8 ಪಂದ್ಯಗಳಲ್ಲಿ 7ನೇ ಬಾರಿ ಟಾಸ್‌ ಸೋತ ಚೆನ್ನೈಯನ್ನು, ಲಖನೌ ನಾಯಕ ರಾಹುಲ್‌ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಋತುರಾಜ್‌ ಸ್ಫೋಟಕ ಶತಕ, ಶಿವಂ ದುಬೆ ಮಿಂಚಿನ ಆಟದಿಂದಾಗಿ ಚೆನ್ನೈ 4 ವಿಕೆಟ್‌ಗೆ 210 ರನ್‌ ಸೇರಿಸಿತು. ಗುರಿ ದೊಡ್ಡದಿದ್ದರೂ ಸ್ಟೋಯ್ನಿಸ್‌ ಆಟದ ಮುಂದೆ ಚೆನ್ನೈ ಬೌಲರ್‌ಗಳು ಸಪ್ಪೆಯಾದರು. ತಂಡ 19.3 ಓವರಲ್ಲಿ ಗೆದ್ದಿತು.

ಚೆನ್ನೈ: ಚೆಪಾಕ್ ಕ್ರೀಡಾಂಗಣ ಚೆನ್ನೈ ಸೂಪರ್‌ ಕಿಂಗ್ಸ್‌ ಪಾಲಿಗೆ ಯಾವತ್ತೂ ಭದ್ರಕೋಟೆ. ಅದನ್ನು ಭೇದಿಸಲು ಪ್ರಯತ್ನಿಸಿ ವಿಫಲವಾದ ತಂಡಗಳೇ ಹೆಚ್ಚು. ಆದರೆ ಹಾಲಿ ಚಾಂಪಿಯನ್‌ ಚೆನ್ನೈನ ಕೋಟೆಯಲ್ಲಿ ಲಖನೌ ಅಬ್ಬರಿಸಿ ಬೊಬ್ಬಿರಿದು ವಿಜಯಪತಾಕೆಯನ್ನು ಹಾರಿಸಲು ಯಶಸ್ವಿಯಾಯಿತು.

Add Asianetnews Kannada as a Preferred SourcegooglePreferred

ಚೆನ್ನೈನ ಸ್ಫೋಟಕ ಬ್ಯಾಟಿಂಗ್‌ಗೆ ಎದುರಾಗಿ ಮಾರ್ಕಸ್‌ ಸ್ಟೋಯ್ನಿಸ್‌ ಸ್ಫೋಟಕ ಶತಕದ ಮೂಲಕ ಲಖನೌಗೆ 6 ವಿಕೆಟ್‌ ಗೆಲುವು ತಂದುಕೊಟ್ಟರು. ಟೂರ್ನಿಯಲ್ಲಿ ತವರಿನಲ್ಲಿ ಮೊದಲ ಸೋಲು ಅನುಭವಿಸಿದ ಚೆನ್ನೈ, ಒಟ್ಟಾರೆ 4ನೇ ಸೋಲು ಕಂಡರೆ, ಲಖನೌ ತಂಡ 8ರಲ್ಲಿ 5ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು. ಚೆನ್ನೈ ವಿರುದ್ಧ ಲಖನೌಗಿದು ಸತತ 2ನೇ ಜಯ.

8 ಪಂದ್ಯಗಳಲ್ಲಿ 7ನೇ ಬಾರಿ ಟಾಸ್‌ ಸೋತ ಚೆನ್ನೈಯನ್ನು, ಲಖನೌ ನಾಯಕ ರಾಹುಲ್‌ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಋತುರಾಜ್‌ ಸ್ಫೋಟಕ ಶತಕ, ಶಿವಂ ದುಬೆ ಮಿಂಚಿನ ಆಟದಿಂದಾಗಿ ಚೆನ್ನೈ 4 ವಿಕೆಟ್‌ಗೆ 210 ರನ್‌ ಸೇರಿಸಿತು. ಗುರಿ ದೊಡ್ಡದಿದ್ದರೂ ಸ್ಟೋಯ್ನಿಸ್‌ ಆಟದ ಮುಂದೆ ಚೆನ್ನೈ ಬೌಲರ್‌ಗಳು ಸಪ್ಪೆಯಾದರು. ತಂಡ 19.3 ಓವರಲ್ಲಿ ಗೆದ್ದಿತು.

IPL 2024: ರುತುರಾಜ್‌ ಗಾಯಕ್ವಾಡ್‌ ಸೂಪರ್‌ ಸೆಂಚುರಿ, ಲಕ್ನೋಗೆ ಸವಾಲಿನ ಗುರಿ

ಡಿ ಕಾಕ್‌ ಗೋಲ್ಡನ್‌ ಡಕ್‌ಗೆ ಬಲಿಯಾದ ಬಳಿಕ ನಾಯಕ ಕೆ.ಎಲ್‌.ರಾಹುಲ್‌ 16 ರನ್‌ಗೆ ವಿಕೆಟ್‌ ಒಪ್ಪಿಸಿದರು. ಸತತ ವೈಫಲ್ಯದ ಬಳಿಕವೂ ತಂಡದಲ್ಲಿ ಅವಕಾಶ ಪಡೆದ ದೇವದತ್‌ ಪಡಿಕ್ಕಲ್‌ ಇನ್ನಿಂಗ್ಸ್‌ 13ಕ್ಕೆ ಕೊನೆಗೊಂಡಿತು. ಈ ಹಂತದಲ್ಲಿ ಸ್ಟೋಯ್ನಿಸ್‌ಗೆ ಜೊತೆಯಾದ ನಿಕೋಲಸ್‌ ಪೂರನ್‌(15 ಎಸೆತದಲ್ಲಿ 34) ತಂಡದ ಗೆಲುವಿನ ಆಸೆ ಚಿಗುರಿಸಿದರು. 56 ಎಸೆತದಲ್ಲಿ ಶತಕ ಪೂರ್ಣಗೊಳಿಸಿದ ಸ್ಟೋಯ್ನಿಸ್‌, ಕೊನೆವರೆಗೆ ಕ್ರೀಸ್‌ನಲ್ಲಿ ನಿಂತು ತಂಡವನ್ನು ಗೆಲ್ಲಿಸಿದರು. ಸ್ಟೋಯ್ನಿಸ್‌ 63 ಎಸೆತದಲ್ಲಿ 13 ಬೌಂಡರಿ, 6 ಸಿಕ್ಸರ್‌ನೊಂದಿಗೆ 124 ರನ್‌ ಸಿಡಿಸಿದರು. ಕೊನೆ ಓವರಲ್ಲಿ 17 ರನ್‌ ಬೇಕಿದ್ದಾ ಸ್ಟೋಯ್ನಿಸ್‌ 4 ಬೌಂಡರಿ ಬಾರಿಸಿದರು.

\Bಸ್ಫೋಟಕ ಬ್ಯಾಟಿಂಗ್‌: \Bಆರಂಭಿಕ ಅಜಿಂಕ್ಯಾ ರಹಾನೆ 01, ಡ್ಯಾರಿಲ್‌ ಮಿಚೆಲ್‌ 11 ಹಾಗೂ ರವೀಂದ್ರ ಜಡೇಜಾ 16 ರನ್‌ಗೆ ಔಟಾದರೂ ನಾಯಕ ಋತುರಾಜ್‌ ಹಾಗೂ ಶಿವಂ ದುಬೆ ತಂಡದ ಕೈ ಬಿಡಲಿಲ್ಲ. ಲಖನೌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ 4ನೇ ವಿಕೆಟ್‌ಗೆ 104 ರನ್‌ ಸೇರಿಸಿತು. ದುಬೆ 27 ಎಸೆತದಲ್ಲಿ 3 ಬೌಂಡರಿ, 7 ಸಿಕ್ಸರ್‌ನೊಂದಿಗೆ 66 ರನ್‌ ಚಚ್ಚಿದರೆ, ಋತುರಾಜ್‌ 60 ಎಸೆತದಲ್ಲಿ 12 ಬೌಂಡರಿ, 3 ಸಿಕ್ಸರ್‌ನೊಂದಿಗೆ 108 ರನ್‌ ಸಿಡಿಸಿದರು.

T20 World Cup 2024: ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕಾಗಿ 6 ವಿಕೆಟ್ ಕೀಪರ್ ನಡುವೆ ಫೈಟ್..!

ಸ್ಕೋರ್‌: ಚೆನ್ನೈ 20 ಓವರಲ್ಲಿ 210/4 (ಋತುರಾಜ್‌ 108*, ದುಬೆ 66, ಹೆನ್ರಿ 1-28), ಲಖನೌ 19.3 ಓವರಲ್ಲಿ 213/4 (ಸ್ಟೋಯ್ನಿಸ್‌ 124*, ಪೂರನ್‌ 34, ಪತಿರನ 2-35)

ಅಂಕಿ-ಅಂಶ

13ನೇ ಬ್ಯಾಟರ್‌: ಶಿವಂ ದುಬೆ ಚೆನ್ನೈ ಸೂಪರ್‌ ಕಿಂಗ್ಸ್‌ ಪರ 1000 ರನ್‌ ಕಲೆಹಾಕಿದ 13ನೇ ಆಟಗಾರ.

02ನೇ ಶತಕ: ಋತುರಾಜ್‌ ಐಪಿಎಲ್‌ನಲ್ಲಿ 2ನೇ ಶತಕ ಬಾರಿಸಿದರು. ಚೆನ್ನೈ ಪರ ಈ ಸಾಧನೆ ಮಾಡಿದ 3ನೇ ಬ್ಯಾಟರ್‌.

01ನೇ ನಾಯಕ: ಐಪಿಎಲ್‌ನಲ್ಲಿ ಶತಕ ಬಾರಿಸಿದ ಚೆನ್ನೈ ತಂಡದ ಮೊದಲ ನಾಯಕ ಋತುರಾಜ್‌ ಗಾಯಕ್ವಾಡ್‌.