Asianet Suvarna News Asianet Suvarna News

ಸಹೋದ್ಯೋಗಿ ಕಿರಿಕಿರಿ ತಪ್ಪಿಸಿಕೊಳ್ಳಲು ಇಲ್ಲಿವೆ ಪರಿಹಾರ

ಮಹಿಳೆಯೊಬ್ಬರು ಕೆಲಸ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದನ್ನು ಗಂಡನ ಬಳಿಯೂ ಹೇಳಿಕೊಳ್ಳಲಾಗದೇ, ಅನುಭವಿಸಲಾಗದೇ ಒದ್ದಾಡುತ್ತಿದ್ದಾರೆ. ಇವರ ಸಮಸ್ಯೆಗೆ ಓದುಗರು ಪರಿಹಾರ ಸೂಚಿಸಿದ್ದಾರೆ. ಏನ್ ಹೇಳಿದ್ದಾರೆ ಓದಿ ನೋಡಿ. 

Solution to overcome from colleague  harassment
Author
Bengaluru, First Published Jul 25, 2018, 1:33 PM IST

ಕೆಲಸ ಮಾಡುವ ಜಾಗದಲ್ಲಿ ಸಹೋದ್ಯೋಗಿಯಿಂದ ಕಿರಿಕಿರಿಯಾಗುತ್ತಿದೆ. ಇದನ್ನು ಮೇಲಿನ ಅಧಿಕಾರಿಗಳಿಗೆ ಹೇಳೋಣ ಎಂದರೆ ಭಯ. ಅವರು ನನ್ನ ಮಾತನ್ನು ನಂಬುತ್ತಾರಾ ಎನ್ನಿಸುತ್ತೆ. ಇದನ್ನು ನನ್ನ ಗಂಡನ ಬಳಿಯೂ ಹೇಳಿಕೊಳ್ಳಲು ಮನಸ್ಸಾಗುತ್ತಿಲ್ಲ. ಒಮ್ಮೆ ಅವನಿಗೆ ನೇರವಾಗಿ ನನ್ನ ಜೊತೆಗೆ ಹೀಗೆಲ್ಲಾ ನಡೆದುಕೊಳ್ಳಬೇಡಿ ಎಂದು ಹೇಳಿದರೂ ಅವನ ವರ್ತನೆ ಬದಲಾಗಿಲ್ಲ. ಈಗ ನಾನೇನು ಮಾಡಲಿ? ಏನಾದರೂ ಸಲಹೆ ಇದ್ದರೆ ಕೊಡಿ ಎಂದು ಮಂಜುಳಾ (ಹೆಸರು ಬದಲಿಸಲಾಗಿದೆ) ಬೆಂಗಳೂರು ಕೇಳಿದ ಪ್ರಶ್ನೆಗೆ ಬಂದ ಉತ್ತರಗಳು. 


ಅಸಹಾಯಕರಾಗಬೇಡಿ
ನೀವು ಅಸಹಾಯಕರಾದಷ್ಟೂ ಅವರ ವರ್ತನೆ ಮಿತಿ ಮೀರುತ್ತದೆ. ಇಂತಹ ಕೆಟ್ಟ ವಿಚಾರಗಳನ್ನು ಪ್ರಾರಂಭದಲ್ಲಿಯೇ ಬುಡ ಸಮೇತ ಕಿತ್ತು ಹಾಕಬೇಕು. ಇಲ್ಲವಾದರೆ ಮುಂದೆ ನಮಗೇ ತೊಂದರೆಯಾಗುತ್ತದೆ. ಹಾಗಾಗಿ ನೀವು ಧೈರ್ಯವಾಗಿ ನಿಮ್ಮ ಮೇಲಾಧಿಕಾರಿಯ ಬಳಿ ಸಮಸ್ಯೆ ಹೇಳಿ. ಖಂಡಿತಕ್ಕೂ ಅವರು ನಿಮ್ಮ ಮಾತನ್ನು ನಂಬಿ ಸಮಸ್ಯೆ ಬಗೆಹರಿಸಬಹುದು. ಇಲ್ಲವಾದರೆ ಎಲ್ಲಾ ಘಟನೆಯನ್ನು ನಿಮ್ಮ ಗಂಡನಿಗೆ ಹೇಳಿ. ಮಹಿಳಾ ಸಂಘಟನೆಗಳ ಸಹಾಯ ಪಡೆದುಕೊಳ್ಳಿ. ಇದ್ಯಾವುದರಿಂದಲೂ ಪರಿಹಾರ ಸಿಕ್ಕದೇ ಇದ್ದರೆ ಪೊಲೀಸರ ಮೊರೆ ಹೋಗುವುದು ಉತ್ತಮ. ನೀವು ಯಾವುದೇ ಕಾರಣಕ್ಕೂ ಹೆದರಬೇಕಿಲ್ಲ. ಕೆಲಸ ಮಾಡುವ ಕಡೆ ಈ ರೀತಿ ಕಿರುಕುಳ ನೀಡುವವರ ವಿರುದ್ಧ ನಮ್ಮಲ್ಲಿ ಕಠಿಣ ಕಾನೂನುಗಳಿವೆ. ಸಮರ್ಥವಾಗಿ ಬಳಸಿಕೊಳ್ಳಿ.

ಸಂಬಂಧಪಟ್ಟವರ ಗಮನಕ್ಕೆ ತನ್ನಿ
ಮಂಜುಳಾ ಅವರೇ, ನೀವು ಕೆಲಸ ಮಾಡುತ್ತಿರುವ ಕಡೆ ಹೀಗೆಲ್ಲಾ ಆಗುತ್ತಿದೆ ಎನ್ನುವುದನ್ನು ಮೊದಲು ಸಂಬಂಧಪಟ್ಟವರ ಗಮನಕ್ಕೆ ತನ್ನಿ. ನಿಮ್ಮ ಮೇಲಿನ ಅಧಿಕಾರಿ ಇದನ್ನು ನಂಬುತ್ತಾತರಾ? ಬಿಡುತ್ತಾರಾ? ಎನ್ನುವುದು ಮುಂದಿನ ಮಾತು. ಇದೆಲ್ಲಕ್ಕಿಂತಲೂ ಮೊದಲು ಈ ವಿಚಾರವನ್ನು ನಿಮ್ಮ ಗಂಡನ ಗಮನಕ್ಕೆ ತನ್ನಿ. ಅವರು ಏನು ಹೇಳುತ್ತಾರೆ ಎನ್ನುವುದನ್ನು ಆಧರಿಸಿ ಮುಂದಿನ ಹೆಜ್ಜೆ ಇಡಿ. ಕೆಲಸದ ಜಾಗದಲ್ಲಿ ನೆಮ್ಮದಿ ಮುಖ್ಯ. ಈ ರೀತಿಯ ಕಾಮುಕರಿಂದ ಮುಕ್ತಿ ಪಡೆಯದೇ ಇದ್ದರೆ ಕೆಲಸ ಮಾಡಲು ಮನಸ್ಸು ಬರುವುದಿಲ್ಲ. ಆಮೇಲೆ ಇದೇ ಚಿಂತೆಯಲ್ಲಿ ಕೊರಗಬೇಕಾಗುತ್ತದೆ. ಹಾಗಾಗಿ ಯಾವುದೇ ಅಂಜಿಕೆ ಇಲ್ಲದೇ ಧೈರ್ಯವಾಗಿ ಪರಿಸ್ಥಿತಿಯನ್ನು ಎದುರಿಸಿ. ನೀವು ಒಮ್ಮೆ ತಿರುಗಿ ಬಿದ್ದರೆ ಆ ವ್ಯಕ್ತ ಮತ್ತೆ ನಿಮ್ಮ ತಂಟೆಗೆ ಬರುವುದಿಲ್ಲ. ಅವರು ಮೇಲಾಧಿಕಾರಿ ಎನ್ನುವ ಕಾರಣಕ್ಕೆ ದೌರ್ಜನ್ಯ ಸಹಿಸಿಕೊಳ್ಳುವುದು ಬೇಡ

Follow Us:
Download App:
  • android
  • ios