Asianet Suvarna News Asianet Suvarna News

ಯುವಕರಷ್ಟೇ ಯುವತಿಯರಿಗೂ ಇಷ್ಟ ಪೋರ್ನ್: ಅಧ್ಯಯನ

ಪೋರ್ನ್ ಎಂದರೆ ಯುವಕರ ಫೋನ್‌ಗಳಲ್ಲಿ ಮಾತ್ರ ಹರಿದಾಡುವಂಥದ್ದು, ಅವರನ್ನು ಮಾತ್ರ ಉದ್ರೇಕಗೊಳಿಸುವಂಥದ್ದು, ಯುವಕರು ಮಾತ್ರ 'ಅಂಥದ್ದನ್ನೆಲ್ಲ ನೋಡುವುದು' ಎಂಬ ಭ್ರಮೆಯ ಗುಳ್ಳೆಗೆ ಕಲ್ಲೆಸೆದಿದೆ ಈ ಅಧ್ಯಯನ. 

Study says women enjoy watching porn as much as men
Author
Bangalore, First Published Aug 28, 2019, 2:11 PM IST

"ಅಯ್ಯೋ ಅವಳು ಪೋರ್ನ್ ನೋಡ್ತಾಳಂತೆ, ನೋಡಿ ಎಂಜಾಯ್ ಕೂಡಾ ಮಾಡ್ತಾಳಂತೆ!" ಎಂದು ಕೆಲ ಯುವಕರು ತಾವು ಮದುವೆಯಾಗಲು ಒಪ್ಪಿದ ಹುಡುಗಿಯು ಯಾವುದೋ ಗಳಿಗೆಯಲ್ಲಿ ಹೇಳಿಕೊಂಡ ವಿಷಯವನ್ನು ಹಿಡಿದು ಆಕೆಯ ಕ್ಯಾರೆಕ್ಟರ್ ಸರಿ ಇಲ್ಲ ಎಂದು ಸರ್ಟಿಫಿಕೇಟ್ ನೀಡಿ ರಿಜೆಕ್ಟ್ ಮಾಡುವುದಿದೆ! ಯಾಕೆ ಇವನು ನೋಡೋದಿಲ್ವಾ? ಖಂಡಿತಾ ನೋಡ್ತಾನೆ, ಆದರೆ ಅವನ ಲೆಕ್ಕದಲ್ಲಿ ಅವನು ಗಂಡು.. ಅವನು ಮಾಡಿದರೆ ತಪ್ಪಿಲ್ಲ, ಏಕೆಂದರೆ ಎಲ್ಲ ಹುಡುಗರೂ ಹಾಗೆ ಮಾಡ್ತಾರೆ.

ಪೋರ್ನ್ ಎಂಬುದು ಹುಡುಗರಿಗೆ ಮಾತ್ರ ಸಂಬಂಧಿಸಿದ್ದು ಎಂಬಂಥ ಮನಸ್ಥಿತಿ ಆತನದ್ದು. ಬಹುಷಃ ಇಂಥದೇ ಕಾರಣಕ್ಕೆ ಹುಡುಗಿಯರು ತಾವು ಸೀಕ್ರೆಟ್ ಆಗಿ ನೋಡುವ ಪೋರ್ನ್ ಕುರಿತು ಯಾರೊಬ್ಬರಿಗೂ ಹೇಳುವುದಿಲ್ಲ. 

ಹೆಚ್ಚು ಆಕರ್ಷಕವಾಗಿ ಕಾಣಲು ವೈಜ್ಞಾನಿಕವಾಗಿ ಸಾಬೀತಾದ ವಿಧಾನಗಳಿವು!

ಆದರೆ, ಯುವತಿಯರೂ ಪೋರ್ನ್ ನೋಡುವುದು, ಎಂಜಾಯ್ ಮಾಡುವುದು ಕಾಮನ್. ಅವರು ಕೂಡಾ ಗಂಡಸರಷ್ಟೇ ಉದ್ರೇಕವಾಗ್ತಾರೆ ಎಂದು ಅಧ್ಯಯನವೊಂದು ವರದಿ ಬಹಿರಂಗಪಡಿಸಿದೆ. ಅಧ್ಯಯನವು ನಾವು ಮಾತನಾಡುವ ರೀತಿ ಬದಲಿಸಲು, ಪೋರ್ನೋಗ್ರಫಿ ಕುರಿತು ಜನರನ್ನು ಶಿಕ್ಷಿತರಾಗಿಸಲು ಸಹಾಯಕವಾಗಿದೆ. 

ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಆಫ್ ಬಯಾಲಜಿಕಲ್ ಸೈಬರ್‌ನೆಟಿಕ್ಸ್‌ನ ಸಂಶೋಧಕರು ಈ ಕುರಿತು ಈಗಾಗಲೇ ನಡೆದಿದ್ದ ನ್ಯೂರೋ ಇಮೇಜಿಂಗ್ ಅಧ್ಯಯನಗಳ ಸ್ಟ್ಯಾಟಿಸ್ಟಿಕಲ್ ರಿವ್ಯೂ ನಡೆಸಿದಾಗ, ಮನುಷ್ಯರಲ್ಲಿ ಲೈಂಗಿಕ ಉದ್ರೇಕತೆಗೆ ಕಾರಣವಾಗುವ ನರ ಸಂಬಂಧಿ ಚಟುವಟಿಕೆ ಪುರುಷರು ಹಾಗೂ ಮಹಿಳೆಯರಲ್ಲಿ ಒಂದೇ ಆಗಿರುತ್ತದೆ ಎಂದು ತಿಳಿಸಿದೆ. ಅಂದರೆ, ಸೆಕ್ಷುಯಲ್ ಇಮೇಜ್‌ಗಳನ್ನು ನೋಡಿದಾಗ ಪುರುಷರಷ್ಟೇ ಉದ್ರೇಕ ಮಹಿಳೆಯರಿಗೂ ಆಗುತ್ತದೆ ಎಂಬುದು ಜೈವಿಕವಾಗಿಯೇ ಪ್ರೋಗ್ರಾಂ ಆಗಿರುವ ರೀತಿ. 

ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ 'ಎಸ್' ಆಗಿದ್ದಲ್ಲಿ, ನಿಮ್ಮ ಸಂಬಂಧಕ್ಕೆ ಆಯಸ್ಸು ಜಾಸ್ತಿ!

ಪೋರ್ನ್ ಎಂದರೆ ಯುವಕರ ಫೋನ್‌ಗಳಲ್ಲಿ ಮಾತ್ರ ಹರಿದಾಡುವಂಥದ್ದು, ಅವರನ್ನು ಮಾತ್ರ ಉದ್ರೇಕಗೊಳಿಸುವಂಥದ್ದು, ಯುವಕರು ಮಾತ್ರ 'ಅಂಥದ್ದನ್ನೆಲ್ಲ ನೋಡುವುದು' ಎಂಬ ಭ್ರಮೆಯ ಗುಳ್ಳೆಗೆ ಕಲ್ಲೆಸೆದಿದೆ ಈ ಅಧ್ಯಯನ. 

ಪಿಎನ್ಎಎಸ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ಈ ಅಧ್ಯಯನವು ಸುಮಾರು 61 ನ್ಯೂರೋ ಇಮೇಜಿಂಗ್(ಎಂಆರ್‌ಐ) ಅಧ್ಯಯನಗಳನ್ನು ಅಭ್ಯಸಿಸಿ ಈ ವಿಷಯ ಕಂಡುಕೊಂಡಿದೆ. ಉದ್ರೇಕಗೊಳ್ಳುವಂಥ ಫೋಟೋ ತೋರಿಸಿದಾಗ ಮೆದುಳಿನ ಪ್ರತಿಕ್ರಿಯೆ ಹೇಗಿರುತ್ತದೆ ಎಂದು 1850 ಜನರ ಮೆದುಳಿನ ಫೋಟೋ ತೆಗೆದುಕೊಂಡು ಅಭ್ಯಾಸ ಮಾಡಲಾಗಿದೆ. 
ಮಹಿಳೆಯರೂ ಪೋರ್ನ್ ನೋಡುತ್ತಾರೆ...

2015ರಲ್ಲಿ ನಡೆದ ಸರ್ವೆಯೊಂದರಲ್ಲಿ 3000ಕ್ಕೂ ಹೆಚ್ಚು ಮಹಿಳೆಯರನ್ನು ಸರ್ವೆಗೊಳಪಡಿಸಿದಾಗ, ಅವರಲ್ಲಿ ಮೂರರಲ್ಲಿ 1 ಭಾಗಕ್ಕೂ ಹೆಚ್ಚು ಮಹಿಳೆಯರು ವಾರಕ್ಕೊಮ್ಮೆಯಾದರೂ ಪೋರ್ನ್ ನೋಡುವುದಾಗಿ ಹೇಳಿದ್ದರು. ಈ ವರ್ಷಾರಂಭದಲ್ಲಿ ವರದಿಯಾದ ಮತ್ತೊಂದು ರಿಪೋರ್ಟ್‌ನಂತೆ, ಕಳೆದ ತಿಂಗಳು ತಾವು ಪೋರ್ನ್ ನೋಡಿದ್ದಾಗಿ ಅರ್ಧಕ್ಕೂ ಹೆಚ್ಚು ಮಹಿಳೆಯರು ಒಪ್ಪಿಕೊಂಡಿದ್ದರು. ಈ ಸಂಬಂಧ ಕುತೂಹಲ, ಖುಷಿ, ಉದ್ರೇಕತೆಗಳಿಲ್ಲದೆ ಇಷ್ಟೊಂದು ಮಟ್ಟದಲ್ಲಿ ಮಹಿಳೆಯರು ಇದನ್ನು ನೋಡಲು ಸಾಧ್ಯವಿಲ್ಲ ಅಲ್ಲವೇ? 

ಈ ವಿಚಾರದಲ್ಲಿ ಬಡಪಾಯಿ ಹುಡುಗರನ್ನು ಅರ್ಥ ಮಾಡ್ಕೋಳೋದೆ ಕಷ್ಟ!

ಇದುವರೆಗೂ ಪೋರ್ನ್ ಕುರಿತ ಚರ್ಚೆಗಳು ಅದು ಒಳ್ಳೆಯದೋ ಕೆಟ್ಟದ್ದೋ ಎಂಬ ವಿಷಯವಾಗೇ ಹೆಚ್ಚಾಗಿ ಇರುತ್ತಿತ್ತು. ಸಾಮಾನ್ಯವಾಗಿ ಅದು ಕೆಟ್ಟದ್ದೆನ್ನುವ ವಾದ, ಇದು ಪುರುಷರ ಸಮಸ್ಯೆ ಎಂಬಂತೆ ಬಿಂಬಿಸುತ್ತಿತ್ತು. ಆದರೆ, ಈಗ ಪುರುಷರು ಹಾಗೂ ಮಹಿಳೆಯರಿಬ್ಬರೂ ಇದನ್ನು ಎಂಜಾಯ್ ಮಾಡುತ್ತಾರೆಂದ ಮೇಲೆ ಇನ್ನು ಮುಂದೆ ಈ ಕುರಿತು ಹೆಚ್ಚು ಉಪಯೋಗಕಾರಿ ವಾಗ್ವಾದದಲ್ಲಿ ತೊಡಗುವುದು ಉತ್ತಮ. ಅಲ್ಲವೇ?

ಡಿಜಿಟಲ್ ಸಂಸ್ಕತಿಯ ಭಾಗ

ನಿಜವೆಂದರೆ, ಪೋರ್ನ್ ಎಂಬುದು ನಮ್ಮ ಡಿಜಿಟಲ್ ಸಂಸ್ಕೃತಿಯ ಭಾಗ. 21ನೇ ಶತಮಾನದ ಲೈಂಗಿಕತೆಯ ವಿಷಯದಲ್ಲಿ ಇದೂ ಒಂದು ಪಾಲು ಪಡೆಯುತ್ತದೆ. ಅದನ್ನು ಕೆಟ್ಟದ್ದು ಎಂದು ಬಿಂಬಿಸುವುದಕ್ಕಿಂತ ಆರೋಗ್ಯಕರವಾಗಿ, ಲೈಂಗಿಕತೆಯ ಭಾಗವಾಗಿ ಪರಿಗಣಿಸುವುದು ಒಳ್ಳೆಯದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಈ ಅಧ್ಯಯನ ಹೇಳುತ್ತದೆ. 

ಪೋರ್ನ್ ನೈಜತೆಗೆ ದೂರ

ಪೋರ್ನ್ ನೋಡುವ ಯುವಜನತೆಯ ನಾಲ್ಕನೇ ಒಂದು ಭಾಗ ಇದು ನೈಜತೆಗೆ ದೂರವಾದುದು ಎಂದು ಒಪ್ಪಿಕೊಳ್ಳುತ್ತದೆ. ಇಂಥ ವಿಷಯಗಳು ಲೈಂಗಿಕ ಶಿಕ್ಷಣದ ಭಾಗವಾಗಬೇಕು. ಇಲ್ಲದಿದ್ದಲ್ಲಿ ಅದನ್ನೇ ನಿಜವೆಂದು ನಂಬುವ ಕೆಲ ಹಾದಿ ತಪ್ಪಿದ ಯುವಕರು ಪ್ರಯೋಗಪಶುಗಳನ್ನು ಹುಡುಕಿಕೊಳ್ಳುವ ಅಪಾಯಗಳಿವೆ. ಅಲ್ಲದೆ, ತಮ್ಮ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುವ ಸಾಧ್ಯತೆಗಳೂ ಇವೆ. ಹಾಗಾಗಿ, ಪೋರ್ನನ್ನು ಅನಗತ್ಯ ಮತ್ತು ಅವಮಾನಕಾರಿ ಎಂದು ಭಾವಿಸುವುದಕ್ಕಿಂತ ಆ ಬಗ್ಗೆ ಸರಿಯಾಗಿ ತಿಳಿವಳಿಕೆ ನೀಡುವುದು ಮುಖ್ಯ. 

Follow Us:
Download App:
  • android
  • ios