Asianet Suvarna News Asianet Suvarna News

ಹತ್ತೇ ಸೆಕೆಂಡಲ್ಲಿ ಈ ಮೂವರಲ್ಲಿ ಮಹಿಳೆಯ ಪತಿ ಯಾರು ಅಂತ ಪತ್ತೆ ಮಾಡಿ!

ಒಂದು ಚಿತ್ರದಲ್ಲಿರುವ ಸಮಸ್ಯೆ ಅಥವಾ ಒಂದು ನಿರ್ಧಿಷ್ಟ ವಸ್ತು ಎಲ್ಲಿದೆ ಅಂತಾ ಹುಡುಕೋದು ಬುದ್ಧಿವಂತಿಕೆ. ಎಲ್ಲರಿಗೂ ಇದನ್ನು ಹುಡುಕೋಕೆ ಸಾಧ್ಯವಾಗೋದಿಲ್ಲ. ಕೆಲವರು ಥಟ್ ಅಂತ ಉತ್ತರ  ಹೇಳಿದ್ರೆ ಮತ್ತೆ ಕೆಲವರು ತಡಬಡಿಸ್ತಾರೆ. ಇದು ಅಂಥಹದ್ದೇ ಒಂದು ಫೋಟೋ. ನಿಮ್ಗೆ ಇದನ್ನು ಸಾಲ್ವ್ ಮಾಡೋಕೆ ಆಗುತ್ತಾ ನೋಡೋಣ.
 

Spot the womans husband in under 10 seconds: Expert challenge Vin
Author
First Published Aug 19, 2023, 9:40 AM IST

ಆಪ್ಟಿಕಲ್ ಇಲ್ಯೂಶನ್ ಒಂದು ರೀತಿಯ ಕಣ್ಣಿನ ಭ್ರಮೆ ಆಗಿದೆ. ಮನರಂಜನೆ ನೀಡುವ ಹಾಗೂ ಮೋಜಿನ ಆಟ ಇದಾಗಿದ್ದು, ಇದು ನಮ್ಮ ಬುದ್ದಿವಂತಿಕೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ. ನೀವು ಆಗಾಗ ಇಂಥ ಆಟವನ್ನು ಆಡ್ತಿದ್ದರೆ ನಿಮ್ಮ ಐಕ್ಯೂ ಮಟ್ಟ ಸುಧಾರಿಸುತ್ತದೆ. ಚಿಕ್ಕವರು, ದೊಡ್ಡವರೆನ್ನದೆ ಎಲ್ಲರೂ ಈ ಆಟವನ್ನು ಸುಲಭವಾಗಿ ಆಡಬಹುದು. ಇದನ್ನು ಒಳ್ಳೆ ಟೈಂ ಪಾಸ್ ಅಂದ್ರೆ ತಪ್ಪಾಗೋದಿಲ್ಲ. ನಾವಿಂದು ಆಪ್ಟಿಕಲ್ ಇಲ್ಯೂಶನ್‌ನ ಒಂದು ಚಿತ್ರವನ್ನು ನಿಮಗೆ ನೀಡ್ತೇವೆ. ನೀವು ಅದ್ರಲ್ಲಿರುವ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದರೆ ನಿಮ್ಮಲ್ಲಿ ಎಂಥಾ ಸಮಸ್ಯೆಯನ್ನೂ ಬಗೆಹರಿಸುವ ಸಾಮರ್ಥ್ಯವಿದೆ ಎಂದರ್ಥ. ಚಿತ್ರದಲ್ಲಿ ಮೂವರು ಗಂಡಸರಿದ್ದಾರೆ. ಇದರಲ್ಲಿ ಮಹಿಳೆಯ ಗಂಡ ಯಾರು ಎಂದು ನೀವು ಪತ್ತೆ ಹಚ್ಚಬೇಕು.

ನಿಮ್ಮಲ್ಲಿರುವ ಸಮಸ್ಯೆ (Problem) ಪರಿಹರಿಸುವ ಸಾಮರ್ಥ್ಯ ಮತ್ತು ವೀಕ್ಷಣಾ ಕೌಶಲ್ಯಗಳನ್ನು ನಿರ್ಣಯಿಸಲು ನೀವು ಉತ್ಸುಕರಾಗಿದ್ದರೆ, ಈ ಫೋಟೋದ ಸಹಾಯ ಪಡೆಯಬಹುದು. ಈ ಫೋಟೋವನ್ನು ಬುದ್ಧಿವಂತಿಕೆಯಿಂದ (Inteligence) ವಿನ್ಯಾಸಗೊಳಿಸಲಾಗಿದೆ, ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳ ಒಳನೋಟಗಳನ್ನು ನೀಡುತ್ತದೆ. ಇಂಥಾ ಫೋಟೋಗಳು ನಿಮ್ಮ ಐಕ್ಯೂ ಮಟ್ಟವನ್ನು ಅಳೆಯುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಬದಲಿಗೆ, ಇವು ನಿರ್ಧಿಷ್ಟ ಸನ್ನಿವೇಶವನ್ನು ತ್ವರಿತವಾಗಿ ಗ್ರಹಿಸುವ ಮತ್ತು ಪ್ರತಿಕ್ರಿಯಿಸುವ ನಿಮ್ಮ ಸಾಮರ್ಥ್ಯವನ್ನು ಅಳೆಯುತ್ತದೆ.

ಫೋಟೋದಲ್ಲಿ ನಿಮಗೇನ್ ಕಾಣುತ್ತೆ ಅನ್ನೋದು ನಿಮ್ ಲವ್‌ ಲೈಫ್ ಹೇಗಿರುತ್ತೆ ಅನ್ನೋದನ್ನು ತಿಳಿಸುತ್ತೆ

ಚಿತ್ರದಲ್ಲಿರುವ ಮೂವರಲ್ಲಿ ಮಹಿಳೆಯ ಗಂಡ ಯಾರು?
ಚಿತ್ರದಲ್ಲಿ ಒಬ್ಬ ಮಹಿಳೆ ತನ್ನ ಗಂಡನನ್ನು ಹುಡುಕುತ್ತಿರುವುದನ್ನು ನೋಡಬಹುದು. ಆದರೆ ಮೂವರು ಪುರುಷರು (Men) ಬಲಭಾಗದಲ್ಲಿ ಕುಳಿತಿದ್ದಾರೆ. ಈ ಮೂವರು ಪುರುಷರಲ್ಲಿ ಆಕೆಯ ಪತಿ (Husband) ಯಾರಿರಬಹುದು ಎಂದು ನೀವು ಗ್ರಹಿಸಬಲ್ಲಿರಾ. 10 ಸೆಕೆಂಡುಗಳ ಸಮಯದ ಮಿತಿಯೊಳಗೆ ಮಹಿಳೆಯ (Woman) ಪತಿಯನ್ನು ಗುರುತಿಸಬೇಕಾಗುತ್ತದೆ. ಈ ಮೂವರು ಪುರುಷರಲ್ಲಿ ಒಬ್ಬರು ನಿಜವಾಗಿಯೂ ಮಹಿಳೆಯ ಪತಿಯಾಗಿದ್ದಾರೆ. ಆದರೆ ಇದಕ್ಕೆ ಸರಿಯಾದ ಉತ್ತರವನ್ನು ಗ್ರಹಿಸುವುದು ಹೇಗೆ?

ಮಹಿಳೆಯ ಕೈಯಲ್ಲಿರುವ ಪಿನ್‌ನ್ನು ಗಮನಿಸಿ. ನಂತರ ಅದೇ ಪಿನ್‌ನ್ನು ಮೂರನೇ ವ್ಯಕ್ತಿಯ ಕೋಟ್‌ಗೆ ಅಂಟಿಸಿರುವುದನ್ನು ನೀವು ನೋಡಬಹುದು. ಎಡಭಾಗದಲ್ಲಿರುವ ಮೂರನೇ ವ್ಯಕ್ತಿ ನಿಜವಾಗಿಯೂ ಮಹಿಳೆಯ ಪತಿ. ಇನ್ನು ಕೆಲವರು ವಿಭಿನ್ನ ಮಾನದಂಡವನ್ನು ಇಟ್ಟುಕೊಂಡು ಮೂರನೇಯ ವ್ಯಕ್ತುಯೇ ಮಹಿಳೆಯ ಪತಿಯೆಂದು ಗುರುತಿಸಿದ್ದಾರೆ. ಇವರ ಪ್ರಕಾರ, ಮೊದಲಿಗೆ ಕುಳಿತಿರುವ ಇಬ್ಬರು ಪುರುಷರು ಮಹಿಳೆಯನ್ನು ನೋಡಿ ಎಕ್ಸೈಟ್ ಆಗಿದ್ದಾರೆ. ಆದರೆ ಮೂರನೇಯ ವ್ಯಕ್ತಿ ಆಕೆ ತನ್ನ ಹೆಂಡತಿಯೇ ಆಗಿರುವ ಕಾರಣ ಎಕ್ಸೈಟ್ ಆಗಿಲ್ಲ. ಮೊಬೈಲ್ ನೋಡುತ್ತಾ ಕುಳಿತಿರುವುದನ್ನು ನೋಡಬಹುದು.

ನೀವು ಈ ಕಷ್ಟಕರವಾದ ರಹಸ್ಯವನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದರೆ ಅಭಿನಂದನೆಗಳು. ಇಲ್ಲದಿದ್ದರೆ, ನಿರುತ್ಸಾಹಗೊಳಿಸಬೇಡಿ. ಈ ಕೌಶಲ್ಯಗಳನ್ನು ಅಭ್ಯಾಸ (Habit) ಮಾಡುವ ರೀತಿ ನಿಮಗೆ ಪಾಸಿಟಿವ್ ಥಿಂಕಿಂಗ್‌ನ್ನು ನೀಡುತ್ತದೆ. ಭವಿಷ್ಯದಲ್ಲಿ ಇದೇ ರೀತಿಯ ಕನ್‌ಫ್ಯೂಸಿಂಗ್‌ ಕೊಶ್ಚನ್‌ಗಳನ್ನು ಬಗೆಹರಿಸಲು ನಿಮಗೆ ನೆರವಾಗುತ್ತದೆ. 

ಲವ್‌ ಅಂದ್ರೆ ನಿಮ್ಗೆ ಇಷ್ಟಾನ, ಕಷ್ಟಾನ, ಭಯಾನ; ಫೋಟೋ ನೋಡಿ ನಿಮ್ ಮನಸ್ಥಿತಿ ತಿಳ್ಕೊಳ್ಳಿ

ಸರಿಯಾದ ಉತ್ತರ

Spot the womans husband in under 10 seconds: Expert challenge Vin

Follow Us:
Download App:
  • android
  • ios