Published : Dec 05 2016, 06:23 AM IST| Updated : Apr 11 2018, 12:44 PM IST
Share this Article
FB
TW
Linkdin
Whatsapp
ಮುಂದೆ ನಾನು ಮದುವೆಯಾದರೆ ಅವರಿಗೆ ನಾನು ವರ್ಜಿನ್‌ (ಕನ್ಯೆ) ಅಲ್ಲ ಎಂದು ತಿಳಿಯುತ್ತದೆಯೇ?
ಸುಖಿ ಕ್ಲಿನಿಕ್: ಡಾ. ಬಿ. ಆರ್. ಸುಹಾಸ್ ಲೈಂಗಿಕತಜ್ಞ
1)ನಾನು 20 ವರ್ಷದ ಯುವತಿ. ನನಗೆ ಒಬ್ಬ ಗೆಳೆಯನಿದ್ದ. ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ನಮ್ಮಿಬ್ಬರ ನಡುವೆ ಹಲವು ಸಲ ಲೈಂಗಿಕ ಸಂಪರ್ಕವೂ ಏರ್ಪಟ್ಟಿತು. ಈಗ ಅವನು ನನ್ನನ್ನು ಬಿಟ್ಟು ದೂರ ಇದ್ದಾನೆ. ನನಗಿರುವ ಚಿಂತೆಯೆಂದರೆ, ನನ್ನ ಜನನಾಂಗ ವಿಸ್ತರಿಸಿದೆಯೇ? ಮುಂದೆ ನಾನು ಮದುವೆಯಾದರೆ ಅವರಿಗೆ ನಾನು ವರ್ಜಿನ್ (ಕನ್ಯೆ) ಅಲ್ಲ ಎಂದು ತಿಳಿಯುತ್ತದೆಯೇ? ಅದರಿಂದ ನನ್ನ ಮದುವೆ ಜೀವನ ಹಾಳಾಗುತ್ತದೆಯೇ? -ಊರು ಬೇಡ, ಹೆಸರು ಬೇಡ ಉ:ಪ್ರತಿಬಾರಿ ಸಂಭೋಗಿಸುವಾಗಲೂ ಯೋನಿ ಹಿಗ್ಗುತ್ತದೆ ಹಾಗೂ ಕುಗ್ಗುತ್ತದೆ. ಮೊದಲ ಬಾರಿಯೂ ಹೀಗೆಯೇ ಆಗುತ್ತದೆ. ಹಾಗಾಗಿ, ಮಗು ಹುಟ್ಟುವವರೆಗೂ ಸಾಮಾನ್ಯವಾಗಿ ಅದರ ಬಿಗಿ ಕಡಿಮೆ ಆಗುವುದಿಲ್ಲ. ಆದ್ದರಿಂದ ಈ ಕಾರಣದಿಂದ ವಿವಾಹಪೂರ್ವದಲ್ಲಿ ಸಂಭೋಗವಾಗಿದೆಯೆಂದು ತಿಳಿಯುವುದಿಲ್ಲ. ಇನ್ನು ಕನ್ಯತ್ವವನ್ನು ಸೂಚಿಸುವ ಕನ್ಯಾಪೊರೆ ಅಥವಾ ಹೈಮೆನ್ ಎಂಬ ತೆಳುಪದರವು ಸಂಭೋಗವಲ್ಲದೆ, ಸೈಕ್ಲಿಂಗ್, ಬಟ್ಟೆಧರಿಸುವುದು, ಕೈ ಸ್ಪರ್ಶ, ಇತ್ಯಾದಿ ಕಾರಣಗಳಿಂದಲೂ ಹರಿಯುವುದರಿಂದ, ಅದು ಕನ್ಯತ್ವದ ನಿಖರವಾದ ಸೂಚನೆಯಲ್ಲ. ಹಾಗಾಗಿ ಅದು ಇಲ್ಲದಿದ್ದರೂ ಕನ್ಯೆಯಾಗಿರಬಹುದು. ನೀವು ಮದುವೆಯಾಗುವ ವ್ಯಕ್ತಿಗೆ ಕನ್ಯತ್ವದ ಬಗ್ಗೆ ತಿಳಿಯುವುದೆಂದು ಹೆದರದೇ, ಹಳೆಯದನ್ನೆಲ್ಲ ಮರೆತು ಧೈರ್ಯವಾಗಿ ಮುನ್ನಡೆಯಿರಿ.
(ಕನ್ನಡ ಪ್ರಭ ವಾರ್ತೆ)
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.