ಇತ್ತೀಚೆಗೆ ಮಹಿಳೆಯರು ಮನೆಯಿಂದ ಆಚೆಗೆ ಬಂದು ದುಡಿಯಲು ಆರಂಭಿಸಿದ್ದಾರೆ. ಮನೆ, ಮಕ್ಕಳು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿರುವ ಅಮ್ಮಂದಿರು ಸಂತೋಷವಾಗಿದ್ದಾರಾ ಎಂದು ಮಾಮ್ಸ್‌ಪ್ರೆಸ್ಸೋ. ಕಾಮ್ ಭಾರತದಾದ್ಯಂತ ಸಮೀಕ್ಷೆ ನಡೆಸಿದ್ದು, ಕೇವಲ 48 % ಅಮ್ಮಂದಿರು ಮಾತ್ರ ತಾವು ಸಂತೋಷವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರಂತೆ.

ನೀವು ಗರ್ಭಿಣಿಯರಾದಲ್ಲಿ, ವೆಜೈನಲ್ ಡಿಸ್ಚಾರ್ಜ್ ಕುರಿತ ಈ ವಿಷಯ ತಿಳಿಯಲೇಬೇಕು!

ಅದರಲ್ಲೂ ಮೆಟ್ರೋ ನಗರಗಳಲ್ಲಿ ವಾಸಿಸುವ ಮಹಿಳೆಯರಿಗಿಂತ ಮೆಟ್ರೋ ಸಿಟಿ ಅಲ್ಲದ ನಗರಳಲ್ಲಿ ವಾಸಿಸುವ ಮಹಿಳೆಯರು ಹೆಚ್ಚು ಸಂತೋಷದಿಂದಿದ್ದಾರಂತೆ. ನಾನ್ ಮೆಟ್ರೋಸಿಟಿ ಮಹಿಳೆಯರು ತಮ್ಮ ವಿವಾಹಿತ ಜೀವನವು ಸುಖಕರವಾಗಿದೆ, ಕುಟುಂಬದವರ ಬೆಂಬಲವೂ ಉತ್ತಮವಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಮೆಟ್ರೋ ಸಿಟಿಯಲ್ಲಿ ವಾಸಿಸುತ್ತಿರುವ ಮಹಿಳೆಯರು ಹೆಚ್ಚು ಒತ್ತಡದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.

ಇನ್ನು ಬೆಂಗಳೂರಿನ ಅಮ್ಮಂದಿರು ಮಕ್ಕಳ ಸುರಕ್ಷತೆಯೇ ದೊಡ್ಡ ಚಿಂತೆ ಎಂದು ಹೇಳಿಕೊಂಡಿದ್ದು, 66 % ಅಮ್ಮಂದಿರಿಗೆ ಅವರ ರೂಪ ಅವರಿಗೇ ಇಷ್ಟವಿಲ್ಲವಂತೆ. 52 % ಮಹಿಳೆಯರಿಗೆ ಅವರ ಫಿಟ್‌ನೆಸ್ ಬಗ್ಗೆ ಅಸಂತೋಷವಿದೆಯಂತೆ. 42 % ಸ್ತ್ರೀಯರು ತಮ್ಮ ವಯಸ್ಸಿನ ಬಗ್ಗೆ ಹೆಚ್ಚು ಚಿಂತಿತರಾಗುತ್ತಾರಂತೆ. 67 % ಅಮ್ಮಂದಿರು ವಾರದಲ್ಲಿ ಒಂದು ಗಂಟೆಯನ್ನೂ ಮೇಕಪ್‌ಗಾಗಿ ಮೀಸಲಿಡುವುದಿಲ್ಲವಂತೆ.

ದಿನವಿಡೀ ಹೀಲ್ಸ್ ಹಾಕ್ಕೊಂಡ್ರೂ ಕಾಲು ನೋವಾಗಲ್ಲ; ಇಲ್ಲಿದೆ ಟಿಪ್ಸ್ ಆ್ಯಂಡ್ ಟ್ರಿಕ್!

ಸಮೀಕ್ಷೆಯಲ್ಲಿ ತಾಯಿಯಾಗಿ ಎಷ್ಟು ಸಂತೋಷದಿಂದಿದ್ದೀರಿ? ಪತಿಯ ಬೆಂಬಲ ಹೇಗಿದೆ? ನಿಮಗಾಗಿ ನೀವು ಎಷ್ಟು ಸಮಯ ಮೀಸಲಿಡುತ್ತೀರಿ? ಅತ್ತೆ ಎಷ್ಟು ಬೆಂಬಲ ನೀಡುತ್ತಾರೆ? ಎಂಬ ಪ್ರಶ್ನೆಗಳನ್ನು ಕೇಳಲಾಗಿತ್ತು. ಟೆಕ್ಸ್ಟ್, ಆಡಿಯೋ ಮತ್ತು ವಿಡಿಯೋ ಮೂಲಕ ಭಾರತದ ಸುಮಾರು 10 ಭಾಷೆಗಳಲ್ಲಿ ಅಭಿಪ್ರಾಯಗಳನ್ನು ಕಲೆಹಾಕಿ ಮಾಮ್ಸ್ ಹ್ಯಾಪಿನೆಸ್ ಇಂಡೆಕ್ಸ್ ಸಮೀಕ್ಷೆ ನಡೆಸಲಾಗಿತ್ತು.