ಇದರಿಂದ ವೀರ್ಯೋತ್ಪಾದನೆಗೆ ಅಡ್ಡಿಯಾಗುವುದೇ?

1) ನನಗೆ 30 ವರುಷ. ನನ್ನ ಎಡಭಾಗದ ವೃಷಣ ಬಹಳ ಚಿಕ್ಕದಿದೆ. ಬಹುಶಃ ನಾನು ಬಿಗಿ ಪ್ಯಾಂಟ್‌ ಧರಿಸುವುದರಿಂದ ಹೀಗಾಗಿರಬಹುದೇನೋ. ಆದರೆ, ಯಾವುದೇ ನೋವಿಲ್ಲ. ವೈದ್ಯಕೀಯವಾಗಿ ಒಂದು ವೃಷಣ ಏಕೆ ಚಿಕ್ಕದಾಗುತ್ತದೆ? ಇದರಿಂದ ವೀರ್ಯೋತ್ಪಾದನೆಗೆ ಅಡ್ಡಿಯಾಗುವುದೇ? ನಾವು ಮಗುವಿಗೆ ಯೋಜನೆ ಮಾಡಿದ್ದೇವೆ. ಸಲಹೆ ನೀಡಿ.
-ಹೆಸರು ಬೇಡ, ಊರು ಬೇಡ
ಉ: ಸಾಮಾನ್ಯವಾಗಿ ಬಲವೃಷಣ ಸ್ವಲ್ಪ ಮೇಲಕ್ಕೆಳೆದಿರುವುದರಿಂದ ಅದು ಚಿಕ್ಕದಾಗಿ ಕಾಣುವುದೇ ಹೊರತು ಎಡದ್ದಲ್ಲ. ಆದ್ದರಿಂದ ಇನ್ನೊಮ್ಮೆ ಸರಿಯಾಗಿ ನೋಡಿಕೊಳ್ಳಿ. ಇನ್ನು ಚಳಿಗೆ ವೃಷಣಗಳ ಮೃದು ಮಾಂಸಖಂಡ ಸಂಕುಚಿತಗೊಂಡು ಅವು ಸ್ವಲ್ಪ ಚಿಕ್ಕಾದದಂತೆ ಕಾಣಬಹುದು. ಕೆಲವು ಕಾಯಿಲೆಗಳು ಹಾಗೂ ಔಷಧಿಗಳಿಂದ ವೃಷಣಗಳು ಚಿಕ್ಕದಾಗುತ್ತವೆಯಾದರೂ 30 ವರ್ಷದ ಆರೋಗ್ಯವಂತರಾದ ನಿಮಗೆ ಇದು ಅನ್ವಯಿಸುವುದಿಲ್ಲ. ಹಾಗೂ ನಿಮಗೆ ಸಂಶಯವಿದ್ದರೆ ಶಸ್ತ್ರವೈದ್ಯರ (ಸರ್ಜನ್‌) ಬಳಿ ಒಮ್ಮೆ ತೋರಿಸಿ. ಪರೀಕ್ಷಿಸದೆ ಏನೂ ಹೇಳಲಾಗದು. ಇನ್ನು ಮಗುವಿನ ವಿಷಯಕ್ಕೆ ಬಂದರೆ, ಮೊದಲು ಪ್ರಯತ್ನಿಸಿ. ಪ್ರಯತ್ನವಿಲ್ಲದಿದ್ದರೆ ಫಲ ಸಿಗದು. ಆಗದಿದ್ದರೆ ಪರೀಕ್ಷಿಸಿಕೊಳ್ಳಿ. ವಿನಾಕಾರಣ ನೀವು ನಿಮ್ಮನ್ನು ಅತಿಯಾಗಿ ಸಂಶಯಿಸಿಕೊಳ್ಳಬೇಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

(ಕೃಪೆ: ಕನ್ನಡ ಪ್ರಭ- ಡಾ. ಬಿ ಆರ್‌ ಸುಹಾಸ್‌, ಲೈಂಗಿಕ ತಜ್ಞ)