ಇವಿಎಂ ಮತ್ತು ವಿವಿಪ್ಯಾಟ್ ತಾಳೆಯಾಗದ ಪ್ರಕರಣ, ಇಂದು ಸುಪ್ರೀಂ ಮಹತ್ವದ ತೀರ್ಪು
ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು ಬರಲಿದ್ದು, ಇವಿಎಂ ಮತ್ತು ವಿವಿಪ್ಯಾಟ್ ತಾಳೆಯಾಗದ ಪ್ರಕರಣದಲ್ಲಿ ತನ್ನ ಆದೇಶ ನೀಡಲಿದೆ.
ನವದೆಹಲಿ (ಏ.24): ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ (ಇವಿಎಂ) ಚಲಾವಣೆಯಾಗುವ ಪ್ರತಿಯೊಂದು ಮತಗಳನ್ನೂ, ವಿವಿಪ್ಯಾಟ್‌ನಲ್ಲಿ ದಾಖಲಾಗುವ ಮುದ್ರಿತ ಪ್ರತಿಯೊಂದಿಗೆ ತಾಳೆ ಹಾಕಬೇಕು ಎಂದು ಕೋರಿರುವ ಅರ್ಜಿಯ ಕುರಿತು ಸುಪ್ರೀಂಕೋರ್ಟ್ ಬುಧವಾರ ತನ್ನ ತೀರ್ಪು ಪ್ರಕಟಿಸಲಿದೆ.ಮತದಾರ ಇವಿಎಂ ಮಷಿನ್‌ನಲ್ಲಿ ಮತ ಚಲಾಯಿಸಿದ ಕೂಡಲೇ ಆತ ಯಾವ ಪಕ್ಷಕ್ಕೆ ಮತ ಹಾಕಿದ್ದಾನೆ ಎಂಬುದು ಆ ಪಕ್ಷದ ಅಭ್ಯರ್ಥಿಯ ಚಿಹ್ನೆಯೊಂದಿಗೆ ವಿವಿಪ್ಯಾಟ್ ಯಂತ್ರದಲ್ಲಿ ಕಾಣಿಸಿಕೊಂಡು ಬಳಿಕ ಮುದ್ರಿತ ರೂಪದಲ್ಲಿ ಒಳಸೇರಿಕೊಳ್ಳುತ್ತದೆ. ಆದರೆ ಮತ ಎಣಿಕೆ ವೇಳೆ ಪ್ರತಿ ಕ್ಷೇತ್ರದ ಆಯ್ದ ಬೂತ್‌ಗಳಲ್ಲಿ ಮಾತ್ರವೇ ಚಲಾವಣೆಯ ಮತ ಮತ್ತು ವಿವಿಪ್ಯಾಟ್‌ನಲ್ಲಿ ದಾಖಲಾದ ಮುದ್ರಿತ ಪ್ರತಿಗಳೊಂದಿಗೆ ತಾಳೆ ಹಾಕಲಾಗುತ್ತದೆ.
ಆದರೆ ಎಲ್ಲಾ ಮತಗಳನ್ನೂ ತಾಳೆ ಹಾಕಬೇಕು ಎಂದು ಹಲವು ಸರ್ಕಾರೇತರ ಸಂಸ್ಥೆಗಳು ಕೋರಿದ್ದವು. ವಿಚಾರಣೆ ವೇಳೆ ನ್ಯಾಯಾಲಯವು ಮತದಾರರ ಸಂತೃಪ್ತಿ ಮತ್ತು ಮತದಾನ ವ್ಯವಸ್ಥೆಯ ಕುರಿತು ಜನರು ವಿಶ್ವಾಸ ಹೊಂದಿರಬೇಕು ಎಂಬ ಅಂಶಗಳ ಬಗ್ಗೆ ಮಾತನಾಡಿತ್ತು. ಹೀಗಾಗಿ ಬುಧವಾರದ ತೀರ್ಪಿನ ಕುರಿತು ಸಾಕಷ್ಟು ಕುತೂಹಲ ವ್ಯಕ್ತವಾಗಿದೆ.
ರಾಜ್ಯದ 14 ಕ್ಷೇತ್ಕಕ್ಕೆ ನಾಡಿದ್ದು ಮತ ಇಂದು ಬಹಿರಂಗ ಪ್ರಚಾರಕ್ಕೆ ತೆರೆ