1. ಆನ್‌ಲೈನ್‌ನಲ್ಲಿ ಆ ಮಾತ್ರೆ ಸಿಗುತ್ತಾ?

ನನಗೆ 52 ವರ್ಷ. ಉದ್ರೇಕದ ಸಮಸ್ಯೆ ಕಾಡುತ್ತಿದೆ. ಇಡೀ ಶರೀರದಲ್ಲಿ ಸಂವೇದನೆಯೇ ಇರುವುದಿಲ್ಲ. ಅಂಗಡಿಗೆ ಹೋಗಿ ಮಾತ್ರೆ ತರಲು ನಾಚಿಕೆಯಾಗುತ್ತದೆ. ಬೆಳಗಿನ ಜಾವದಲ್ಲಿ ಮೂತ್ರ ತುಂಬಿಕೊಂಡಾಗ ಹಾಗೂ ಮಧ್ಯಾಹ್ನ ಮೂತ್ರ ಮಾಡುವ ಆತುರವಿದ್ದಾಗ ಉದ್ರೇಕ ಇರುತ್ತದೆ. ಮೂತ್ರ ಮಾಡಿದ ತಕ್ಷಣ ಉದ್ರೇಕವೆಲ್ಲ ಇಳಿಯುತ್ತದೆ. ಯಾಕೆ ಹೀಗೆ? ಆನ್‌ಲೈನ್‌ನಲ್ಲಿ ತರಿಸುವಂಥ ಮಾತ್ರೆಯಿದ್ದರೆ ದಯವಿಟ್ಟು ತಿಳಿಸಿ.

- ಹೆಸರು, ಊರು ಬೇಡ

ಐವತ್ತು ವರ್ಷಗಳ ನಂತರ ಸಾಮಾನ್ಯವಾಗಿ ಎಲ್ಲರಿಗೂ ಉದ್ರೇಕ ನಿಧಾನವಾಗುತ್ತದೆ. ಅಲ್ಲದೆ, ಶರೀರದ ಸಂವೇದನೆಗಳು ಕಡಿಮೆಯಾಗುತ್ತವೆ. ಸಂಭೋಗದಲ್ಲಿನ ಏಕಾನತೆಯೂ ಇದಕ್ಕೆ ಕಾರಣವಾಗುತ್ತದೆ. ಅಲ್ಲದೆ, ನೀವು ನಿಮಗೆ ಮಧುಮೇಹ ಕಾಯಿಲೆ, ಧೂಮಪಾನ, ಮದ್ಯಪಾನಾದಿ ಚಟಗಳು ಇವೆಯೇ ಎಂಬುದನ್ನು ತಿಳಿಸಿಲ್ಲ. ಅವೆಲ್ಲ ಇದ್ದರೆ ಹೀಗಾಗಬಹುದು. ಹಾಗಾಗಿ ಪರೀಕ್ಷಿಸಿ ಚಿಕಿತ್ಸೆ ಪಡೆದುಕೊಳ್ಳುವುದೇ ಉತ್ತಮ. ಸಾಕಷ್ಟು ರತಿಮುನ್ನಲಿವಿನಾಟಗಳಿಂದ ಪ್ರೇಮಪ್ರಚೋದನೆ ಪಡೆದರೆ ಉದ್ರೇಕಕ್ಕೆ ಸಹಾಯವಾಗುತ್ತದೆ. ಅಂತರ್ಜಾಲದ ಮೂಲಕ ಯಾವ ಮಾತ್ರೆಯನ್ನೂ ಸೇವಿಸಬೇಡಿ. ವೈದ್ಯರನ್ನು ಭೇಟಿಯಾಗಿ ಪಡೆದಷ್ಟೇ ಸೇವಿಸಿ. ಮೂತ್ರ ಸಂಬಂ ಸಮಸ್ಯೆಗಳು ನಿಮ್ಮ ವಯಸ್ಸಿನಲ್ಲಿ ಪ್ರಾಸ್ಟೇಟ್ ಗ್ರಂಥಿ ಹಿಗ್ಗಿರಬಹುದೆಂದು ಸೂಚಿಸುತ್ತಿವೆ. ಹಾಗಾಗಿ ಮೂತ್ರರೋಗ ತಜ್ಞರನ್ನು ಭೇಟಿಯಾಗಿ ಇದನ್ನು ಖಾತ್ರಿಪಡಿಸಿಕೊಂಡು ಚಿಕಿತ್ಸೆಯತ್ತ ಗಮನಕೊಡಿ.

(ಡಾ. ಬಿಆರ್ ಸುಹಾಸ್, ಲೈಂಗಿಕ ತಜ್ಞ)