7500 ಅಧ್ಯಯನಗಳನ್ನು ಪರಿಶೀಲಿಸಲಾಗಿದ್ದು, 1972 ಮತ್ತು 2011ರ ನಡುವೆ 185 ಅಧ್ಯಯನಗಳನ್ನು ವಿಶ್ಲೇಷಿಸಿದಾಗ ವೀರ್ಯಾಣು ಸಾಂದ್ರತೆ ಶೇ. 52.4 ಮತ್ತು ವೀರ್ಯಾಣು ಪ್ರಮಾಣ ಶೇ. 59.3ರಷ್ಟು ಇಳಿಕೆಯಾಗಿದೆ ಎಂಬುದು ಗೊತ್ತಾಗಿದೆ.
ಪಾಶ್ಚಿಮಾತ್ಯ ಪುರುಷರಲ್ಲಿ ವೀರ್ಯಾಣು ಸಾಂಧ್ರತೆ ಮತ್ತು ವೀರ್ಯಾಣು ಪ್ರಮಾಣ ಗಮನಾರ್ಹವಾಗಿ ಇಳಿಕೆಯಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಇಸ್ರೇಲ್‌ನ ಹೀಬ್ರೂ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಮೌಂಟ್ ಸಿನಾಯ್‌ನ ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಈ ಅಂಶ ಪತ್ತೆ ಹಚ್ಚಿದ್ದಾರೆ. 7500 ಅಧ್ಯಯನಗಳನ್ನು ಪರಿಶೀಲಿಸಲಾಗಿದ್ದು, 1972 ಮತ್ತು 2011ರ ನಡುವೆ 185 ಅಧ್ಯಯನಗಳನ್ನು ವಿಶ್ಲೇಷಿಸಿದಾಗ ವೀರ್ಯಾಣು ಸಾಂದ್ರತೆ ಶೇ. 52.4 ಮತ್ತು ವೀರ್ಯಾಣು ಪ್ರಮಾಣ ಶೇ. 59.3ರಷ್ಟು ಇಳಿಕೆಯಾಗಿದೆ ಎಂಬುದು ಗೊತ್ತಾಗಿದೆ. ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ನ್ಯೂಜಿಲ್ಯೆಂಡ್‌ನಲ್ಲಿ ಈ ಅಂಶ ಪತ್ತೆಯಾಗಿದೆ. ಅದಕ್ಕೆ ತದ್ವಿರುದ್ಧವಾಗಿ, ದಕ್ಷಿಣ ಅಮೆರಿಕಾ, ಏಷ್ಯಾ ಮತ್ತು ಆಫ್ರಿಕಾದಲ್ಲಿ ಈ ರೀತಿಯ ಗಮನಾರ್ಹ ಇಳಿಕೆಯಾಗಿಲ್ಲ.
