Asianet Suvarna News Asianet Suvarna News

ಫೇಸ್‌ಬುಕ್‌ನಲ್ಲಿ ಬೀಗಬೇಡ..ಏನಿದು ಕತೆ? ಎಲ್ಲಿದೆ ಮೂಲ?

ಈ ಸೋಶಿಯಲ್ ಮೀಡಿಯಾನೆ ಹಾಗೆ ಯಾವ ಕಾರಣಕ್ಕೆ ಯಾವ ವಿಚಾರ ಯಾವತ್ತು ಟ್ರೆಂಡ್ ಆಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಇಲ್ಲಿ ಒಳ್ಳೆಯದು ಇರುತ್ತದೆ. ಕಟ್ಟದ್ದು ಸ್ವಲ್ಪ ಜಾಸ್ತಿನೇ ಇರುತ್ತದೆ. ಹಾಗೆ ನೋಡಿಕೊಂಡು ಮುಂದೆ ಹೋಗುವ ಜಾಣ್ಮೆ ನಮ್ಮದಾಗಬೇಕು ಅಷ್ಟೆ...

Social Media Facebook witness Strange trend Bigabeda
Author
Bengaluru, First Published Aug 8, 2018, 10:01 PM IST

ಹಿಂದೊಮ್ಮೆ ಫೇಸ್ ಬುಕ್ ನಲ್ಲಿ ಏಳು ಪುಸ್ತಕದ ಸರಣಿ ಟ್ರೆಂಡ್ ಆಗಿತ್ತು. ಪುಸ್ತಕ ಓದುವ ಹವ್ಯಾಸ ಒಳ್ಳೆಯದೆ ಬಿಡಿ.. ಆದರೆ ಕಳೆದ ಎರಡು ದಿನಗಳಿಂದ #ಬೀಗಬೇಡ ಟ್ರೇಂಡ್ ಆಗ್ತಾ ಇದೆ. ಇದಕ್ಕೆ ಮೂಲ ಹುಡುಕ ಹೊರಟಾಗ ಮತ್ತಷ್ಟು ಸಂಗತಿಗಳು ಅನಾವರಣವಾಗಿದೆ. #ಬೀಗಬೇಡ ಕ್ಕೆ ಸಂಬಂಧಿಸಿ ಪೋಸ್ಟ್ ಆದ ಸ್ಟೇಟಸ್ ಗಳಿಗೂ ಲೆಕ್ಕವಿಲ್ಲ.. ಕಾರಣ ಗೊತ್ತಿಲ್ಲ್ರ.

ಹೌದು #ಬೀಗಬೇಡ  ಟ್ರೆಂಡ್ ಆಯ್ತು. ಕನ್ನಡದ ಮಟ್ಟಿಗೆ ಇದು ಬಹು ದೊಡ್ಡ ಟ್ರೆಂಡಿಂಗ್ ಅಂತಾನೇ ಹೇಳಬಹುದು. ರಿಯಾಲಿಟಿ ಶೋವೊಂದರಲ್ಲಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಹೇಳಿದ ಡೈಲಾಗ್ ಗಳೆ ಈ #ಬೀಗಬೇಡಕ್ಕೆ ಮೂಲ.

ಎತ್ತರದಲ್ಲಿದ್ದೇನೆ ಎಂದು ಬೀಗಬೇಡ, ನಕ್ಷತ್ರಗಳು ಕೆಳಗುರುಳಿದ್ದನ್ನು ನೋಡಿದ್ದೇನೆ..ನನ್ನಲ್ಲಿ ಸೌಂದರ್ಯವಿದೆ ಎಂದು ಹಿಗ್ಗಬೇಡ.. ಮೊನಾಲಿಸಾ ಮಣ್ಣಾಗಿದ್ದನ್ನು ನೋಡಿದ್ದೇನೆ... ಹೀಗೊಂದು ಡೈಲಾಗ್ ಪ್ರಾಣೇಶ್ ಅವರ ಬಾಯಿಂದ ಬಂದಿತ್ತು. ಆದರೆ ಸೋಶಿಯಲ್ ಮೀಡಿಯಾಗೆ ಸಿಕ್ಕ ಹೇಳಿಕೆ ಏನೇನೋ ಆಗಿ ಬದಲಾಗೋಯ್ತು. ಒಂದಿಷ್ಟು ಸ್ಯಾಂಪಲ್ಸ್ ನಿಮಗಾಗಿ.

13 ಸಾರಿ ಎಂಎಲ್ ಎ ಆಗಿ, 5 ಸಾರಿ ಸಿಎಂ ಆದೆ ಎಂದು ಬೀಗಬೇಡ, 6*3 ಜಾಗಕ್ಕೆ ಕೋರ್ಟ್ ಗೆ ಹೋದವರನ್ನು ಕಂಡಿದ್ದೇನೆ ಎಂದು ಕಾಮೆಂಟ್ ಕರುಣಾನಿಧಿ ನಿಧನದ ನಂತರದ ಬೆಳವಣಿಗೆಯನ್ನು ಒಂದೇ ಸಾಲಿನಲ್ಲಿ ಹೇಳಿತ್ತು.

 

Follow Us:
Download App:
  • android
  • ios