MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಮಳೆಗಾಲದಲ್ಲಿ ಮನೆಯೊಳಗೆ ಹಾವು ಬರ್ಬಾರದು ಅಂದ್ರೆ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

ಮಳೆಗಾಲದಲ್ಲಿ ಮನೆಯೊಳಗೆ ಹಾವು ಬರ್ಬಾರದು ಅಂದ್ರೆ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

Snake Safety Tips : ಹಾವು ಕಚ್ಚಿದ್ರೆ ಉಳಿಯೋದು ಕಷ್ಟ. ಅಪಾಯಕಾರಿ ಸರೀಸೃಪ ಮಳೆಗಾದಲ್ಲಿ ಮನೆ ಪ್ರವೇಶ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾವು ಹತ್ತಿರವೂ ಸುಳಿಬಾರದು ಅಂದ್ರೆ ಕೆಲ ಸಿಂಪಲ್‌ ಟಿಪ್ಸ್‌ ಫಾಲೋ ಮಾಡ್ಬೇಕಾಗುತ್ತದೆ.

2 Min read
Author : Roopa Hegde
Published : Jul 03 2026, 11:38 AM IST
Share this Photo Gallery
  • FB
  • TW
  • Linkdin
  • Whatsapp
17
ಮಳೆಗಾದಲ್ಲಿ ಹಾವಿನ ಕಾಟ
Image Credit : ai

ಮಳೆಗಾದಲ್ಲಿ ಹಾವಿನ ಕಾಟ

ಮಳೆಗಾಲ ಶುರುವಾಗುತ್ತಿದ್ದಂತೆ ಒಣಗಿದ್ದ ಮರ ಚಿಗುರಲು ಶುರುವಾಗುತ್ತೆ. ಎತ್ತ ನೋಡಿದ್ರೂ ಹಸಿರು. ಪ್ರಕೃತಿಯ ಸೌಂದರ್ಯ ಹೆಚ್ಚಾಗುತ್ತೆ. ಆದ್ರೆ ಇದೇ ಸಮಯದಲ್ಲಿ ಹಾವುಗಳು ಸೇರಿದಂತೆ ಅನೇಕ ಸರೀಸೃಪಗಳು ತಮ್ಮ ಬಿಲಗಳಿಂದ ಹೊರಬಂದು ಆಹಾರ ಮತ್ತು ಸುರಕ್ಷಿತ ಆಶ್ರಯವನ್ನು ಹುಡುಕುತ್ತವೆ. ಈ ಕಾರಣದಿಂದ ಮನೆ, ತೋಟ ಅಥವಾ ಹೊಲದ ಸುತ್ತಮುತ್ತ ಹಾವುಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ವೆ. ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ, ಹಾವುಗಳು ನಿಮ್ಮ ಮನೆಯತ್ತ ಬರುವ ಸಾಧ್ಯತೆಯನ್ನು ಸಾಕಷ್ಟು ಕಡಿಮೆ ಮಾಡಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಸ್ವಚ್ಛತೆ
Image Credit : ai

ಸ್ವಚ್ಛತೆ

ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು ಅತ್ಯಂತ ಮುಖ್ಯ. ಉದ್ದವಾಗಿ ಬೆಳೆದ ಹುಲ್ಲು, ಒಣ ಎಲೆಗಳ ರಾಶಿ, ಕಲ್ಲುಗಳು, ಮರದ ತುಂಡುಗಳು ಅಥವಾ ಕಸದ ರಾಶಿಗಳು ಹಾವುಗಳಿಗೆ ಅಡಗಿಕೊಳ್ಳಲು ಸೂಕ್ತ ಸ್ಥಳಗಳಾಗುತ್ತವೆ. ಆದ್ದರಿಂದ ಉದ್ಯಾನವನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಮತ್ತು ಹುಲ್ಲನ್ನು ಕತ್ತರಿಸುತ್ತಿರಿ. ಇದ್ರಿಂದ ಹಾವು ನಿಮ್ಮ ಮನೆ ಕಡೆ ಬರೋದಿಲ್ಲ.

Related Articles

Related image1
ಬೆಂಗಳೂರಿನ IISc ವಿಜ್ಞಾನಿಗಳ ಕ್ರಾಂತಿಕಾರಿ ಆವಿಷ್ಕಾರ!; ಬಾಯಿ ಕ್ಯಾನ್ಸರ್ ನಿಯಂತ್ರಣಕ್ಕೆ ಅಲ್ಟ್ರಾಸೌಂಡ್ ರಾಮಬಾಣ
Related image2
ಮನೆ ಅಲಂಕಾರದ ಜೊತೆಗೆ ಹೂವುಗಳನ್ನೂ ನೀಡುವ 5 ಅದ್ಭುತ ಗಿಡಗಳು; ಇವುಗಳ ನಿರ್ವಹಣೆ ಕೂಡಾ ಸುಲಭ
37
ಮನೆ ಬಿರುಕು ಮುಚ್ಚಿ
Image Credit : ai

ಮನೆ ಬಿರುಕು ಮುಚ್ಚಿ

ಮನೆಯ ಗೋಡೆ, ಅಡಿಪಾಯ, ಬಾಗಿಲು ಅಥವಾ ಕಿಟಕಿಗಳ ಸುತ್ತಲಿರುವ ಸಣ್ಣ ಬಿರುಕುಗಳನ್ನೂ ನಿರ್ಲಕ್ಷಿಸಬೇಡಿ. ಹಾವುಗಳು ಅಚ್ಚರಿಯ ರೀತಿಯಲ್ಲಿ ಕಿರಿದಾದ ಜಾಗಗಳ ಮೂಲಕವೂ ಒಳಗೆ ಬರುತ್ತವೆ. ಹೀಗಾಗಿ ಇಂತಹ ಬಿರುಕುಗಳನ್ನು ಸಿಮೆಂಟ್ ಅಥವಾ ಸೂಕ್ತ ವಸ್ತುಗಳಿಂದ ಮುಚ್ಚುವುದು ಉತ್ತಮ.

47
ಇಲಿಗಳ ವಾಸ ತಪ್ಪಿಸಿ
Image Credit : ai

ಇಲಿಗಳ ವಾಸ ತಪ್ಪಿಸಿ

ಇಲಿಗಳು ಹೆಚ್ಚಾಗಿರುವ ಪ್ರದೇಶಗಳಿಗೆ ಹಾವುಗಳು ಸಹಜವಾಗಿಯೇ ಆಕರ್ಷಿತವಾಗುತ್ತವೆ. ಏಕೆಂದರೆ ಇಲಿಗಳು ಅವುಗಳ ಪ್ರಮುಖ ಆಹಾರ. ಮನೆಯೊಳಗೆ ಅಥವಾ ಹೊರಗೆ ಆಹಾರಗಳಿದ್ದರೆ, ಧಾನ್ಯಗಳ ಡಬ್ಬಿ ಇದ್ರೆ ಅದನ್ನು ತಿನ್ನಲು ಇಲಿ ಬರುತ್ತದೆ. ಇಲಿ ಹುಡುಕಿ ಹಾವು ಬರುತ್ತದೆ. ಆಹಾರ ಪದಾರ್ಥಗಳನ್ನು ಡಬ್ಬದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿದ್ರೆ ಇಲಿ ಕಾಟ ಜೊತೆಗೆ ಹಾವಿನ ಕಾಟ ಕಡಿಮೆ ಆಗುತ್ತದೆ.

57
ನೀರು ನಿಲ್ಲಲು ಬಿಡ್ಬೇಡಿ
Image Credit : ai

ನೀರು ನಿಲ್ಲಲು ಬಿಡ್ಬೇಡಿ

ಮನೆಯ ಸುತ್ತಮುತ್ತ ನೀರು ನಿಲ್ಲುವ ಜಾಗಗಳು, ಒಳಚರಂಡಿ ಕೊಳವೆಗಳು ಹಾಗೂ ತೇವಾಂಶ ಹೆಚ್ಚಿರುವ ಪ್ರದೇಶಗಳನ್ನೂ ನಿಯಮಿತವಾಗಿ ಪರಿಶೀಲಿಸಿ. ಸಾಧ್ಯವಾದರೆ ಪೈಪ್ಗಳ ಹೊರಬರುವ ಭಾಗಗಳಿಗೆ ಜಾಲರಿ ಅಳವಡಿಸಿ.

67
ರಾತ್ರಿ ಎಚ್ಚರ
Image Credit : ai

ರಾತ್ರಿ ಎಚ್ಚರ

ರಾತ್ರಿ ಸಮಯದಲ್ಲಿ ಹೊರಗೆ ಹೋಗುವಾಗ ಯಾವಾಗಲೂ ಟಾರ್ಚ್ ಅಥವಾ ಬ್ಯಾಟರಿ ಬಳಸುವುದು ಸುರಕ್ಷಿತ. ಪೊದೆಗಳೊಳಗೆ ಅಥವಾ ಕತ್ತಲೆಯ ಪ್ರದೇಶಗಳಲ್ಲಿ ಕೈ ಹಾಕುವುದು ಅಥವಾ ಕಾಲಿಡುವುದನ್ನು ತಪ್ಪಿಸಿ.

77
ಈ ಕೆಲ್ಸ ತಪ್ಪದೆ ಮಾಡಿ
Image Credit : ai

ಈ ಕೆಲ್ಸ ತಪ್ಪದೆ ಮಾಡಿ

ಒಂದು ವೇಳೆ ನಿಮ್ಮ ಮನೆಯಲ್ಲಿ ಹಾವು ಕಂಡುಬಂದರೆ ಆತಂಕಪಡಬೇಡಿ. ಅದನ್ನು ಹೊಡೆಯಲು ಅಥವಾ ಹಿಡಿಯಲು ಪ್ರಯತ್ನಿಸುವುದು ಅಪಾಯಕಾರಿಯಾಗಿದೆ. ಸುರಕ್ಷಿತ ಅಂತರ ಕಾಯ್ದುಕೊಂಡು, ಹಾವಿನ ಚಲನವಲನದ ಮೇಲೆ ಗಮನವಿರಿಸಿ ಮತ್ತು ತಕ್ಷಣ ಸ್ಥಳೀಯ ಹಾವು ರಕ್ಷಣಾ ತಂಡಕ್ಕೆ ಮಾಹಿತಿ ನೀಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಹಾವು
ಜೀವನಶೈಲಿ

Latest Videos
Recommended Stories
Recommended image1
ಬೆಂಗಳೂರಿನ IISc ವಿಜ್ಞಾನಿಗಳ ಕ್ರಾಂತಿಕಾರಿ ಆವಿಷ್ಕಾರ!; ಬಾಯಿ ಕ್ಯಾನ್ಸರ್ ನಿಯಂತ್ರಣಕ್ಕೆ ಅಲ್ಟ್ರಾಸೌಂಡ್ ರಾಮಬಾಣ
Recommended image2
ಮನೆ ಅಲಂಕಾರದ ಜೊತೆಗೆ ಹೂವುಗಳನ್ನೂ ನೀಡುವ 5 ಅದ್ಭುತ ಗಿಡಗಳು; ಇವುಗಳ ನಿರ್ವಹಣೆ ಕೂಡಾ ಸುಲಭ
Recommended image3
Chanakya Niti: ಕೋಟಿ ಕೊಟ್ಟರೂ ಈ 5 ಜನರ ಮನೆಯಲ್ಲಿ ಊಟ ಮಾಡ್ಬೇಡಿ.. ಯಾಕೆ ಗೊತ್ತಾ?
Related Stories
Recommended image1
ಬೆಂಗಳೂರಿನ IISc ವಿಜ್ಞಾನಿಗಳ ಕ್ರಾಂತಿಕಾರಿ ಆವಿಷ್ಕಾರ!; ಬಾಯಿ ಕ್ಯಾನ್ಸರ್ ನಿಯಂತ್ರಣಕ್ಕೆ ಅಲ್ಟ್ರಾಸೌಂಡ್ ರಾಮಬಾಣ
Recommended image2
ಮನೆ ಅಲಂಕಾರದ ಜೊತೆಗೆ ಹೂವುಗಳನ್ನೂ ನೀಡುವ 5 ಅದ್ಭುತ ಗಿಡಗಳು; ಇವುಗಳ ನಿರ್ವಹಣೆ ಕೂಡಾ ಸುಲಭ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved