ಮಗಳ ಹುಟ್ಟಿದಬ್ಬಕ್ಕೆ ಗಿಫ್ಟ್ ತರ್ಬೇಡಿ, ದುಡ್ಡು ತನ್ನಿ ಎಂದ ಅಮ್ಮನ ಡಿಮ್ಯಾಂಡಿಗೆ ಗೆಸ್ಟ್ ಕಂಗಾಲು!
ಹುಟ್ಟುಹಬ್ಬದ ಪಾರ್ಟಿ ಅಂದ್ಮೇಲೆ ಒಂದಿಷ್ಟು ಹರಟೆ, ಗಿಫ್ಟ್, ಊಟ ಇದ್ದೇ ಇರುತ್ತೆ. ಆದ್ರೆ ಈ ಮಹಾನ್ ತಾಯಿ ಹುಟ್ಟುಹಬ್ಬಕ್ಕೆ ಆಹ್ವಾನಿಸುವ ಮೊದಲೇ ಕೆಲ ನಿಯಮ ಮಾಡಿದ್ದಾಳೆ. ಅದನ್ನು ಮೀರೋ ಬದಲು ಹೋಗದಿರೋದೆ ವಾಸಿ ಎನ್ನುತ್ತಿದ್ದಾರೆ ಗೆಸ್ಟ್
ಮಕ್ಕಳ ಹುಟುಹಬ್ಬ ಅಂದ್ರೆ ಪಾಲಕರಿಗೆ ಅದೇನೋ ಸಂಭ್ರಮ. ಮಕ್ಕಳಿಗಾಗಿಯೇ ಪಾಲಕರು ಅವರ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸ್ತಾರೆ. ಇದ್ದವರು ದೊಡ್ಡ ಹಾಲ್, ಹೊಟೇಲ್ ನಲ್ಲಿ ಮಕ್ಕಳ ಬರ್ತ್ ಡೇ ಪಾರ್ಟಿ ಮಾಡಿದ್ರೆ ಮಧ್ಯಮ ವರ್ಗದ ಜನರು ಮನೆಯಲ್ಲಿಯೇ ಸಣ್ಣ ಪಾರ್ಟಿ ನೀಡಿ ಸಂಭ್ರಮಿಸ್ತಾರೆ. ಸಣ್ಣ ಪ್ರಮಾಣದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿದ್ರೂ ಮನೆ ಅಂದ್ಮೇಲೆ ಸ್ವಲ್ಪ ಕೆಲಸ ಇರುತ್ತೆ. ಕ್ಲೀನಿಂಗ್, ಪಾರ್ಟಿಗೆ ತಿಂಡಿ, ಪಾರ್ಟಿಗೆ ಸಿದ್ಧತೆ ಇವೆಲ್ಲ ಒಂದು ಕಡೆಯಾದ್ರೆ ಬಂದವರ ಅದು- ಇದು ಮಾತುಕತೆ ಇನ್ನೊಂದು ಕಡೆ. ಈ ಎಲ್ಲದರ ಮಧ್ಯೆ ಮಕ್ಕಳಿಗೆ ಬರುವ ಗಿಫ್ಟ್ ಮತ್ತೊಂದು ರೀತಿ ತಲೆನೋವು.
ಪಾರ್ಟಿ (Party) ಗೆ ಬರುವ ಜನರು ಚಿಕ್ಕ ಮಕ್ಕಳಿಗೆ ಆಟಿಕೆ ವಸ್ತುಗಳನ್ನು, ಬೊಂಬೆ ಸೇರಿ ಮಕ್ಕಳ ಗಿಫ್ಟ್ (Gift) ತರ್ತಾರೆ. ಅದನ್ನು ಮಕ್ಕಳು ಒಮ್ಮೊಮ್ಮೆ ಮುಟ್ಟಿಯೂ ನೋಡೋದಿಲ್ಲ. ಈ ಗಿಫ್ಟ್ ಮನೆಯಲ್ಲಿ ಕಸವಾಗಿ ಮೂಲೆ ಸೇರಿರುತ್ತದೆ. ಮಕ್ಕಳ ಹುಟ್ಟುಹಬ್ಬ (Birthday) ದ ಪಾರ್ಟಿಯಲ್ಲಿ ಎಷ್ಟೇ ಸುಸ್ತಾದ್ರೂ, ತೊಂದರೆ ಇದ್ರೂ ಪಾಲಕರು ಅದನ್ನೆಲ್ಲ ಮರೆತು ಖುಷಿಯಾಗಿ ಹುಟ್ಟುಹಬ್ಬ ಆಚರಣೆ ಮಾಡ್ತಾರೆ. ಯಾವುದೇ ಗೆಸ್ಟ್ ಬಂದ್ರೂ ಅವರನ್ನು ನಗು ಮುಖದಿಂದ ಸ್ವಾಗತಿಸುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ, ಸಂಬಂಧಿಕರಿಗೆ, ಸ್ನೇಹಿತರಿಗೆ ಮಗಳ ಹುಟ್ಟುಹಬ್ಬದ ಸಮಯದಲ್ಲಿ ನೀಡಿದ ಕರೆಯೋಲೆ ಸುದ್ದಿಯಾಗಿದೆ. ಆಕೆಯ ಸ್ಟ್ರಿಕ್ಟ್ ರೂಲ್ಸ್ ಎಲ್ಲರನ್ನು ಬೆರಗುಗೊಳಿಸಿದೆ. ಇಷ್ಟೇಲ್ಲ ಕಂಡಿಷನ್ ಹಾಕಿದ್ಮೇಲೆ ಮತ್ತ್ಯಾಕೆ ಬರ್ತ್ ಡೇ ಪಾರ್ಟಿ ಆಚರಣೆ ಮಾಡ್ಬೇಕು ಎಂಬ ಪ್ರಶ್ನೆ ಮೂಡಿದೆ.
ನಾನು ಒಮ್ಮೆ ಒಂದ್ ಸ್ಟೆಪ್ ಮಾತ್ರ ತಗೊಳ್ಳೋದು; ಮೃಣಾಲ್ ಠಾಕೂರ್ ಮಾತು ಕೇಳಿ ಶಾಕ್ ಆಗ್ಬೇಡಿ!
ತಾಯಿ ರಾಚೆಲ್ ಗೆ ಇಬ್ಬರು ಮಕ್ಕಳು. ಒಂದು ಮಗಳ ಹುಟ್ಟುಹಬ್ಬಕ್ಕೆ ಆಕೆ ಹಾಕಿರುವ ಟಿಕ್ ಟಾಕ್ ಪೋಸ್ಟ್ ವೈರಲ್ ಆಗಿದೆ. ಆಕೆ ಬೆಳಿಗ್ಗೆ 9.30 ಆಗಮಿಸಿ ಕೇವಲ ಒಂದು ಗಂಟೆ ಪಾರ್ಟಿಯಲ್ಲಿರಬೇಕೆಂದು ಬರೆದಿದ್ದಾಳೆ. ಇಡೀ ದಿನ ನೀವು ನನ್ನ ಮನೆಯಲ್ಲಿ ಕಳೆಯೋದು ನನಗೆ ಇಷ್ಟವಿಲ್ಲ. ನಿಮ್ಮ ಅಮೂಲ್ಯ ಶನಿವಾರವನ್ನು ನನ್ನ ಮಗಳ ಹುಟ್ಟುಹಬ್ಬಕ್ಕಾಗಿ ವ್ಯರ್ಥ ಮಾಡುವ ಅಗತ್ಯವಿಲ್ಲ. ಅದು ಆಕೆಗೆ ನೆನಪೂ ಇರೋದಿಲ್ಲ ಎಂದು ಆಕೆ ಬರೆದಿದ್ದಾಳೆ.
ರಾಚೆಲ್ ತನ್ನ ಕಂಡಿಷನ್ ಇಷ್ಟಕ್ಕೆ ನಿಲ್ಲಿಸಲಿಲ್ಲ. ಸ್ನ್ಯಾಕ್ಸ್ ಮಾತ್ರ ನೀಡ್ತೇನೆ, ತಿಂಡಿ ನೀಡೋದಿಲ್ಲ ಎಂದೂ ಆಕೆ ಹೇಳಿದ್ದಾಳೆ. ಗೇಮ್, ಗಿಫ್ಟ್ ವಿಷ್ಯದಲ್ಲೂ ರಾಚೆಲ್ ನಿಯಮ ರೂಪಿಸಿದ್ದಾಳೆ.
ರಾಚೆಲ್, ಯಾವುದೇ ಆಟವನ್ನು ಆಡದಂತೆ ನಿಯಮ ರೂಪಿಸಿದ್ದಾಳೆ. ದಯವಿಟ್ಟು ಉಡುಗೊರೆ ನೀಡಬೇಡಿ ಎಂದು ಆಮಂತ್ರಣ ಕಾರ್ಡ್ ಮೇಲೆ ಬರೆದಿದ್ದಾಳೆ. ಹ್ಯಾರಿ ಪಾಟರ್-ಥೀಮಿನ ಪಾರ್ಟಿಯನ್ನು ಆಕೆ ಆಯೋಜನೆ ಮಾಡಿದ್ದಾಳೆ. ನನ್ನ ಮಗಳು ಮನೆ ಕೆಲಸದವಳಂತೆ ಅಲ್ಲ. ಹಾಗಾಗಿ ಆಕೆಗೆ ಬಟ್ಟೆಯ ಅವಶ್ಯಕತೆ ಇಲ್ಲ ಎಂದು ರಾಚೆಲ್ ಬರೆದಿದ್ದಾಳೆ. ನೀವು ಗಿಫ್ಟ್ ನೀಡುವವರಾಗಿದ್ದರೆ ಅದರ ಬದಲು 400 ರೂಪಾಯಿ ನೀಡುವ ಬಗ್ಗೆ ವಿಚಾರ ಮಾಡಿ. ಯಾಕೆಂದ್ರೆ ನಾನು ಈ ಹಣದಲ್ಲಿ ನನ್ನ ಹಿತ್ತಲನ್ನು ಸಿದ್ಧಪಡಿಸುವ ಪ್ಲಾನ್ ಮಾಡ್ತಿದ್ದೇನೆ ಎಂದಿದ್ದಾಳೆ.
ಸಣ್ಣ ತಪ್ಪುಗಳೇ ಹಾರ್ಮೋನ್ ಅಸಮತೋಲನವೆಂಬ ದೊಡ್ಡ ಸಮಸ್ಯೆಗೆ ಕಾರಣ
ರಾಚೆಲ್ ಈ ವಿವಾದಾತ್ಮಕ ರೂಲ್ಸ್ ಸಾಮಾಜಿಕ ಜಾಲತಾಣದಲ್ಲಿ (Social Media Posts) ಸಾಕಷ್ಟು ಸುದ್ದಿ ಮಾಡಿದೆ. ರಾಚೆಲ್ ಕೆಟ್ಟ ಕಾರ್ಯಕ್ರಮ ಆಯೋಜನೆ ಮಾಡಿದ್ದಾಳೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇದನ್ನು ಅತ್ಯಂತ ಕೆಟ್ಟ ಹುಟ್ಟುಹಬ್ಬ ಎಂದು ಕೆಲವರು ಹೇಳಿದ್ದಾರೆ. ಇಂಥ ಮಹಿಳೆಗೆ ಪೋಷಕರಾಗುವ ಅರ್ಹತೆ ಇಲ್ಲ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಆದ್ರೆ ಅನೇಕರು ಮಹಿಳೆಯ ಈ ನಿಯಮಗಳನ್ನು ಮೆಚ್ಚಿದ್ದಾರೆ ಕೂಡ. ತಾಯಿಯ ದೃಷ್ಟಿಕೋನವನ್ನು ಸಮರ್ಥಿಸಿಕೊಂಡಿದ್ದಲ್ಲದೆ ಆಕೆ ಮಾಡಿದ್ದು ಸರಿ ಇದೆ ಎಂದಿದ್ದಾರೆ.