ಹೊಲದಲ್ಲಿ ಕೆಲಸ ಮಾಡುತ್ತಿದ್ದ 60ರ ಹರೆಯದ ಮಹಿಳೆಗೆ ಹಾವು ಕಚ್ಚಿದೆ. ಎಲ್ಲರೂ ಆತಂಕಗೊಂಡಿದ್ದಾರೆ. ತಕ್ಷಣವೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಮಹಿಳೆ ಗಾಬರಿಯಾಗಿಲ್ಲ, ತನಗೆ ಕಚ್ಚಿದ ಹಾವು ಹಿಡಿದು ಆಸ್ಪತ್ರೆಗೆ ಬಂದರೆ ವೈದ್ಯರು, ನರ್ಸ್ ಸೇರಿ ಸಿಬ್ಬಂದಿಗಳೇ ಮಾರುದ್ದ ದೂರ ಹೋದ ಘಟನೆ ನಡೆದಿದೆ.
ನಾಂದೇಡ್ (ಜು.07) ದೇಶದ ಹಲವೆಡೆ ಮಳೆ ಕೊರತೆ ನಡುವೆ ಕೆಲವಡೇ ವಿಪರೀತ ಮಳೆ ಪ್ರವಾಹ ಪರಿಸ್ಥಿತಿ, ಭೂಕುಸಿತ ಸೃಷ್ಟಿಸಿದೆ.ಭಾರಿ ಮಳೆಯಿಂದ ಇತ್ತ ಹಾವುಗಳ ಕಾಟವೂ ಹೆಚ್ಚಾಗಿದೆ. ಹೀಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ 60ರ ಹರೆಯದ ಮಹಿಳೆಗೆ ದಿಢೀರ್ ಹಾವು ಕಚ್ಚಿದೆ. ಇತ್ತ ಕೆಲಸ ಮಾಡುತ್ತಿದ್ದ ಇತರರು ಗಾಬರಿಗೊಂಡಿದ್ದಾರೆ. ತಕ್ಷಣವೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಮಹಿಳೆ ಮಾತ್ರ ಯಾವುದೇ ಆತಂತಕ್ಕೆ ಒಳಗಾಗಿಲ್ಲ. ಕಚ್ಚಿದ ಹಾವು ಮತ್ತೊಮ್ಮೆ ದಾಳಿ ಮಾಡುವ ಮೊದಲು ಹಾವಿನ ತಲೆ ಹಿಡಿದಿದ್ದಾರೆ. ಹಾವನ್ನು ಕೈಯಲ್ಲಿ ಹಿಡಿದ ಮಹಿಳೆ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಬಂದಾಗ, ನರ್ಸ್, ವೈದ್ಯ, ಸಿಬ್ಬಂದಿಗಳು ಆಸ್ಪತ್ರೆಯಿಂದ ಹೊರಗೆ ಓಡಿದ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ.
ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವಿನ ದಾಳಿ
ಮಹರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಹಾವುಗಳು ಎಲ್ಲೆಡೆ ಕಾಣಿಸಿಕೊಳ್ಳುತ್ತಿದೆ. ನಾಂದೆಡ್ ಜಿಲ್ಲೆಯ ಲೋಹಾ ತಾಲೂಕಿನ ಗಾಲೇಗಾಂವ್ ಗ್ರಾಮದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಹಲವು ಕಾರ್ಮಿಕರ ಜೊತೆ 60ರ ಹರೆಯದ ಸುಶೀಲಾ ವಾಘಮಾರೆ ಕೆಲಸ ಮಾಡುತ್ತಿದ್ದಾಗ ಹಾವು ದಾಳಿ ಮಾಡಿದೆ.
ಬೆಚ್ಚಿಬಿದ್ದ ವೈದ್ಯರು
ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಆಗಮಿಸಿದ ಮಹಿಳೆ ತನ್ನ ಕೈಯಲ್ಲಿ ದೊಡ್ಡ ಗಾತ್ರದ ಹಾವು ಹಿಡಿದು ಆಸ್ಪತ್ರೆ ಒಳಗೆ ಪ್ರವೇಶಿಸಿದ್ದಾರೆ. ಮಹಿಳೆಯನ್ನು ನೋಡಿದ ನರ್ಸ್, ವೈದ್ಯರು ಗಾಬರಿಯಾಗಿದ್ದಾರೆ. ಇತರ ರೋಗಿಗಳು ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಮೊದಲು ಹಾವನ್ನು ಸುರಕ್ಷಿತವಾಗಿ ಚೀಲದಲ್ಲಿ ಕಟ್ಟಲು ಸೂಚಿಸಿದ್ದಾರೆ. ಸಿಬ್ಬಂದಿಗಳು ಗೋಣಿ ಚೀಲ ತಂದು ಅಧರಲ್ಲಿ ಹಾವವನ್ನು ಒಳಗೆ ಹಾಕಿ ಕಟ್ಟಿದ್ದಾರೆ. ಬಳಿಕ ಉರಗ ತಜ್ಞರಿಗೆ ಸೂಚನೆ ನೀಡಿದ್ದಾರೆ.
ಇತ್ತ ಮಹಿಳೆಗೆ ಬೇಕಾದ ಚಿಕಿತ್ಸೆಯನ್ನು ವೈದ್ಯರು ಆರಂಭಿಸಿದ್ದಾರೆ. ಸುಶೀಲಾ ವಾಘಮೊರೆಗೆ ಕಚ್ಚಿದ ಹಾವು ವಿಷಕಾರಿ ಹಾವಲ್ಲ. ಹೀಗಾಗಿ ಅಪಾಯದಿಂದ ಪಾರಾಗಿದ್ದಾರೆ. ಇತ್ತ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಸೂಕ್ತ ಚಿಕಿತ್ಸೆ ನೀಡಿದ ಕೆಲ ಹೊತ್ತಿನ ಬಳಿಕ ಮಹಿಳೆ ಚೇತರಿಸಿಕೊಳ್ಳಲು ಆರಂಭಿಸಿದ್ದಾರೆ. ಇದೇ ವೇಳೆ ವಿಷಕಾರಿ ಹಾವಾಗಿದ್ದರೆ ಸಮಸ್ಯೆಯಾಗುತ್ತಿತ್ತು ಎಂದಿದ್ದಾರೆ. ಹೆಚ್ಚಿನ ವಿಷವಿಲ್ಲದ ಕಾರಣ, ಇನ್ನು ತಕ್ಷಣಕ್ಕೆ ಮನುಷ್ಯನ ಜೀವಕ್ಕೆ ಅಪಾಯಕಾರಿಯಾಗದ ಕಾರಣ ಮಹಿಳೆ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ.
ಮಹಿಳೆ ಧೈರ್ಯಕ್ಕೆ ಎಲ್ಲರ ಮೆಚ್ಚುಗೆ
ಹಾವು ಕಚ್ಚಿದಾಗ ಶೇಕಡಾ 98ರಷ್ಟು ಮಂದಿ ಭಯದಿಂದ ಅಸ್ವಸ್ಥರಾಗುತ್ತಾರೆ. ಹಾವಿನ ವಿಷ ಏರುವ ಮೊದಲೇ ಭಯ, ಆತಂಕದಿಂದ ಕುಸಿದು ಬೀಳುವವರ ಸಂಖ್ಯೆ ಹೆಚ್ಚು. ಆದರೆ ಮಹಿಳೆ ತನಗೆ ಕಚ್ಚಿದ ಹಾವನ್ನೇ ಹಿಡಿದು ಆಸ್ಪತ್ರೆಗೆ ಬರುವ ಮೂಲಕ ಧೈರ್ಯ ಮೆರೆದಿದ್ದಾರೆ. ಮಹಿಳೆ ಧೈರ್ಯಕ್ಕೆ ಭಾರಿ ಮೆಚ್ಚುಗೆ ಸೂಚಿಸಿದ್ದಾರೆ.


