ (Vitamin A) ಮತ್ತು ಸಿ ಹೆಚ್ಚಿನ ಪ್ರಮಾಣದಲ್ಲಿದೆ. ಹಾಗಾಗಿ ಈ ಹಣ್ಣು ಕಣ್ಣು (Eyes) ಮತ್ತು ಚರ್ಮ (Skin) ದ ಆರೋಗ್ಯ (Health) ಕ್ಕೆ ತುಂಬಾ ಪ್ರಯೋಜನ (benefit) ಕಾರಿ. ಹೊಳೆಯುವ ಚರ್ಮಕ್ಕಾಗಿ ಮತ್ತು ಮೊಡವೆ (Acne) ಯಿಂದ ಮುಕ್ತಿ ಪಡೆಯಲು ನೇರಳೆ ಹಣ್ಣಿನ ಸೇವನೆ ಮಾಡ್ಬೇಕೆಂದು ತಜ್ಞರು ಸಲಹೆ ನೀಡ್ತಾರೆ. 

ನೇರಳೆ ಹಣ್ಣಿನ ಪ್ರಯೋಜನ : 
ನೇರಳೆ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಐಬಿಎಸ್ (IBS), ಅತಿಸಾರ (Diarrhea), ಅತಿಯಾದ ರಕ್ತಸ್ರಾವ (Bleeding), ಲ್ಯುಕೋರಿಯಾ , ವಾಕರಿಕೆ ಮತ್ತು ವಾಂತಿ (Vomiting) ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ನೇರಳೆ ಹಣ್ಣು ಅಮೃತ. ಇದರಲ್ಲಿರುವ ಅಂಶಗಳು ಹೃದಯ (Heart) ಸಂಬಂಧಿ ಸಮಸ್ಯೆಯನ್ನೂ ದೂರ ಮಾಡುತ್ತದೆ.    

Ghee Use: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ತಿಂದ್ರೆ ಏನಾಗುತ್ತೆ ಗೊತ್ತಾ?

ಬರೀ ಹಣ್ಣಲ್ಲ, ತೊಗಟೆಯಲ್ಲೂ ಇದೆ ಔಷಧಿ ಗುಣ : 
ನೇರಳೆ ಹಣ್ಣು ವಾತವನ್ನು ಹೆಚ್ಚಿಸುವ ಜೊತೆಗೆ ಕಫ ಮತ್ತು ಪಿತ್ತವನ್ನು ಸಮತೋಲನಗೊಳಿಸುತ್ತದೆ. ನೇರಳೆ ಹಣ್ಣು ಅನೇಕ ಪ್ರಯೋಜನಗಳನ್ನು ಹೊಂದಿದೆ. ಬರೀ ಹಣ್ಣು ಮಾತ್ರವಲ್ಲ ಅದರ ಬೀಜಗಳು, ತೊಗಟೆ ಮತ್ತು ಎಲೆಗಳನ್ನು ವಿವಿಧ ಗಂಭೀರ ಕಾಯಿಲೆ (Disease) ಗಳ ಚಿಕಿತ್ಸೆ (Treatment) ಗಾಗಿ ಬಳಸಲಾಗುತ್ತದೆ  ಇಡೀ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ನೇರಳೆ ಹಣ್ಣು  ಉತ್ಕರ್ಷಣ ನಿರೋಧಕಗಳ ಮೂಲವಾಗಿದೆ. ನೇರಳೆ ಹಣ್ಣು ಮಧುಮೇಹ (Diabetes), ಹೈಪರ್ಗ್ಲೈಸೀಮಿಯಾ, ಕೆಮ್ಮು,ಉಬ್ಬಸ,ಬ್ರಾಂಕೈಟಿಸ್,ದೌರ್ಬಲ್ಯ,ರಕ್ತಹೀನತೆ,ಲೈಂಗಿಕ ದೌರ್ಬಲ್ಯ,ಲ್ಯುಕೋರೋಹಿಯಾ,ಮಾನಸಿಕ ಅಸ್ವಸ್ಥತೆಯಂತಹ ಸಮಸ್ಯೆಗಳನ್ನು ಗುಣಪಡಿಸುತ್ತದೆ. 

ನೇರಳೆ ಹಣ್ಣಿನ ಸೇವನೆ ಹೀಗಿರಲಿ : 
ನೇರಳೆ ಹಣ್ಣು ಅನೇಕ ಪ್ರಯೋಜನಗಳನ್ನು ಹೊಂದಿದೆ ನಿಜ. ಆದ್ರೆ ಹಣ್ಣುಗಳನ್ನು ಸೇವನೆ ಮಾಡುವ ಮೊದಲು ಹೇಗೆ ಸೇವನೆ ಮಾಡ್ಬೇಕು ಎಂಬ ಅಂಶ ಗೊತ್ತಿರಬೇಕು. ಅನೇಕ ಬಾರಿ ಹಣ್ಣನ್ನು ತಪ್ಪಾಗಿ ಸೇವನೆ ಮಾಡಿ ಲಾಭಕ್ಕಿಂತ ನಷ್ಟ ತಂದುಕೊಳ್ತೇವೆ. 

ಖಾಲಿ ಹೊಟ್ಟೆಯಲ್ಲಿ ಹಣ್ಣಿನ ಸೇವನೆ : 
ನೇರಳೆ ಹಣ್ಣು ಸೇವನೆ ಮಾಡುವವರು ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ತಿನ್ನಬಾರದು ಎಂಬ ವಿಷ್ಯವನ್ನು ತಿಳಿದಿರಬೇಕು. ಆಯುರ್ವೇದದಲ್ಲಿ, ನೇರಳೆ ಹಣ್ಣಿನ ಸೇವನೆಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ಗಮನ ಹರಿಸಲು ಸಲಹೆ ನೀಡಲಾಗಿದೆ. ಆಯುರ್ವೇದದ ಪ್ರಕಾರ, ನೇರಳೆ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಅನೇಕ ಬಾರಿ ನಮಗೆ ತಿಳಿಯದೆ ಖಾಲಿ ಹೊಟ್ಟೆಯಲ್ಲಿ ನೇರಳೆ ಹಣ್ಣನ್ನು ಸೇವಿಸಿರುತ್ತೇವೆ. ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ನಾಲ್ಕೈದು ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡಿರ್ತೇವೆ. ಆದರೆ ಅದರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ.

ಭಾರತದಲ್ಲಿ ಹೆಚ್ಚುತ್ತಿದೆ ಮಾಂಸಾಹಾರಿಗಳ ಸಂಖ್ಯೆ, ನಾನ್‌ವೆಜ್ ಬೇಕು ಅನ್ನೋರಲ್ಲಿ ಪುರುಷರೇ ಹೆಚ್ಚು !

ಹಾಲಿನ ಜೊತೆ ನೇರಳೆ ಹಣ್ಣು : ಇದಲ್ಲದೆ, ಈ ಹಣ್ಣನ್ನು ತಿಂದ ನಂತರ ಮತ್ತು ಮೊದಲು ಕನಿಷ್ಠ ಒಂದು ಗಂಟೆಯವರೆಗೆ ಹಾಲನ್ನು ಕುಡಿಯಬಾರದು. ಒಂದು ವೇಳೆ ನೇರಳೆ ಹಣ್ಣಿನ ಸೇವನೆ ಮಾಡಿದ ತಕ್ಷಣ ಹಾಲು ಕುಡಿದ್ರೆ ನೇರಳೆ ಹಣ್ಣಿನ ಪ್ರಯೋಜನ ದೇಹಕ್ಕೆ ಸಿಗುವುದಿಲ್ಲ. ಜೊತೆಗೆ ಅನೇಕ ಅನಾರೋಗ್ಯಗಳು ನಮ್ಮನ್ನು ಕಾಡಲು ಶುರುವಾಗುತ್ತವೆ. 

ಎಷ್ಟು ಪ್ರಮಾಣದಲ್ಲಿ ನೇರಳೆ ಹಣ್ಣನ್ನು ಸೇವಿಸ್ಬೇಕು ? : 
ಹಾಗೆಯೇ ನೇರಳೆ ಹಣ್ಣನ್ನು ಒಮ್ಮೆ ಎಷ್ಟು ತಿನ್ನಬೇಕು ಎಂಬ ಸಂಗತಿ ಕೂಡ ಗೊತ್ತಿರಬೇಕು.  ನೇರಳೆ ಹಣ್ಣಿನ ತಾಜಾ ರಸವನ್ನು  10 ರಿಂದ 20 ಮಿಲಿಯಷ್ಟು ಸೇವನೆ ಮಾಡ್ಬೇಕು. 

Latest Videos
Follow Us:
Download App:
  • android
  • ios