Asianet Suvarna News Asianet Suvarna News

ಓಯೋ ಬಂದ್ ಮಾಡಿದ್ರೆ ನಾವೆಲ್ಲಿಗೆ ಹೋಗೋದು? ಪಾರ್ಕಿಗೆ ಹೋದ ಶಾಸಕನ ಮುಂದೆ ಬೇಡಿಕೆ ಇಟ್ಟ ಯುವ ಜೋಡಿ!

ಪಾರ್ಕ್ ಗೆ ಹೋದ ಶಾಸಕರ ವಿಡಿಯೋ ವೈರಲ್ ಆಗಿದೆ. ಯುವ ಪ್ರೇಮಿಗಳಿಗೆ ಬುದ್ಧಿಕಲಿಸಲು ಹೋದ ಶಾಸಕರ ಮುಂದೆ ಲವ್ವರ್ಸ್ ಭಿನ್ನ ಬೇಡಿಕೆ ಇಟ್ಟಿದ್ದಾರೆ. ಇದನ್ನು ಕೇಳಿದ ಹಿರಿಯರು ಕಂಗಾಲಾಗಿದ್ದಾರೆ. 
 

Girls Demand Reopen Oyo To Mla Rikesh Sen Video Viral on social media roo
Author
First Published Apr 23, 2024, 7:05 PM IST

ಪಾರ್ಕ್, ಸಾರ್ವಜನಿಕ ಪ್ರದೇಶ. ತಂಪಾದ ಗಾಳಿ, ಶಾಂತ ವಾತಾವರಣ ಸವಿಯಲು, ವಾಕಿಂಗ್ ಮಾಡಲು ಜನರು ಅಲ್ಲಿಗೆ ಬರ್ತಾರೆ. ಸ್ವಚ್ಛಂದ ಪ್ರದೇಶದಲ್ಲಿ ಅಕ್ರಮ ದಂಧೆ ನಡೆಯುತ್ತಿದ್ದರೆ ಅದನ್ನು ನೋಡೋದು ಜನರಿಗೆ ಕಷ್ಟ. ಮದುವೆಯಾಗದ ಯುವ ಪ್ರೇಮಿಗಳು ಅಸಭ್ಯ ಕೆಲಸಗಳನ್ನು ಮಾಡ್ತಿದ್ದರೆ ಅದನ್ನು ಒಪ್ಪಿಕೊಳ್ಳಲು ಭಾರತೀಯರು ಸಿದ್ಧರಿಲ್ಲ. ಕೆಲವರು ಕಣ್ಮುಚ್ಚಿಕೊಂಡು ಹೋದ್ರೆ ಮತ್ತೆ ಕೆಲವರು ಅದನ್ನು ವಿರೋಧಿಸುತ್ತಾರೆ. ನಿಮ್ಮ ಮನೆ ಮುಂದಿರುವ ಪಾರ್ಕ್ ನಲ್ಲಿಯೇ ಇಂಥ ಅಸಹ್ಯ ನಡೆಯುತ್ತಿದ್ದರೆ ಅದನ್ನು ಸಹಿಸೋದು ಕಷ್ಟ. ಇದೇ ಕಾರಣಕ್ಕೆ ಸಾರ್ವಜನಿಕರು, ಸ್ಥಳೀಯ ಆಡಳಿತಕ್ಕೆ ಈ ಬಗ್ಗೆ ದೂರು ನೀಡೋದಿದೆ. ಅಸಹ್ಯವಾಗಿ ನಡೆದುಕೊಳ್ಳುವ ಜೋಡಿಗಳಿಂದಾಗಿ ಸಭ್ಯವಾಗಿ ವರ್ತಿಸುವ  ಜೋಡಿಯನ್ನೂ ಜನರು ಅನುಮಾನದಿಂದ ನೋಡ್ತಾರೆ. ಪಾರ್ಕ್ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಅವರ ಭೇಟಿಯನ್ನು ವಿರೋಧಿಸುತ್ತಾರೆ.

ಛತ್ತೀಸ್‌ಗಢ (Chhattisgarh) ದ ಪಾರ್ಕ್ ಒಂದರಲ್ಲೂ ಇಂಥಹದ್ದೇ ಘಟನೆ ನಡೆಯುತ್ತಿತ್ತು. ಪಾರ್ಕ್ (Park) ನಲ್ಲಿ ಎಲ್ಲಿ ನೋಡಿದ್ರೂ ಯುವ ಪ್ರೇಮಿಗಳ ದಂಡಿರುತ್ತಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಪಾರ್ಕ್ ಗೆ ದಾಳಿ ಮಾಡಿದ ಛತ್ತೀಸ್ ಗಢದ ಶಾಸಕ ರಿಕೇಶ್ ಸೇನ್ (Rikesh Sen) ಅವರಿಗೆ ಯುವ ಜೋಡಿಯಿಂದ ಒಂದಿಷ್ಟು ಶಾಕಿಂಗ್ ಪ್ರತಿಕ್ರಿಯೆ ಸಿಕ್ಕಿದೆ. ಇದನ್ನು ಕೇಳಿದ ಸುತ್ತಮುತ್ತಲಿನವರು ಕಂಗಾಲಾಗಿದ್ದಾರೆ.

ಸೋಶಿಯಲ್ ನೇಷನ್ ಫ್ಯಾಷನ್ ಶೋದಲ್ಲಿ ಹಲ್ ಚಲ್ ಸೃಷ್ಟಿಸಿದ ಉರ್ಫಿ ಲುಕ್‌ಗೆ ಫ್ಯಾನ್ಸ್ ಫಿದಾ

ಮಾಧ್ಯಮಗಳಲ್ಲಿ ರಿಕೇಶ್ ಸೇನ್ ದಾಳಿ ಮಾಡಿದ ವಿಡಿಯೋ (Video) ವನ್ನು ನೀವು ನೋಡ್ಬಹುದು. ಕಾರಿನಿಂದಿಳಿದು ರಿಕೇಶ್ ಸೇನ್ ನೆಹರೂ ಗಾರ್ಡನ್‌ ಗೆ ಹೋಗ್ತಾರೆ. ರಿಕೇಶ್ ಸೇನ್, ವೈಶಾಲಿ ನಗರ ವಿಧಾನಸಭೆ ಬಿಜೆಪಿ ಶಾಸಕರಾಗಿದ್ದಾರೆ. ಪಾರ್ಕ್ ನಲ್ಲಿರುವ ಯುವ ಪ್ರೇಮಿಗಳ ಬಳಿ ಹೋದ ರಿಕೇಶ್ ಸೇನ್, ಯಾಕೆ ಇಲ್ಲಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರವಾಗಿ ನೀವು ಓಯೋ ರೂಮ್ ಬಂದ್ ಮಾಡಿದ್ದೀರಿ. ನಾವು ಮತ್ತೆಲ್ಲಿಗೆ ಹೋಗ್ಲಿ ಎಂಬ ಪ್ರತಿಕ್ರಿಯೆ ಬಂದಿದೆ. ಓಯೋ ರೂಮ್ ಬಂದ್ ಆಗಿದೆ ಎನ್ನುವ ಕಾರಣಕ್ಕೆ ಬೇರೆಯವರ ಮನೆ ಮುಂದೆ ಹೀಗೆಲ್ಲ ವರ್ತಿಸೋದು ಸರಿಯಲ್ಲ ಎಂದ ರಿಕೇಶ್ ಸೇನ್, ಇನ್ನೊಂದು ಜೋಡಿಯನ್ನು ಮನೆಗೆ ಕಳುಹಿಸುವ ಪ್ರಯತ್ನ ನಡೆಸಿದ್ದಾರೆ. ಆ ಸಮಯದಲ್ಲಿ ರಿಕೇಶ್ ಸೇನ್ ಗೆ ಉತ್ತರ ನೀಡಿದ ಜೋಡಿ, ನಿಮ್ಮ ಹೆಸರು ಕೇಳಿದ್ರೆ ಜನ ಹೆದರುತ್ತಾರೆ. ಮದ್ಯಪಾನ ಮಾಡಲು ಭಯಪಡ್ತಾರೆ. ಪೊಲೀಸರಿಗಿಂತ ಜನರಿಗೆ ನೀವೆಂದ್ರೆ ಭಯ. ಎಲ್ಲ ಸ್ಥಳಗಳನ್ನೂ ಮುಚ್ಚಿದ್ದೀರಿ. ಗರ್ಲ್ ಫ್ರೆಂಡ್ ಭೇಟಿ ಮಾಡಲು ನಮಗೆ ಖಾಸಗಿ ಸ್ಥಳವಿಲ್ಲ. ನಾವು ಎಲ್ಲಿಗೆ ಹೋಗಬೇಕು ಎಂದು ಶಾಸಕರನ್ನು ಇನ್ನೊಬ್ಬ ಪ್ರೇಮಿ ಪ್ರಶ್ನಿಸಿದ್ದಾನೆ. 

ನಾವು ಪಾರ್ಕ್ ನಲ್ಲಿ ಭೇಟಿಯಾದ್ರೆ ನಿಮಗೇನು ಎಂದು ಪ್ರಶ್ನೆ ಮಾಡಿದ ಹುಡುಗಿ, ರಿಕೇಶ್ ಸೇನ್ ಕೇಳುವ ಪ್ರೀತಿ, ಪ್ರೇಮ ಎಂದರೇನು ಎಂಬ ಪ್ರಶ್ನೆಗೂ, ಇದು ಹೊಸತಲ್ಲ. ಅನಾದಿಕಾಲದಿಂದಲೂ ಇದೆ ಎನ್ನುತ್ತಾಳೆ. ಒಂದು ಓಯೋ ರೂಮ್ ಓಪನ್ ಮಾಡಿ ಇಲ್ಲ ಪಾರ್ಕ್ ನಲ್ಲೇ ಮೀಟ್ ಮಾಡಲು ಅವಕಾಶ ನೀಡಿ ಎಂದು ಕೆಲವರು ಶಾಸಕರ ಮುಂದೆ ವಿನಂತಿ ಮಾಡಿದ್ದಾರೆ. ಎಲ್ಲ ಜೋಡಿಗಳ ಮನವೊಲಿಸಿ ಅವರನ್ನು ಮನೆಗೆ ಕಳುಹಿಸುವ ಪ್ರಯತ್ನದಲ್ಲಿ ರಿಕೇಶ್ ಸೇನ್ ಯಶಸ್ವಿ ಏನೋ ಆಗಿದ್ದಾರೆ. ಆದ್ರೆ ಎಷ್ಟು ದಿನ ಅವರು ಪಾರ್ಕ್ ನಿಂದ ದೂರ ಇರ್ತಾರೆ ತಿಳಿದಿಲ್ಲ.

ಪುರುಷರ ಮೇಲೂ ನಡೆಯುತ್ತೆ ಶೋಷಣೆ! ಮಹಿಳೆಯಿಂದ ತಪ್ಪಿಸಿಕೊಳ್ಳಲು ಟಾಯ್ಲೆಟ್ಟಲ್ಲಿ ಅವಿತ!

ಹಿಂದಿನ ವರ್ಷ ಶಾಸಕ ರಿಕೇಶ್ ಸೇನ್, ಸ್ಥಳೀಯ ಓಯೋ ರೂಮುಗಳ ಬಾಗಿಲು ಹಾಕಿಸಿದ್ದಾರೆ. ಓಯೋ ರೂಮಿನ ಹೆಸರಿನಲ್ಲಿ ಅಕ್ರಮ ದಂಧೆ ನಡೆಯುತ್ತಿತ್ತು ಎನ್ನುವ ಕಾರಣಕ್ಕೆ ಓಯೋ ಬಂದ್ ಆಗಿದೆ. 

Follow Us:
Download App:
  • android
  • ios