ನಿಮ್ಮ ಬಾಯ್‌ಫ್ರೆಂಡನ್ನು ಎಷ್ಟೇ ಅರ್ಥ ಮಾಡಿಕೊಂಡಿದ್ದೀರಿ ಎಂದು ನೀವಂದುಕೊಂಡರೂ, ಅರ್ಥ ಮಾಡಿಕೊಳ್ಳದೇ ಉಳಿದು ಹೋಗುವಂಥದ್ದು ಹಲವು. ಹುಡುಗಿಯರೇ ಬೇರೆ, ಹುಡುಗರೇ ಬೇರೆ ಅಂದುಕೊಂಡಿರ್ತೀವಿ.  

ಆದರೆ, ಇಬ್ಬರ ಯೋಚನೆ, ನಡೆಗಳಲ್ಲಿ ಹಲವು ಸಾಮ್ಯತೆಗಳಿರುತ್ತವೆ. ಹುಡುಗಿಯರು ತೋರಿಸಿಕೊಳ್ಳುತ್ತಾರೆ, ಹುಡುಗರು ಹೇಳಿಕೊಳ್ಳುವುದಿಲ್ಲ ಅಷ್ಟೇ. ಇನ್ನು ಕೆಲವೊಮ್ಮೆ ನಮ್ಮಂಥೇ ಇವರು ಎಂದೆಣಿಸಿಕೊಂಡಾಗ ಅವರ ಟೇಸ್ಟ್ ಬೇರೆಯದೇ  ಆಗಿರುತ್ತದೆ. ಒಟ್ಟಿನಲ್ಲಿ ನಿಮ್ಮನ್ನು ಅವರು ಅರ್ಥ ಮಾಡಿಕೊಳ್ಳೋದಿಲ್ಲ ಎಂದು ಯುವತಿಯರಿಗೆನಿಸುವಷ್ಟೇ ಬಲವಾಗಿ ನೀವು ಅವರನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಯುವಕರಿಗೂ ಅನಿಸುತ್ತೆ.

ನಿಮ್ಮ ಸಂಗಾತಿ ಸಂತೋಷವಾಗಿಲ್ಲ ಎಂದು ಅಲಾರಾಂ ಹೊಡ್ಕೋತಿದೆ, ಕೇಳ್ತಿಲ್ವಾ?

1. ಅವನಿಗೂ ಮೆಚ್ಚುಗೆ ಬೇಕು...

ಹುಡುಗಿಯರಂತೆ ಹುಡುಗರೂ ತಾವು ಮಾಡಿದ ಕೆಲಸಗಳಿಗೆ, ತಮ್ಮ ಲುಕ್‌ಗೆ, ಸ್ಟೈಲ್‌ಗೆ ಪ್ರತಿಯೊಂದಕ್ಕೂ ಮೆಚ್ಚುಗೆ ಬಯಸುತ್ತಾರೆ. ಆತನ ಗುಣ, ವ್ಯಕ್ತಿತ್ವವನ್ನು ನೀವು ಹೊಗಳಲಿ ಎಂದು ಬಯಸುತ್ತಾರೆ. ಆದರೆ, ಆತ ಮಾಡಿದ್ದಕ್ಕೆಲ್ಲ ದೂರು ಹೇಳುತ್ತಾ ನೀವು ಕೂರುವುದೇ ಹೆಚ್ಚು. ಇದರಿಂದ ನೀವು ಅವರನ್ನು ಗೌರವಿಸುತ್ತೀರಿ ಎಂದು ಆತನಿಗೆ ಅನಿಸದು. 

2. ತನ್ನ ಗೆಳೆಯರು ಏನು ಯೋಚಿಸುತ್ತಾರೆಂಬ ಬಗ್ಗೆ ಚಿಂತಿಸುತ್ತಾನೆ!

ಗಂಡಸರ ಮಧ್ಯೆ 'ಗಂಡಸು' ಎನಿಸಿಕೊಳ್ಳುವುದು ಸುಲಭವಲ್ಲ. ಗಂಡಸು ಎನಿಸಿಕೊಳ್ಳಬೇಕಾದ ಒತ್ತಡ ದಿನದ ಪ್ರತಿ ಹೊತ್ತೂ ಆತನಿಗೆ ಅನಿವಾರ್ಯವಾಗಿ ಕಾಡುತ್ತದೆ. ತಾನು ಪಿಂಕ್ ಬಟ್ಟೆ ಧರಿಸಿದರೆ ಹುಡುಗರು ಆಡಿಕೊಳ್ಳುವರೇನೋ, ತಾನು ನಾಚಿಕೊಂಡರೆ ತಮಾಷೆ ಮಾಡುತ್ತಾರೆ, ನಾನು ತಲೆ ಬಗ್ಗಿಸಿ ನಡೆದರೆ ತಪ್ಪಾಗುತ್ತದೆ... ಹೀಗೆ, ಪ್ರತಿ ವಿಷಯಕ್ಕೂ ಆತ ತನ್ನ ಗೆಳೆಯರು ಏನು ಯೋಚಿಸುತ್ತಾರೆ ಎಂಬ ಬಗ್ಗೆ ಚಿಂತಿಸುತ್ತಾನೆ.

ಆಕರ್ಷಣೆ ಕುರಿತ 6 ಆಕರ್ಷಕ ಆವಿಷ್ಕಾರಗಳಿವು!

3. ನೀವು ನಿಮ್ಮ ಗೆಳತಿಯರ ಬಳಿ ಆತನ ಬಗ್ಗೆ ಹೇಳುವುದು ಅವನಿಗೆ ಇಷ್ಟವಿಲ್ಲ!

ಬಹಳಷ್ಟು ಯುವತಿಯರಿಗೆ ಸ್ನೇಹಿತೆಯರು ಸಿಕ್ಕಿದರೆ ಸಾಕು, ಬಾಯಲ್ಲಿ ಫಿಲ್ಟರ್ ಇರುವುದೇ ಇಲ್ಲ. ಎಲ್ಲ ವಿಷಯವನ್ನೂ ಅವರು ಮಾತಾಡಲೇಬೇಕು. ಅವರ ಬಾಯ್‌ಫ್ರೆಂಡ್ ಹೇಗೆ ಕಿಸ್ ಮಾಡುತ್ತಾನೆಂಬುದರಿಂದ ಹಿಡಿದು, ಹೇಗೆ ಸಿಟ್ಟು ಮಾಡುತ್ತಾನೆಂಬ ತನಕ ಚರ್ಚೆಗಳಾಗುತ್ತವೆ. ಆದರೆ, ನೀವು, ಹಾಗೂ ನಿಮ್ಮ ಗೆಳತಿಯರು ಆತನನ್ನು ಜಡ್ಜ್ ಮಾಡುವುದು ಅವನಿಗೆ ಇಷ್ಟವಾಗುವುದಿಲ್ಲ. ನಿಮ್ಮ ಈ ವರ್ತನೆ ವಿಚಿತ್ರವೆನಿಸುತ್ತದಲ್ಲದೆ, ಸಿಟ್ಟು ತಂದರೂ ಆಶ್ಚರ್ಯವಿಲ್ಲ. ಅಲ್ಲದೆ, ಆತನಿಗೆ ಹೇಗೆ ಇಟ್ಟಿದ್ದೊಂದೂ ಕೈಗೆ ಸಿಗುವುದಿಲ್ಲ, ನಿಮ್ಮ ಮಾತು ಕೇಳುವುದಿಲ್ಲ, ಆತನೊಬ್ಬ ಸಂತ ಎಂದೆಲ್ಲ ನೀವು ಸಾರ್ವಜನಿಕವಾಗಿ ಹೇಳಿ ತಮಾಷೆ ಮಾಡುವುದು ಆತನ ಪಾಲಿಗೆ ತಮಾಷೆ ಎನಿಸುವುದಿಲ್ಲ. ಬದಲಾಗಿ ಅವಮಾನ ಎನಿಸುತ್ತದೆ. 

4. ಆತ ಪ್ರೀತಿ ತೋರುವ ರೀತಿ ನಿಮ್ಮದಕ್ಕಿಂತ ವಿಭಿನ್ನ

ನೀವು ರೊಮ್ಯಾಂಟಿಕ್ ಗೆಸ್ಚರ್ಸ್ ಹಾಗೂ ಹೊಗಳುವ ಮೂಲಕ ಆತನಿಗೆ ಪ್ರೀತಿ ತೋರಬಹುದು. ಆದರೆ, ಆತನೂ ಹಾಗೆ ಮಾಡುತ್ತಿಲ್ಲವೆಂದ ಮಾತ್ರಕ್ಕೆ ನಿಮ್ಮನ್ನು ಅವನು ಕಡಿಮೆ ಪ್ರೀತಿಸುತ್ತಾನೆಂದಲ್ಲ. ಆತನಿಗೆ ಭಾವನೆಗಳನ್ನು ವ್ಯಕ್ತಪಡಿಸುವುದು, ಬಾಯಿ ಬಿಟ್ಟು ಹೇಳುವುದು ಸ್ವಲ್ಪ ಕಷ್ಟದ ಕೆಲಸ. ಬದಲಿಗೆ ಅವನು ನಿಮಗಿಷ್ಟದ ತಿಂಡಿ ತಂದು ಕೊಡುವುದು, ರಸ್ತೆ ಪಕ್ಕ ನಡೆವಾಗ ವಾಹನ ಬರುವ ಬದಿಗೆ ತಾನು ನಡೆಯುವುದು ಮುಂತಾದ ರೀತಿಯಲ್ಲಿ ತನ್ನ ಪ್ರೀತಿ, ಕಾಳಜಿ ವ್ಯಕ್ತಪಡಿಸಬಹುದು. 

5. ಶೇವಿಂಗ್ ಮಾಡುವುದು ಅವನಿಗೆ ಕೂಡಾ ರಗಳೆಯೇ

ಸಾಮಾನ್ಯವಾಗಿ ಯುವತಿಯರು ಯುವಕರಿಗಿಂತ ಹೆಚ್ಚು ಶೇವಿಂಗ್ ಕುರಿತು ಕಂಪ್ಲೇಂಟ್ ಮಾಡುತ್ತಲೇ ಇರುತ್ತಾರೆ. ಆದರೆ, ಚರ್ಮ ಕೂದಲು ಎಲ್ಲ ಇಬ್ಬರಿಗೂ ಒಂದೇ. ಪುರುಷರಿಗೆ ಕೂಡಾ ಆಗಾಗ ಶೇವ್ ಮಾಡಲೇಬೇಕಾದ ಅನಿವಾರ್ಯ ಕರ್ಮ ರಗಳೆಯೇ. ಅವನಿಗೂ ಗಾಯಗಳು, ಬಾಕು, ತುರಿಕೆ ಮುಂತಾದ ಕಿರಿಕಿರಿ ಇದ್ದದ್ದೇ. 

ಸಂಬಂಧ ಹಾಳು ಮಾಡಿಕೊಳ್ಳದೆ ಹೊಟ್ಟೆಕಿಚ್ಚಿನ ಸಂಗಾತಿಯನ್ನು ನಿಭಾಯಿಸೋದು ಹೇಗೆ?

6. ಸ್ಪರ್ಧೆಯ ರೇಸ್‌ನಲ್ಲಿ ತಾನು ಇರುವುದು ಆತನಿಗೆ ಮುಖ್ಯ

ಮನೆಯ ಬಲ್ಬ್ ಕೆಲಸ ಮಾಡುತ್ತಿಲ್ಲವೆಂದು ಎಲೆಕ್ಠ್ರೀಶಿಯನ್‌ಗೆ ಹೇಳಲು ಆತನಿಗೆ ಹೇಳುತ್ತೀರಿ. ಆದರೆ, ಆತ ತಾನೇ ಎಲೆಕ್ಟ್ರೀಶಿಯನ್ ಪಾತ್ರ ವಹಿಸುತ್ತಾನೆ. ಗಂಟೆಗಟ್ಟಲೆ ಹತ್ತು ಹಲವು ರೀತಿಯಲ್ಲಿ ಬಲ್ಬ್ ಉರಿಯುವಂತೆ ಮಾಡಲು ಒದ್ದಾಡುತ್ತಾನೆ. ಇದಕ್ಕಿಂತ ಎಕ್ಸ್‌ಪರ್ಟ್ ಕರೆಸಿದರೆ ನಿಮಿಷದ ಕೆಲಸವಲ್ಲವೇ ಎಂದು ನಿಮಗನ್ನಿಸುತ್ತದೆ. ಆದರೆ, ಆತನಿಗೆ ತಾನು ಕೂಡಾ ಬೇರೆ ಪುರುಷನಿಗಿಂತ ಯಾವುದರಲ್ಲೂ ಕಮ್ಮಿಯಿಲ್ಲ ಎಂಬ ಸೆಲ್ಫ್ ಎಸ್ಟೀಮ್ ಬೂಸ್ಟ್ ಅಗತ್ಯ. ಹಾಗಾಗಿ, ಆತನ ಈ ಅನಗತ್ಯ ಪ್ರಯತ್ನವನ್ನು ಹೊಗಳುವುದು ಮರೆಯಬೇಡಿ.

7. ತನ್ನ ವಸ್ತುಗಳ ಬಗ್ಗೆ ಆತ ನಿಮ್ಮಷ್ಟೇ ಕಾಳಜಿ ಹೊಂದಿದ್ದಾನೆ

ನಿಮ್ಮ ಪರ್ಸ್, ಆಭರಣ, ಬಟ್ಟೆಗಳು ಕೋಣೆಯ ಮುಕ್ಕಾಲು ಭಾಗ ತುಂಬಿರುವುದನ್ನು, ನೀವು ಅವುಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವುದನ್ನು ಆತ ಆಗಾಗ ಆಡಿಕೊಳ್ಳಬಹುದು. ಆದರೆ, ಆತ ಕೂಡಾ ತನ್ನ ವಸ್ತುಗಳು ಎಂದರೆ ಶೂಗಳು, ಬ್ಯಾಕ್‌ಪ್ಯಾಕ್ಸ್, ಗ್ಯಾಜೆಟ್‌ಗಳನ್ನು ಅಷ್ಟೇ ಪ್ರೀತಿಸುತ್ತಾನೆ. ಅವುಗಳು ಸ್ವಲ್ಪ ಹಾಳಾದರೂ ಆಕಾಶ ತಲೆ ಕೆಳಗಾದಂತೆ ಹಿಂಸೆ ಮಾಡಿಕೊಳ್ಳುತ್ತಾನೆ.